ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡಲಿರುವ ಕೊನೆಯ ಬಿಗ್ ಬಾಸ್ ಸೀಸನ್ ಇದು ಎಂದು ಬಿಗ್ ಬಾಸ್ ಕನ್ನಡ ಸೀಸನ್ 11 ಅವರಿಗೆ ಕೊನೆಯ ಸೀಸನ್ ಎಂದು ಟ್ವೀಟ್ ಮಾಡುವ ಮೂಲಕ ಬಿಬಿಕೆ 11 ಭರ್ಜರಿ ಟಿಆರ್ಪಿ ಬಂದಾಗ ಟ್ವೀಟ್ ಮಾಡಿದ್ದರು. ಅಭಿಮಾನಿಗಳು ಇದರಿಂದ ಬೇಸರ ಆಗಿದ್ದಂತೂ ನಿಜ. ಆದರೆ ಸುದೀಪ್ ಅವರು ಮತ್ತೆ ಮನಸ್ಸು ಬದಲಾಯಿಸಿ, ಬಿಗ್ ಬಾಸ್ ಶೋಗೆ ವಾಪಸ್ ಬರಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ ಸುದೀಪ್ ಅವರ ನಿರ್ಧಾರ ಬದಲಾಗಿಲಿಲ್ಲ. ಬಿಬಿಕೆ 11 ಫಿನಾಲೆಯ ಹಿಂದಿನ ದಿವಸ ಮತ್ತೊಂದು ಟ್ವೀಟ್ ಮಾಡುವ ಮೂಲಕ ಅದು ತಮ್ಮ ಕೊನೆಯ ಸೀಸನ್ ಎಂದು ಮತ್ತೆ ಸ್ಪಷ್ಟನೆ ಕೊಟ್ಟರು ಕಿಚ್ಚ. ಆಗ ಕಿಚ್ಚ ಟ್ವೀಟ್ ಮಾಡಿದ್ದು ಹೀಗಿತ್ತು..
“ಬಿಗ್ ಬಾಸ್ ಶೋ ಅನ್ನು ನಾನು ಕಳೆದ 11 ವರ್ಷಗಳಿಂದ ತುಂಬಾ ಎಂಜಾಯ್ ಮಾಡಿದ್ದೇನೆ. ನೀವೆಲ್ಲರೂ ತೋರಿಸಿರುವ ಪ್ರೀತಿಗೆ ಧನ್ಯವಾದ. ಮುಂದಿನ ವಾರದ ಫಿನಾಲೆ ನಾನು ನಿರೂಪಣೆ ಮಾಡುವ ಕೊನೆಯ ಸಂಚಿಕೆ ಆಗಿರಲಿದೆ. ನಿಮ್ಮನ್ನೆಲ್ಲ ಮನರಂಜಿಸುವುದಕ್ಕೆ ನನ್ನ ಬೆಸ್ಟ್ ಕೊಡುತ್ತೇನೆ. ಇದು ಮರೆಯಲಾಗದ ಪ್ರಯಾಣ. ನಾನು ಒಳ್ಳೇ ರೀತಿಯಲ್ಲಿ ಇದನ್ನು ನಿಭಾಯಿಸಿಕೊಂಡು ಹೋಗಿದ್ದೇನೆ ಎನ್ನುವ ಸಾರ್ಥಕತೆ ಇದೆ. ಈ ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಕಲರ್ಸ್ ಕನ್ನಡ. ನಿಮ್ಮೆಲ್ಲರಿಗೂ ನನ್ನ ಪ್ರೀತಿ ಮತ್ತು ಗೌರವ..” ಎಂದು ಬರೆದು ಟ್ವೀಟ್ ಮಾಡಿದ್ದರು ಕಿಚ್ಚ. ಸುದೀಪ್ ಅವರ ನಿರ್ಧಾರ ಅಂತೂ ಬದಲಾಗಿಲ್ಲ.
ಸುದೀಪ್ ಅವರ ಈ ನಿರ್ಧಾರ ಅವರ ಅಭಿಮಾನಿಗಳಿಗೆ ಬಹಳ ಬೇಸರ ತಂದಿತ್ತು. ಕನ್ನಡದಲ್ಲಿ ಬಿಗ್ ಬಾಸ್ ಶೋ ಎಂದ ತಕ್ಷಣ ನೆನಪಿಗೆ ಬರುವುದೇ ಕಿಚ್ಚ ಸುದೀಪ್ ಅವರು.

11 ವರ್ಷಗಳು, 11 ಸೀಸನ್ ಗಳಲ್ಲಿ ಸುದೀಪ್ ಅವರು ಎಷ್ಟು ಅದ್ಭುತವಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗಿದ್ದಾರೆ ಎಂದು ಗೊತ್ತೇ ಇದೆ. ಸುದೀಪ್ ಅವರ ಹಾಗೆ ಈ ಕಾರ್ಯಕ್ರಮ ನಡೆಸಿಕೊಡಲು ಬೇರೆ ಕಲಾವಿದರಿಂದ ಆಗುವುದಿಲ್ಲ ಎನ್ನುವುದು ಜನರ ಅಭಿಪ್ರಾಯ. ಆದರೆ ಸುದೀಪ್ ಅವರು ಈ ಮೊದಲೇ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ್ದರು. ಈ ಶೋನ ಬೇರೆ ಯಾರು ನಡೆಸಿಕೊಡೋಕೆ ಆಗೋದಿಲ್ಲ ಅಂತೆಲ್ಲ ಅಂದುಕೊಂಡಿಲ್ಲ ನಾನು, ಬೇರೆಯವರು ನನಗಿಂತಲೂ ಚೆನ್ನಾಗಿ ನಡೆಸಿಕೊಡಬಹುದು ಎಂದು ಹೇಳಿದ್ದರು. ಹಾಗೆಯೇ ಎಲ್ಲರನ್ನು ತಿದ್ದಿಕೊಂಡು ಇನ್ನೆಷ್ಟು ವರ್ಷ ಇರಲಿ ಎಂದು ಹೇಳಿದ್ದರು. ಆದರೂ ಎಲ್ಲೋ ಒಂದು ಕಡೆ ಸುದೀಪ್ ಅವರು ತಮ್ಮ ನಿರ್ಧಾರ ಬದಲಾಯಿಸಿ, ಮುಂದಿನ ಸೀಸನ್ ನಿರೂಪಣೆ ಮಾಡಬಹುದು ಎಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಹಾಗೆಯೇ ಚಾನೆಲ್ ನವರು ಸಹ ಸುದೀಪ್ ಅವರಿಲ್ಲದೇ ಬಿಗ್ ಬಾಸ್ ಶೋ ಇಲ್ಲ ಎಂದಿದ್ದರು.
ಸುದೀಪ್ ಅವರ ಮನವೊಲಿಸಿ ಮುಂದಿನ ಸೀಸನ್ ಗೆ ಅವರನ್ನು ಖಂಡಿತವಾಗಿಯೂ ಕರೆತರುತ್ತೇವೆ ಎಂದು ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರು ತಿಳಿಸಿದ್ದರು. ಅದೇ ರೀತಿ ಸತತವಾಗಿ ಸುದೀಪ್ ಅವರು ಮತ್ತೆ ಬಿಗ್ ಬಾಸ್ ಶೋ ಗೆ ಕರೆತರುವ ಪ್ರಯತ್ನ ಮಾಡಿ, ಕೊನೆಗೂ ಸುದೀಪ್ ಅವರನ್ನು ಒಪ್ಪಿಸಿದ್ದಾರೆ. ಇದೀಗ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 12 ರ ನಿರೂಪಣೆ ಮಾಡುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆದರೆ ಕಿಚ್ಚ ಸುದೀಪ್ ಅವರು ಈ ಬಾರಿ ಸುಮ್ಮನೆ ಒಪ್ಪಿಲ್ಲ. ಕೆಲವು ಕಂಡೀಷನ್ ಗಳನ್ನು ಸಹ ಹಾಕಿದ್ದಾರೆ. ಅದೆಲ್ಲವೂ ನಡೆದರೆ ಮಾತ್ರ ಬಿಗ್ ಬಾಸ್ ಶೋ ನಿರೂಪಣೆ ಮಾಡುವುದಾಗಿ ಹೇಳಿದ್ದಾರೆ. ಹಾಗಿದ್ದರೆ, ಕಿಚ್ಚ ಸುದೀಪ್ ಅವರು ಹಾಕಿರುವ ಆ ಕಂಡೀಷನ್ ಗಳು ಏನೇನು? ಚಾನೆಲ್ ನವರು ಅದಕ್ಕೆಲ್ಲಾ ಒಪ್ಪಿದ್ದಾರಾ? ಫುಲ್ ಡೀಟೇಲ್ಸ್ ಇಲ್ಲಿದೆ..

ಕಿಚ್ಚ ಸುದೀಪ್ ಅವರಿಗೆ ಕಳೆದ ಸೀಸನ್ ಬೇಸರ ಆಗಿತ್ತು ಎನ್ನುವ ವಿಷಯ ಗೊತ್ತೇ ಇದೆ. ಅದೇ ಕಾರಣಕ್ಕೆ ಸುದೀಪ್ ಅವರು ಈ ಶೋ ಇಂದ ಹೊರಗಡೆ ಬರುವ ನಿರ್ಧಾರ ಮಾಡಿರಬಹುದು ಎನ್ನುವ ಮಾತುಗಳು ಸಹ ಕೇಳಿಬಂದಿತ್ತು. ಆದರೆ ಕಿಚ್ಚ ಸುದೀಪ್ ಅವರು ತಮ್ಮ ಕಡೆಯಿಂದ ಬೇರೆ ಉತ್ತರವನ್ನು ಕೊಟ್ಟಿದ್ದರು. ಒಟ್ಟಿನಲ್ಲಿ ಏನೇ ನಡೆದರು ಚಾನೆಲ್ ನವರು ಸುದೀಪ್ ಅವರನ್ನು ಒಪ್ಪಿಸಿರುವುದು ಒಳ್ಳೆಯ ವಿಷಯ. ಇನ್ನು ಸುದೀಪ್ ಅವರು ಹಾಕಿರುವ ಕಂಡೀಷನ್ ಗಳು ಏನೇನು ಎಂದು ನೋಡುವುದಾದರೆ..
1. ಹನ್ನೆರಡನೆಯ ಸೀಸನ್ ನಲ್ಲಿ ಬಿಗ್ ಬಾಸ್ ಮನೆ ತುಂಬಾ ಕಲರ್ ಫುಲ್ ಆಗಿರಬೇಕು ಎಂದು ಕಂಡೀಷನ್ ಹಾಕಿದ್ದಾರೆ ಕಿಚ್ಚ. ಇಷ್ಟು ಸೀಸನ್ ಗಿಂತ ಮನೆ ಇನ್ನು ಕಲರ್ ಫುಲ್ ಆಗಿರಬೇಕು ಎನ್ನುವುದು ಸುದೀಪ್ ಅವರ ಕಂಡೀಷನ್ ಆಗಿದೆ.
- ಕನ್ನಡಕ್ಕೆ ಮೊದಲ ಆದ್ಯತೆ ಕೊಡಬೇಕು ಎನ್ನುವುದು ಎರಡನೇ ಕಂಡೀಶನ್ ಆಗಿದೆ. ಬಹುಶಃ ಎಲ್ಲಾ ಸ್ಪರ್ಧಿಗಳು ಕನ್ನಡದವರೇ ಆಗಿರಬೇಕು ಎನ್ನುವುದು ಈ ಕಂಡಿಷನ್ ಅರ್ಥವಿರಬಹುದು. 3. ಕನ್ನಡ ಬಿಗ್ ಬಾಸ್ ನಲ್ಲಿ ಕನ್ನಡವೇ ವೇದಘೋಷ ಆಗಬೇಕು. ಈ ಬಾರಿ ಯಾವುದೇ ಸ್ಪರ್ಧಿ ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡಬಾರದು ಎನ್ನುವುದು ಈ ಕಂಡೀಶನ್ ಇರಬಹುದು.
- ಒಳ್ಳೇ ಲೀಗಲ್ ಟೀಮ್ ಇರಬೇಕು. ಸೀಸನ್ 10 ಮತ್ತು ಸೀಸನ್ 11ರ ವೇಳೆ ಆದ ಕೆಲವು ವಿವಾದಗಳ ಕಾರಣ ಸುದೀಪ್ ಅವರು ಈ ಕಂಡೀಷನ್ ಹಾಕಿರಬಹುದು. 5. ವಿವಾದಿತ ಸ್ಪರ್ಧಿಗಳನ್ನ ಸೆಲೆಕ್ಟ್ ಮಾಡಬಾರದು. ಹೆಚ್ಚಾಗಿ ವಿವಾದ ಸೃಷ್ಟಿಸಿಕೊಂಡಿರುವ ಸ್ಪರ್ಧಿಗಳನ್ನೇ ಬಿಗ್ ಬಾಸ್ ಗೆ ಕರೆಸಲಾಗುತ್ತದೆ. ಈ ಸೀಸನ್ ನಲ್ಲಿ ಆ ರೀತಿ ಆಗಬಾರದು ಎಂದಿದ್ದಾರೆ ಕಿಚ್ಚ ಸುದೀಪ್.

ಕನ್ನಡದಲ್ಲಿ ಕಿಚ್ಚ ಸುದೀಪ್ ಅವರನ್ನ ಬಿಟ್ಟು ಬೇರೆ ಯಾರೇ ಬಿಗ್ ಬಾಸ್ ಶೋ ನಿರೂಪಣೆ ಮಾಡಿದರು, ಅದು ಚೆನ್ನಾಗಿ ಬರುವುದಿಲ್ಲ, ಜನರು ನೋಡುವುದು ಇಲ್ಲ. ಇದು ಚಾನೆಲ್ ನವರಿಗೂ ಗೊತ್ತಿರುವ ವಿಷಯ. ಹಾಗಾಗಿ ಕಿಚ್ಚ ಸುದೀಪ್ ಅವರು ಹಾಕಿರುವ ಎಲ್ಲಾ ಕಂಡೀಶನ್ ಗಳನ್ನು ಒಪ್ಪಿ, ಅವರನ್ನು ಮತ್ತೆ ಒಪ್ಪಿಸಿದ್ದಾರೆ. ಸುದೀಪ್ ಅವರು ಮತ್ತೆ ಬಿಗ್ ಬಾಸ್ ಗೆ ಬರುತ್ತಾರೆ ಎನ್ನುವುದು ಅವರ ಅಭಿಮಾನಿಗಳಿಗೆ ಸಂತೋಷ ತರುವಂಥ ವಿಷಯ ಆಗಿದೆ. ಬೇರೆ ಭಾಷೆಗಳಲ್ಲಿ ನಿರೂಪಕರು ಬದಲಾಗಿದ್ದಾರೆ, ಕನ್ನಡದಲ್ಲಿ ಮಾತ್ರ ಸತತವಾಗಿ ಒಬ್ಬರೇ ನಿರೂಪಕರು ಇರುವುದು. ನಮ್ಮ ಕನ್ನಡ ನಮ್ಮ ಹೆಮ್ಮೆ.



