ತೆಲುಗಿನ ಅತಿ ನಿರೀಕ್ಷಿತ ಸಿನಿಮಾ ಪುಷ್ಪ2 ದಿ ರೂಲ್ ಇಂದು ತೆರೆ ಕಾಣುತ್ತಿದೆ. ಪುಷ್ಪ2 ಸಿನಿಮಾ ನೋಡೋದಕ್ಕೆ ದೇಶಾದ್ಯಂತ ಚಿತ್ರಪ್ರೇಮಿಗಳು ಕಾಯುತ್ತಿದ್ದಾರೆ. ಈ ವೇಳೆ ಚಿತ್ರತಂಡಕ್ಕೆ ಒಂದು ಶಾಕ್ ಸಿಕ್ಕಿದ್ದು, ಪುಷ್ಪ2 ಸಿನಿಮಾದ ಟಿಕೆಟ್ ಗಳ ಬುಕಿಂಗ್ ಇದ್ದಕ್ಕಿದ್ದಂತೆ ಸ್ಟಾಪ್ ಆಗಿದೆ. ಅಷ್ಟಕ್ಕೂ ಈ ರೀತಿ ಆಗಿರೋದೇಕೆ? ಹಾಗಿದ್ರೆ ನಾಳೆ ಪುಷ್ಪ2 ಸಿನಿಮಾ ರಿಲೀಸ್ ಆಗುತ್ತಾ? ಆಗಿರೋ ಸಮಸ್ಯೆ ಆದರೂ ಏನು? ಇದರಿಂದ ಪುಷ್ಪ2 ಚಿತ್ರತಂಡಕ್ಕೆ ಏನಾದರೂ ತೊಂದರೆ ಆಗುತ್ತಾ? ಸಿನಿಮಾ ಬಿಡುಗಡೆ ಆಗೋದು ಯಾವಾಗ? ಎಲ್ಲಾ ಡೀಟೇಲ್ಸ್ ಪೂರ್ತಿಯಾಗಿ ತಿಳಿಸಿಕೊಡುತ್ತೇವೆ.. ಪೂರ್ತಿ ಮಾಹಿತಿ ಓದಿ..

ಪುಷ್ಪ ಚಿತ್ರದ ಮೊದಲ ಭಾಗ ತೆರೆಕಂಡಿದ್ದು 2021ರಲ್ಲಿ, ಇದು ನಟ ಅಲ್ಲು ಅರ್ಜುನ್ ಅವರ ಕೆರಿಯರ್ ನಲ್ಲಿ ಅತಿಹೆಚ್ಚು ಹಣ ಗಳಿಕೆ ಮಾಡಿದ ಸಿನಿಮಾ ಎಂದು ಹೇಳಲಾಗುತ್ತದೆ. ಸುಕುಮಾರ್ ಅವರು ನಿರ್ದೇಶಿಸಿ, ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ, ಫಹಾದ್ ಫಾಸಿಲ್, ಡಾಲಿ ಧನಂಜಯ್ ಸೇರಿದಂತೆ ಇನ್ನಿತರ ಅನೇಕ ಕಲಾವಿದರು ನಟಿಸಿರುವ ಸೂಪರ್ ಹಿಟ್ ಸಿನಿಮಾ ಇದು. ಪುಷ್ಪ ಮೊದಲ ಭಾಗ 400 ಕೋಟಿಗಿಂತ ಹೆಚ್ಚು ಹಣ ಗಳಿಕೆ ಮಾಡಿತು. ಇದರ ಬೆನ್ನಲ್ಲೇ ಕೆಜಿಎಫ್ ಚಾಪ್ಟರ್ 1 ಜೊತೆಗೆ ಹೋಲಿಕೆ ಕೂಡ ಶುರುವಾಗಿತ್ತು, ಕೆಜಿಎಫ್1 ಮೀರಿಸಿದೆ ಎನ್ನುವ ಮಾತುಗಳು ಸಹ ಕೇಳಿಬಂದಿತ್ತು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಹಾಗೆಯೇ ಈಗ ಪುಷ್ಪ2 ಸಿನಿಮಾವನ್ನು ಕೆಜಿಎಫ್2 ಜೊತೆಗೆ ಕಂಪೇರ್ ಮಾಡಲಾಗುತ್ತಿದೆ. ಪುಷ್ಪ2 ಕೆಜಿಎಫ್2 ಗಿಂತ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸುತ್ತೆ ಎಂದು ಕೂಡ ಹೇಳಲಾಗುತ್ತಿದೆ. ಇನ್ನೇನು ನಾಳೆ ಪುಷ್ಪ2 ಸಿನಿಮಾ ತೆರೆಕಾಣಲಿದೆ, ಆದರೆ ಈ ವೇಳೆ ಚಿತ್ರತಂಡಕ್ಕೆ ಒಂದು ಸಮಸ್ಯೆ ಎದುರಾಗಿದ್ದು, ಪುಷ್ಪ2 ಸಿನಿಮಾ ಟಿಕೆಟ್ ಬುಕಿಂಗ್ ನಿಂತಿದೆ. ಆದರೆ ಇಲ್ಲಿ ವಿಷಯವೇ ಬೇರೆ ಆಗಿದ್ದು, ಪುಷ್ಪ2 ಸಿನಿಮಾದ 3D ಟಿಕೆಟ್ಸ್ ಬುಕಿಂಗ್ ಮಾತ್ರ ನಿಂತಿದೆ. 2D ಟಿಕೆಟ್ಸ್ ಬುಕಿಂಗ್ ಇದ್ದು, ಆ ಶೋಗಳ ಟಿಕೆಟ್ ಮಾರಾಟ ಆಗುತ್ತಿದೆ. ಸಧ್ಯಕ್ಕೆ 3ಡಿ ವರ್ಷನ್ ಪುಷ್ಪ2 ಗೆ ಸಮಸ್ಯೆ ಆಗಿದ್ದು, ಈ ವಾರ ಪುಷ್ಪ2 3ಡಿ ಯಲ್ಲಿ ಬಿಡುಗಡೆ ಆಗುತ್ತಿಲ್ಲ.

ತಾಂತ್ರಿಕ ಸಮಸ್ಯೆಗಳು ಇರುವ ಕಾರಣ, ಪುಷ್ಪ2 2ಡಿ ವರ್ಷನ್ ನಲ್ಲಿ ಮಾತ್ರ ಬಿಡುಗಡೆ ಆಗಲಿದೆ. ಯಾರೆಲ್ಲಾ 3ಡಿ ವರ್ಷನ್ ಟಿಕೆಟ್ಸ್ ಬುಕ್ ಮಾಡಿದ್ದಾರೋ, ಅವರೆಲ್ಲರ ಬುಕಿಂಗ್ ಗಳು ಸಹ ಕ್ಯಾನ್ಸಲ್ ಆಗಿದೆ ಎಂದು ಮಾಹಿತಿ ಸಿಕ್ಕಿದೆ. ಯಾರೆಲ್ಲರ ಟಿಕೆಟ್ ಗಳು ಕ್ಯಾನ್ಸಲ್ ಆಗಿದೆಯೋ, ಅವರೆಲ್ಲರು ಸಹ ಮತ್ತೊಮ್ಮೆ 2ಡಿ ಟಿಕೆಟ್ ಗಳನ್ನು ಬುಕ್ ಮಾಡಿಕೊಳ್ಳಬೇಕು. ಇದು ಸಿನಿಮಾ ಪ್ರೇಕ್ಷಕರಿಗೆ ಬಹಳ ಬೇಸರ ತಂದಿರುವ ವಿಷಯ ಆಗಿದ್ದು, ಚಿತ್ರತಂಡ ಈ ಸಮಸ್ಯೆಯನ್ನು ಬೇಗ ಸರಿಪಡಿಸಲಿ ಎಂದು ನೆಟ್ಟಿಗರು ಹಾಗೂ ಸಿನಿಪ್ರಿಯರು ಕೇಳಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಬಹಳಷ್ಟು ನಿರೀಕ್ಷೆ ಹೊತ್ತು ಬರುತ್ತಿರುವ ಪುಷ್ಪ2 ಸಿನಿಮಾಗೆ ಹೊಸ ವಿಘ್ನ ಎದುರಾಗಿದೆ..
ಇನ್ನು ಪುಷ್ಪ2 ಸಿನಿಮಾ ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ವಿಷಯದಲ್ಲಿ ಬಹಳ ಸದ್ದು ಮಾಡಿದೆ, ಹಾಡುಗಳು ವೈರಲ್ ಆಗಿದ್ದು, ಟ್ರೈಲರ್ ನಿರೀಕ್ಷೆಯನ್ನು ಹೆಚ್ಚಿಸಿದೆ. ಅಲ್ಲು ಅರ್ಜುನ್ ಅವರ ಮಾಸ್ ಅವತಾರದಲ್ಲಿ ನೋಡೋಕೆ ಅವರ ಫ್ಯಾನ್ಸ್ ಎಲ್ಲರೂ ಕಾಯುತ್ತಿದ್ದು, ನಾಳೆ ಸಾವಿರಕ್ಕಿಂತ ಹೆಚ್ಚು ಸ್ಕ್ರೀನ್ ಗಳಲ್ಲಿ ಪುಷ್ಪ2 ತೆರೆಕಾಣಲಿದೆ. ಕರ್ನಾಟಕದಲ್ಲಿ ಸಹ ಈ ಸಿನಿಮಾಗೆ ಸ್ಪೆಷಲ್ ಮಿಡ್ ನೈಟ್ ಶೋಗಳು ಕೂಡ ಅರೇಂಜ್ ಆಗಿದೆ. ಕನ್ನಡ ಸಿನಿಮಾಗಳಿಗಿಂತ ಪುಷ್ಪ2 ಗೆ ಹೆಚ್ಚು ಸ್ಕ್ರೀನ್ ಗಳು ಸಿಕ್ಕಿದೆ ಎಂದು ಹೇಳಿದರು ತಪ್ಪಲ್ಲ. ಒಟ್ಟಿನಲ್ಲಿ ನಮ್ಮ ರಾಜ್ಯದಲ್ಲಿ ಪರಭಾಷೆಯ ಹಾವಳಿ ಅಂತೂ ಕಡಿಮೆ ಆಗುವ ಹಾಗೆ ಕಾಣುತ್ತಿಲ್ಲ.



