ಕನ್ನಡದ ನಟಿಯರು ಈಗ ನಮ್ಮ ಭಾಷೆಯ ಜೊತೆಗೆ ಪರಭಾಷೆಯ ಸಿನಿಮಾಗಳಲ್ಲಿ ಕೂಡ ನಟಿಸಿ, ಸೈ ಎನ್ನಿಸಿಕೊಳ್ಳುತ್ತಿದ್ದಾರೆ ಎನ್ನುವ ವಿಚಾರ ನಮಗೆಲ್ಲ ಗೊತ್ತೇ ಇದೆ. ರಶ್ಮಿಕಾ ಮಂದಣ್ಣ, ಆಶಿಕಾ ರಂಗನಾಥ್, ಸಪ್ತಮಿ ಗೌಡ, ನಭಾ ನಟೇಶ್, ಶ್ರೀಲೀಲಾ ಎಲ್ಲರೂ ಸಹ ಇದೇ ಹಾದಿಯಲ್ಲಿದ್ದಾರೆ. ರುಕ್ಮಿಣಿ ವಸಂತ್ ಅವರು ಸಹ ಇದೇ ರೀತಿ. ರಕ್ಷಿತ್ ಶೆಟ್ಟಿ ಅವರೊಡನೆ ನಟಿಸಿದ ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಇವರನ್ನು ಕರ್ನಾಟಕದ ಕ್ರಶ್ ಆಗುವ ಹಾಗೆ ಮಾಡಿತ್ತು. ಇದೇ ಸಿನಿಮಾ ತೆಲುಗಿಗೆ ಡಬ್ ಆಗಿ ಬಿಡುಗಡೆಯಾದ ಕಾರಣ ರುಕ್ಮಿಣಿ ಅವರಿಗೆ ಅಲ್ಲಿ ಕೂಡ ಹೆಚ್ಚು ಬೇಡಿಕೆ, ಫ್ಯಾನ್ ಬೇಸ್ ಶುರುವಾಗಿತ್ತು. ರುಕ್ಮಿಣಿ ಅವರಿಗೆ ಈಗ ತೆಲುಗು, ತಮಿಳು ಮತ್ತು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಕೂಡ ಒಳ್ಳೆಯ ಅವಕಾಶ ಸಿಗುತ್ತಿದೆ. ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ರುಕ್ಮಿಣಿ ವಸಂತ್ ಅವರು ಮಾಹಿತಿ ಕೊಡುವುದಕ್ಕೆ ಫೋನ್ ಪಿಕ್ ಮಾಡುವುದಕ್ಕೆ ಆಗದೇ ಇರುವಷ್ಟು ಸಹ ಬ್ಯುಸಿ ಆಗಿದ್ದಾರೆ.

ಹೌದು, ನಟಿಯರು ಬ್ಯುಸಿ ಇರೋದು, ಬ್ಯುಸಿ ಆಗೋದು ನಿಜ.. ಆದರೆ ರುಕ್ಮಿಣಿ ಅವರು ಏನನ್ನೋ ಬಲವಾಗಿ ನಿರ್ಧರಿಸಿರುವ ಹಾಗೆ ತೋರುತ್ತಿದೆ. ರುಕ್ಮಿಣಿ ಅವರು ಆಕ್ಟಿಂಗ್ ಕಲಿತವರು, ಶ್ರೀನಿ ಅವರು ನಿರ್ದೇಶನ ಮಾಡಿದ ಬೀರ್ಬಲ್ ಸಿನಿಮಾ ಮೂಲಕ ನಟನೆ ಶುರು ಮಾಡಿದರು, ಆದರೆ ಇವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದು ರಕ್ಷಿತ್ ಶೆಟ್ಟಿ ಅವರೊಡನೆ ಅಭಿನಯಿಸಿದ ಸಪ್ತಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಸೈಡ್ ಬಿ ಸಿನಿಮಾ. ನಂತರ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಜೊತೆಗೆ ಬಘಿರಾ ಸಿನಿಮಾದಲ್ಲಿ ನಟಿಸಿದರು, ಶಿವಣ್ಣ ಅವರಿಗೆ ನಾಯಕಿಯಾಗಿ ಭೈರತಿ ರಣಗಲ್ ಸಿನಿಮಾದಲ್ಲಿ ನಟಿಸಿದರು. ಗಣೇಶ್ ಅವರೊಡನೆ ಬಾನ ದಾರಿಯಲ್ಲಿ ಸಿನಿಮಾದಲ್ಲಿ ಕೂಡ ನಟಿಸಿದರು. ಒಟ್ಟಿನಲ್ಲಿ ರುಕ್ಮಿಣಿ ಅವರು ಕನ್ನಡದಲ್ಲಿ ನಟಿಸಿದ್ದು ಕೆಲವೇ ಕೆಲವು ಸಿನಿಮಾಗಳಲ್ಲಿ ಆದರೂ ಇಲ್ಲಿ ಇವರಿಗೆ ಬಹಳ ಬೇಡಿಕೆ ಇದೆ..
ಇನ್ನು ರುಕ್ಮಿಣಿ ಅವರು ಈಗಾಗಲೇ ಪರಭಾಷೆಗೆ ಕೂಡ ಎಂಟ್ರಿ ಕೊಟ್ಟಿದ್ದಾರೆ. ಇವರು ಅಭಿನಯಿಸಿರುವ ತೆಲುಗು ಸಿನಿಮಾ ಈಗಾಗಲೇ ತೆರೆಕಂಡಿದೆ. ತಮಿಳಿನಲ್ಲಿ ವಿಜಯ್ ಸೇತುಪತಿ ಅವರೊಡನೆ ಏಸ್ ಸಿನಿಮಾದಲ್ಲಿ ನಟಿಸಿದ್ದು, ಮೊನ್ನೆಯಷ್ಟೇ ಈ ಸಿನಿಮಾ ತೆರೆಕಂಡು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಆದರೆ ವಿಜಯ್ ಸೇತುಪತಿ ಅವರಂಥ ಸ್ಟಾರ್ ನಟನ ಸಿನಿಮಾದಲ್ಲಿ ಹೀರೋಯಿನ್ ಎಂದರೆ ಒಳ್ಳೆಯ ಲಾಂಚ್ ಸಿಕ್ಕ ಹಾಗೆಯೇ. ಇದಷ್ಟೇ ಅಲ್ಲದೇ ಸಾಕಷ್ಟು ಬಿಗ್ ಪ್ರಾಜೆಕ್ಟ್ ಗಳಿಗೆ ರುಕ್ಮಿಣಿ ವಸಂತ್ ಅವರೇ ನಾಯಕಿ ಎಂದು ಹೇಳಲಾಗುತ್ತಿದೆ. ಜ್ಯೂನಿಯರ್ ಎನ್.ಟಿ.ಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನಿಮಾಗೆ ರುಕ್ಮಿಣಿ ವಸಂತ್ ಅವರೇ ನಾಯಕಿ ಎಂದು ಬಿಗ್ ಟಾಕ್ ಕೇಳಿ ಬರುತ್ತಿದೆ. ಇನ್ನು ಪ್ರಭಾಸ್ ಅವರು ನಾಯಕನಾಗಿ, ಅರ್ಜುನ್ ರೆಡ್ಡಿ, ಅನಿಮಲ್ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ನಿರ್ದೇಶನ ಮಾಡಲಿರುವ ಸಿನಿಮಾ ಸ್ಪಿರಿಟ್.

ಈ ಸಿನಿಮಾಗೆ ದೀಪಿಕಾ ಪಡುಕೋಣೆ ನಾಯಕಿ ಎನ್ನಲಾಗಿತ್ತು, ಆದರೆ ದೀಪಿಕಾ ಅವರು ಸಿನಿಮಾಗಾಗಿ 20 ಕೋಟಿ ಸಂಭಾವನೆ ಕೇಳಿದ್ದಾರೆ ಎನ್ನುವ ಟಾಕ್ ಕೂಡ ಕೇಳಿ ಬಂದಿತ್ತು. ಈ ಕಥೆ ಏನಾಯಿತೋ ಏನೋ, ಒಂದೆರಡು ದಿವಸಗಳಿಂದ ದೀಪಿಕಾ ಪಡುಕೋಣೆ ಅವರು ಈ ಪ್ರಾಜೆಕ್ಟ್ ಇಂದ ಹೊರಬಂದಿದ್ದಾರೆ ಎನ್ನಲಾಗಿದೆ. ಈ ಸಿನಿಮಾಗೆ ಕೂಡ ರುಕ್ಮಿಣಿ ವಸಂತ್ ಅವರೇ ನಾಯಕಿ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ, ತಮಿಳಿನ ಖ್ಯಾತ ನಟ ಶಿವ ಕಾರ್ತಿಕೇಯನ್ ಅವರ ಮುಂದಿನ ಸಿನಿಮಾ ಮದರಾಸಿ, ಈ ಸಿನಿಮಾ ಬಗ್ಗೆ ಭಾರಿ ನಿರೀಕ್ಷೆ ಇದೆ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿದೆ. ಈ ಸಿನಿಮಾಗೆ ಕೂಡ ರುಕ್ಮಿಣಿ ವಸಂತ್ ಅವರೇ ನಾಯಕಿ ಎನ್ನಲಾಗುತ್ತಿದೆ. ಹಾಗೆಯೇ ತೆಲುಗಿನ ಸ್ಟಾರ್ ನಟ ವಿಕ್ಟರಿ ವೆಂಕಟೇಶ್ ಅವರು ಮತ್ತು ತ್ರಿವಿಕ್ರಂ ಶ್ರೀನಿವಾಸ್ ಕಾಂಬಿನೇಶನ್ ಮತ್ತೆ ಒಂದಾಗಲಿದ್ದು, ಆ ಸಿನಿಮಾಗು ರುಕ್ಮಿಣಿ ಅವರೇ ನಾಯಕಿ ಎನ್ನಲಾಗಿದೆ..
ಇದೆಲ್ಲದರ ಮತ್ತೊಂದು ಬಿಗ್ ಪ್ರಾಜೆಕ್ಟ್ ಕೂಡ ಸೇರಿದೆ. ದಕ್ಷಿಣ ಭಾರತ ಚಿತ್ರರಂಗದ ಮ್ಯಾಗ್ನಮ್ ಓಪಸ್ ಎಂದೇ ಕರೆಯಲ್ಪಡುವ ನಿರ್ದೇಶನ ಮಣಿರತ್ನಂ ಅವರು ಕಮಲ್ ಹಾಸನ್ ಮತ್ತು ಸಿಂಬು ಅವರೊಡನೆ ಥಗ್ ಲೈಫ್ ಸಿನಿಮಾ ಮಾಡಿದ್ದು, ಆ ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಜೂನ್ 5ರಂದು ಸಿನಿಮಾ ತೆರೆಕಾಣಲಿದ್ದು, ಇದೊಂದು ಪಕ್ಕಾ ಗ್ಯಾಂಗ್ಸ್ಟರ್ ಸಿನಿಮಾ ಆಗಿದೆ. ಇದಾದ ಬಳಿಕ ಮಣಿರತ್ನಂ ಅವರು ಲವ್ ಸ್ಟೋರಿ ಸಿನಿಮಾ ಮಾಡುತ್ತಾರೆ ಎನ್ನಲಾಗಿದ್ದು, ಈ ಸಿನಿಮಾಗೆ ತೆಲುಗಿನ ನವೀನ್ ಪೊಲಿಶೆಟ್ಟಿ ಅವರು ನಾಯಕನಾಗಲಿದ್ದಾರೆ ಎನ್ನಲಾಗಿದ್ದು, ಈ ಸಿನಿಮಾಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಅವರೇ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಕನ್ನಡದ ಹುಡುಗಿ ಇಂಥ ದೊಡ್ಡ ಪ್ರಾಜೆಕ್ಟ್ ಗಳಲ್ಲಿ ಅವಕಾಶ ಪಡೆದುಕೊಂಡಿದ್ದಾರೆ ಎನ್ನುವುದು ಬಹಳ ಸಂತೋಷದ ವಿಷಯ.

ಕನ್ನಡದ ನಟಿ ಇಷ್ಟು ಎತ್ತರಕ್ಕೆ ಬೆಳೆಯುತ್ತಿದ್ದಾರೆ ಎನ್ನುವ ಸಂತೋಷ ಎಲ್ಲರಲ್ಲೂ ಇದೆ, ಇದೇ ಕಾರಣಕ್ಕೆ ಖಾಸಗಿ ಯೂಟ್ಯೂಬ್ ಚಾನೆಲ್ ಒಂದು ರುಕ್ಮಿಣಿ ಅವರಿಂದ ಈ ಬಗ್ಗೆ ಮಾಹಿತಿ ಪಡೆಯಬೇಕು ಎಂದು ಕರೆ ಮಾಡಿದರೆ, ರುಕ್ಮಿಣಿ ಅವರು ತುಂಬಾ ಬ್ಯುಸಿ ಇರುವುದಾಗಿ ತಿಳಿಸಿದ್ದು, ಈಗ ಸಿನಿಮಾ ಬಗ್ಗೆ ಮಾತನಾಡೋಕೆ ಆಗೋದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಕೆಲವರಿಗೆ ಬೇಸರ ಆಗಿರುವುದು ನಿಜ, ಆದರೆ ಅದು ಚಿತ್ರತಂಡಗಳಿಂದ ಇರುವ ನಿಯಮ ಇರಬಹುದು. ಎಲ್ಲವೂ ಫೈನಲೈಜ್ ಆಗಿ, ಚಿತ್ರತಂಡವೆ ಅಧಿಕೃತವಾಗಿ ಅನೌನ್ಸ್ ಮಾಡುವವರೆಗೂ ತಮ್ಮ ಕಡೆಯಿಂದ ಯಾವುದೇ ವಿಚಾರ ಲೀಕ್ ಆಗಬಾರದು ಎನ್ನುವುದು ರುಕ್ಮಿಣಿ ವಸಂತ್ ಅವರ ತೀರ್ಮಾನ ಆಗಿರಲೂಬಹುದು. ಆದರೆ ಏಸ್ ಸಿನಿಮಾ ಬಗ್ಗೆ ಕೂಡ ಇವರು ಮಾತನಾಡಿಲ್ಲ. ಇನ್ನು ರಶ್ಮಿಕಾ ಅವರು ಸಹ ಇದೇ ರೀತಿ ಆಗಿದ್ದರು.

ಕನ್ನಡದಲ್ಲಿ ಹೆಸರು ಮಾಡಿದ ರಶ್ಮಿಕಾ ಇಂದು ಪ್ಯಾನ್ ಇಂಡಿಯಾ ಹೀರೋಯಿನ್, ಬಾಲಿವುಡ್ ನಲ್ಲಿ ದೊಡ್ಡ ದೊಡ್ಡ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಇವರು ಈಗ ಕನ್ನಡದ ಕಡೆಗೆ ತಿರುಗಿ ನೋಡುವುದೂ ಇಲ್ಲ, ರುಕ್ಮಿಣಿ ಅವರು ಸಹ ಅದೇ ರೀತಿ ಆಗದೇ ಇರಲಿ ಎನ್ನುವುದೇ ಅಭಿಮಾನಿಗಳ ಆಸೆ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ರುಕ್ಮಿಣಿ ಅವರು ಇತ್ತೀಚೆಗೆ ಶೇರ್ ಮಾಡಿದ ಪೋಸ್ಟ್ ಒಂದಕ್ಕೆ, ನೀವು ಕೂಡ ರಶ್ಮಿಕಾ ಅವರ ಥರ ಆಗಬೇಡಿ, ಕನ್ನಡವನ್ನ ಮರೀಬೇಡಿ ಮೇಡಂ ಎಂದೇ ನೆಟ್ಟಿಗರು ರುಕ್ಮಿಣಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ರುಕ್ಮಿಣಿ ಅವರು ಎತ್ತರಕ್ಕೆ ಬೆಳೆಯಲಿ ಆದರೆ ಕನ್ನಡದ ಪರವಾಗಿ ಇರಲಿ..



