ಕಲಾವಿದರ ಬದುಕು ನಾವು ಅಂದುಕೊಂಡಷ್ಟು ಸುಲಭ ಅಲ್ಲ. ಒಬ್ಬೊಬ್ಬರ ಜರ್ನಿ ಒಂದೊಂದು ರೀತಿ, ಅವರವರ ಕಷ್ಟಗಳು ಅವರಿಗೆ ಮಾತ್ರ ಗೊತ್ತಿರುತ್ತದೆ. ಕಲಾವಿದರು ಅವಕಾಶ ಪಡೆದು, ಜನರ ಎದುರು ಕಲರ್ ಫುಲ್ ಆಗಿ ಕಾಣಿಸಿಕೊಂಡರೂ ಸಹ, ತೆರೆಯ ಹಿಂದೆ ನಾವು ಅಂದುಕೊಂಡ ಹಾಗೆ ಎಲ್ಲವೂ ಚೆನ್ನಾಗಿ ಇರುವುದಿಲ್ಲ. ಕಷ್ಟಗಳು ಯಾರನ್ನು ಯಾವಾಗ ಹೇಗೆ ಕಾಡುತ್ತದೆ ಎಂದು ಹೇಳೋದಕ್ಕೆ ಬರುವುದಿಲ್ಲ. ಇಂದು ಚೆನ್ನಾಗಿದ್ದ ಬದುಕು ನಾಳೆ ನಾವು ನಿರೀಕ್ಷೆಯೇ ಮಾಡದ ಹಾಗೆ ಕಷ್ಟಕ್ಕೆ ಸಿಲುಕಿಕೊಳ್ಳಬಹುದು. ಈ ರೀತಿ ಇದ್ದಾಗ ಬದುಕು ಕ್ಷಣಿಕ, ಇರುವಷ್ಟು ದಿವಸ ಎಲ್ಲರ ಜೊತೆಗೆ ಚೆನ್ನಾಗಿ ಇರಬೇಕು ಎಂದು ಅನ್ನಿಸುವುದು ಖಂಡಿತ. ಕೆಲವು ಕಲಾವಿದರು ಬಹಿರಂಗವಾಗಿ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ. ಇನ್ನು ಕೆಲವರು ಹೇಳೋದಿಲ್ಲ.
ಹೌದು, ಕೆಲವರಿಗೆ ಬದುಕು ಪೂರ್ತಿ ಕಷ್ಟವೇ ತುಂಬಿರುತ್ತದೆ. ಹೊರ ಜಗತ್ತಿಗೆ ಅದು ಗೊತ್ತೇ ಇರುವುದಿಲ್ಲ. ಕಲಾವಿದ ಆಗಬೇಕು ಅನ್ನೋ ಹಾದಿಯಲ್ಲಿ ಸಹ ಬಹಳ ಏಳು ಬೀಳುಗಳು, ಅವಮಾನಗಳು ಇದೆಲ್ಲವನ್ನೂ ಅನುಭವಿಸಿರುತ್ತಾರೆ. ಇದೆಲ್ಲದರ ಬಗ್ಗೆ ಸಾಮಾನ್ಯ ಜನರಾದ ನಮಗೆ ಗೊತ್ತೇ ಇರುವುದಿಲ್ಲ. ಇದೇ ರೀತಿ ಕಷ್ಟಪಟ್ಟವರು ಕಿರುತೆರೆಯ ನಟ ಶ್ರೀಧರ್ ಅವರು ಅನಾರೋಗ್ಯ. ಸುಮಾರು ಒಂದು ತಿಂಗಳಿನಿಂದ ಇವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇತ್ತೀಚೆಗೆ ಇವರ ವಿಷಯ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬಹಳಷ್ಟು ಕಲಾವಿದರು ಶ್ರೀಧರ್ ಅವರಿಗೆ ಸಪೋರ್ಟ್ ಮಾಡಿದರು, ಈಗಲೂ ಸಹ ಅವರ ಕಷ್ಟಕ್ಕೆ ಮಿಡಿದು ಸಹಾಯ ಮಾಡುತ್ತಿದ್ದಾರೆ. ಶ್ರೀಧರ್ ಅವರು ಬೇಗ ಹುಷಾರಾಗಲಿ ಅನ್ನೋದು ಎಲ್ಲರ ಆಶಯ ಆಗಿತ್ತು. ಆದರೆ ಅಂದುಕೊಂಡಿದ್ದು ನಡೆಯಲಿಲ್ಲ, ಪ್ರಾರ್ಥನೆಗಳು ಫಲಿಸಲಿಲ್ಲ. ನಿನ್ನೆ ರಾತ್ರಿ ಶ್ರೀಧರ್ ಅವರು ಕೊನೆಯುಸಿರೆಳೆದಿದ್ದಾರೆ.

ಹೌದು, ನಟ ಶ್ರೀಧರ್ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಗಿ ಅವರು ಬೆಂಗಳೂರಿನ ಹೆಬ್ಬಾಳದಲ್ಲಿರುವ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಟನೆ ಇಂದ, ಕೆಲಸಗಳನ್ನು ಮಾಡಿ ಸಂಪಾದನೆ ಮಾಡಿದ್ದ ಎಲ್ಲಾ ಹಣವನ್ನು ಆರೋಗ್ಯಕ್ಕಾಗಿ ಖರ್ಚು ಮಾಡಿದರು. ಸಂಪಾದನೆ ಮಾಡಿದ ಹಣವೆಲ್ಲ ಖಾಲಿ ಆಯ್ತು. ಇವರ ಆರೋಗ್ಯ ಸುಧಾರಿಸಲುಜ್ ಟ್ರೀಟ್ಮೆಂಟ್ ಕೊಡಿಸಲು ಹೆಚ್ಚು ಹಣ ಬೇಕು ಎಂದು ಕಿರುತೆರೆಯ ಸಾಕಷ್ಟು ಕಲಾವಿದರು ಶ್ರೀಧರ್ ಅವರಿಗೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದರು. ಇವರಿಗಾಗಿ Fund Raiser ಗಳನ್ನು ಸಹ ಮಾಡಿ, ಹಣ ಸಂಗ್ರಹಿಸಿ ನೀಡಿದರು. ಆದರೆ ಏನೇ ಮಾಡಿದರೂ ಶ್ರೀಧರ್ ಅವರನ್ನು ಉಳಿಸಿಕೊಳ್ಳಲು ಸಾಧ್ಯ ಆಗಲಿಲ್ಲ. ನಿನ್ನೆ ರಾತ್ರಿ ಸುಮಾರು 10 ಗಂಟೆ ವೇಳೆಗೆ ಶ್ರೀಧರ್ ಅವರು ವಿಧಿವಶರಾದರು ಎಂದು ಅಗರ ಸಹೋದರ ತಿಳಿಸಿದ್ದಾರೆ. ಬಹಳಷ್ಟು ಜನರ ಪ್ರಾರ್ಥನೆಯನ್ನು ದೇವರು ಕೇಳಿಸಿಕೊಳ್ಳಲಿಲ್ಲ.
ಶ್ರೀಧರ್ ಅವರಿಗೆ ಸಹ ತಾವು ಹುಷಾರಾಗಿ ಬರಬೇಕು ಮತ್ತೆ ನಟನೆ ಶುರು ಮಾಡಬೇಕು ಎಂದು ಆಸೆ ಇತ್ತು. ಜೀವನದಲ್ಲಿ ಮತ್ತೆ ಉತ್ಸಾಹ ಬಂದಿದೆ ಎಂದು ತಮ್ಮ ತಾಯಿಯನ್ನು ಮತ್ತೆ ಕಂಡಾಗ ಹೇಳಿದ್ದರು. ಆದರೆ ಹೆಚ್ಚು ದಿನಗಳ ಕಾಲ ಇವರು ಬದುಕಿರಲು ಆಗಲಿಲ್ಲ ಎನ್ನುವುದೇ ವಿಧಿಯ ಆಟ ಆಗಿದೆ. ನೋಡಲು ಬಹಳ ಸುಂದರವಾಗಿದ್ದ ಶ್ರೀಧರ್ ಅವರು ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಪಾರು, ಕಮಲಿ, ವಧು ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಇವರಿಗೆ ಅನಾರೋಗ್ಯ ಉಂಟಾಗಿ, ಗುರುತೇ ಸಿಗದಷ್ಟು ಬದಲಾಗಿ ಹೋಗಿದ್ದರು. ಶ್ರೀಧರ್ ಅವರು ಸುಮಾರು 30 ವರ್ಷಗಳಿಂದ ಕುಟುಂಬದಿಂದ ದೂರವಿದ್ದರು, ಆದರೆ ಇವರಿಗೆ ಅನಾರೋಗ್ಯ ಉಂಟಾದಾಗ ತಾಯಿ ಬಂದರು, ಶ್ರೀಧರ್ ಅವರನ್ನು ಅವರ ತಾಯಿಯೇ ನೋಡಿಕೊಳ್ಳುತ್ತಿದ್ದರು.
ಅಮ್ಮ ಮತ್ತೆ ಜೀವನಕ್ಕೆ ಬಂದಿದ್ದು ಶ್ರೀಧರ್ ಅವರಿಗೆ ಹುಮ್ಮಸ್ಸು ತಂದಿತ್ತು, ಮತ್ತೆ ಸಾಧನೆ ಮಾಡಬೇಕು ಎನ್ನುವ ಆಸೆಯನ್ನು ಸಹ ತಂದಿತ್ತು. ಆದರೆ ಹೆಚ್ಚು ದಿವಸಗಳ ಕಾಲ ಇವರು ಬದುಕಿರಲು ಆಗಲೇ ಇಲ್ಲ. ನಿನ್ನೆ ರಾತ್ರಿ ಇವರು ಇನ್ನಿಲ್ಲವಾದರು. ಆದರೆ ಇವರ ಬದುಕಿನ ಬಗ್ಗೆ ತಿಳಿದರೆ ನಿಜಕ್ಕೂ ಬಹಳ ಬೇಸರ ಆಗುತ್ತದೆ.
ಶ್ರೀಧರ್ ಅವರಿಗೆ 8 ವರ್ಷವಿದ್ದಾಗಲೇ ಅವರ ತಂದೆ ತೀರಿಹೋದರು, ಶ್ರೀಧರ್ ಮತ್ತು ಅವರ ತಮ್ಮಂದಿರನ್ನು ಅವರ ತಾಯಿಯೇ ಕಷ್ಟಪಟ್ಟು ನೋಡಿಕೊಳ್ಳುತ್ತಿದ್ದರು. ಮನೆಕೆಲಸಗಳನ್ನು ಮಾಡಿ ಮಕ್ಕಳನ್ನು ಬೆಳೆಸಿದರು. ಶ್ರೀಧರ್ ಅವರು ನಟ ಆಗಬೇಕು ಎಂದು 22 ವರ್ಷ ಇದ್ದಾಗ ಮನೆ ಬಿಟ್ಟು ಬಂದರು, ಚಿತ್ರರಂಗಕ್ಕೆ ಬರಬೇಕು ಎಂದು ಬಹಳ ಕಷ್ಟಪಟ್ಟಿದ್ದಾರೆ. ಇತ್ತೀಚೆಗೆ ಇವರಿಗೆ 50 ವರ್ಷ ತುಂಬಿತು. ಹಾಗೂ ಶ್ರೀಧರ್ ಅವರಿಗೆ ಮದುವೆಯಾಗಿ, ಹೆಂಡತಿ ಕೂಡ ಮೋಸ ಮಾಡಿದರು.

ಇವರ ಬಳಿ ಇದ್ದ ಎಲ್ಲವನ್ನು ಎತ್ತಿಕೊಂಡು ಓಡಿ ಹೋದರು. ನಂತರ ಬಂದ ಎಲ್ಲಾ ಕಷ್ಟಗಳನ್ನು ಶ್ರೀಧರ್ ಒಂಟಿಯಾಗಿಯೇ ಎದುರಿಸಿದರು. ಆದರೆ ಬದುಕು ಇವರಿಗೆ ಇನ್ನೊಂದು ಅವಕಾಶ ಕೊಡಲಿಲ್ಲ. ನಟನೆಯ ಬಗ್ಗೆ ಹೆಚ್ಚು ಆಸಕ್ತಿ ಮತ್ತು ಭಕ್ತಿ ಹೊಂದಿದ್ದ ಇವರು, ದೊಡ್ಡದಾಗಿ ಸಾಧನೆ ಮಾಡಬೇಕು ಎಂದುಕೊಂಡಿದ್ದರು. ಆಕ್ಟಿಂಗ್ ಕ್ಲಾಸ್ ನಲ್ಲಿ ಬಹಳ ವಿಧೇಯ ವಿದ್ಯಾರ್ಥಿ ಆಗಿದ್ದರು. ಬಹಳ ಶ್ರದ್ಧೆಯಿಂದ ಆಕ್ಟಿಂಗ್ ಕಲಿತು, ಎಲ್ಲರೊಡನೆ ಬಹಳ ಚೆನ್ನಾಗಿದ್ದರು. ಸಹ ಕಲಾವಿದರಿಗೆ ಶ್ರೀಧರ್ ಅಂದ್ರೆ ಬಹಳ ಗೌರವ ಇತ್ತು. ಅಷ್ಟು ಒಳ್ಳೆಯ ವ್ಯಕ್ತಿ ಆಗಿದ್ದರು. ಅಂಥ ಶ್ರೀಧರ್ ಅವರಿಗೆ ಎಲ್ಲಾ ಒಳ್ಳೆಯ ಗುಣಗಳೇ ಇದ್ದರೂ, ಒಳ್ಳೆಯತನ ಇದ್ದರೂ, ಅದೃಷ್ಟ ಅನ್ನೋದು ಅವರಿಗೆ ಸಾಥ್ ಕೊಡಲಿಲ್ಲ. ಒಂದಷ್ಟು ಧಾರಾವಾಹಿಗಳಲ್ಲಿ ನಟಿಸಿದರೂ ಸಹ ಹೆಚ್ಚು ಯಶಸ್ಸೇನು ಸಿಗಲಿಲ್ಲ. ಇತ್ತೀಚೆಗೆ ವಧು ಧಾರಾವಾಹಿಯಲ್ಲಿ ಮಾತ್ರ ನಟಿಸುತ್ತಿದ್ದರು.
ಆದರೆ ಆರೋಗ್ಯ ಹೀಗಾದ ನಂತರ ಅವರು ಪೂರ್ತಿಯಾಗಿ ಆರೋಗ್ಯದ ಕಡೆಗೆ ಗಮನ ಹರಿಸಿದ್ದರು, ಜೊತೆಗೆ ಮಾನಸಿಕವಾಗಿ ಕೂಡ ತುಂಬಾ ಕುಗ್ಗಿ ಹೋಗಿದ್ದರು. ಎಲ್ಲರ ಸಪೋರ್ಟ್ ಸಿಕ್ಕ ನಂತರ ಹುಷಾರಾಗಬೇಕು ಎನ್ನುವುದು ಮಾತ್ರ ಅವರ ಮನಸ್ಸಿನಲ್ಲಿ ಇತ್ತು ಎಂದು ಸ್ವತಃ ಶ್ರೀಧರ್ ಅವರೇ ಹೇಳಿಕೊಂಡಿದ್ದರು. ಇನ್ನು ಸ್ವಲ್ಪ ಧೈರ್ಯ ತೆಗೆದುಕೊಂಡು, ಬದುಕನ್ನು ಎದುರಿಸಿದ್ದರೆ ಬಹುಶಃ ಹುಷಾರಾಗಿ ಬರುತ್ತಿದ್ದರೋ ಏನೋ.. ಆದರೆ ಶ್ರೀಧರ್ ಅವರು ನಿನ್ನೆ ವಿಧಿವಶರಾದರು. ಇವರ ಆತ್ಮಕ್ಕೆ ಶಾಂತಿ ಸಿಗಲಿ, ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ಇವರ ಕುಟುಂಬಕ್ಕೆ ನೀಡಲಿ.



