ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ಹೀರೋಯಿನ್ ಗಳಲ್ಲಿ ಸಾಯಿಪಲ್ಲವಿ ಅವರು ಸಹ ಒಬ್ಬರು. ಇವರು ಈಗ ಬಹುಬೇಡಿಕೆಯ ನಟಿ, ನಟನೆ ಇಂದ ಮಾತ್ರವಲ್ಲದೇ ಜನರು ಸಾಯಿಪಲ್ಲವಿ ಅವರನ್ನು ಹೆಚ್ಚು ಇಷ್ಟಪಡುವುದು ಅವರ ವ್ಯಕ್ತಿತ್ವ ಹಾಗೂ ಸರಳತೆ ಇಂದ. ಇವರನ್ನು ನೋಡಿದ ಕೂಡಲೇ ನಮ್ಮ ಮನೆ ಹುಡುಗಿ ಎಂದೇ ಅನ್ನಿಸಿಬಿಡುತ್ತದೆ. ಅದೇ ಕಾರಣಕ್ಕೆ ಹೆಚ್ಚು ಇಷ್ಟವಾಗುತ್ತಾರೆ ಸಾಯಿಪಲ್ಲವಿ. ಸಾಯಿಪಲ್ಲವಿ ಅವರು ಅನೇಕ ವಿಚಾರಗಳಿಗೆ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಇದೀಗ ಇವರು ಸಾರ್ವಜನಿಕ ವಿಚಾರದ ಬಗ್ಗೆ ಒಂದು ಸ್ಟೇಟ್ಮೆಂಟ್ ನೀಡಿದ್ದು, ಆ ಮಾತು ಈಗ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸಾಯಿಪಲ್ಲವಿ ಅವರು ವೃತ್ತಿಯಲ್ಲಿ ಡಾಕ್ಟರ್, ಜಾರ್ಜಿಯಾ ನಲ್ಲಿ ಮೆಡಿಸಿನ್ ಓದಿರುವ ಸಾಯಿಪಲ್ಲವಿ ಅವರು, ಭಾರತಕ್ಕೆ ಬಂದು ನಟಿ ಆಗಿದ್ದಾರೆ. ಮುಂದೆ ಮೆಡಿಸಿನ್ ವೃತ್ತಿ ಮುಂದುವರೆಸುವ ಆಸೆ ಕೂಡ ಅವರಿಗೆ ಇದೆ. ಸಾಯಿಪಲ್ಲವಿ ಅವರು ಅದ್ಭುತವಾದ ಡ್ಯಾನ್ಸರ್. ಇವರ ಡ್ಯಾನ್ಸ್ ಜನರಿಗೆ ತುಂಬಾ ಇಷ್ಟ. ಯಾರಿಂದಲೂ ನೃತ್ಯ ಕಲಿಯದೆ, ಸ್ವಯಂ ಪ್ರಯತ್ನದಿಂದ ಟಿವಿಯಲ್ಲಿ ಹೀರೋಯಿನ್ ಗಳು ಡ್ಯಾನ್ಸ್ ಮಾಡುವ ರೀತಿ ನೋಡಿ, ಅವರಿಗೂ ಡ್ಯಾನ್ಸ್ ನಲ್ಲಿ ಆಸಕ್ತಿ ಇದ್ದ ಕಾರಣ, ಸ್ವತಃ ಡ್ಯಾನ್ಸ್ ಕಲಿತಿದ್ದು ಸಾಯಿ ಪಲ್ಲವಿ. ಇಬರೊಬ್ಬ ಅದ್ಭುತವಾದ ಡ್ಯಾನ್ಸರ್ ಮತ್ತು ನಟಿ ಎರಡು ಸಹ ಹೌದು.

ಸಾಯಿಪಲ್ಲವಿ ಅವರು ನಟನೆ ಶುರು ಮಾಡಿದ್ದು ಮಲಯಾಳಂ ಭಾಷೆಯ ಪ್ರೇಮಂ ಸಿನಿಮಾ ಮೂಲಕ. ಆ ಒಂದು ಸಿನಿಮಾ ಇವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟ ಕಾರಣ ಪಲ್ಲವಿ ಅವರಿಗೆ ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಒಳ್ಳೆಯ ಅವಕಾಶಗಳು ಬರುವುದಕ್ಕೆ ಶುರುವಾಯಿತು. ಇವರು ಆಯ್ಕೆ ಮಾಡಿಕೊಳ್ಳುವ ಎಲ್ಲಾ ಪಾತ್ರಗಳು ಸಹ, ಮನಸ್ಸಿಗೆ ತುಂಬಾ ಹತ್ತಿರ ಎನ್ನಿಸುತ್ತದೆ. ಹಾಗೆಯೇ ಇವರ ನಟನೆ ಕೂಡ ಅಷ್ಟೇ ಅದ್ಭುತವಾಗಿರುತ್ತದೆ. ಇತ್ತೀಚೆಗೆ ತೆರೆಕಂಡ ಅಮರನ್ ಸಿನಿಮಾದಲ್ಲಿ ತಮ್ಮ ನ್ಯಾಚುರಲ್ ಅಭಿನಯದ ಮೂಲಕ ಎಲ್ಲರಿಗೂ ತುಂಬಾ ಇಷ್ಟ ಆಗಿ, ಹಲವು ಅವಾರ್ಡ್ಸ್ ಗಳನ್ನು ಪಡೆದುಕೊಂಡರು ಸಾಯಿಪಲ್ಲವಿ.
ಇನ್ನು ಮುಂದಿನ ತಿಂಗಳು ಸಾಯಿಪಲ್ಲವಿ ಹಾಗೂ ನಾಗಚೈತನ್ಯ ಜೊತೆಯಾಗಿ ನಟಿಸಿರುವ ಸಿನಿಮಾ ತಾಂಡೆಲ್ ಬಿಡುಗಡೆ ಆಗಲಿದೆ. ಈ ಸಿನಿಮಾದ ಹಾಡುಗಳು ಈಗಾಗಲೇ ಹಿಟ್ ಆಗಿದೆ. ಸಾಯಿಪಲ್ಲವಿ ಅವರು ಬಾಲಿವುಡ್ ನಲ್ಲಿ ಕೂಡ ಬ್ಯುಸಿ ಆಗಿದ್ದಾರೆ. ರಣಬೀರ್ ನಾಯಕನಾಗಿರುವ ರಾಮಾಯಣ ಸಿನಿಮಾದಲ್ಲಿ ಸಾಯಿಪಲ್ಲವಿ ಸೀತೆಯಾಗಿ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಹೀಗೆ ಬ್ಯುಸಿ ಇರುವ ಸಾಯಿಪಲ್ಲವಿ ಅವರು ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಸೂಕ್ಷ್ಮವಾದ ವಿಷಯದ ಬಗ್ಗೆ ಮಾತನಾಡಿದ್ದಾರೆ. ಅದು ಏನು ಎಂದು ನೋಡುವುದಾದರೆ.. “ಎಲ್ಲರಿಗೂ ಅವರಿಗೆ ಇರುವಂತಹ ಭಯ, ಮುಜುಗರ ಇದೆಲ್ಲಾ ಇದ್ದೆ ಇರುತ್ತದೆ..

ನಾನು ಹೊರಗಡೆ ಹೋದರೆ, ಎಲ್ಲಾರು ನನ್ನ ಫೋಟೋ ತೆಗೆಯುತ್ತಾರೆ. ನನಗೆ ಇದೆಲ್ಲಾ ಇಷ್ಟ ಆಗಲ್ಲ, ಮುಜುಗರ ಅನ್ನಿಸುತ್ತದೆ. ಸ್ಮಾರ್ಟ್ ಫೋನ್ ಗಳಲ್ಲಿ ಕೆಲವರು ದಿಢೀರ್ ಎಂದು ಫೋಟೋ ತೆಗೆಯೋದು, ಮುಜುಗರ ತರುತ್ತದೆ. ಆ ರೀತಿ ಫೋಟೋ ತೆಗೆಯೋಕೆ ನಾನೊಂದು ಬಿಲ್ಡಿಂಗ್ ಅಥವಾ ಮರ ಅಲ್ಲ, ಎಲ್ಲರ ಹಾಗೆಯೇ ನಾನು. ನಿಮ್ಮ ಫೋಟೋ ತೆಗೆಯಬಹುದಾ ಎಂದು ಕೇಳಿ ತೆಗೆದರೆ, ನನಗೂ ಸಂತೋಷ ಹಾಗೆ ಅದು ನನಗು ಗೊತ್ತಿರುತ್ತದೆ. ಜನ ನನ್ನ ಸುತ್ತ ಬರೋದು ನನಗೆ ಸ್ವಲ್ಪ ಮುಜುಗರ ತರುತ್ತದೆ..” ಎಂದು ಹೇಳಿದ್ದಾರೆ ಸಾಯಿಪಲ್ಲವಿ. ಇವರು ಹೇಳಿರುವುದು ಸುಳ್ಳಲ್ಲ.



