ನಟ ಯಶ್ ಅವರು ಸಿನಿಮಾ ಒಂದರಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು ಮೊಗ್ಗಿನ ಸಿನಿಮಾದಲ್ಲೇ ಮೊದಲು. ಇದೊಂದು ಮಲ್ಟಿ ಸ್ಟಾರರ್ ಸಿನಿಮಾ ಎಂದರು ತಪ್ಪಲ್ಲ. ನಿರ್ದೇಶಕ ಶಶಾಂಕ್ ಅವರು ನಾಲ್ವರು ಕಾಲೇಜು ಹುಡುಗಿಯರ ಕಥೆಯನ್ನು ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ತೋರಿಸಿದರು. ಇದು ರಾಧಿಕಾ ಪಂಡಿತ್ ಅವರು ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ ಕೂಡ ಹೌದು. ಹಾಗೆಯೇ ಯಶ್ ರಾಧಿಕಾ ಜೊತೆಯಾಗಿ ನಟಿಸಿದ ಮೊದಲ ಸಿನಿಮಾ. ಆದರೆ ಮೊಗ್ಗಿನ ಮನಸ್ಸು ಸಿನಿಮಾದ ರಾಹುಲ್ ಪಾತ್ರಕ್ಕೆ ಯಶ್ ಅವರು ಮೊದಲ ಆಯ್ಕೆ ಆಗಿರಲಿಲ್ಲ. ಹಾಗಿದ್ರೆ ಮೊದಲು ಆಯ್ಕೆಯಾದವರು ಯಾರು? ನಂತರ ಯಶ್ ಅವರು ಬಂದಿದ್ದು ಹೇಗೆ? ಪೂರ್ತಿ ಸ್ಟೋರಿ ಇಲ್ಲಿದೆ ನೋಡಿ..
ಯಶ್ ಅವರು ಹಾಗೂ ರಾಧಿಕಾ ಪಂಡಿತ್ ಅವರು ಇಬ್ಬರು ಸಹ ಕನ್ನಡ ಕಿರುತೆರೆಯಲ್ಲಿ ಬಿಡುವಿಲ್ಲದ ಹಾಗೆ ಬ್ಯುಸಿ ಇದ್ದರು. ಇಬ್ಬರಿಗೂ ಬೆಳ್ಳಿತೆರೆ ಪ್ರವೇಶ ಮಾಡಬೇಕು, ಸಿನಿಮಾಗಳಲ್ಲಿ ನಟಿಸಬೇಕು ಎಂದು ಆಸೆ ಇತ್ತು, ಇಬ್ಬರು ಅದೇ ಕಡೆಗೆ ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ರಾಧಿಕಾ ಅವರು ಅಗ್ನಿಶಿಖೆ, ಕಾದಂಬರಿ, ನಂದಗೋಕುಲ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್ನು ಯಶ್ ಅವರು ಸಿಲ್ಲಿ ಲಲ್ಲಿ, ಪ್ರೀತಿ ಇಲ್ಲದ ಮೇಲೆ, ನಂದಗೋಕುಲ ಹಾಗೂ ಇನ್ನಿತರ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇಬ್ಬರು ಜೊತೆಯಾಗಿ ನಂದಗೋಕುಲ ಧಾರವಾಹಿಯಲ್ಲಿ ನಟಿಸಿದರು. ಬಳಿಕ ಇಬ್ಬರು ಬೆಳ್ಳಿತೆರೆಗೆ ಬಂದರು.

ಯಶ್ ಅವರು ಹಾಗೂ ರಾಧಿಕಾ ಅವರಿಗೆ ಹೀರೋ ಹಾಗೂ ಹೀರೋಯಿನ್ ಆಗಿ ನಟಿಸಲು ಮೊದಲು ಅವಕಾಶ ನೀಡಿದ್ದು, ನಿರ್ದೇಶಕ ಶಶಾಂಕ್ ಅವರು. ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ಇವರಿಬ್ಬರದ್ದು ಜೋಡಿಯಾಗುವ ಮುಖ್ಯಪಾತ್ರ ಆಗಿತ್ತು. ಮೊಗ್ಗಿನ ಮನಸ್ಸು ಸಿನಿಮಾ ಸೂಪರ್ ಹಿಟ್ ಆಗಿ, ಇಬ್ಬರಿಗೂ ಚಂದನವನದಲ್ಲಿ ತಮ್ಮದೇ ಆದ ಸ್ಥಾನ ಕಟ್ಟಿಕೊಳ್ಳಲು ಸಾಧ್ಯವಾಯಿತು. ಬಳಿಕ ಒಳ್ಳೆಯ ಸಿನಿಮಾಗಳಲ್ಲಿ ನಟಿಸುವುದಕ್ಕೆ ಶುರು ಮಾಡಿದರು. ಇವರಿಬ್ಬರಿಗೂ ಮೊಗ್ಗಿನ ಮನಸ್ಸು ಲೈಫ್ ಚೇಂಜಿಂಗ್ ಸಿನಿಮಾ ಎಂದರೂ ತಪ್ಪಲ್ಲ. ಇಬ್ಬರ ನಡುವೆ ಇದ್ದ ಸ್ನೇಹ ಪ್ರೀತಿ ಆಗಿದ್ದು ಸಹ ಇದೇ ಸಮಯದಲ್ಲೇ.
ಇನ್ನು ಮೊಗ್ಗಿನ ಮನಸ್ಸು ನಂತರ ಇಬ್ಬರು ಸ್ಯಾಂಡಲ್ ವುಡ್ ನ ಸ್ಟಾರ್ ಗಳಾಗಿ ಬೆಳೆದು ನಿಂತರು. ಇಂದು ಯಶ್ ಅವರು ಎಂಥಾ ದೊಡ್ಡ ಸ್ಥಾನಕ್ಕೆ ತಲುಪಿದ್ದಾರೆ ಎನ್ನುವುದು ನಮಗೆಲ್ಲಾ ಗೊತ್ತೇ ಇದೆ. ಯಶ್ ಅವರು ಈಗ ಪ್ಯಾನ್ ಇಂಡಿಯಾ ಸ್ಟಾರ್. ಅವರ ಮುಂದಿನ ಸಿನಿಮಾಗಾಗಿ ಇಡೀ ಭಾರತ ಚಿತ್ರರಂಗವೇ ಎದುರು ನೋಡುತ್ತಿದೆ. ಕೆಜಿಎಫ್2 ಸಿನಿಮಾ ಸಾವಿರ ಕೋಟಿ ಹಣಗಳಿಕೆ ಮಾಡಿ, ದಾಖಲೆಯನ್ನೇ ಸೃಷ್ಟಿಸಿತು. ಇಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದಾರೆ ನಟ ಯಶ್. ಆದರೆ ಅಂದು ಮೊಗ್ಗಿನ ಮನಸ್ಸು ಸಿನಿಮಾಗೆ ಯಶ್ ಅವರು ಮೊದಲ ಆಯ್ಕೆ ಆಗಿರಲಿಲ್ಲ ಎಂದು ಮಾಹಿತಿ ಸಿಕ್ಕಿದೆ. ಹೌದು, ಚಿತ್ರತಂಡ ಮತ್ತೊಬ್ಬ ನಟನನ್ನು ಆಯ್ಕೆ ಮಾಡಿತ್ತು.

ಈ ವಿಚಾರ ಇತ್ತೀಚೆಗೆ ಹೊರಬಂದಿದ್ದು, ಮೊಗ್ಗಿನ ಮನಸ್ಸು ಚಿತ್ರತಂಡ ಯಶ್ ಅವರು ನಟಿಸಿದ ರಾಹುಲ್ ಪಾತ್ರಕ್ಕೆ ಮೊದಲು ಆಯ್ಕೆ ಮಾಡಿದ್ದು ನಟ ಸ್ಕಂದ ಅಶೋಕ್ ಅವರನ್ನು. ಹೌದು, ಪ್ರಸ್ತುತ ಇವರು ಕನ್ನಡ ಕಿರುತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ರಾಧಾ ರಮಣ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಸ್ಕಂದ. ಹಾಗೆಯೇ ಕೆಲವು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ರಾಹುಲ್ ಪಾತ್ರಕ್ಕೆ ನಿರ್ದೇಶಕ ಶಶಾಂಕ್ ಅವರ ಮೊದಲ ಆಯ್ಕೆ ಸ್ಕಂದ ಆಗಿದ್ದರು, ಆ ವೇಳೆ ಸ್ಕಂದ ಅವರು ಕಾಲು ಮುರಿದುಕೊಂಡು ಅನಾರೋಗ್ಯಕ್ಕೆ ಒಳಗಾದ ಕಾರಣ ಯಶ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಯಿತು.