ಸ್ಟಾರ್ ಕಲಾವಿದರಿಗೆ ನಿಜವಾದ ಹೆಸರು ಹಾಗೂ ಸ್ಕ್ರೀನ್ ನೇಮ್ ಎಂದು ಎರಡು ಹೆಸರುಗಳಿರುತ್ತವೆ. ಹಾಗೆಯೇ ರಿಷಬ್ ಶೆಟ್ಟರಿಗೂ ಎರಡು ಹೆಸರುಗಳಿವೆ. ಅವರ ನಿಜನಾಮ ಹಲವರಿಗೆ ಗೊತ್ತಿಲ್ಲ. ರಿಷಬ್ ಅವರ ನಿಜವಾದ ಹೆಸರಲ್ಲ. ಹಾಗಾದರೆ ರಿಷಬ್ ಅವರ ನಿಜವಾದ ಹೆಸರು ನಿಮಗೆ ಗೊತ್ತೇ? ರಿಷಬ್ ಅವರ ನಿಜವಾದ ಹೆಸರು ಪ್ರಶಾಂತ್ ಶೆಟ್ಟಿ. ಅವರ ಹೆಸರನ್ನು ಬೆಂಗಳೂರಿಗೆ ಬಂದಾಗ ಅವರ ತಂದೆ ಬದಲಾಯಿಸಿದ್ದರು ಎನ್ನಲಾಗಿದೆ. ಈಗಲೂ ಅವರ ಊರಿನಲ್ಲಿ ರಿಷಬ್ ಪ್ರಶಾಂತ್ ಎಂದೇ ಗುರುತಿಸಿಕೊಂಡಿದ್ದಾರೆ .ಅವರ ಹಳೆಯ ಗೆಳೆಯರ ಮೊಬೈಲ್ ನಲ್ಲಿ ಈಗಲೂ ಪ್ರಶಾಂತ್ ಎಂದೇ ಇವರ ನಂಬರ್ ಸೇವ್ ಇದೆ . ಹಾದರೆ ಏಕೆ ಗೊತ್ತೆ ಇವರ ಹೆಸರು ಬದಲಾಯಿಸಿದ್ದು ಅದಕ್ಕಿದೆ ಮಹತ್ವದ ಕಾರಣ.

ರಿಷಬ್ ಶೆಟ್ಟಿ ಮೂಲತಹ ಕುಂದಾಪುರದವರು. 1983 ರ ಜುಲೈ 7 ರಲ್ಲಿ ಕಿರಾಡಿ ಎಂಬಲ್ಲಿ ಜನಿಸಿದರು.ತಂದೆ ಭಾಸ್ಕರ್ ಶೆಟ್ಟಿ , ತಾಯಿ ರತ್ನಾವತಿ ಶೆಟ್ಟಿ.ಮೂವರು ಮಕ್ಕಳಲ್ಲಿ ಕಿರಿಯರು ರಿಷಬ್ ಶೆಟ್ಟಿ.ಇವರಿಗೆ ಓರ್ವ ಅಣ್ಣ ಹಾಗೂ ಅಕ್ಕ ಇದ್ದಾರೆ. ರಿಷಬ್ ಶೆಟ್ಟಿ ಅವರ ತಂದೆ ವೃತ್ತಿಯಲ್ಲಿ ಜ್ಯೀತಿಷಿಗಳು. ಅವರ ತಂದೆ ರಿಷಬ್ ಅವರ ಹೆಸರನ್ನು ಬದಲಿಸಿದರು ಕಾರಣ ಇಲ್ಲಿದೆ. ಮೊದಲು ಸಿನಿಮಾರಂಗದಲ್ಲಿ ನೆಲೆ ಕಂಡುಕೊಳ್ಳುವ ಪ್ರಯತ್ನದಲ್ಲಿ ಎಡವಿದ್ದರು ರಿಷಬ್ ಶೆಟ್ಟಿ.
ಸುಮಾರು 7 ಸಿನಿಮಾಗಳಲ್ಲಿ ರಿಷಬ್ ಅವರು ಪ್ರಮುಖ ಪಾತ್ರಗಳಲ್ಲೇ ನಟಿಸಬೇಕಿತ್ತಾದ್ರೆ ಯಾವೊಂದು ಸಿನಿಮಾವೂ ಪೂರ್ಣಗೊಳ್ಳದೇ ಅರ್ಧಕ್ಕೆ ನಿಂತು ಹೋಗಿದ್ದವು.. ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಸೈನೇಡ್ , ಗಂಡ ಹೆಂತಿ , ಬಾಯ್ ಫ್ರೆಂಡ್ ಸಿನಿಮಾಗಳಲ್ಲಿ ಕೆಲಸ ಮಾಡಿದರೂ ಜೀವನ ಸಕಷ್ಟವಾಗಿತ್ತು. ಹೀಗೆ ಏನೇ ಮಾಡಿದ್ರೂ ಕೈ ಹಿಡಿಯದಾಗ ರಿಷಬ್ ಶೆಟ್ಟಿ ಅವರು ಹೆಸರು ಬದಲಾಯಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು.
ತಾವು ಹುಟ್ಟಿದ ದಿನಾಂಕ 7 , ತಮ್ಮ ಜನ್ಮದ ತಿಂಗಳು 7 , ತಮ್ಮ ಸಿನಿಮಾಗಳು ಸ್ಥಗಿತಗೊಂಡ ಸಂಖ್ಯೆ 7 , ತಮ್ಮ ಹೆಸರಿನ ಅಕ್ಷರಗಳು 7 ಎಂದು ಯೋಚಿಸಿ ಅವರ ತಂದೆಯ ಸಲಹೆಯ ಮೇರೆಗೆ ಆರ್ ಅಕ್ಷರದಿಂದ ಹೆಸರು ಇಟ್ಟುಕೊಳ್ಳಲು ಮುಂದಾಗಿದ್ದು ರಿಷಬ್ ಎಂದು ತಮ್ಮ ಹೆಸರನ್ನ ಬದಲಾಯಿಸಿಕೊಂಡರು.. ಆನಂತರವೇ ಅವರ ನಿರ್ದೇಶನದ ರಿಕ್ಕಿ , ಕಿರಿಕ್ ಪಾರ್ಟಿ , ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಂತಹ ಸಿನಿಮಾಗಳು ಸೂಪರ್ ಹಿಟ್ ಆಗಿ ಪ್ರಶಸ್ತಿಗಳ ಮೇಲೆ ಪ್ರಶಸ್ತಿಗಳನ್ನ ಬಾಚಿಕೊಂಡರು ರಿಷಬ್.. ಈಗ ಕಾಂತಾರ ಸಕ್ಸಸ್ ನ ಸಂಭ್ರಮದಲ್ಲಿದ್ದಾರೆ.



