ಸ್ಯಾಂಡಲ್ವುಡ್ನ ನ ಇವರ್ಗ್ರೀನ್ ಕ್ರಿಶ್ ಎಂದೇ ಹೇಳಬಹುದಾದ ನಟಿ “ರಮ್ಯಾ”.ರಮ್ಯಾ ಅವರು ಪರಿಚಯಿಸಿಕೊಂಡಿದ್ದು ಪುನೀತ್ ರಾಜ್ ಕುಮಾರ್ ಅಭಿನಯದ ಅಭಿ ಸಿನಿಮಾದ ಮೂಲಕ.ಇದೊಂದು ಸಿನಿಮಾ ಈ ಜೋಡಿಗೆ ಕೋಟ್ಯಾಂತರ ಮಂದಿಯಾ ಅಭಿಮಾನಿಗಳನ್ನು ಸಂಪಾದಿಸಿಕೊಟ್ಟಿತು.ಅಂದು ಕೊಟ್ಟಾ ಮೋಹಕತಾರೆ ಎಂಬ ಬಿರುದು ಪಡೆದುಕೊಂಡ ಈ ನಟಿ ಚಿತ್ರರಂಗದಿಂದ ದೂರ ಉಳಿದು ಕೊಂಡು ಇಷ್ಟು ವರ್ಷಗಳು ಕಳೆದಿದ್ದರು ಇಂದಿಗೂ ಅವರನ್ನು ಅದೇ ಹೆಸರಿನಿಂದ ಗುರಿತಿಸುವಷ್ಟು ಚಲುವೆ ಎಂದರೆ ತಪ್ಪಾಗಲಾರದು.
ಈ ನಟಿ ಸಿನಿಮಾ ರಂಗಕ್ಕೆ ಕಾಲಿಟ್ಟಾಗ ಬೇರಾವ ನಟಿಗೂ ಅವಕಾಶ ಇಲ್ಲದಂತೆ ಮಾಡಿದ್ದರು.ಸಾಲು ಸಾಲು ಸಿನಿಮಾಗಳ ಸಕ್ಸಸ್ ನೋಡುತ್ತಾ ನಮ್ಮ ಭಾಷೆ ಅಲ್ಲದೆ ಪರಭಾಷೆಯಲ್ಲೂ ಕೊಡ ಸಿನಿಮಾ ಗಳನ್ನು ಮಾಡುತ್ತಾ ಇದ್ದವರು.ಆದರೆ ತಮ್ಮ ಬೇಡಿಕೆ ಇರುವ ಸಂಧರ್ಭದಲ್ಲಿ ಈ ನಟಿ ಚಿತ್ತಾ ರಾಜಕೀಯದತ್ತ ತಿರುಗಿತು ಹಾಗಾಗಿ ಈ ನಟಿ ತಮ್ಮ ಸಿನಿಮಾ ಕೆರಿಯರ್ ನನ್ನು ಅಂತ್ಯ ಮಾಡುವ ನಿರ್ಧಾರ ಮಾಡಿದರು.ಈ ನಟಿ ಸಿನಿಮಾವನ್ನು ತೋರಿಯುವ ವಿಚಾರ ತಿಳಿದು ಅದೆಷ್ಟೋ ಮಂದಿ ಬೇಸರವನ್ನು ವಯಕ್ತಪಡಿಸಿದ್ಧರು.ಆದ್ರೆ ಅವರ ಕನಸನ್ನು ಹುಡುಕಿಕೊಂಡು ರಾಜಕೀಯದ ಹಾದಿ ಹಿಡಿದರು.

ಈ ನಟಿ ರಾಜಕೀಯದಲ್ಲೂ ಕೊಡ ಬಹಳ ದೊಡ್ಡ ಯಶಸ್ಸನ್ನು ಪಡೆದುಕೊಂಡರು.ಸಂಸದೆಯಾಗಿ, ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಹುದ್ದೆಯ ಜವಾಬ್ದಾರಿ ನಿರ್ವಹಿಸಿ ಈಗ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ರಾಜಕೀಯದಲ್ಲೂ ದೂರ ಕಾಯ್ದುಕೊಂಡ ನಂತರ ಮರಳಿ ಸಿನಿಮಾ ರಂಗಕ್ಕೆ ಬರುತ್ತಾರೆ ಎಂಬ ಸುದ್ದಿ ಹರಡಿತ್ತು ಆದರೆ ಈ ಚೆಲುವೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲೆಂದು ವಿದೇಶಕ್ಕೆ ಹಾರಿದರೂ.ಆ ನಂತರ ನಮ್ಮ ದೇಶಕ್ಕೆ ಮರಳಿದಾಗ ಅವರ ಅಭಿಮಾನಿಗಳು ಮತ್ತೆ ಸಿನಿಮಾ ಮಾಡಲು ಬಹಳಷ್ಟು ಬೇಡಿಕೆಗಳನ್ನು ಇಟ್ಟರು.
ಇನ್ನು ಅವರ ಬೇಡಿಕೆಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿ ತಮ್ಮದೇ ಆದ ಆಪಲ್ ಬಾಕ್ಸ್ ಎಂಬ ಸಂಸ್ಥೆಯನ್ನು ತೆರೆದು ನಿರ್ಮಾಪಕಿಯಾಗಿ ನಮ್ಮ ಚಂದನವನಕ್ಕೆ ಕಾಲಿಟ್ಟರು.ತಮ್ಮ ನೆಚ್ಚಿನ ನಟಿಯನ್ನು ಮತ್ತೆ ತೆರೆ ಮೇಲೆ ನೋಡಲು ಆಗುವುದಿಲ್ಲ ಎಂದು ಹಲವಾರು ಮಂದಿ ಬೇಸರವನ್ನು ವ್ಯಕ್ತಪಡಿಸಿದಾಗ ಈ ನಟಿ ತಾವು ಹೊಸ ಸಿನಿಮಾವನ್ನು ಕೆಲ ದಿನಗಳ ಹಿಂದಷ್ಟೆ ಘೋಷಿಸಿದ್ದಾರೆ.ಸ್ವಾತಿ ಮುತ್ತಿನ ಮಳೆಹನಿಯೇ ಚಿತ್ರದ ಮೂಲಕ ನಟಿಯಾಗಿ ಮತ್ತೆ ಚಂದನವನಕ್ಕೆ ಕಂಬ್ಯಾಕ್ ಮಾಡಲಿದ್ದಾರೆ. ಈ ಚಿತ್ರವನ್ನು ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಾಯಕ ನಟನಾಗಿ ನಟಿಸುತ್ತಿದ್ದಾರೆ.
ಇನ್ನು ಇತ್ತೀಚೆಗೆ ಪ್ರಸರವಾದ “ಅನುಬಂಧ ಅವರ್ಡ್ಸ್” ನಲ್ಲಿ ತಮ್ಮ ಮದುವೆಗಯುವ ಹುಡುಗ ಹೇಗಿರಬೇಕು ಎಂದು ರಿವೀಲ್ ಮಾಡಿದ್ದಾರೆ.ಇನ್ನು ಈ ಕಾರ್ಯಕ್ರಮದ ನಿರೂಪಕ “ಅಕುಲ್ ಬಾಲಾಜಿ”, ಎಂದಿನ ತಮ್ಮ ವಾಚಾಳಿ ಧಾಟಿಯಲ್ಲಿ, ರಮ್ಯಾ ಅವರನ್ನು ಅವರ ಪ್ರೀತಿಯ ಹುಡುಗನ ಬಗ್ಗೆ ತಿಳಿಸುವಂತೆ ಮನವಿ ಮಾಡಿದ್ದಾರೆ. ಆಗ ನಮ್ಮ ಸ್ಯಾಂಡಲ್ವುಡ್ ಕ್ರಶ್ ರಮ್ಯಾ, ಮೊದಲಿಗೆ ತಾವು ಸಿಂಗಲ್ ಆಗಿರುವುದನ್ನು ಸ್ಪಷ್ಟಪಡಿಸಿದ್ದಾರೆ.”ನಾನು ಸಿಂಗಲ್ ಆಗಿದ್ದೇನೆ, ಆತ ಕೂಡ ಸಿಂಗಲ್ ಆಗಿರಬೇಕು, ಆತನಿಗೆ ಮದುವೆ ಆಗಿರಬಾರದು. ಹುಡುಗನ ಲುಕ್ಸ್ ಬಗ್ಗೆ ನಾನು ಹೆಚ್ಚು ಯೋಚನೆ ಮಾಡುವುದಿಲ್ಲ. ಅವರು ಒಳ್ಳೆಯ ಮನುಷ್ಯರಾಗಿರಬೇಕು. ಅವರಲ್ಲಿ ಕರುಣೆಯ ಗುಣ ಹೆಚ್ಚಿಗೆ ಇರಬೇಕು” ಎಂದು ಹೇಳಿದ್ದಾರೆ.



