ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಜನರು ಏನು ಬೇಕಾದರೂ ಮಾಡಲು ಸಿದ್ಧ. ತಾವು ಯಾವ ಸ್ಥಳದಲ್ಲಿದ್ದೇವೆ, ನಾವಿಲ್ಲಿ ಹೀಗೆ ನಡೆದುಕೊಳ್ಳಬಹುದಾ?, ಇದಾವುದರ ಪರಿವೇ ಇರುವುದಿಲ್ಲ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಶಾಕಿಂಗ್ ವಿಡಿಯೋವೊಂದು ವೈರಲ್ ಆಗುತ್ತಿದ್ದು, ನೆಟ್ಟಿಗರು ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.
ವಿಡಿಯೋದಲ್ಲಿ ಏನಿದೆ?
ವೈರಲ್ ಆಗಿರುವ ವಿಡಿಯೋದಲ್ಲಿ, ಇಂಡಿಯಾ ಗೇಟ್ ಮುಂದೆ ಓರ್ವ ಮಾಡೆಲ್ ಟವೆಲ್ ಸುತ್ತಿ ಡ್ಯಾನ್ಸ್ ಮಾಡುತ್ತಿದ್ದಾರೆ. ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಚಿತ್ರದ ಹಾಡಿಗೆ ಆಕೆ ನೃತ್ಯ ಮಾಡುತ್ತಿದ್ದಾರೆ. ಈ ಸಿನಿಮಾ ಹಾಡಿನಲ್ಲಿ ಕಾಜೋಲ್ ಟವೆಲ್ ಹಾಕಿಕೊಂಡು ಹೇಗೆ ಡ್ಯಾನ್ಸ್ ಮಾಡಿದ್ದರೋ ಅದೇ ರೀತಿ ಇದೀಗ ಮಾಡೆಲ್ ಇಂಡಿಯಾ ಗೇಟ್ ಮುಂದೆ ಈ ಹಾಡಿಗೆ ಡ್ಯಾನ್ಸ್ ಮಾಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಯಾರು ಈ ಮಾಡೆಲ್?
ಅಂದಹಾಗೆ ಈ ಮಾಡೆಲ್ ಮಿಸ್ ಕೋಲ್ಕತ್ತಾ. ಆಕೆಯ ಹೆಸರು ಸನ್ನತಿ ಮಿತ್ರ. ಸನ್ನತಿ ಸದಾ ತನ್ನ ವಿಡಿಯೋಗಳನ್ನು Instagram ನಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಆದರೆ ಈಗ ಆಕೆ ಇಂಡಿಯಾ ಗೇಟ್ ಮುಂದೆ ಟವೆಲ್ ಧರಿಸಿ ನೃತ್ಯ ಮಾಡಿದ್ದರಿಂದ ಜನರು ಕೋಪಗೊಂಡು ಟ್ರೋಲ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಹಂಚಿಕೊಳ್ಳುವಾಗ, ಅಂತರರಾಷ್ಟ್ರೀಯ ಪುರುಷರ ದಿನಾಚರಣೆಯ ಶುಭಾಶಯಗಳು. ನೀವೆಲ್ಲರೂ ನಿಮ್ಮ ಧೈರ್ಯ, ದಯೆ ಮತ್ತು ಸಹಾನುಭೂತಿಯಿಂದ ಇತರರನ್ನು ಪ್ರೇರೇಪಿಸಲು ಮತ್ತು ಪ್ರೋತ್ಸಾಹಿಸಲು ಮುಂದುವರಿಯರಿ ಎಂದು ಬರೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ ಜನರು
ಒರ್ವ ಬಳಕೆದಾರರು “ಹೇ ಏನಾಗುತ್ತಿದೆ? ಇದು ಎಲ್ಲಾ ಮಿತಿಗಳನ್ನು ಮೀರಿದೆ. ದೆಹಲಿ ಪೊಲೀಸರು ಇದನ್ನೆಲ್ಲಾ ನೋಡಿಕೊಳ್ಳಬೇಕು” ಎಂದು ಬರೆದಿದ್ದಾರೆ. “ದೆಹಲಿ ಪೊಲೀಸರು ಈಗ ಎಲ್ಲಿದ್ದಾರೆ” ಎಂದು ಮತ್ತೊಬ್ಬರು ಬರೆದಿದ್ದಾರೆ. ಅಷ್ಟೇ ಅಲ್ಲ, “ಇಂತಹ ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲತೆಯನ್ನು ಪ್ರಚಾರ ಮಾಡುವವರು ಕಂಬಿ ಹಿಂದೆ ಇರಬೇಕು. ಈ ಮಹಾನ್ ರಾಷ್ಟ್ರಕ್ಕಾಗಿ ತ್ಯಾಗ ಮಾಡಿದ ಹುತಾತ್ಮರ ಹೆಸರನ್ನು ಆ ಸ್ಮಾರಕದ ಮೇಲೆ ಬರೆಯಲಾಗಿದೆ. ಆದರೆ ಇವರು ಅವರ ತ್ಯಾಗವನ್ನು ಅವಮಾನಿಸುತ್ತಿದ್ದಾರೆ!” ಎಂದೆಲ್ಲಾ ಟೀಕಿಸುತ್ತಿದ್ದಾರೆ.
ತಪ್ಪೇನಿದೆ ಎಂದ ಸನ್ನತಿ?
ನವರಾತ್ರಿಯ ಸಮಯದಲ್ಲಿಯೂ ಈ ಮಾಡೆಲ್ನ ಹಲವು ವಿಡಿಯೋಗಳು ವೈರಲ್ ಆಗಿವೆ. ಆಗ ಸನ್ನತಿ ಗಿಡ್ಡ ಬಟ್ಟೆ ಹಾಕಿಕೊಂಡು ದುರ್ಗ ಪೆಂಡಾಲ್ಗೆ ಹೋಗಿದ್ದರು. ಇನ್ನೊಂದು ವಿಡಿಯೋದಲ್ಲಿ ಬಿಕಿನಿ ಹಾಕಿಕೊಂಡು ಟೀ ಕುಡಿಯಲು ಟೀ ಅಂಗಡಿಗೆ ಹೋಗಿದ್ದರು. ಸನ್ನತಿ ಅಂತಹ ಬಟ್ಟೆ ಧರಿಸುವುದರಲ್ಲಿ ತಪ್ಪೇನಿಲ್ಲ ಎನ್ನುತ್ತಾರೆ.



