ಚಂದನವನದ ದೇವರು, ಚಂದನವನದ ದಂತಕಥೆ ಎಂದೇ ಹೆಸರುವಾಸಿ ಆಗಿರುವವರು ಡಾ. ರಾಜ್ ಕುಮಾರ್. ಇವರ ಬಗ್ಗೆ ಹೇಳುತ್ತಾ ಹೋದರೆ, ಪುಟಗಳೇ ಸಾಕಾಗೋದಿಲ್ಲ. ಡಾ. ರಾಜ್ ಕುಮಾರ್ ಅವರು ತಮ್ಮ ನಟನೆಯ ಮೂಲಕ ಮಾತ್ರ ಅಭಿಮಾನಿಗಳನ್ನು ಹೊಂದಿರಲಿಲ್ಲ, ಅವರಲ್ಲಿರುವ ಒಳ್ಳೇತನ, ಸರಳತೆ, ಅಭಿಮಾನಿಗಳನ್ನು ದೇವರು ಎಂದು ಭಾವಿಸಿದ ಅವರ ವ್ಯಕ್ತಿತ್ವ ಇದೆಲ್ಲವೂ ಸಹ ಅವರನ್ನು ಅಷ್ಟು ಎತ್ತರಕ್ಕೆ ಕೊಂಡೊಯ್ಯಿತು. ಆದರೆ ರಾಜ್ ಕುಮಾರ್ ಅವರು ಮಾತ್ರ ಸರಳತೆ ಇಂದಲೇ ಇದ್ದವರು. ಡಾ. ರಾಜ್ ಕುಮಾರ್ ಅವರಿಗೆ ಇರುವ ಅಭಿಮಾನಿ ಬಳಗ ಹೇಗಿತ್ತು ಎಂದು ಗೊತ್ತೇ ಇದೆ. ಕನ್ನಡದ ಪರವಾಗಿ ಎಂದಿಗೂ ನಿಂತಿದ್ದ ಕಲಾವಿದ ಡಾ. ರಾಜ್ ಕುಮಾರ್ ಅವರು ಎಂದು ನಮಗೆಲ್ಲ ಗೊತ್ತೇ ಇದೆ.. ಅವರು ಡಬ್ಬಿಂಗ್ ವಿರುದ್ಧ ಹೋರಾಟ ಶುರು ಮಾಡಿದಾಗ ಏನಾಯ್ತು ಎಂದು ಇಂದು ನಿಮಗೆ ತಿಳಿಸುತ್ತೇವೆ..

ಅಣ್ಣಾವ್ರು ಇದ್ದ ಸಮಯದಿಂದ ಕನ್ನಡ ಚಿತ್ರರಂಗ ಡಬ್ಬಿಂಗ್ ವಿರೋಧವಾಗಿ ನಿಂತಿದೆ ಎಂದು ನಮಗೆಲ್ಲ ಗೊತ್ತೇ ಇದೆ. ಈಗ ಎಲ್ಲಾ ದೊಡ್ಡ ದೊಡ್ಡ ನಟರು ಪ್ಯಾನ್ ಇಂಡಿಯಾ ಸಿನಿಮಾ ಮಾಡೋ ಗುಂಗಿನಲ್ಲಿ ಇದ್ದಾರೆ, ಒಂದೊಂದು ಸಿನಿಮಾ ಎರಡು ವರ್ಷ, ಮೂರು ವರ್ಷ ಸಮಯ ತೆಗೆದುಕೊಳ್ಳುತ್ತಿದೆ. ಸ್ಟಾರ್ ಗಳ ಸಿನಿಮಾ ಇಲ್ಲದೇ ಕನ್ನಡ ಚಿತ್ರರಂಗ ಕೂಡ ಬಡವಾಗಿ ಹೋಗಿದೆ. ಕಳೆದ ವರ್ಷ ತೆರೆಕಂಡ ಸುದೀಪ್ ಅವರ ಮ್ಯಾಕ್ಸ್ ಮತ್ತು ಉಪೇಂದ್ರ ಅವರ ಯುಐ ಬಳಿಕ ಇನ್ಯಾವುದೇ ಸೂಪರ್ ಹಿಟ್ ಕನ್ನಡ ಸಿನಿಮಾ ತೆರೆಕಂಡಿಲ್ಲ. ಸ್ಟಾರ್ ಗಳು ಸಿನಿಮಾ ಮಾಡೋಕೆ ಬಹಳ ಸಮಯ ತೆಗೆದುಕೊಳ್ಳುತ್ತಾ ಇದ್ದಾರೆ. ಇನ್ನು ಒಳ್ಳೇ ಕಥೆ ಇರೋ ಸಿನಿಮಾಗಳು ಬಂದೇ ಇಲ್ಲ. ಜೊತೆಗೆ ಡಬ್ಬಿಂಗ್ ಹಾವಳಿ ಕೂಡ ಕಡಿಮೆ ಅಂತೂ ಆಗಿಲ್ಲ. ಡಬ್ಬಿಂಗ್ ವಿವಾದ ಈಗ ಅಲ್ಲ, ಬಹಳ ವರ್ಷಗಳ ಹಿಂದೆಯೇ ಇತ್ತು.
ಆಗೆಲ್ಲಾ ತೆಲುಗು, ಹಿಂದಿ ಹೀಗೆ ಎಂ.ಜಿ.ಆರ್, ಎನ್.ಟಿ.ಆರ್ ಇವರ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ತೆರೆ ಕಾಣುವುದಕ್ಕೆ ಶುರುವಾಗಿತ್ತು. ಆ ವೇಳೆ ಡಬ್ಬಿಂಗ್ ವಿರುದ್ಧ ಮೊದಲು ಧ್ವನಿ ಎತ್ತಿದವರು ಚಳುವಳಿ ಶುರು ಮಾಡಿದವರು ಅ.ನ.ಕೃ ಅವರು. ಸಾಹಿತಿಗಳಾದ ಇವರು ಡಬ್ಬಿಂಗ್ ಇಂದ ಆಗಬಹುದಾದ ತೊಂದರೆಗಳನ್ನು ಗಮನದಲ್ಲಿ ಇಟ್ಟುಕೊಂಡು ಚಳುವಳಿ ಶುರು ಮಾಡಿದರು, ಈ ಸಮಸ್ಯೆಯ ತೀವ್ರತೆಯನ್ನು ಅರಿತುಕೊಂಡು ಅಣ್ಣಾವ್ರು ಡಬ್ಬಿಂಗ್ ಚಳುವಳಿಯಲ್ಲಿ ಅಚಲವಾಗಿ ನಿಂತರು. ಅಂದು ಸಾಹಿತಿಗಳು ಮತ್ತು ಚಿತ್ರರಂಗದವರು ಒಗ್ಗಟ್ಟಿನಿಂದ ಇದ್ದರು. ಎಲ್ಲಾ ಸಾಹಿತಿಗಳಿಗೂ ಅಣ್ಣಾವ್ರು ಅಂದ್ರೆ ತುಂಬಾ ಗೌರವ ಇತ್ತು. ಅಣ್ಣಾವ್ರು ಕೂಡ ಸಾಹಿತಿಗಳ ಜೊತೆಗೆ ಒಳ್ಳೆಯ ಸ್ನೇಹ ಇಟ್ಟುಕೊಂಡಿದ್ದರು, ಎಲ್ಲರೊಡನೆ ಚೆನ್ನಾಗಿದ್ದರು ಡಾ. ರಾಜ್ ಕುಮಾರ್ ಅವರು. ಹಾಗಾಗಿ ಡಬ್ಬಿಂಗ್ ವಿರುದ್ಧದ ಹೋರಾಟ ಯಶಸ್ವಿ ಆಯಿತು.

ಒಂದು ಕಾಲದಲ್ಲಿ ಹಿಂದಿ ಭಾಷೆಯಲ್ಲಿ ಟಿಪ್ಪು ಸುಲ್ತಾನ್ ಧಾರಾವಾಹಿ ತಯಾರಾದಾಗ, ಟಿಪ್ಪು ಸುಲ್ತಾನ್ ಕನ್ನಡ ನಾಡಿನ ವೀರ ಎನ್ನುವ ಕಾರಣಕ್ಕೆ ಕನ್ನಡ ಭಾಷೆಗೆ ಟಿಪ್ಪು ಸುಲ್ತಾನ್ ಧಾರಾವಾಹಿಯನ್ನು ಡಬ್ ಮಾಡಬೇಕು ಎಂದು ಪ್ರಯತ್ನ ಪಟ್ಟಾಗ, ಅಣ್ಣಾವ್ರು ಅದಕ್ಕೆ ಒಪ್ಪಲಿಲ್ಲ, ಹೋರಾಟ ಶುರು ಮಾಡಿದರು. ಅಣ್ಣಾವ್ರ ವಿರುದ್ಧ ಧ್ವನಿ ಎತ್ತುವ ಧೈರ್ಯ ಯಾರಿಗೂ ಇರಲಿಲ್ಲ. ಹಾಗಾಗಿ ಈ ಹೋರಾಟ ಯಶಸ್ವಿಯಾಗಿ, ಕನ್ನಡ ಡಬ್ಬಿಂಗ್ ಮಾಡುವ ಕೆಲಸಗಳು ನಿಂತು ಹೋಯ್ತು. ಅಣ್ಣಾವ್ರು ಅಷ್ಟು ಸ್ಟ್ರಾಂಗ್ ಆಗಿದ್ದ ವ್ಯಕ್ತಿ. ಇನ್ನು ಗೋಕಾಕ್ ಚಳುವಳಿ ಸಮಯದಲ್ಲಿ ಕೂಡ ಇದೇ ಕಥೆ ಆಗಿತ್ತು. ಅಣ್ಣಾವ್ರ ಮಾತಿಗೆ ಓಗೊಟ್ಟು ಚಿತ್ರರಂಗದ ಕಲಾವಿದರು ಎಲ್ಲರೂ ಬೀದಿಗೆ ಇಳಿದು ಹೋರಾಟ ಮಾಡಿದರು. ಗೋಕಾಕ್ ಸಮಸ್ಯೆ ಕೂಡ ಅಣ್ಣಾವ್ರ ನೇತೃತ್ವದಿಂದ ಬಗೆ ಹರಿದಿತ್ತು.
ಹೀಗೆ ಅಣ್ಣಾವ್ರು ಇದ್ದಾರೆ ಅಂದ್ರೆ ಆ ಸಮಸ್ಯೆ ಬಗೆ ಹರಿದ ಹಾಗೆ ಎನ್ನುವ ನಂಬಿಕೆ ಇತ್ತು. ಆದರೆ ಇವತ್ತು ಎಲ್ಲಾ ನಟರು ಪ್ಯಾನ್ ಇಂಡಿಯಾ ಕ್ರೇಜ್ ನಲ್ಲಿ ಮುಳುಗಿ ಹೋಗಿದ್ದಾರೆ. ಎಲ್ಲಾ ಭಾಷೆಗಳಲ್ಲಿ ತಮ್ಮ ಸಿನಿಮಾ ಬಿಡುಗಡೆ ಆಗಬೇಕು ಅನ್ನೋ ಹುಮ್ಮಸ್ಸಿನಲ್ಲಿ ಒಂದೊಂದು ಸಿನಿಮಾ ಮಾಡೋಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾ ಇದ್ದಾರೆ. ಆದರೆ ಈ ಪ್ಯಾನ್ ಇಂಡಿಯಾ ಡಬ್ಬಿಂಗ್ ಇದ್ದಲ್ಲದರಿಂದ ಏನೆಲ್ಲಾ ತೊಂದರೆ ಆಗಬಹುದು ಎಂದು ಅಣ್ಣಾವ್ರಿಗೆ ಅರಿವು ಇದ್ದ ಕಾರಣಕ್ಕೆ ಅವರು ಡಬ್ಬಿಂಗ್ ಸಿನಿಮಾಗಳಿಗೆ ಪ್ರೋತ್ಸಾಹ ಕೊಡಲಿಲ್ಲ. ಈಗಾಗಲೇ ಕನ್ನಡದಲ್ಲಿ ಪ್ಯಾನ್ ಇಂಡಿಯಾ ಜ್ವರ ಹೆಚ್ಚಾಗಿ, ಸಾಕಷ್ಟು ಹಿರಿಯ ಕಲಾವಿದರಿಗೆ ಕೆಲಸ ಇಲ್ಲದ ಹಾಗೆ ಆಗಿದೆ. ಸಾಕಷ್ಟು ತಂತ್ರಜ್ಞರು, ಸಣ್ಣ ಕಲಾವಿದರು ಕೆಲಸ ಇಲ್ಲದೇ ಕಷ್ಟಪಡುತ್ತಿದ್ದಾರೆ. ಡಬ್ಬಿಂಗ್ ಇಂದ ಹೆಚ್ಚು ಜನರಿಗೆ ಕೆಲಸ ಇರೋದಿಲ್ಲ.

ಇದೆಲ್ಲವನ್ನು ಮುಂಚಿತವಾಗಿಯೇ ಯೋಚನೆ ಮಾಡಿದ್ದ ಅಣ್ಣಾವ್ರು ಡಬ್ಬಿಂಗ್ ವಿರುದ್ಧ ನಿಂತಿದ್ದರು. ಆದರೆ ಈಗ ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರ ಹಾಗೆ ಮುಂದಾಳತ್ವ ವಹಿಸಿಕೊಳ್ಳುವವರು ಯಾರು ಇಲ್ಲ. ಹಿರಿಯ ಕಲಾವಿದರಾದ ವಿಷ್ಣುವರ್ಧನ್ ಅವರು, ಅಂಬರೀಶ್ ಅವರು ಕೂಡ ಇಲ್ಲದ ಕಾರಣ ಮುಂದಾಳತ್ವ ವಹಿಸಿಕೊಂಡು, ಇದನ್ನೆಲ್ಲಾ ಹ್ಯಾಂಡಲ್ ಮಾಡುವವರು ಯಾರು ಕೂಡ ಇಲ್ಲದೇ ಕನ್ನಡ ಚಿತ್ರರಂಗ ಈಗ ಕಷ್ಟದ ಪರಿಸ್ಥಿತಿಯಲ್ಲಿದೆ. ಇದನ್ನು ಯಾವುದೇ ಸ್ಟಾರ್ ನಟ ಕೂಡ ಅರ್ಥ ಮಾಡಿಕೊಳ್ಳುತ್ತಿಲ್ಲ ಎನ್ನುವುದೇ ಬಹಳ ಬೇಸರ ತರುವಂಥ ವಿಷಯ. ಈ ಎಲ್ಲಾ ಸಮಸ್ಯೆಗಳಿಂದ ನಮ್ಮ ರಾಜ್ಯದಲ್ಲಿ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳು ಮುಚ್ಚಿ ಹೋಗುವಂಥ ಪರಿಸ್ಥಿತಿ ಎದುರಾಗಿದೆ ಎಂದು ಹೇಳಬಹುದು. ಬಹಳಷ್ಟು ಥಿಯೇಟರ್ ಗಳು ಮುಚ್ಚಿ ಹೋಗುತ್ತಿದೆ. ಜನರು ಕೂಡ ಕನ್ನಡ ಸಿನಿಮಾ ನೋಡಲು ಥಿಯೇಟರ್ ಗೆ ಬರುತ್ತಿಲ್ಲ.
ಬೇರೆ ಭಾಷೆಯ ಸಿನಿಮಾಗಳು ಕನ್ನಡಕ್ಕೆ ಡಬ್ ಆಗುತ್ತಿದ್ದರೂ ಕೂಡ, ಕನ್ನಡ ಅವತರಣಿಕೆಗೆ ಹೆಚ್ಚು ಸ್ಕ್ರೀನ್ ಗಳು ಕೂಡ ಸಿಗುತ್ತಿಲ್ಲ. ಮೂಲ ಭಾಷೆಗೆ ಹೆಚ್ಚು ಸ್ಕ್ರೀನ್ ಗಳು ಸಿಗುತ್ತಿದ್ದು, ಅವುಗಳೇ ಬಿಡುಗಡೆ ಆಗುತ್ತಿದೆ. ಕರ್ನಾಟಕದಲ್ಲಿ ಈಗ ಕನ್ನಡ ಸಿನಿಮಾಗಳಿಗೆ ಸಿಗದಷ್ಟು ಆದ್ಯತೆ, ಪ್ರಾಮುಖ್ಯತೆ ಬೇರೆ ಭಾಷೆಗಳಿಗೆ ಸಿಗುತ್ತಿರುವುದು ನೋವಿನ ವಿಷಯ. ಅಣ್ಣಾವ್ರು ಇದ್ದಿದ್ದರೆ, ಹೀಗೆಲ್ಲಾ ಆಗುತ್ತಿರಲಿಲ್ಲ ಎನ್ನುವುದಂತೂ ನಿಜ..



