ಚಿತ್ರರಂಗದಲ್ಲಿ ಹುಡುಗಿಯರು ಬೆಳೆಯುವುದು ತುಂಬಾ ಕಷ್ಟ. ಎಲ್ಲರಿಗು ಯಶಸ್ಸು ಸಿಗುವುದಿಲ್ಲ. ಕೆಲವರಿಗೆ ಹೆಚ್ಚು ಕಷ್ಟಪಡದೆಯೇ ಸುಲಭವಾಗಿ ಯಶಸ್ಸು, ಅವಕಾಶ, ಕೀರ್ತಿ, ಹಣ, ಜನಪ್ರಿಯತೆ ಎಲ್ಲವೂ ಸಿಗುತ್ತದೆ. ಆದರೆ ಇನ್ನಷ್ಟು ನಟಿಯರು ಎಷ್ಟೇ ಕಷ್ಟಪಟ್ಟರು ಆ ಯಶಸ್ಸು ಸಿಗೋದಿಲ್ಲ. ಇಲ್ಲಿ ಶ್ರಮದ ಜೊತೆಗೆ ಅದೃಷ್ಟ ಕೂಡ ಇರಬೇಕು, ಹಾಗೆಯೇ ಸಿಕ್ಕ ಅವಕಾಶವನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಅನ್ನೋದು ಕೂಡ ಗೊತ್ತಿರಬೇಕು. ಹೀಗೆ ಅನೇಕ ವಿಚಾರಗಳು ಇಲ್ಲಿ ಅಡಗಿರುತ್ತದೆ. ಹಾಗೆಯೇ ಜರ್ನಿ ಶುರುವಾಗೋ ಹೊತ್ತಲ್ಲೇ ದುಬಾರಿ ಸಂಭಾವನೆ ಎಲ್ಲರಿಗೂ ಸಿಗೋದಿಲ್ಲ. ಜನಪ್ರಿಯತೆಗೆ ಸಿಕ್ಕ ಹಾಗೆ ಎಲ್ಲವೂ..

ಹಾಗೆಯೇ ಸಿನಿಮಾಗಳಲ್ಲಿ ಹೀರೋಯಿನ್ ಎನ್ನುವುದರ ಜೊತೆಗೆ, ಕೆಲವು ಐಟಂ ಸಾಂಗ್ ಗಳಿಂದ ಹೆಚ್ಚು ಜನಪ್ರಿಯತೆ ಗಳಿಸಿರುತ್ತಾರೆ. ಈ ರೀತಿಯಲ್ಲಿ ಜನಪ್ರಿಯತೆ ಪಡೆದ ಹಲವು ನಟಿಯರು ಇದ್ದಾರೆ, ಮೊದಲೆಲ್ಲಾ ಐಟಂ ಸಾಂಗ್ ಎಂದರೆ, ಅವುಗಳ ಫೀಲಿಂಗ್ ಬೇರೆ ಥರವೇ ಇತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. ಐಟಂ ಸಾಂಗ್ ಗಳನ್ನು ವಿಶೇಷವಾದ ಹಾಡುಗಳು, ಸ್ಪೆಷಲ್ ಸಾಂಗ್ಸ್ ಎಂದು ಕರೆಯುತ್ತಾರೆ. ಇಂಥ ಹಾಡುಗಳಲ್ಲಿ ಈಗ ಸ್ಟಾರ್ ಹೀರೋಯಿನ್ ಸಹ ಹೆಜ್ಜೆ ಹಾಕುತ್ತಿರುವುದು ವಿಶೇಷ. ಈ ಸ್ಪೆಶಲ್ ಹಾಡುಗಳಲ್ಲಿ ಡ್ಯಾನ್ಸ್ ಮಾಡೋರಿಗೆ ಕೋಟಿಗಟ್ಟಲೆ ಸಂಭಾವನೆ ಸಹ ಕೊಡಲಾಗುತ್ತಿದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಈ ಹಾಡುಗಳ ಮೂಲಕ ಜನಪ್ರಿಯತೆ ಪಡೆದಿರುವ ನಾಯಕಿಯ ಬಗ್ಗೆ ಇಂದು ನಿಮಗೆ ತಿಳಿಸಿಕೊಡುತ್ತೇವೆ. ಈ ನಟಿಯ ಹೆಸರು ನೋರಾ ಫತೇಹಿ. ಇವರ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಇವರಿಗೆ ಜನಪ್ರಿಯತೆ ಸಿಕ್ಕಿದ್ದು, ಬಾಹುಬಲಿ ಸಿನಿಮಾದ ಮನೋಹರಿ ಹಾಡಿನ ಮೂಲಕ. ನೋರಾ ಫತೇಹಿ ಅವರಿಗೆ ಈಗ ಬಾಲಿವುಡ್ ನಲ್ಲಿ ಭಾರಿ ಬೇಡಿಕೆ ಇದೆ. ಜೊತೆಗೆ ಸೌತ್ ಇಂಡಿಯಾದಲ್ಲಿ ಸಹ ಸಖತ್ ಕ್ರೇಜ್ ಇದೆ. ಇವರ ಹಾಟ್ ಲುಕ್ ಮತ್ತು ಡ್ಯಾನ್ಸ್ ಇದೆಲ್ಲವೂ ಸಿನಿಪ್ರಿಯರು ಬಹಳ ಇಷ್ಟ. ಇಂದು ಒಂದು ಸ್ಪೆಷಲ್ ಸಾಂಗ್ ಗೆ ಇವರು ಪಡೆಯುಗ ಸಂಭಾವನೆ ಬರೋಬ್ಬರಿ 5 ಕೋಟಿ ರೂಪಾಯಿಗಳು. ಆದರೆ ನೋರಾ ಅವರ ಜರ್ನಿ ಯಾವಾಗಲು ಹೀಗೆ ಇರಲಿಲ್ಲ..

ಬಣ್ಣದ ಲೋಕಕ್ಕೆ ಬರಬೇಕು ಎಂದು ನಿರ್ಧಾರ ಮಾಡಿ, ಮನೆಬಿಟ್ಟು ಮುಂಬೈಗೆ ಬಂದಾಗ ನೋರಾ ಅವರ ಕೈಯಲ್ಲಿ ಇದ್ದದ್ದು ಕೇವಲ 100 ರೂಪಾಯಿ ಅಂತೆ. ಅವಕಾಶಕ್ಕಾಗಿ ಬಹಳಷ್ಟು ಕಷ್ಟಗಳು, ಅವಮಾನಗಳು ಎಲ್ಲವನ್ನು ಫೇಸ್ ಮಾಡಿದ್ದಾರೆ ನೋರಾ. ಬಹಳಷ್ಟು ಜನರು ಹೀಯಾಳಿಸಿ ಮಾತನಾಡಿದ್ದಾರೆ. ಆದರೆ ಇದೆಲ್ಲವನ್ನ ತಮ್ಮ ವೃತ್ತಿಯ ಮೆಟ್ಟಿಲುಗಳನ್ನಾಗಿ ಬಳಸಿಕೊಂಡ ನೋರಾ ಫತೇಹಿ, ಹಂತ ಹಂತವಾಗಿ ಬೆಳೆಯುತ್ತಾ ಹೋದರು. ಇಂದು ಇವರಿಗೆ ಬಾಲಿವುಡ್ ನಲ್ಲಿ ಭಾರಿ ಬೇಡಿಕೆ ಇದೆ. ಬಹಳಷ್ಟು ಬಿಗ್ ಬಜೆಟ್ ಸಿನಿಮಾಗಳಲ್ಲಿ ಸ್ಪೆಷಲ್ ಸಾಂಗ್ ಗಳಲ್ಲಿ ಹೆಜ್ಜೆ ಹಾಕುವ ಅವಕಾಶಗಳು ಸಿಗುತ್ತಿದೆ.
ಬಿಗ್ ಬಜೆಟ್ ಮೂವಿ ಗಳಲ್ಲಿ 5 ನಿಮಿಷ ಡ್ಯುರೇಷನ್ ಇರುವ ಒಂದು ಸ್ಪೆಶಲ್ ಸಾಂಗ್ ನಲ್ಲಿ ಹೆಜ್ಜೆ ಹಾಕಲು, ನೋರಾ ಫಾತೇಹಿ ಅವರು ಬರೋಬ್ಬರಿ 5 ಕೋಟಿ ವರೆಗು ಸಂಭಾವನೆ ಪಡೆಯುತ್ತಾರೆ. ನೋರಾ ಅವರಿಗೆ ಎಲ್ಲೆಡೆ ಬೇಡಿಕೆ ಸಹ ಇದೆ. ಇವರ ಜರ್ನಿ ನಿಜಕ್ಕೂ ಸ್ಪೂರ್ತಿದಾಯಕ ಎಂದು ಹೇಳಿದರೆ ತಪ್ಪಲ್ಲ. ನೋರಾ ಅವರು ಛಲ ಬಿಡದೇ, ತಾವು ಅಂದುಕೊಂಡಿದ್ದನ್ನು ಮಾಡುವ ವರೆಗು ಸುಮ್ಮನಾಗಲಿಲ್ಲ. ನೋರಾ ಅವರಿಗೆ ಸಿಕ್ಕ ಅವಕಾಶಗಳನ್ನು ಅದ್ಭುತವಾಗಿ ಬಳಸಿಕೊಂಡು, ಇಂದು ಕೋಟಿ ಸಂಭಾವನೆ ಪಡೆಯುವ, ಬಹುಬೇಡಿಕೆ ಇರುವ ನಟಿಯರ ಸಾಲಿನಲ್ಲಿ ಇದ್ದಾರೆ ನಟಿ ನೋರಾ ಫತೇಹಿ.



