ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ನಟನೆ ಶುರು ಮಾಡಿದವರು ನಟಿ ರಶ್ಮಿಕಾ ಮಂದಣ್ಣ. ಇಂದು ಇವರು ಟಾಲಿವುಡ್, ಬಾಲಿವುಡ್ ಎಂದು ಪ್ಯಾನ್ ಇಂಡಿಯಾ ನಟಿಯಾಗಿ ಹೆಸರು ಮಾಡುತ್ತಿದ್ದಾರೆ. ನಾಳೆ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ2 ಸಿನಿಮಾ ತೆರೆ ಕಾಣುತ್ತಿದೆ. ಈ ಸಿನಿಮಾ ನೋಡೋದಕ್ಕೆ ಫ್ಯಾನ್ಸ್ ಕಾಯುತ್ತಿದ್ದಾರೆ. ಇನ್ನು ರಶ್ಮಿಕಾ ಅವರಿಗೆ ಒಳ್ಳೆಯ ಫ್ಯಾನ್ ಬೇಸ್ ಕೂಡ ಇದೆ. ರಶ್ಮಿಕಾ ಅವರು ನಾಯಕಿಯಾಗಿ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿಲ್ಲ, ಆದರೆ ಇವರಿಗೆ ಇರುವ ಬೇಡಿಕೆ ಅಂತೂ ಕಡಿಮೆ ಇಲ್ಲ. ಸಕ್ಸಸ್ ನಲ್ಲಿ ಎಂಜಾಯ್ ಮಾಡುತ್ತಿದ್ದ ರಶ್ಮಿಕಾ ಮಂದಣ್ಣ ಇದೀಗ ಹೊಸದೊಂದು ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ನೀಡುವ ಹೇಳಿಕೆಗಳು ವಿವಾದಗಳನ್ನು ಸೃಷ್ಟಿಸುವ ವಿಷಯ ಗೊತ್ತೇ ಇದೆ. ಇದೀಗ ಇವರು ತಮಿಳು ಭಾಷೆಯ ಬಗ್ಗೆ ನೀಡಿರುವ ಹೇಳಿಕೆ ವೈರಲ್ ಆಗಿದೆ.

ನಟಿ ರಶ್ಮಿಕಾ ಮಂದಣ್ಣ ಅವರು ಕಿರಿಕ್ ಪಾರ್ಟಿ ಸಿನಿಮಾದ ಸಾನ್ವಿ ಪಾತ್ರದ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ಈ ಪಾತ್ರ ಅವರಿಗೆ ಕರ್ನಾಟಕ ಕ್ರಶ್ ಎಂದು ಹೆಸರನ್ನು ಕೂಡ ತಂದುಕೊಟ್ಟಿತು. ಕಿರಿಕ್ ಪಾರ್ಟಿ ನಂತರ ರಶ್ಮಿಕಾ ಎಂಟ್ರಿ ಕೊಟ್ಟಿದ್ದು ತೆಲುಗಿಗೆ. ಚಲೋ ಸಿನಿಮಾ ಮೂಲಕ ತೆಲುಗಿನಲ್ಲಿ ಪ್ರಯಾಣ ಶುರು ಮಾಡಿದ ರಶ್ಮಿಕಾ ಅವರಿಗೆ ಮೊದಲ ಸಿನಿಮಾದಲ್ಲೇ ಸೂಪರ್ ಸಕ್ಸಸ್ ಸಿಕ್ಕಿತ್ತು. ಚಲೋ ನಂತರ ಗೀತಾ ಗೋವಿಂದಮ್ ನಲ್ಲಿ ಅಭಿನಯಿಸಿದರು. ಆ ಸಿನಿಮಾ ಸಹ ಸೂಪರ್ ಹಿಟ್ ಆಯಿತು. ಬಳಿಕ ರಶ್ಮಿಕಾ ಅವರು ತೆಲುಗು ಸಿನಿಮಾಗಳಲ್ಲಿ ಬ್ಯಾಕ್ ಟು ಬ್ಯಾಕ್ ನಟಿಸಿದರು. ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ , ನಟ ದರ್ಶನ್ ಇವರೊಡನೆ ನಟಿಸಿದರು. ನಂತರ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು, ಹಾಗೆಯೇ ಬಾಲಿವುಡ್ ಗೆ ಕೂಡ ಎಂಟ್ರಿ ಕೊಟ್ಟರು.
ಕಳೆದ ವರ್ಷ ತೆರೆಕಂಡ ಅನಿಮಲ್ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿತು ಎಂದು ನಮಗೆಲ್ಲಾ ಗೊತ್ತೇ ಇದೆ. ಹೀಗೆ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಶ್ಮಿಕಾ ಅವರು ಹೆಸರು ಮಾಡಿದ್ದಾರೆ ಜೊತೆಗೆ ಜನಪ್ರಿಯತೆಯನ್ನು ಕೂಡ ಗಳಿಸಿಕೊಂಡಿದ್ದಾರೆ. ಇನ್ನು ಇವರ ಪುಷ್ಪ2 ಮೇಲೆ ಭಾರಿ ನಿರೀಕ್ಷೆ ಇದೆ, ರಶ್ಮಿಕಾ ಅವರನ್ನು ಶ್ರೀವಲ್ಲಿ ಯಾಗಿ ಮತ್ತೆ ನೋಡುವುದಕ್ಕೆ ಫ್ಯಾನ್ಸ್ ಕಾಯುತ್ತಿದ್ದಾರೆ. ಈ ವೇಳೆ ರಶ್ಮಿಕಾ ಅವರು ಪರ್ಸನಲ್ ವಿಚಾರದಿಂದ ಹೆಚ್ಚು ಸುದ್ದಿ ಸಹ ಆಗುತ್ತಾರೆ. ವಿಜಯ್ ದೇವರಕೊಂಡ ಅವರೊಡನೆ ರಿಲೇಶನ್ಷಿಪ್ ನಲ್ಲಿರುವ ವಿಚಾರ ಗೊತ್ತೇ ಇದೆ. ಇತ್ತೀಚೆಗೆ ಪುಷ್ಪ2 ಸಿನಿಮಾದ ಪ್ರೀರಿಲೀಸ್ ಈವೆಂಟ್ ನಲ್ಲಿ ರಶ್ಮಿಕಾ ಅವರು ತಾವು ರಿಲೇಶನ್ಷಿಪ್ ನಲ್ಲಿ ಇರುವ ವಿಷಯವನ್ನು ಒಪ್ಪಿಕೊಂಡರು.

ಹಾಗೆಯೇ ವಿಜಯ್ ದೇವರಕೊಂಡ ಅವರು ಸಹ ತಾವು ರಿಲೇಶನ್ಷಿಪ್ ನಲ್ಲಿರುವ ವಿಷಯವನ್ನು ಒಪ್ಪಿದರು, ಅಷ್ಟೇ ಅಲ್ಲದೇ ರೀಸೆಂಟ್ ಆಗಿ ವಿಜಯ್ ರಶ್ಮಿಕಾ ಲಂಚ್ ಡೇಟ್ ನಲ್ಲಿ ಜೊತೆಯಾಗಿ ಕಾಣಿಸಿಕೊಂಡ ಫೋಟೋ ಸಹ ವೈರಲ್ ಆಗಿತ್ತು. ಈ ಮೂಲಕ ಇವರು ವಿಜಯ್ ದೇವಡಕೊಂಡ ಅವರೊಡನೆ ಪ್ರೀತಿಯಲ್ಲಿ ಇರುವುದು ಕನ್ಫರ್ಮ್ ಆಗಿದ್ದು, ಮದುವೆ ಯಾವಾಗ ಎಂದು ಅಭಿಮಾನಿಗಳು ಸಹ ಕಾಯುತ್ತಿದ್ದಾರೆ. ಹಲವು ಕಡೆಗಳಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದು ಇದೆ. ಹಾಗಾಗಿ ಇವರಿಬ್ಬರು ಲವ್ ಮಾಡುತ್ತಿದ್ದಾರೆ, ಮದುವೆ ಆಗೇ ಆಗುತ್ತಾರೆ ಎನ್ನುವ ಗಾಸಿಪ್ ಗಳು ಕೇಳಿಬಂದರು ಸಹ, ರಶ್ಮಿಕಾ ಅವರು ಇನ್ನು ಪೂರ್ತಿ ಸ್ಪಷ್ಟನೆ ಕೊಟ್ಟಿಲ್ಲ. ಪ್ರಸ್ತುತ ರಶ್ಮಿಕಾ ಅವರ ಫೋಕಸ್ ಪೂರ್ತಿಯಾಗಿ ಅವರ ಕೆರಿಯರ್ ಮೇಲೆ ಇದೆ. ಬ್ಯಾಕ್ ಟು ಬ್ಯಾಕ್ ಬಿಗ್ ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ..
ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ರಶ್ಮಿಕಾ. ಶಾಹಿದ್ ಕಪೂರ್ ಅವರ ಜೊತೆಗೆ ಕಾಕ್ಟೇಲ್ 2 ಸಿನಿಮಾದಲ್ಲಿ ನಟಿಸಲಿದ್ದಾರೆ, ದೀಕ್ಷಿತ್ ಶೆಟ್ಟಿ ಅವರೊಡನೆ ಗರ್ಲ್ ಫ್ರೆಂಡ್ ಸಿನಿಮಾದಲ್ಲಿ ನಟಿಸಲಿದ್ದಾರೆ, ಧನುಷ್ ಅವರೊಡನೆ ಕುಬೇರ ಸಿನಿಮಾದಲ್ಲಿ ನಟಿಸಿದ್ದಾರೆ, ತಮಿಳು ಮತ್ತು ತೆಲುಗಿನಲ್ಲಿ ತಯಾರಾಗುತ್ತಿರುವ ರೇನ್ ಬೋ ಸಿನಿಮಾಗೆ ನಾಯಕಿ ಆಗಿದ್ದಾರೆ. ಆಯುಶ್ಮಾನ್ ಖುರಾನ ಅವರೊಡನೆ ಒಂದು ಸಿನಿಮಾ ಮಾಡುತ್ತಿದ್ದಾರೆ. ಹೀಗೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ ರಶ್ಮಿಕಾ ಮಂದಣ್ಣ ಅವರು.. ಇತ್ತೀಚೆಗೆ ಇವರು ಸಲ್ಮಾನ್ ಖಾನ್ ಅವರಿಗೆ ನಾಯಕಿಯಾಗಿ ಸಿಕಂದರ್ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ತೆರೆಕಂಡು ಮಕಾಡೆ ಮಲಗಿತು. ಸಿನಿಮಾ ಮೇಲೆ ಇಟ್ಟಿದ್ದ ನಿರೀಕ್ಷೆ ಎಲ್ಲವೂ ಸುಳ್ಳಾಯ್ತು. ರಶ್ಮಿಕಾ ಅಭಿನಯದ ಮುಂದಿನ ಸಿನಿಮಾ ತೆರೆ ಕಾಣುವುದಕ್ಕೆ ಸಿದ್ಧವಾಗಿದೆ.

ಹೌದು, ರಶ್ಮಿಕಾ ಅಭಿನಯದ ಮುಂದಿನ ಸಿನಿಮಾ ತೆಲುಗಿನಲ್ಲಿ. ತೆಲುಗಿನ ಖ್ಯಾತ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನ ಕುಬೇರ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಧನುಷ್ ಅವರು ಮತ್ತು ನಾಗಾರ್ಜುನ ಅವರು ನಾಯಕರಾಗಿ ನಟಿಸಿದ್ದಾರೆ. ಈ ಸಿನಿಮಾ ಜೂನ್ 20 ರಂದು ತೆರೆ ಕಾಣಲಿದ್ದು, ತೆಲುಗು ಮತ್ತು ತಮಿಳು ಎರಡು ಭಾಷೆಗಳಲ್ಲಿ ತೆರೆ ಕಾಣಲಿದೆ. ಈ ಸಿನಿಮಾ ಪ್ರೊಮೋಷನ್ ಗಳಲ್ಲಿ ಚಿತ್ರತಂಡ ತೊಡಗಿಕೊಂಡಿದೆ. ಹೈದರಾಬಾದ್ ನಲ್ಲಿ ಒಂದು ಈವೆಂಟ್ ನಡೆದ ಬಳಿಕ ಚೆನ್ನೈನಲ್ಲಿ ಪ್ರೀರಿಲೀಸ್ ಈವೆಂಟ್ ನಡೆಯಿತು. ಇದರಲ್ಲಿ ರಶ್ಮಿಕಾ ಮಂದಣ್ಣ ಸ್ಟೇಜ್ ಮೇಲೆ ನೀಡಿದ ಹೇಳಿಕೆ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮತ್ತೊಮ್ಮೆ ಕನ್ನಡಿಗರಿಗೆ ಕೋಪ ಬರುವ ಹಾಗೆ ಮಾತನಾಡಿದ್ದಾರೆ ರಶ್ಮಿಕಾ.
ಈಗಾಗಲೇ ಇವರು ತಮಿಳು ಸಿನಿಮಾದಲ್ಲಿ ನಟಿಸಿರುವ ವಿಷಯ ಗೊತ್ತೇ ಇದೆ. ಕುಬೇರ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ನಲ್ಲಿ ಮಾತನಾಡಿದ ರಶ್ಮಿಕಾ ಅವರು, “ನನ್ನ ಮನಸ್ಸಿನಲ್ಲಿ ಚೆನ್ನೈಗೆ ವಿಶೇಷ ಸ್ಥಾನ ಇದೆ. ನಾನು ಕಲಿತ ಮೊದಲ ಭಾಷೆ ತಮಿಳು..” ಎಂದು ಹೇಳಿದ್ದಾರೆ. ಇತ್ತೀಚೆಗೆ ಒಂದು ಹಿಂದಿ ಸಂದರ್ಶನದಲ್ಲಿ, ಕರ್ನಾಟಕದಲ್ಲಿ ಹುಟ್ಟಿ ಬೆಳೆದ ನನಗೆ ಕನ್ನಡ, ಕೂರ್ಗಿ ಮತ್ತು ಇಂಗ್ಲಿಷ್ ಭಾಷೆ ಮಾತ್ರ ಗೊತ್ತಿತ್ತು ಎಂದಿದ್ದ ರಶ್ಮಿಕಾ ಈಗ ಕಲಿತ ಮೊದಲ ಭಾಷೆ ತಮಿಳು ಎಂದಿದ್ದಾರೆ. ಇದರಿಂದ ಮತ್ತೊಮ್ಮೆ ಕನ್ನಡ ಜನರು ಕೋಪಗೊಳ್ಳುವ ಹಾಗೆ ಮಾಡಿದ್ದಾರೆ ನ್ಯಾಷನಲ್ ಕ್ರಶ್. ದಿನಕ್ಕೊಂದು ಹೇಳಿಕೆ ನೀಡಿದರೆ, ಯಾರಿಗೆ ಆದರೂ ಕೋಪ ಬರದೇ ಇರದು..



