ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋನಲ್ಲಿ ಕಿಚ್ಚ ಸುದೀಪ್ ಕಳೆದ 12 ಸೀಸನ್ಗಳಿಂದ ನಿರೂಪಣೆ ಮಾಡಿಕೊಂಡು ಬರುತ್ತಿದ್ದಾರೆ. ಪ್ರತಿ ಸೀಸನ್ನಲ್ಲೂ ಕಿಚ್ಚ ಸುದೀಪ್ಗೆ ಬಿಗ್ ಬಾಸ್ ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಲೇ ಇದ್ದಾರೆ. ಈ ಬಾರಿ ಕಿಚ್ಚನಿಗೆ ಬಿಗ್ ಬಾಸ್ ಸಖತ್ ಸರ್ಪ್ರೈಸ್ ಕೊಟ್ಟಿದ್ದಾರೆ.
ಕಿಚ್ಚ ಸುದೀಪ್ಗೆ ಈ ದಿನ ವೈವಾಹಿಕ ಜೀವನಕ್ಕೆ ಕಾಲಿಟ್ಟು 24 ವರ್ಷ. ಹೀಗಾಗಿ ವೇದಿಕೆ ಮೇಲೆ ಪ್ರಿಯಾ ಅವರನ್ನು ಕರೆಸಿ ಕಿಚ್ಚನಿಗೆ ಸರ್ಪ್ರೈಸ್ ಕೊಟ್ಟರು. ಈ ಸಂಭ್ರಮವನ್ನು ಬಿಗ್ ಬಾಸ್ ವೇದಿಕೆ ಮೇಲೆ ಆಚರಿಸಲಾಗಿತ್ತು ಸೆಲೆಬ್ರೆಟಿಗಳಿಂದ ವಿಶ್ ಮಾಡಿಸಿ, ಸುದೀಪ್ ತಂದೆ ಸರೋವರ್ ಸಂಜೀವ್ ಸೊಸೆ ಬಗ್ಗೆ ಭಾವುಕರಾಗಿ ಗುಣಗಾನ ಮಾಡಿದರು ಈ ವೇಳೆ ಕಿಚ್ಚ ದಂಪತಿಗೆ ಚಿಕ್ಕದೊಂದು ಟಾಸ್ಕ್ ಕೊಟ್ಟರು. ಈ ಟಾಸ್ಕ್ನಲ್ಲಿ ಕಿಚ್ಚನಲ್ಲಿರುವ ಒಂದು ಕಳಪೆ ಗುಣವೇನು ಎಂದು ಬಿಗ್ ಬಾಸ್ ಪ್ರಿಯಾ ಸುದೀಪ್ ಅವರಲ್ಲಿ ಕೇಳಿದ್ದರು. ಅದಕ್ಕೆ ಪ್ರಿಯಾ ಕೊಟ್ಟ ಉತ್ತರ – ನಿದ್ದೆ ಮಾಡುವುದಿಲ್ಲ. ಅವರ ಆರೋಗ್ಯದ ಬಗ್ಗೆ ಗಮನ ಹರಿಸುವುದಿಲ್ಲ. ನಮ್ಮ ಮಾತು ಕೇಳುವುದಿಲ್ಲ.

ಟಾಸ್ಕ್ ನಲ್ಲಿ ಕಿಚ್ಚ ಹಾಗೂ ಪ್ರಿಯಾ ಸುದೀಪ್ ಅವರಲ್ಲಿರುವ ಒಳ್ಳೆಯ ಹಾಗೂ ಕಳಪೆ ಗುಣವೇನು? ಎಂದು ಹೇಳಬೇಕಿತ್ತು. ಕಿಚ್ಚ ಸುದೀಪ್ ಪತ್ನಿಯ ಒಳ್ಳೆಯ ಗುಣಗಳನ್ನು ಹೊಗಳಿ ಕೊಂಡಾಡಿದರು. ಇತ್ತ ಪ್ರಿಯಾ ಸುದೀಪ್ ಕೂಡ ಕಿಚ್ಚನ ಒಳ್ಳೆಯ ಗುಣವನ್ನು ಹೊಗಳಿದರು. ಇನ್ನು ಕಳಪೆ ಗುಣವೇನು ಅಂತ ಬಂದಾಗ, ಸುದೀಪ್ ಯಾವುದಕ್ಕೆ ಕಾಂಪ್ಲಿಮೆಂಟ್ ಮಾಡುವುದಿಲ್ಲ. ನಿದ್ದೆ ಮಾಡುವುದಿಲ್ಲ. ಅವರ ಆರೋಗ್ಯದ ಬಗ್ಗೆ ಗಮನ ಹರಿಸುವುದಿಲ್ಲ. ನಮ್ಮ ಮಾತು ಕೇಳುವುದಿಲ್ಲ. ಅದೇ ಅವರ ಕಳಪೆ ಗುಣ. 24 ವರ್ಷ ಇದ್ದೀನಿ ಅಂದರೆ, ಅದೇ ಅವರ ಒಳ್ಳೆಯ ಗುಣ ಎಂದು ಹೇಳಿದ್ದರು.



