ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ನಂಬರ್ ಒನ್ ಸ್ಥಾನ ಪಡೆದಿರುವ ಶೋ ಎಂದರೆ ಅದು ನಮ್ಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋ. ಬಿಗ್ ಬಾಸ್ ಶೋ ನಲ್ಲಿ ಇದು ಮೂರನೇ ವಾರದ ಕಿಚ್ಚನ ಪಂಚಾಯಿತಿ ಜೊತೆಗೆ ಮೊದಲನೆ ಫಿನಾಲೆ. ಬಿಗ್ ಬಾಸ್ ನ ಈ ಸೀಸನ್ ಟ್ವಿಸ್ಟ್ ಗಳ ಮೇಲೆ ಟ್ವಿಸ್ಟ್ ಹಾಗೂ ಟರ್ನಿಂಗ್ ಗಳಿಂದ ಕೂಡಿದ್ದು ಕುತೂಹಲ ಮತ್ತು ರೋಚಕತೆಯಿಂದ ಮೂಡಿ ಬರುತ್ತಿದೆ. ಈಗಾಗಲೇ ಮಿಡ್ ನೈಟ್ ಎಲಿಮಿನೇಷನ್ ಆಗಿದ್ದು ಮನೆಯವರ ನಿರ್ಧಾರದಂತೆ ಸತೀಶ್ ಮನೆಯಿಂದ ಸತೀಶ್ ಆಚೆ ಬಂದಿದ್ದಾರೆ.

ಈ ವಾರದ ಮೊದಲನೇ ಫಿನಾಲೆಯಲ್ಲಿ ಡಬಲ್ ಎಲಿಮಿನೇಟ್ ಆಯ್ತು, ಅದರಲ್ಲಿ ಮಂಜು ಭಾಷಿಣಿ ಮತ್ತು ಅಶ್ವಿನಿ ಎಸ್ ಎನ್ ರವರು ಆಚೆ ಬಂದಿದ್ದಾರೆ. ವೇದಿಕೆ ಮೇಲೆ ಅವರನ್ನು ಸುದೀಪ್ ಮಾತನಾಡಿಸುತ್ತಾ ಇರುವಂತಹ ಸಂದರ್ಭದಲ್ಲಿ ಜಾನ್ವಿ ಮತ್ತು ಅಶ್ವಿನಿ ಗೌಡ ಇಬ್ಬರು ರಕ್ಷಿತಾ ಶೆಟ್ಟಿ ಜೊತೆ ಜಗಳ, ವಾದ ವಿವಾದಗಳು, ಮಾತು ಕಥೆ ನಡೆದಿದೆ ಇದಕ್ಕೆ ಸಂಬಂಧಿಸಿದಂತೆ ಅಶ್ವಿನಿ ಗೌಡ ಮತ್ತು ಜಾನ್ವಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಜಗಳದ ಬಗ್ಗೆ ಮಂಜು ಭಾಷಿಣಿ ಇವರ ಬಳಿ ಸುದೀಪ್ ಕೇಳಿದಾಗ ನೀವು ಬುದ್ಧಿವಾದ ಹೇಳಿದ ಮೇಲೆ ಅವರಿಬ್ಬರು ಬದಲಾಗುತ್ತಾರೆ ಎಂದು ಹೇಳಿದರು. ಅದನ್ನು ಸುದೀಪ್ ಒಪ್ಪಿಕೊಳ್ಳಲೇ ಇಲ್ಲ, ಅದಕ್ಕೆ ಕಾರಣವೇನೆಂದು ಮುಂದೆ ಓದಿ.
ಸುದೀಪ್ ಬುದ್ಧಿವಾದ ಹೇಳಿದ ನಂತರ ಅಶ್ವಿನಿ ಗೌಡ ರಕ್ಷಿತಾ ಬಳಿ ಹೋಗಿ ಕ್ಷಮೆಯನ್ನು ಕೇಳಿದ್ದಾರೆ. ರಕ್ಷಿತಾ ಅಶ್ವಿನಿರವರನ್ನು ಕ್ಷಮಿಸಿದ್ದಾರೆ. ಆದರೆ ಇದು ಜಾನ್ವಿ ಅವರ ಅಹಂ ಗೆ ಪೆಟ್ಟು ಬಿದ್ದಂತಾಗಿದೆ, ಹೀಗಾಗಿ ಜಾನ್ವಿ ನೇರವಾಗಿ ಒಂದು ಮಾತನ್ನು ಹೇಳಿದ್ದಾರೆ. ನಾವು ನೇರವಾಗಿ ಇರುವುದರಿಂದ ಕೆಟ್ಟವರಾಗುತ್ತೇವೆ . ಈ ರೀತಿ ಯಾಗಿರುವುದರಿಂದ ನಾವು ಬಗ್ಗುವುದು ಬೇಡ ಒಳ್ಳೆಯವರಾಗಿ ಇರೋಣ ಎಂದು ಅಶ್ವಿನಿ ಜೊತೆ ಹೇಳುತ್ತಾರೆ. ಈ ಸನ್ನಿವೇಶವನ್ನು ನೋಡುತ್ತಿದ್ದಂತೆ ವೀಕ್ಷಕರಿಗೆ ಮತ್ತು ಸುದೀಪ್ ರವರಿಗೆ ಇವರು ಬದಲಾಗುವುದಿಲ್ಲ ಎಂದೆನಿಸಿತು.
ಜೊತೆಗೆ ರಕ್ಷಿತಾ ಶೆಟ್ಟಿಯ ಪರವಾಗಿ, ಅಶ್ವಿನಿ ಗೌಡ ಮತ್ತು ಜಾನವಿಯ ವಿರುದ್ಧವಾಗಿ ನಿಂತು ತಪ್ಪುಗಳನ್ನು ಎತ್ತಿ ಹೇಳುತ್ತಾ ರಕ್ಷಿತಾ ಶೆಟ್ಟಿಗೆ ಬೆಂಬಲವಾಗಿ ನಿಲ್ಲುವುದರ ಜೊತೆಗೆ ಸತ್ಯದ ಪರವಾಗಿ ನಿಂತಿದ್ದಕ್ಕೆ ಈ ವಾರ ಕಿಚ್ಚನ ಚಪ್ಪಾಳೆ ಪಡೆದು ಗಿಲ್ಲಿ ಜನ ಮೆಚ್ಚಿಗೆ ಪಡೆದುಕೊಂಡರು. ಇದಕ್ಕೆ ಜಾನ್ವಿ ಮತ್ತು ಅಶ್ವಿನಿ ಗೌಡ ಸಿಕ್ಕಾಪಟ್ಟೆ ಉರಿದುಕೊಂಡರು. ಕಿಚ್ಚನ ಚಪ್ಪಾಳೆ ಕೊಟ್ಟ ಮೇಲೆ ಗಿಲ್ಲಿಯ ಫೋಟೋವನ್ನು ತರಲು ಹೋದ ಜಾನವಿ ಮತ್ತು ಅಶ್ವಿನಿ ಅಲ್ಲಿಯೇ ಜೋರಾಗಿ ನಕ್ಕರು ಹೀಗಾಗಿ ಅವರಿಬ್ಬರ ನಡುವಳಿಕೆಯನ್ನು ಕಂಡು ಜನರು ಅತಿಯಾದ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲ ಪಾಠ ತಿಳಿಸಿಕೊಂಡ ಮೇಲು ಕೂಡ ಅಶ್ವಿನಿ ಇಬ್ಬರ ಜಗಳದಲ್ಲಿ ಮೂರನೆಯವರು ಲಾಭ ಮಾಡಿಕೊಂಡಂತೆ ಇಲ್ಲಿ ಲಾಭ ಮಾಡಿಕೊಂಡು ಕಿಚ್ಚಳ ಚಪ್ಪಾಳೆಯನ್ನು ಗಳಿಸಿಬಿಟ್ಟಿದ್ದಾನೆ ಎಂಬುದಾಗಿ ಮಾತನಾಡಿದ್ದಾರೆ. ಈ ರೀತಿಯ ಎಲ್ಲಾ ನಡವಳಿಕೆಗಳನ್ನು ಗಮನಿಸಿದ ಮೇಲೆ ಸುದೀಪ್ ರವರು ಇವರು ಎಂದಿಗೂ ಬದಲಾಗುವುದಿಲ್ಲ ಎಂಬುದಾಗಿ ಹೇಳಿರುವುದು. ಇದಕ್ಕೆ ವೀಕ್ಷಕರು ಹೇಗೆ ನಾಯಿಯ ಬಾಲವನ್ನು ಎಂದಿಗೂ ಸರಿಪಡಿಸಲು ನೆಟ್ಟೆಗೆ ಮಾಡಲು ಸಾಧ್ಯವಿಲ್ಲವೊ ಹಾಗೆ ಇವರಿಬ್ಬರು ಕೂಡ ಎಂದಿದ್ದಾರೆ.



