ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ನಂಬರ್ ಒನ್ ಸ್ಥಾನ ಪಡೆದಿರುವ ಶೋ ಎಂದರೆ ಅದು ನಮ್ಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋ. ಬಿಗ್ ಬಾಸ್ ಶೋ ನಲ್ಲಿ ಇದು ಮೂರನೇ ವಾರದ ಕಿಚ್ಚನ ಪಂಚಾಯಿತಿ ಜೊತೆಗೆ ಮೊದಲನೆ ಫಿನಾಲೆ. ಬಿಗ್ ಬಾಸ್ ನ ಈ ಸೀಸನ್ ಟ್ವಿಸ್ಟ್ ಗಳ ಮೇಲೆ ಟ್ವಿಸ್ಟ್ ಹಾಗೂ ಟರ್ನಿಂಗ್ ಗಳಿಂದ ಕೂಡಿದ್ದು ಕುತೂಹಲ ಮತ್ತು ರೋಚಕತೆಯಿಂದ ಮೂಡಿ ಬರುತ್ತಿದೆ. ಈಗಾಗಲೇ ಮಿಡ್ ನೈಟ್ ಎಲಿಮಿನೇಷನ್ ಆಗಿದ್ದು ಮನೆಯವರ ನಿರ್ಧಾರದಂತೆ ಸತೀಶ್ ಮನೆಯಿಂದ ಸತೀಶ್ ಆಚೆ ಬಂದಿದ್ದಾರೆ.

ಮೊದಲನೇ ಫಿನಾಲೆಯಲ್ಲಿ ಡಬಲ್ ಎಲಿಮಿನೇಟ್ ಆಯ್ತು ಅದರಲ್ಲಿ ಮಂಜು ಭಾಷಿಣಿ ಮತ್ತು ಅಶ್ವಿನಿ ಎಸ್ ಎನ್ ರವರು ಆಚೆ ಬಂದಿದ್ದಾರೆ. ಅದರ ಬೆನ್ನಲ್ಲೇ ವೈಲ್ಡ್ ಕಾರ್ಡ್ ಎಂಟ್ರಿ ಕೂಡ ಆಗಿದೆ. ರಿಷ ಗೌಡ, ಸೂರತ್ ಸಿಂಗ್ ಮತ್ತು ರಘು ಈ ಮೂವರು ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ರಘು ಕಲರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕ್ವಾಟ್ಲೆ ಕಿಚನ್ ನ ವಿನ್ನರ್ ಕೂಡ, ಚಿತ್ರರಂಗದಲ್ಲಿ ಖಳನಟನಾಗಿ ಕಾಂತಾರ ಚಾಪ್ಟರ್ 1 ನಲ್ಲೂ ಕೂಡ ಅದ್ಭುತವಾದ ಅಭಿನಯವನ್ನು ಮಾಡುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ರಘು ನೋಡಲು ತುಂಬಾ ರಫ್ ಅಂಡ್ ಟಫ್ ಆಗಿ ಕಂಡರು ಮನಸ್ಸಿನಲ್ಲಿ ಮೃದುವಾದ ವ್ಯಕ್ತಿತ್ವವನ್ನು ಹೊಂದಿರುವಂತಹ ವ್ಯಕ್ತಿ. ಆದರೆ ತಪ್ಪುಗಳು ಕಂಡಾಗ ಖಂಡಿಸುವಂತಹ ಕಡಕ್ ವ್ಯಕ್ತಿತ್ವ ಹೊಂದಿರುವ ನೇರವಾಗಿ ಮಾತನಾಡುವ ಯಾರಿಗೂ ಹೆದರದೆ ಇರುವ ವ್ಯಕ್ತಿತ್ವ ಅವರದು.
ಮನೆಗೆ ಕಾಲಿಡುತ್ತಿದ್ದಂತೆ ಅಶ್ವಿನಿ ಗೌಡ ಮತ್ತು ಜಾನ್ವಿ ಇಬ್ಬರ ವಿರುದ್ಧ ಏಕವಚನದಲ್ಲಿ ಮಾತನಾಡುತ್ತಾ ಜಗಳವಾಡಿದ್ದಾರೆ. ಇದರಿಂದ ಮನೆ ಮಂದಿ ಎಲ್ಲ ಶಾಕ್ ಆಗಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದಿರುವ ರಘು ರವರಿಗೆ ಅಲ್ಲಿರುವ ಸ್ಪರ್ಧಿಗಳ ಬಗ್ಗೆ ಚೆನ್ನಾಗಿ ತಿಳಿದಿದ್ದು ಆಟವನ್ನು ಚೆನ್ನಾಗಿ ಆಡಲು ಶುರು ಮಾಡಿದ್ದಾರೆ. ಬಿಗ್ ಬಾಸ್ ನೀಡಿದ ಟಾಸ್ಕ್ ನ ಅನುಸಾರವಾಗಿ ಸ್ಪರ್ದಿಗಳ ಮೇಲೆ ನೀರನ್ನು ಸುರಿದು ಅವರ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ದಾರೆ.



