ಬಹುಭಾಷಾ ನಟಿ ಸಮಂತಾ ಅಭಿನಯದ ಮತ್ತೊಂದು ಸಿನಿಮಾ ಸೆಟ್ಟೇರಲು ಎಲ್ಲಾ ರೀತಿಯ ತಯಾರಿ ಆಗಿದೆ.. ಈ ಭಾರಿ ವಿಶೇಷ ಅಂದ್ರೆ ಸ್ಯಾಮ್ ಜೊತೆಗೆ ಜೋಡಿ ಆಗಿ ಸ್ಕ್ರೀನ್ ಮೇಲೆ ಮೋಡಿ ಮಾಡ್ತಿರೋದು ಟಾಲಿವುಡ್ ಸೂಪರ್ ಸ್ಟಾರ್ ಹೆಣ್ಣು ಮಕ್ಕಳ ಫೇವರೇಟ್ ಚಾಕಲೇಟ್ ಸ್ಟಾರ್ ಒನ್ ಆಂಡ್ ಓನ್ಲಿ ವಿಜಯ್ ದೇವರಕೊಂಡ….ಹಾಗಾದ್ರೆ ಈ ಸಿನಿಮಾದ ಲೇಟೆಸ್ಟ್ ಅಪ್ಡೇಟ್ ಏನು ಅಂದ್ರಾ ಒನ್ ಬೈ ಒನ್ ಹೇಳ್ತಾ ಹೋಗ್ತೀವಿ ಕೇಳಿ…

ನಟಿ ಸಮಂತಾ ರುತ್ ಪ್ರಭು ಮತ್ತು ಸೌತ್ ಸ್ಟಾರ್ ವಿಜಯ್ ದೇವರಕೊಂಡ ಅಭಿನಯದ ಬಹು ನಿರೀಕ್ಷಿತ ಪ್ರೇಮಕಥೆ ಖುಷಿ ಬಗ್ಗೆ ದೊಡ್ಡ ಅಪ್ಡೇಟ್ ಸಿಕ್ಕಿದ್ದು ಫ್ಯಾನ್ಸ್ ಜೊತೆಗೆ ವಿಜಯ್ ಹಂಚಿ ಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದುವರೆಗೆ ಚಿತ್ರದ ಹಲವು ಪೋಸ್ಟರ್ ಹಾಗೂ ಹಾಡುಗಳು ಬಿಡುಗಡೆಯಾಗಿವೆ. ಈಗ ಚಿತ್ರತಂಡ ವಿಜಯ್ ಮತ್ತು ಸಮಂತಾ ಅವರ ರೋಮ್ಯಾಂಟಿಕ್ ಫೋಟೋವನ್ನು ಹಂಚಿಕೊಳ್ಳುವ ಮೂಲಕ ನಿರ್ಮಾಪಕರು ಚಿತ್ರದ ಟ್ರೈಲರ್ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ.
ಇನ್ನೂ ಈ ಪೋಸ್ಟರ್ ಅನ್ನ ವಿಜಯ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.. ವಿಜಯ್ ಪೋಸ್ಟ್ ಗೆ ಅಭಿಮಾನಿಗಳ ಸಾಕಷ್ಟು ಕಮ್ಯಾಂಟ್ ಹರಿದು ಬಂದಿದೆ.. ಎಲ್ಲದಕ್ಕಿಂತ ಜಾಸ್ತಿ ಸ್ಯಾಮ್ ವಿಜಯ್ ಜೊತೆ ಪ್ರೆಟಿ ಕೂಲ್ ಆಗಿ ಕಾಣಿಸಿ ಕೊಂಡಿದ್ದು ಸಿನಿಮಾದಲ್ಲಿ ಇವರಿಬ್ಬರ ಕೆಮಿಸ್ಟ್ರಿ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗ್ತಿದೆ.. ಇನ್ನ ಸಿನಿಮಾದ ಟ್ರೈಲರ್ ಬಿಡುಗಡೆ ದಿನಾಂಕ ಇವತ್ತು ಚಿತ್ರತಂಡ ರಿವಿಲ್ ಮಾಡಿದೆ.
ಹೌದು ಸೆಪ್ಟೆಂಬರ್ ಒಂದರಂದು ಬಿಡುಗಡೆ ಆಗುವ ಖುಷಿ ಸಿನಿಮಾದ ಟ್ರೈಲರ್ ಆಗಸ್ಟ್ 9 ಕ್ಕೆ ರಿಲೀಸ್ ಆಗಲಿದೆ… . ಚಿತ್ರದ ಟ್ರೈಲರ್ 2.41 ನಿಮಿಷಗಳು ಎಂದು ಸಹ ಬಹಿರಂಗ ಪಡಿಸಿದ್ದಾರೆ. ಹೀಗಾಗಿ ಟ್ರೈಲರ್ ನೋಡುವ ಕೌತುಕತೆ ಅಭಿಮಾನಿಗಳಲ್ಲಿ ಅತ್ಯಧಿಕವಾಗಿ ಕಾಡುತ್ತಿದೆ. ಅದ್ರ ಜೊತೆ ಜೊತೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಸಮಂತಾ ಅಭಿನಯದ ಸಿನಿಮಾ ಇದಾಗಿರುವುದರಿಂದ ಸ್ಯಾಮ್ ಮೇಲೆ ಪ್ರೇಕ್ಷಕರ ನಿರೀಕ್ಷೆ ದುಪ್ಪಟ್ಟು ಇದೆ… ಆ expectation ರೀಚ್ ಆಗುವಲ್ಲಿ ಸಿನಿ ತಂಡ ಯಶಸ್ವಿ ಆಗುತ್ತಾ? ಜಸ್ಟ್ ಬೈಟ್ ಆಂಡ್ ವಾಚ್..



