ನಟ ದರ್ಶನ್ ಅವರು ಜಾ*ಮೀನು ಹೊರಗಡೆ ಬಂದ ನಂತರ ಕೆಲವು ಸಾರಿ ಹೊರಗಡೆ ಕಾಣಿಸಿಕೊಂಡಿದ್ದಾರೆ. ಆದರೆ ಅಭಿಮಾನಿಗಳನ್ನು ಭೇಟಿ ಮಾಡಲು ಸಾಧ್ಯ ಆಗಿಲ್ಲ. ಇನ್ನೇನು ದರ್ಶನ್ ಅವರ ಹುಟ್ಟುಹಬ್ಬ ಬರುತ್ತಲಿದೆ, ಈ ಬಾರಿ ದರ್ಶನ್ ಅವರನ್ನು ಭೇಟಿ ಮಾಡಿ, ದೊಡ್ಡ ಮಟ್ಟದಲ್ಲಿ ಹುಟ್ಟುಹಬ್ಬ ಆಚರಣೆ ಮಾಡಬೇಕು ಎಂದು ಅಭಿಮಾನಿಗಳು ಪ್ಲಾನ್ ಮಾಡಿದ್ದರು, ಅದಕ್ಕಾಗಿ ತಯಾರಿ ಸಹ ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ನಟ ದರ್ಶನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುವುದರ ಜೊತೆಗೆ ಒಂದು ಬೇಸರದ ಸುದ್ದಿಯನ್ನು ಕೂಡ ನೀಡಿದ್ದಾರೆ. ಹಾಗಿದ್ದಲ್ಲಿ ದರ್ಶನ್ ಅವರು ಹೇಳಿರೋದೇನು? ಅಭಿಮಾನಿಗಳಿಗೆ ಬೇಸರ ಆಗಿರೋದು ಯಾಕೆ? ಫುಲ್ ಡೀಟೇಲ್ಸ್ ಇಲ್ಲಿದೆ ನೋಡಿ..
ಇಂದು ಬೆಳಗ್ಗೆ ನಟ ದರ್ಶನ್ ಅವರು ಒಂದು ವಿಡಿಯೋ ಶೇರ್ ಮಾಡಿ, ಅದರಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮೊದಲನೆಯದಾಗಿ ತಮ್ಮ ಎಲ್ಲಾ ಫ್ಯಾನ್ಸ್ ಗಳಿಗೆ ಧನ್ಯವಾದ ಹೇಳಿರುವ ದರ್ಶನ್ ಅವರು, ಸೆಲೆಬ್ರಿಟಿಗಳು ಈ ರೀತಿ ಪ್ರೀತಿ ತೋರಿಸಿ, ಸಪೋರ್ಟ್ ಕೊಟ್ಟಿರೋಡ್ ಋಣವನ್ನ ಎಂದಿಗು ತೀರಿಸೋಕೆ ಆಗಲ್ಲ ಎಂದು ಹೇಳಿ, ಎಷ್ಟೇ ಥ್ಯಾಂಕ್ಸ್ ಹೇಳಿದರು ಸಾಲದು ಎಂದಿದ್ದಾರೆ. ಅಭಿಮಾನಿಗಳನ್ನು ಭೇಟಿ ಮಾಡಬೇಕು, ಪ್ರತಿಯೊಬ್ಬರಿಗು ವೈಯಕ್ತಿಕವಾಗಿ ಧನ್ಯವಾದ ಹೇಳಬೇಕು ಎಂದು ಆಸೆ ಇದೆ, ಆದರೆ ಸಧ್ಯಕ್ಕೆ ಮೀಟ್ ಮಾಡೋದಕ್ಕೆ ಆಗೋದಿಲ್ಲ ಕ್ಷಮಿಸಿ ಎಂದು ಹೇಳಿದ್ದಾರೆ. ಅವರ ಹುಟ್ಟುಹಬ್ಬವನ್ನ ಈ ವರ್ಷ ಅಭಿಮಾನಿಗಳ ಆಚರಿಸೋದಕ್ಕೆ ಸಾಧ್ಯವಿಲ್ಲ ಎಂದಿದ್ದು, ಅದಕ್ಕೆ ಕಾರಣ ಆರೋಗ್ಯದ ಸಮಸ್ಯೆ ಎಂದು ಹೇಳಿದ್ದಾರೆ ಡಿಬಾಸ್ ದರ್ಶನ್.
ಆರೋಗ್ಯ ಇನ್ನು ಸರಿ ಹೋಗಿಲ್ಲ, ತುಂಬಾ ಹೊತ್ತು ನಿಂತುಕೊಳ್ಳೋಕೆ ಆಗೋದಿಲ್ಲ ಅನ್ನೋ ಕಾರಣಕ್ಕೆ ನಟ ದರ್ಶನ್ ಅವರು ಈ ಬಾರಿ ಅಭಿಮಾನಿಗಳನ್ನು ಭೇಟಿ ಮಾಡೋದಕ್ಕೆ ಆಗೋದಿಲ್ಲ ಎಂದಿದ್ದಾರೆ. ಇಂಜೆಕ್ಷನ್ ತೆಗೆದುಕೊಂಡರೆ ಸ್ವಲ್ಪ ಸಮಯ ನಿಲ್ಲಬಹುದು, ಅದರ ಪವರ್ ಕಡಿಮೆ ಆಗುತ್ತಿದ್ದ ಹಾಗೆ ನಿಲ್ಲೋದಕ್ಕೆ ಕಷ್ಟವಾಗುತ್ತದೆ. ಕಾಲುಗಳು ನಂಬ್ ಆಗುತ್ತದೆ, ಆ ಕಾರಣಕ್ಕೆ ಈ ವರ್ಷ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬ ಆಚರಿಸೋದಕ್ಕೆ ಆಗೋದಿಲ್ಲ, ಆದಷ್ಟು ಬೇಗ ಡಾಕ್ಟರ್ ಜೊತೆಗೆ ಮಾತನಾಡಿ, ಏನ್ ಮಾಡಬಹುದು ಅಂತ ತಿಳಿದುಕೊಂಡು, ನಿಮ್ಮನೆಲ್ಲಾ ಭೇಟಿ ಮಾಡ್ತೀನಿ, ಅಲ್ಲಿವರೆಗೂ ನನ್ನನ್ನ ಕ್ಷಮಿಸಿ, ಇದೊಂದು ಸಾರಿ ಹೊಟ್ಟೆಗೆ ಹಾಕೊಂಡು ಕ್ಷಮಿಸಿಬಿಡಿ ಎಂದು ನಟ ದರ್ಶನ್ ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ. ಇನ್ನು ಪ್ರಮುಖವಾದ ವಿಚಾರಗಳನ್ನು ಸಹ ಮಾತನಾಡಿದ್ದಾರೆ..ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿದೆ.
ದರ್ಶನ್ ಅವರು ಖುದ್ದಾಗಿ ಹೇಳಿರುವ ಪ್ರಕಾರ, ಅವರಿಗೆ ಆಪರೇಷನ್ ಮಾಡಿಸಲೇಬೇಕು, ಅದನ್ನು ತಪ್ಪಿಸೋಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆರೋಗ್ಯದ ವಿಚಾರದಲ್ಲಿ ಹೆಚ್ಚು ಕಾಂಪ್ಲಿಕೇಶನ್ ಇರುವ ಕಾರಣ, ಇನ್ನು ಸ್ವಲ್ಪ ದಿವಸ ಹುಷಾರಾಗಿ ಇರಬೇಕು ಎಂದು ತಿಳಿಸಿದ್ದಾರೆ. ಇನ್ನು ದರ್ಶನ್ ಅವರು ನಿರ್ಮಾಪಕರಿಂದ ಪಡೆದ ಅಡ್ವಾನ್ಸ್ ಹಣವನ್ನ ವಾಪಸ್ ಕೊಟ್ಟಿದ್ದಾರೆ ಅನ್ನೋ ವಿಷಯಕ್ಕೂ ಕ್ಲಾರಿಟಿ ಕೊಟ್ಟಿದ್ದಾತೆ. ಕೆವಿಎನ್ ಸಂಸ್ಥೆ ಮತ್ತು ಸೂರಪ್ಪ ಬಾಬು ಅವರಿಗೆ ಹಣ ಹಿಂದಿರುಗಿಸಿರುವುದು ನಿಜ, ಸುರಪ್ಪ ಬಾಬು ಅವರು ಸಿನಿಮಾ ಮಾಡೋಕೆ ಬಂದಾಗಲೇ ಅವರಿಗೆ ಕಮಿಟ್ಮೆಂಟ್ ಇತ್ತು. ಅದನ್ನೆಲ್ಲ ಬಗೆಹರಿಸಿಕೊಳ್ಳಲು ಸಿನಿಮಾ ಮಾಡಬೇಕು ಅಂದುಕೊಂಡಿದ್ದರು, ನನಗಾಗಿ ತುಂಬಾ ಸಮಯ ಕಾದಿದ್ದಾರೆ, ಇನ್ನು ಕಾಯುತ್ತಾ ಹೋದರೆ ಅವರ ಕಮಿಟ್ಮೆಂಟ್ ಜಾಸ್ತಿ ಆಗುತ್ತದೆ ಅನ್ನೋ ಕಾರಣಕ್ಕೆ ಹಣವನ್ನು ವಾಪಸ್ ಕೊಟ್ಟಿದ್ದಾರಂತೆ.
ನಿಮ್ಮ ಕಮಿಟ್ಮೆಂಟ್ಸ್ ಗಳನ್ನ ತೀರಿಸಿಕೊಳ್ಳಿ, ಮುಂದೆ ಒಳ್ಳೆ ಕಥೆ ಬಂದಾಗ ಖಂಡಿತ ಸಿನಿಮಾ ಮಾಡೋಣ ಎಂದಿದ್ದಾರಂತೆ ಡಿಬಾಸ್. ಇನ್ನು ಕೆವಿಎನ್ ಸಂಸ್ಥೆಗೆ ಕೂಡ ಹಣ ವಾಪಸ್ ಕೊಡೋದಕ್ಕೆ ಕಾರಣ ತಿಳಿಸಿದ್ದಾರೆ. ಕೆವಿಎನ್ ಸಂಸ್ಥೆ ಈಗಾಗಲೇ ಸಿನಿಮಾ ಮಾಡುತ್ತಿದ್ದಾರೆ, ನಿರ್ಮಾಪಕರಿಗೆ ಈಗ ಒಂದು ಸಿನಿಮಾಗೆ ಹಣ ಹಾಕುವುದರಿಂದ ಸಿನಿಮಾ ರಿಲೀಸ್ ವರೆಗು ತುಂಬಾ ಖರ್ಚು ಜೊತೆಗೆ ಕೆಲಸ ಕೂಡ ಇರುತ್ತದೆ.. ಈಗಾಗಲೇ ಒಂದು ಸಿನಿಮಾ ಮಾಡುತ್ತಿರುವವರ ಹತ್ತಿರ ಇನ್ನೊಂದು ಸಿನಿಮಾಗು ಹಣ ಹಾಕಿ ಅನ್ನೋದು ಬೇಡ. ಯಾವುದು ಸಿನಿಮಾ ಮಾಡದೇ ಇರುವ, ಪ್ರೊಡಕ್ಷನ್ ಹೌಸ್ ನವರ ಜೊತೆಗೆ ಸಿನಿಮಾ ಮಾಡುತ್ತೇನೆ ಎಂದಿದ್ದಾರೆ. ಪ್ರೇಮ್ ಅವರ ನಿರ್ದೇಶನದಲ್ಲಿ ಖಂಡಿತವಾಗಿ ಸಿನಿಮಾ ಮಾಡ್ತೀನಿ ಅಂದಿದ್ದಾರೆ ದರ್ಶನ್. ರಕ್ಷಿತಾ ನಮ್ಮ ಗುರುಗಳ ಮಗಳು, ನನ್ನ ಬೆಸ್ಟ್ ಫ್ರೆಂಡ್, ಇದು ಅವಳ ಆಸೆ, ಪ್ರೇಮ್ ಅವರ ಜೊತೆಗೆ ಖಂಡಿತವಾಗಿ ಸಿನಿಮಾ ಮಾಡ್ತೀನಿ ಅಂದಿದ್ದಾರೆ..

ಇನ್ನು ದರ್ಶನ್ ಅವರು ಬೇರೆ ಭಾಷೆಯಲ್ಲಿ ಸಿನಿಮಾ ಮಾಡ್ತಾರೆ ಅನ್ನೋ ವದಂತಿಗೆ ಕೂಡ ಅವರು ಉತ್ತರ ಕೊಟ್ಟಿದ್ದು, ದರ್ಶನ್ ಕಾವೇರಿ ನದಿಯ ಹಾಗೆ, ಕಾವೇರಿ ಹುಟ್ಟಿದ ಜಾಗದಲ್ಲೇ ನಾನು ಹುಟ್ಟಿದ್ದು, ಕಾವೇರಿ ಎಲ್ಲಾ ಕಡೆ ಹರಿದುಕೊಂಡು ಹೋಗುತ್ತಾಳೆ, ನಾನು ಅದೇ ರೀತಿ ಆದರೆ ಮೇಕೆದಾಟಿನಲ್ಲೇ ನಾನು ಸ್ಟಾಪ್ ಆಗುತ್ತೇನೆ. ಏನೇ ಆದರೂ ಅಲ್ಲಿಂದ ಮುಂದಕ್ಕೆ ಹೋಗೋದಿಲ್ಲ, ಇಲ್ಲಿ ಎಲ್ಲರೂ ನನಗೆ ಇಷ್ಟು ಪ್ರೀತಿ ಕೊಡೋವಾಗ ನಾನು ಬೇರೆ ಕಡೆ ಯಾಕೆ ಹೋಗ್ಲಿ.. ನಾನು ಏನೇ ಮಾಡಿದರು ಇಲ್ಲೇ ಮಾಡ್ತೀನಿ, ಇದನ್ನು ಬಿಟ್ಟು ಎಲ್ಲಿಯೂ ಹೋಗೋದಿಲ್ಲ ಎಂದಿದ್ದಾರೆ. ಅಭಿಮಾನಿಗಳು ಕೊಡುತ್ತಿರುವ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ತಾವು ಮತ್ತು ತಮ್ಮ ಜೊತೆಗಿರುವ ಎಲ್ಲರೂ ಎಷ್ಟೇ ಧನ್ಯವಾದ ತಿಳಿಸಿದರೂ ಸಾಲದು ಎಂದು ಹೇಳಿದ್ದಾರೆ. ಮೂವರು ವಿಶೇಷ ವ್ಯಕ್ತಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಮೊದಲಿಗೆ ದರ್ಶನ್ ಅವರು ಥ್ಯಾಂಕ್ಸ್ ಹೇಳಿರುವುದು ಯುವನಟ ಧನವೀರ್ ಅವರಿಗೆ, ಧನವೀರ್ ಅವರನ್ನು ಹೀರೋ ಎಂದು ಕರೆದಿರುವ ದರ್ಶನ್ ಅವರು, ಧನವೀರ್ ಎಲ್ಲಾ ಸಮಯದಲ್ಲೂ ತಮ್ಮ ಜೊತೆಗೆ ಇದ್ದಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ. ಡಿಂಪಲ್ ರಚಿತಾ ರಾಮ್ ಹಾಗೂ ತಮ್ಮ ಬೆಸ್ಟ್ ರಕ್ಷಿತಾ ಅವರು ಈ ಮೂವರಿಗು ಕೂಡ ದರ್ಶನ್ ಅವರು ಧನ್ಯವಾದ ತಿಳಿಸಿದ್ದು, ಮತ್ತೊಮ್ಮೆ ಅಭಿಮಾನಿಗಳಲ್ಲಿ ಕ್ಷಮೆ ಕೇಳಿ, ಆದಷ್ಟು ಬೇಗ ಸಿಗುತ್ತೇನೆ ಎನ್ನುವುದರ ಜೊತೆಗೆ ಬರ್ತ್ ಡೇ ಗಾಗಿ ಮಾಡಿರುವ ಹಾಡುಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳಿ ಹಾಡು ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ . ಈ ವಿಡಿಯೋ ಇಂದ ದರ್ಶನ್ ಅವರ ಫ್ಯಾನ್ಸ್ ಗೆ ಖುಷಿ ಆಗಿರುವುದೇನೋ ನಿಜ, ಆದರೆ ಬರ್ತ್ ಡೇ ದಿನ ದರ್ಶನ್ ಅವರು ಸಿಗೋದಿಲ್ಲ ಅನ್ನೋ ಬೇಸರ ಸಹ ಅವರಲ್ಲಿ ಶುರುವಾಗಿದೆ.



