ಕನ್ನಡದ ಹಲವು ಖಾಸಗಿ ವಾಹಿನಿಗಳಲ್ಲಿ ಹತ್ತಾರು ಧಾರವಾಹಿಗಳು ಪ್ರಸಾರವಾಗುತ್ತಿದೆ. ಸದ್ಯ, ಈ ವಾರದ ಕನ್ನಡ ಧಾರವಾಹಿಗಳ ಟಿ.ಆರ್.ಪಿ ಲೀಸ್ಟ್ ಹೊಬಿದ್ದಿದೆ. ಅವುಗಳ ಪೈಕಿ ಜೀ ಕನ್ನಡ ವಾಹಿನಿ ಅಗ್ರಸ್ಥಾನಿಯಾಗಿ ಗುರುತಿಸಿಕೊಂಡಿದ್ದು, ಟಾಪ್ 5ರಲ್ಲಿರುವ ಎಲ್ಲಾ ಧಾರವಾಹಿಗಳೂ ಕೂಡ ಜೀ ಕನ್ನಡ ವಾಹಿನಿಯದ್ದೇ ಎಂಬುದು ವಿಶೇಷ.

1.ಪುಟ್ಟಕ್ಕನ ಮಕ್ಕಳು
ಹಿರಿಯ ಹಾಸ್ಯ ನಟಿ ಉಮಾಶ್ರೀ ಅಭಿನಯದ ‘ಪುಟ್ಟಕ್ಕನ ಮಕ್ಕಳು’ ಧಾರವಾಹಿ ಮತ್ತೆ ನಂ.1 ಹೊರಹೊಮ್ಮಿದೆ. ಹಲವು ವಾರಗಳಿಂದಲೂ ಈ ಧಾರವಾಹಿ ತನ್ನ ಮೊದಲ ಸ್ಥಾನವನ್ನು ಯಾರಿಗೂ ಬಿಟ್ಟು ಕೊಟ್ಟಿಲ್ಲ.

2.ಸೀತಾರಾಮ
ಹಲವು ವಾರಗಳಿಂದ ಎರಡನೇ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದ ‘ಗಟ್ಟಿಮೇಳ’ ಧಾರವಾಹಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿ ಹೊಸ ಧಾರಾವಾಹಿ ‘ಸೀತಾರಾಮ’ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. 23 ಸಂಚಿಕೆಯನ್ನಷ್ಟೇ ಪೂರೈಸಿದ ‘ಸೀತಾರಾಮ’ 2ನೇ ಸ್ಥಾನಿಯಾಗಿ ಹೊರ ಹೊಮ್ಮಿದೆ.

- ಗಟ್ಟಿಮೇಳ
ಕಳೆದ 4 ವರ್ಷಗಳಿಂದ ನಿರಂತರ ಪ್ರಸಾರವಾಗುತ್ತಿರುವ ‘ಗಟ್ಟಿಮೇಳ’ ಧಾರಾವಾಹಿ ಇನ್ನೂ ಪ್ರೇಕ್ಷಕರ ಗಮನ ಸೆಳೆಯುತ್ತಿದೆ ಎನ್ನುವುದು ಮತ್ತೆ ಸಾಬೀತಾಗಿದೆ. ಆದರೆ ಈ ವಾರ ಮಾತ್ರ 2ನೇ ಸ್ಥಾನವನ್ನು ಬಿಟ್ಟುಕೊಟ್ಟು, 3ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

- ಸತ್ಯ
ಹಲವು ವಾರಗಳಿಂದ ಟಾಪ್ 5 ಪಟ್ಟಿಯಿಂದ ದೂರವಿದ್ದ ಸತ್ಯ ಧಾರವಾಹಿ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಾರಿ 4ಸ್ಥಾನ ಪಡೆಯುವ ಮೂಲಕ ಹಳಿಗೆ ಮರಳಿದೆ.

5.ಶ್ರೀರಸ್ತು ಶುಭಮಸ್ತು
ಕನ್ನಡದ ಹಿರಿಯ ನಟಿ ಸುಧಾರಾಣಿ ಹಲವು ವರ್ಷಗಳ ಬಳಿಕ ನಟಿಸುತ್ತಿರುವ ಧಾರಾವಾಹಿ ‘ಶ್ರೀರಸ್ತು ಶುಭಮಸ್ತು’. ಆರಂಭದಿಂದಲೇ ಪ್ರೇಕ್ಷಕರ ಮನ ಗೆದ್ದಿದ್ದ ಈ ಧಾರಾವಾಹಿ ಟಾಪ್ 5ರಲ್ಲಿ ಸ್ಥಾನ ಪಡೆದುಕೊಂಡಿದೆ. ಮುಂದಿನ ವಾರ ಇನ್ಯಾವ ಧಾರವಾಹಿಗಳು ಟಾಪ್ 5ರಲ್ಲಿ ಕಾಣಿಸಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.