ಜನಪ್ರಿಯ ಯೂಟ್ಯೂಬರ್ ಎಲ್ವಿಶ್ ಯಾದವ್ ಇತ್ತೀಚೆಗಷ್ಟೇ ಹಿಂದಿ ಬಿಗ್ ಬಾಸ್ ಒಟಿಟಿ ಸೀಸನ್-2 ವಿನ್ನರ್ ಆಗಿ ಗಮನ ಸೆಳೆದಿದ್ದಾರೆ. ಇದೀಗ ಅವರು ದುಬೈಯಲ್ಲಿ ಐಷಾರಾಮಿ ಬಂಗಲೆಯೊಂದನ್ನು ಖರೀದಿಸಿದ್ದು, ಅದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಎಲ್ವಿಶ್ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಈ 4 ಬಿಎಚ್ಕೆ ಮನೆಯ ವೀಡಿಯೋ ಹಂಚಿಕೊಂಡಿದ್ದು,ಈ ವಿಡಿಯೋವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಎಲ್ವಿಶ್ ಹಂಚಿಕೊಂಡಿರುವ ವೀಡಿಯೋದಲ್ಲಿ ಬರೋಬ್ಬರಿ 8 ಕೋಟಿ ರೂ. ಬೆಲೆಬಾಳುವ ತಮ್ಮ ಐಷಾರಾಮಿ ಮನೆಯ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅತಿಥಿ ಕೋಣೆ, ಬಾತ್ ರೂಮ್ ಅಟ್ಯಾಚ್ ಆಗಿರುವ ಬೆಡ್ ರೂಮ್, ಸುಂದರ ಬಾಲ್ಕನಿಯೊಳಗೊಂಡ ದೊಡ್ಡ ಅಡುಗೆ ಕೋಣೆಯ ನೋಟ ಆಕರ್ಷಕವಾಗಿದೆ. ಮರದ ಟೇಬಲ್, ಬಿಳಿ ಕುರ್ಚಿಯನ್ನೊಳಗೊಂಡ ಅತ್ಯುತ್ತಮ ಡೈನಿಂಗ್ ಹಾಲ್ ಅನ್ನು ಕೂಡ ಈ ಮನೆ ಒಳಗೊಂಡಿದೆ.
ಸೆಪ್ಟಂಬರ್ 26ರಂದು ಹುಟ್ಟುಹಬ್ಬ ಆಚರಿಸಿಕೊಂಡ ಎಲ್ವಿಶ್ ನಟಿ ಊರ್ವಶಿ ರೌಟೆಲಾ ಜೊತೆ ನಟಿಸಿದ ಮೊದಲ ಮ್ಯೂಸಿಕ್ ವೀಡಿಯೋ ‘ಹಮ್ ತೊ ದೀವಾನಾ’ ವನ್ನು ಯೂಟ್ಯೂಬ್ ಮೂಲಕ ಬಿಡುಗಡೆಗೊಳಿಸಿದರು. ಮ್ಯೂಸಿಕ್ ತಯಾರಿ, ಯೂಟ್ಯೂಬ್ ಚಾನೆಲ್ ಮೂಲಕ ಮುನ್ನೆಲೆಗೆ ಬಂದ ಎಲ್ವಿಶ್ ಬಳಿಗ ಬಿಗ ಬಾಸ್ ನಲ್ಲಿ ವಿನ್ನರ್ ಆಗಿ ಸಾಕಷ್ಟು ಜನ ಮನ್ನಣೆ ಹಾಗೂ ಹಣ ಸಂಪಾದಿಸಿದರು. ಸದ್ಯ, ದಬೈನಲ್ಲಿ ಐಶಾರಾಮಿ ಮನೆ ಖರೀದಿ ಮಾಡಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ.



