ಪ್ರೀತಿಗೆ ಕಣ್ಣಿಲ್ಲ ಪ್ರೀತಿ ಕುರುಡು ಅನ್ನುವ ಮಾತನ್ನು ನಾವೆಲ್ಲ ಕೇಳಿದ್ದೇವೆ. ಆ ಮಾತಿನಂತೆಯೇ ಇಲ್ಲೊಂದು ಪ್ರೇಮ ಕಹಾನಿ ಬೆಳಕಿಗೆ ಬಂದಿದೆ. 72 ವರ್ಷದ ಲೋಕನಾಥ್ ಹಾಗೂ 62 ವರ್ಷದ ದಯಾಮಣಿ ಹೆಸರಿನ ಎರಡು ಹಿರಿ ಜೀವಗಳು ಪ್ರೀತಿಯಲ್ಲಿ ಬಿದ್ದಿದ್ದವು. ಆದರೆ ಅದೆನಾಯ್ತೋ ಗೊತ್ತಿಲ್ಲ ಇದೀಗ ಅಜ್ಜಿ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದ. ಈ ಅಪರೂಪದ ಲವ್ ಸ್ಟೋರಿಯ ಡೀಟಿಯಲ್ಸ್ ಇಲ್ಲಿದೆ ನೋಡಿ.

ಗಂಡ-ಹೆಂಡತಿಯನ್ನು ಕಳೆದುಕೊಂಡು ಏಕಾಂಗಿಯಾಗಿ ಜೀವಿಸುತ್ತಿದ್ದ ಲೋಕನಾಥ್ ಮತ್ತು ದಯಾಮಣಿ ಪರಸ್ಪರ ಪರಿಚಿತರಾಗಿದ್ದರು. ಲೋಕನಾಥ್ ಮಗನಿಗೆ ಹೆಣ್ಣು ಹುಡುಕುತ್ತಿದ್ದರು. ಆಗ ದಯಾಮಣಿ ಹೆಣ್ಣು ತೋರಿಸುವುದಾಗಿ ಹೇಳಿದ್ದು ಇಬ್ಬರು ಸ್ನೇಹಿತರಾದರು. ಇದೇ ಸ್ನೇಹ ಮುಂದೆ ಪ್ರೀತಿಗೆ ತಿರುಗಿ ಇವರಿಬ್ಬರು ಮದುವೆಯಾಗಲು ತೀರ್ಮಾನಿಸಿದ್ದರು.
ಮದುವೆಯಾಗಲು ಯೋಚಿಸಿದ್ದ ಈ ಜೋಡಿ ಇದೇ ಕಾರಣದಿಂದ ಕರ್ನಾಟಕದ ಹಲವು ಪ್ರವಾಸಿ ತಾಣಗಳಿಗೆ ತೆರಳಿ ಎಂಜಾಯ್ ಮಾಡಿದ್ದರು. ಆದರೆ ಇತ್ತೀಚೆಗೆ ಲೋಕನಾಥ್ ಕಾರಣವಿಲ್ಲದೆ ದಯಾಮಣಿ ಅವರನ್ನು ನಿರ್ಲಕ್ಷ್ಯಿಸಲು ಆರಂಭಿಸಿದ್ದಾನೆ. ಈ ನಿರ್ಲಕ್ಷ್ಯ ಮಿತಿಮೀರಿದಾಗ ಮನನೊಂದ ದಯಾಮಣಿ ಅವರು ಪೊಲೀಸ್ ಮೆಟ್ಟಿಲೇರಿ, ಲೋಕನಾಥ್ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ದೂರು ನೀಡಿದ್ದಾರೆ. ಲೋಕನಾಥ್ ದೂರವಾಗಲು ಕಾರಣವೇನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.



