ಬಿಗ್ ಬಾಸ್ ಮನೆಯಿಂದ ಈ ವಾರ ಹೊರಗಡೆ ಬಂದವರು ನಟಿ ಶೋಭಾ ಶೆಟ್ಟಿ. ಇವರು ಇಷ್ಟು ಬೇಗ ಎಲಿಮಿನೇಟ್ ಆಗಿ ಬರುತ್ತಾರೆ ಎಂದು ಯಾರು ಕೂಡ ಅಂದುಕೊಂಡಿರಲಿಲ್ಲ. ಶೋಭಾ ಶೆಟ್ಟಿ ಬಹಳ ಸ್ಟ್ರಾಂಗ್ ಸ್ಪರ್ಧಿ ಆಗಿದ್ದರು. ಬಿಗ್ ಬಾಸ್ ಕನ್ನಡಕ್ಕೆ ಬಂದ ಒಂದೆರಡು ದಿನಕ್ಕೆ ಬಹಳ ರೆಬೆಲ್ ಆಗಿ ಎಲ್ಲರ ಮುಖವಾಡ ಕಳಚುವುದಾಗಿ ಹೇಳಿದ್ದರು, ಜಗಳ ಮಾಡಿದ್ದರು, ಆದರೆ ಯಾಕೋ ಎರಡೇ ವಾರಕ್ಕೆ ಇವರ ಆಟ ಮುಗಿಸಿ, ಹೊರಬಂದಿದ್ದಾರೆ. ಜನರು ಇವರನ್ನು ಮನೆಯಿಂದ ಹೊರಗೆ ಕಳಿಸಲಿಲ್ಲ, ಶೋಭಾ ಅವರೇ ಸೆಲ್ಫ್ ಎಲಿಮಿನೇಟ್ ಆಗಿ ಹೊರಬಂದಿದ್ದು, ಇವರ ನಿರ್ಧಾರದಿಂದ ಕಿಚ್ಚ ಸುದೀಪ್ ಅವರಿಗೂ ಕೋಪ ಬಂದಿದೆ.

ಶೋಭಾ ಶೆಟ್ಟಿ ಅವರಿಗೆ ಬಿಗ್ ಬಾಸ್ ಮನೆ ಹೊಸದಲ್ಲ, ಈ ಮೊದಲು ಇವರು ತೆಲುಗು ಬಿಗ್ ಬಾಸ್ ಗೆ ಸ್ಪರ್ಧಿಯಾಗಿ ಹೋಗಿದ್ದರು. ಅಲ್ಲಿ ಶೋಭಾ ಅವರು ಬಹಳ ಸ್ಟ್ರಾಂಗ್ ಆಗಿದ್ದ ಸ್ಪರ್ಧಿ, ಆದರೆ ಕನ್ನಡದಲ್ಲಿ ಆ ಜೋಶ್ ಉಳಿಯಲೇ ಇಲ್ಲ. ಎರಡನೇ ವಾರವೇ ಶೋಭಾ ತುಂಬಾ ವೀಕ್ ಆದ ಹಾಗೆ ಕಂಡರು. ಎರಡನೇ ವಾರ ಟಾಸ್ಕ್ ಗಳಲ್ಲಿ ಚೆನ್ನಾಗಿ ಪರ್ಫಾರ್ಮ್ ಮಾಡಲು ಸಹ ಆಗಲಿಲ್ಲ. ಕೊನೆಗೆ ಕಳೆದ ವಾರ ಮನೆಯ ಬೇರೆ ಸ್ಪರ್ಧಿಗಳಿಂದ ಕಳಪೆ ಎಂದು ಪಡೆದು, ಜೈಲು ಸೇರಿದರು. ಇದರಿಂದ ಇವರು ಇನ್ನಷ್ಟು ಕುಗ್ಗಿದರು ಎನ್ನುವ ಹಾಗೆ ಕಾಣುತ್ತದೆ. ವೀಕೆಂಡ್ ಎಪಿಸೋಡ್ ನಲ್ಲಿ ಸುದೀಪ್ ಅವರು ಸ್ಪರ್ಧಿಗಳನ್ನು ಸೇವ್ ಮಾಡಿದ ಬಳಿಕ, ಶೋಭಾ ಅವರು ತಮಗೆ ಮನೆಯಲ್ಲಿರಲು ಆಗುತ್ತಿಲ್ಲ ಎಂದು ಕಣ್ಣೀರು ಹಾಕಿದರು.
ಸುದೀಪ್ ಅವರು ನೀವು ಮನೆಗೆ ಬಂದಿದ್ದು ಯಾಕೆ ನೆನಪು ಮಾಡಿಕೊಳ್ಳಿ ಎಂದು ಎಷ್ಟೇ ಸಮಾಧಾನ ಮಾಡುವುದಕ್ಕೆ ಪ್ರಯತ್ನ ಪಟ್ಟರೂ ಸಹ ಶೋಭಾ ಅವರು ಸುದೀಪ್ ಅವರ ಮಾತನ್ನು ಕೇಳಿಸಿಕೊಳ್ಳಲಿಲ್ಲ, ಆ ಮಾತಿಗೆ ಬೆಲೆಯನ್ನು ಸಹ ಕೊಡಲಿಲ್ಲ, ತಮಗೆ ಮನೆಯಿಂದ ಹೊರಗೆ ಹೋಗಬೇಕು ಅನ್ನಿಸುತ್ತಿದೆ ಎಂದು ಹೇಳಿ, ತಾವು ವೀಕ್ ಆಗಿರುವುದಾಗಿ ಹೇಳಿದರು. ಸುದೀಪ್ ಅವರು ಜನರ ತೀರ್ಮಾನವನ್ನು ಗೌರವಿಸಬೇಕು ಎಂದು ಎಷ್ಟೇ ಹೇಳಿದರು ಸಹ ಶೋಭಾ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಲಿಲ್ಲ. ತಮಗೆ ಬಿಗ್ ಬಾಸ್ ಮನೆಯೊಳಗೆ ಇರಲು ಸಾಧ್ಯವಿಲ್ಲ, ಹೊರಗೆ ಹೋಗಲೇಬೇಕು ಎಂದು ಪಟ್ಟು ಹಿಡಿದರು. ಇದರಿಂದ ಸುದೀಪ್ ಅವರಿಗೂ ಕೋಪ ಬಂದಿತು.

ಕೊನೆಗೆ ಸುದೀಪ್ ಅವರು ಕೋಪ ಬಂದು, ಗೇಟ್ ಓಪನ್ ಮಾಡುತ್ತೇನೆ ಎಂದು ಹೇಳಿ, ಗೆಟ್ ಔಟ್ ಎಂದು ಕೂಡ ಹೇಳಿದರು. ಶೋಭಾ ಶೆಟ್ಟಿ ಅವರು ಸೆಲ್ಫ್ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದರು. ಬಳಿಕ ಸುದೀಪ್ ಅವರು ಜನರಿಗೆ ಕ್ಷಮೆ ಕೇಳಿದರು. ಶೋಭಾ ಅವರು ಮನೆಯೊಳಗೆ ಇರಬೇಕು ಎಂದು ಬಹಳಷ್ಟು ಜನರು ವೋಟ್ ಮಾಡಿದ್ದರು, ಆದರೆ ಶೋಭಾ ಅವರು ಜನರ ತೀರ್ಮಾನಕ್ಕೆ ಬೆಲೆ ಕೊಡಲಿಲ್ಲ. ಈ ಕಾರಣಕ್ಕೆ ಸುದೀಪ್ ಅವರು ಜನರಿಗೆ ಕ್ಷಮೆ ಕೇಳಿದರು. ಒಂದು ರೀತಿ ಈ ಎಲಿಮಿನೇಷನ್ ಬಹಳ ಆಶ್ಚರ್ಯ ತಂದಿದ್ದಂತೂ ನಿಜವೇ. ಶೋಭಾ ಅವರ ಈ ನಿರ್ಧಾರದಿಂದ ಹೊರಗಿನ ಜನರು ಸಹ ಇವರನ್ನು ಟ್ರೋಲ್ ಮಾಡುತ್ತಿದ್ದಾರೆ.
ಇದು ತೆಲುಗು ಬಿಗ್ ಬಾಸ್ ಕಾದು, ಕನ್ನಡ ಬಿಗ್ ಬಾಸ್ ಎಂದು ತಮಾಷೆ ಮಾಡುತ್ತಿದ್ದಾರೆ. ಮುಖವಾಡ ಬಯಲು ಮಾಡುತ್ತೇನೆ, ಎಲ್ಲರ ನಿಜ ಸ್ವರೂಪ ಹೊರ ತರುತ್ತೇನೆ ಎಂದು ಹೇಳಿದ ಶೋಭಾ ಈ ರೀತಿ ವೀಕ್ ಆಗಿ ಸೆಲ್ಫ್ ಎಲಿಮಿನೇಟ್ ಆಗಿರುವುದು ನಿಜಕ್ಕೂ ಶಾಕಿಂಗ್ ಆಗಿದೆ. ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ನಂತರ ಶೋಭಾ ಅವರು ಮತ್ತೆ ನಟನೆಯಲ್ಲಿ ತೊಡಗಿಕೊಳ್ಳುತ್ತಾರಾ? ಮತ್ತೆ ಕನ್ನಡ ಧಾರಾವಾಹಿಗಳಲ್ಲಿ ನಟಿಸುತ್ತಾರಾ? ಎನ್ನುವ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಇನ್ನು ಇವರ ಎಂಗೇಜ್ಮೆಂಟ್ ಸಹ ಆಗಿದ್ದು, ಮದುವೆ ಯಾವಾಗ ಎಂದು ಕಾದು ನೋಡಬೇಕಿದೆ.



