3 ವರ್ಷಗಳ ಹಿಂದೆ ತೆರೆಕಂಡ ಸೀತಾರಾಮಮ್ ಸಿನಿಮಾ ಆ ವರ್ಷದ ಬ್ಲಾಕ್ ಬಸ್ಟರ್ ಗಳ ಸಾಲಿಗೆ ಸೇರಿತು. ಇದೊಂದು ತೆಲುಗು ಸಿನಿಮಾ ಆಗಿದ್ದರೂ ಎಲ್ಲಾ ಭಾಷೆಗಳಲ್ಲಿ ಸಹ ಯಶಸ್ಸು ಕಂಡಿತು. ಸೌತ್ ಇಂಡಿಯಾದಲ್ಲಿ ಮಾತ್ರವಲ್ಲ, ಉತ್ತರ ಭಾರತದಲ್ಲಿ ಸಹ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು..ಈ ಸಿನಿಮಾವನ್ನು ತೆಲುಗಿನ ವೈಜಯಂತಿ ಮೊವೀಸ್ ಬ್ಯಾನರ್ ನಿರ್ಮಾಣ ಮಾಡಿದರೆ, ಹನು ರಾಘವಪುಡಿ ನಿರ್ದೇಶನ ಮಾಡಿದರು. ಇನ್ನು ಮಲಯಾಳಂ ನ ಖ್ಯಾತ ನಟ ದುಲ್ಕರ್ ಸಲ್ಮಾನ್ ನಾಯಕನಾದರೆ, ಮೃಣಾಲ್ ಠಾಕೂರ್ ನಾಯಕಿ, ರಶ್ಮಿಕಾ ಮಂದಣ್ಣ ಸಹ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರು. ಇದೊಂದು ಟೈಮ್ ಲೆಸ್ ಕ್ಲಾಸಿಕ್ ಎಂದೇ ಹೆಸರುವಾಸಿ ಆಗಿದೆ. ಈ ಸಿನಿಮಾ ಹೀರೋಯಿನ್ ಈಗ ತೆಲುಗು ನಟನ ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರಕ್ಕೆ ಸುದ್ದಿಯಾಗಿದ್ದಾರೆ.

ಹೌದು, ಸೀತಾರಾಮಮ್ ಸಿನಿಮಾದಲ್ಲಿ ನಟಿಸಿರುವ ಮೃಣಾಲ್ ಠಾಕೂರ್ ಅವರು ಮುಂಬೈ ಬೆಡಗಿ. ಮುಂಬೈನಲ್ಲಿ ಹುಟ್ಟಿ ಬೆಳೆದು, ಯಾರ ಸಪೋರ್ಟ್ ಕೂಡ ಇಲ್ಲದೆ, ಬಹಳ ಕಷ್ಟಪಟ್ಟು ಹೀರೋಯಿನ್ ಆಗಿದ್ದಾರೆ. ಮೊದಲಿಗೆ ಧಾರಾವಾಹಿಯಲ್ಲಿ ನಟಿಸಿ ನಂತರ ಹೀರೋಯಿನ್ ಆದರು ಮೃಣಾಲ್. ಹಿಂದಿಯಲ್ಲಿ ಒಂದೆರಡು ಸಿನಿಮಾಗಳಲ್ಲಿ ಯಶಸ್ವಿ ಆಗಿದ್ದರೂ ಸಹ ಇವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದು ತೆಲುಗಿನ ಸೀತಾರಾಮಮ್ ಸಿನಿಮಾ. ಈ ಸಿನಿಮಾದಲ್ಲಿ ಸೀತಾ ಮಹಾಲಕ್ಷ್ಮಿ ಪಾತ್ರ ಎಷ್ಟು ದೊಡ್ಡ ಮಟ್ಟಕ್ಕೆ ಹಿಟ್ ಆಯಿತು ಎಂದರೆ ಎಲ್ಲರೂ ಇವರನ್ನು ಅದೇ ಹೆಸರಿನಲ್ಲಿ ಕರೆಯುವುದಕ್ಕೆ ಶುರು ಮಾಡಿದರು. ಸೀತಾರಾಮಮ್ ಇಂದ ಮೃಣಾಲ್ ಅವರು ತೆಲುಗು ಫ್ಯಾನ್ಸ್ ಗೆ ಬಹಳ ಹತ್ತಿರವಾಗಿದ್ದಾರೆ.
ನಂತರ ಇವರು ತೆಲುಗಿನಲ್ಲೇ ನಟಿಸುತ್ತಿದ್ದಾರೆ. ನಾನಿ ಅವರೊಡನೆ ಹಾಯ್ ನಾನ್ನಾ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಕೂಡ ಸೂಪರ್ ಹಿಟ್ ಆಗಿ, ಮೃಣಾಲ್ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ಇನ್ನು ತೆಲುಗಿನಲ್ಲಿ ಒಂದೆರಡು ಪ್ರಾಜೆಕ್ಟ್ ಗಳಲ್ಲಿ ನಟಿಸಲಿದ್ದಾರೆ. ಹಾಗೆಯೇ ಬಾಲಿವುಡ್ ನಲ್ಲಿ ಕೂಡ ಬ್ಯುಸಿ ಆಗಿದ್ದಾರೆ. ಶೀಘ್ರದಲ್ಲೇ ತಮಿಳಿಗೂ ಎಂಟ್ರಿ ಕೊಡುತ್ತಾರೆ ಎಂದು ಹೇಳಲಾಗಿದೆ. ಇದೆಲ್ಲವೂ ಒಂದು ಕಡೆಯಾದರೆ ಈಗ ಮೃಣಾಲ್ ಅವರು ಡೇಟಿಂಗ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಹೌದು, ನಟಿ ಮೃಣಾಲ್ ಠಾಕೂರ್ ಅವರು ತೆಲುಗಿನ ಪ್ರತಿಷ್ಠಿತ ಅಕ್ಕಿನೇನಿ ಮನೆತನದ ಹೀರೋ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ..

ಆ ನಟ ಮತ್ಯಾರು ಅಲ್ಲ, ಸುಮಂತ್ ಅವರು. ಹೌದು, ಸುಮಂತ್ ಅವರು ಕೆಲ ವರ್ಷಗಳ ಕಾಲ ಚಿತ್ರರಂಗದಲ್ಲಿ ಆಕ್ಟಿವ್ ಆಗಿರಲಿಲ್ಲ, ಈಗ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮೃಣಾಲ್ ಅವರು ನಾಯಕಿ ಆಗಿದ್ದ ಸೀತಾರಾಮಮ್ ಸಿನಿಮಾದಲ್ಲಿ ಸುಮಂತ್ ಅವರು ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಆಗಿನಿಂದ ಮೃಣಾಲ್ ಹಾಗೂ ಸುಮಂತ್ ಅವರಿಗೆ ಪರಿಚಯವಿದೆ. ಇಬ್ಬರು ಈಗ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇವರಿಬ್ಬರು ಜೊತೆಯಾಗಿ ಇರುವ ಒಂದು ಫೋಟೋ ಸಹ ಸಖತ್ ವೈರಲ್ ಆಗಿದೆ. ಸುಮಂತ್ ಅವರ ಬಗ್ಗೆ ಹೇಳುವುದಾದರೆ, ಇವರಿಗೆ ಈಗ 50 ವರ್ಷ ಆಗುತ್ತಿದೆ. ಹೌದು, ಸುಮಂತ್ ಅವರಿಗೆ ಒಂದು ಮದುವೆಯಾಗಿ ವಿಚ್ಛೇದನ ಸಹ ಆಗಿದೆ.
ಸುಮಂತ್ ಅವರು 2004ರಲ್ಲಿ ನಟಿ ಕೀರ್ತಿ ರೆಡ್ಡಿ ಅವರ ಜೊತೆಗೆ ಮದುವೆಯಾಗಿದ್ದರು, ಆದರೆ ಇವರ ದಾಂಪತ್ಯ ಜೀವನ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. 2 ವರ್ಷಕ್ಕೆ ವಿಚ್ಛೇದನ ಪಡೆದರು. ಕೀರ್ತಿ ರೆಡ್ಡಿ ಈಗ ಎರಡನೇ ಮದುವೆಯಾಗಿ ಸಿಂಗಾಪುರದಲ್ಲಿ ಇದ್ದಾರೆ. ಇವರು ಕನ್ನಡದಲ್ಲಿ ಉಪೇಂದ್ರ ಅವರೊಡನೆ ಸೂಪರ್ ಸ್ಟಾರ್ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಸುಮಂತ್ ಅವರು ಮಾತ್ರ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ, ಎರಡನೇ ಮದುವೆ ಇವರು ಆಗಲೇ ಇಲ್ಲ. ಮತ್ತೊಮ್ಮೆ ಮದುವೆಯಾಗಲು ಮನೆಯಲ್ಲಿ ಪ್ರಸ್ತಾಪ ಬಂದರೂ ಸಹ ಸುಮಂತ್ ಅವರು ಅದಕ್ಕೆ ಒಪ್ಪಿಕೊಳ್ಳಲಿಲ್ಲ. 50 ವರ್ಷವಾದರು ಸಿಂಗಲ್ ಆಗಿಯೇ ಇದ್ದಾರೆ. ಈಗ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಈಗ ಡೇಟಿಂಗ್ ವಿಚಾರಕ್ಕೆ ಮತ್ತೆ ಸುದ್ದಿಯಾಗಿದ್ದಾರೆ..

ಹೌದು, ನಟಿ ಮೃಣಾಲ್ ಠಾಕೂರ್ ಅವರು ಸುಮಂತ್ ಅವರೊಡನೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಸುಮಂತ್ ಅವರು ಯಾವುದೇ ವಿಷಯಕ್ಕೆ ಪ್ರತಿಕ್ರಿಯೆ ಕೊಟ್ಟಿಲ್ಲ, ಇನ್ನು ಮೃಣಾಲ್ ಅವರು ಸಹ ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇವರಿಬ್ಬರು ಜೊತೆಯಾಗಿರುವ ಒಂದು ಫೋಟೋ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ ಸುಮಂತ್ ಅವರ ಆಪ್ತ ವರ್ಗ ಈ ವಿಷಯದ ಬಗ್ಗೆ ಮಾಹಿತಿ ಕೊಟ್ಟಿದ್ದು, ಇದೆಲ್ಲವೂ ಗಾಸಿಪ್ ಅಷ್ಟೇ, ಯಾವುದೇ ನಿಜಾಂಶ ಇಲ್ಲ, ಇಬ್ಬರು ಸೀತಾರಾಮ್ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದು, ಒಳ್ಳೆಯ ಪರಿಚಯ ಇದೆ ಅಷ್ಟೇ, ಇಬ್ಬರ ನಡುವೆ ಬೇರೆ ಏನೂ ಇಲ್ಲ ಎಂದು ಕ್ಲಾರಿಟಿ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಈ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮೃಣಾಲ್ ಅವರು ಕೂಡ ಇದಕ್ಕೆ ಪ್ರತಿಕ್ರಿಯೆ ಕೊಡಬೇಕಿದೆ..
ಇನ್ನು ಮೃಣಾಲ್ ಅವರು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ, ಶೀಘ್ರದಲ್ಲೇ ಇವರ ಸಿನಿಮಾಗಳು ಬಿಡುಗಡೆ ಆಗಲಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಹ ಬಹಳ ಆಕ್ಟಿವ್ ಆಗಿರುವ ಅನೇಕ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ, ಅವುಗಳು ವೈರಲ್ ಸಹ ಆಗುತ್ತದೆ. ಇನ್ನು ಮೃಣಾಲ್ ಅವರ ಸಿನಿಮಾ ಯಾವಾಗ ತೆರೆಗೆ ಬರುತ್ತದೆ, ಅವರು ಹೆಚ್ಚು ಹೆಚ್ಚಾಗಿ ತೆಲುಗು ಸಿನಿಮಾಗಳಲ್ಲಿ ನಟಿಸಲಿ ಎನ್ನುವುದೇ ಮೃಣಾಲ್ ಅವರ ಫ್ಯಾನ್ಸ್ ಗಳ ಆಸೆ ಆಗಿದೆ.



