ಈಗಿನ ಕಾಲದಲ್ಲಿ ಒಂದು ನಿಮಿಷದಲ್ಲಿ ಲವ್ ಆಗುತ್ತದೆ ಅದೇ ಒಂದು ನಿಮಿಷದಲ್ಲಿ ಬ್ರೇಕಪ್ ಕೂಡ ಆಗುತ್ತದೆ. ಇದಂತು ಸತ್ಯ. ಯಾರು ಯಾವಾಗ ಯಾರ ಜೊತೆಗೆ ಇರುತ್ತಾರೆ, ಯಾರಿಂದ ದೂರವಾಗುತ್ತಾರೆ, ಯಾರ ಜೊತೆಗೆ ಬ್ರೇಕಪ್ ಮಾಡಿಕೊಳ್ಳುತ್ತಾರೆ ಎಂದು ಊಹೆ ಮಾಡುವುದಕ್ಕೆ ಕೂಡ ಸಾಧ್ಯ ಆಗೋದಿಲ್ಲ. ಈ ಲಿಸ್ಟ್ ಗೆ ಈ ಸೇರ್ಪಡೆ ಆಗಿರುವವರು ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ನಲ್ಲಿ ಸ್ಪರ್ಧಿಯಾಗಿ ಬಂದಿದ್ದ ನಟಿ ಜಯಶ್ರೀ ಆರಾಧ್ಯ ಅವರು.
ಇವರು ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿ, ಹೆಸರುವಾಸಿ ಆಗಿದ್ದ ಹಿರಿಯನಟಿ ಮಾರಿಮುತ್ತು ಅವರ ಮೊಮ್ಮಗಳು. ಜಯಶ್ರೀ ಅವರಿಗೂ ಬಣ್ಣದ ನಂಟಿದೆ, ಕೆಲವು ಧಾರಾವಾಹಿ ಮತ್ತು ಸಿನಿಮಾಗಳು ಎರಡರಲ್ಲೂ ಜಯಶ್ರೀ ಆರಾಧ್ಯ ನಟಿಸಿ, ಜನಪ್ರಿಯತೆ ಪಡೆದುಕೊಂಡಿದ್ದಾರೆ. ಆದರೆ ಇವರಿಗೆ ಹೆಚ್ಚು ಜನಮನ್ನಣೆ ಸಿಕ್ಕಿದ್ದು, ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ ಮೂಲಕ. ಅಲ್ಲಿಂದ ಹೊರಬಂದ ನಂತರ ತಮ್ಮ ಬ್ಯುಸಿನೆಸ್ ಕಡೆಗೆ ಹೆಚ್ಚು ಗಮನ ಕೊಟ್ಟರು ಜಯಶ್ರೀ.

ಕೆಲ ಸಮಯದ ನಂತರ ತಾವು ಲಿವಿನ್ ರಿಲೇಶನ್ಷಿಪ್ ನಲ್ಲಿರುವ ಬಾಯ್ ಫ್ರೆಂಡ್ ಸ್ಟೀವನ್ ಜೊತೆಗೆ ಕಲರ್ಸ್ ಕನ್ನಡ ವಾಹಿನಿಯ ರಾಜ ರಾಣಿ ಶೋಗೆ ಸ್ಪರ್ಧಿಯಾಗಿ ಬಂದಿದ್ದರು. ಆಗ ಸಾಕಷ್ಟು ವಿವಾದ ಕೂಡ ನಡೆದಿತ್ತು. ಮದುವೆಯಾದ ದಂಪತಿಗಳು ಬರುವ ಶೋಗೆ, ಲಿವಿನ್ ರಿಲೇಶನ್ಷಿಪ್ ನಲ್ಲಿ ಇರೋರನ್ನ ಕರೆಸಿರೋದು ಸರಿಯಲ್ಲ ಎಂದು ಹಲವು ಜನರು ನೆಗಟಿವ್ ಆಗಿ ಮಾತನಾಡಿದ್ದರು. ಆದರೆ ಜಯಶ್ರೀ ಅವರು ಮಾತ್ರ..
ತಾವು ತಾಳಿ ಕಟ್ಟಿ ಮದುವೆಯಾಗಿಲ್ಲ ಅನ್ನೋದನ್ನ ಬಿಟ್ರೆ ತಾವಿಬ್ಬರು ಗಂಡ ಹೆಂಡತಿಯಾಗಿಯೇ ಇರೋದು, ಆದಷ್ಟು ಬೇಗ ಮದುವೆ ಆಗುತ್ತೇವೆ ಎಂದಿದ್ದರು. ಆದರೆ ಇವರಿಬ್ಬರ ಬ್ರೇಕಪ್ ನಡೆದಿದೆ. ಹೌದು, ಕಳೆದ ಕೆಲವು ದಿನಗಳಿಂದ ಜಯಶ್ರೀ ಹಾಗೂ ಸ್ಟೀವನ್ ಇಬ್ಬರ ಬ್ರೇಕಪ್ ನಡೆದಿರಬಹುದು ಎನ್ನುವ ಊಹಾಪೋಹಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿಬಂದಿತ್ತು. ಈ ರೂಮರ್ ಗಳಿಗೆ ಖುದ್ದು ಜಯಶ್ರೀ ಅವರೇ ತೆರೆ ಎಳೆದಿದ್ದಾರೆ. ತಮ್ಮಿಬ್ಬರಿಗೆ ಬ್ರೇಕಪ್ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ..
ಜಯಶ್ರೀ ಆರಾಧ್ಯ ಅವರು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು, ರೂಮರ್ ಗಳು ನಿಜ , ನಾನು ನನ್ನ ಬಾಯ್ ಫ್ರೆಂಡ್ ಸ್ಟೀವನ್ ಇಂದ ದೂರವಾಗಿದ್ದೇನೆ. ದಿ ಗ್ಲಾಮ್ ರೂಮ್ ಗೆ ಸಂಬಂಧಪಟ್ಟ ಯಾವುದೇ ವಿಷಯ ಇದ್ದರೂ ನನ್ನನ್ನೇ ಕಾಂಟ್ಯಾಕ್ಟ್ ಮಾಡಿ. ಗ್ಲಾಮ್ ರೂಮ್ ನ ಮಾಲೀಕರು ಇನ್ವೆಸ್ಟರ್ ಗಳಾಗಿರಲಿಲ್ಲ. ಎಲ್ಲಾ ಹಣವನ್ನು ನಾನು ಬ್ಯಾಂಕ್ ಲೋನ್ ಇಂದ ಪಡೆದಿದ್ದು, ಅದನ್ನು ನಾನೇ ಕಟ್ಟುತ್ತಿದ್ದೇನೆ, ಹಿಂದೆ ಕೂಡ ನಾನೇ ಕಟ್ಟುತ್ತಿದ್ದೆ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದ ಎಂದು ಪೋಸ್ಟ್ ಮಾಡಿದ್ದಾರೆ ನಟಿ ಜಯಶ್ರೀ ಆರಾಧ್ಯ.



