ನಟಿ ಶೋಭಿತಾ ಶಿವಣ್ಣ ಅವರ ಸಾ**ವಿನ ಸುದ್ದಿ ಕನ್ನಡ ಕಿರುತೆರೆ ಲೋಕದ ಕಲಾವಿದರಿಗೆ ಮಾತ್ರವಲ್ಲದೇ ಅಭಿಮಾನಿಗಳಿಗೆ ಕೂಡ ಬಹಳ ಅಚ್ಚರಿ ಮೂಡಿಸಿದೆ. ಬ್ರಹ್ಮಗಂಟು ಧಾರಾವಾಹಿಯಲ್ಲಿ ನಟಿ ಶೋಭಿತಾ ಅವರು ವಿಲ್ಲನ್ ಪಾತ್ರದಲ್ಲಿ ನಟಿಸುತ್ತಿದ್ದರು. ಬಳಿಕ ನಟನೆ ಇಂದ ಸ್ವಲ್ಪ ದೂರವೇ ಉಳಿದಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ಇವರು ಪ್ರಾಣ ಕಳೆದುಕೊಂಡಿರುವ ಘಟನೆ ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ. ಅವರ ಕುಟುಂಬದವರಲ್ಲಿ ಆತಂಕ ಶುರುವಾಗಿ, ತಕ್ಷಣವೇ ಎಲ್ಲರೂ ಹೈದರಾಬಾದ್ ಗೆ ತೆರಳಿದ್ದಾರೆ. ಅಷ್ಟಕ್ಕೂ ಆಗಿರೋದೇನು? ಶೋಭಿತಾ ಅವರು ಈ ಥರ ನಿರ್ಧಾರ ತೆಗೆದುಕೊಂಡಿದ್ದು ಯಾಕೆ? ಪೂರ್ತಿ ಡೀಟೇಲ್ಸ್ ತಿಳಿಸಿಕೊಡುತ್ತೇವೆ ನೋಡಿ..
ನಟಿ ಶೋಭಿತಾ ಶಿವಣ್ಣ ಅವರು ಎರಡು ವರ್ಷಗಳ ಹಿಂದಷ್ಟೇ ಮದುವೆ ಆಗಿದ್ದರು. ಇವರಿಗೆ ಮೂವರು ಅಕ್ಕಂದಿರು ಇದ್ದು, ಮನೆಯಲ್ಲಿ ಚಿಕ್ಕ ಮಗಳು ಶೋಭಿತಾ, ಇವರ ಅಕ್ಕನ ಗಂಡನ ರಿಲೇಶನ್ ಆಗಿರುವ ಸುಧೀರ್ ಅವರೊಡನೆ ಮದುವೆ ನಡೆದಿತ್ತು. ಸುಧೀರ್ ಅವರು ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಹೈದರಾಬಾದ್ ನಲ್ಲಿ ಕೆಲಸ ಮಾಡುತ್ತಿದ್ದರು, ಒಂದಷ್ಟು ತಿಂಗಳು ಹೈದರಾಬಾದ್ ನಲ್ಲಿ ಇದ್ದರೆ, ಇನ್ನಷ್ಟು ತಿಂಗಳು ಅಮೆರಿಕಾದಲ್ಲಿ ಇರುತ್ತಿದ್ದರು. ಮದುವೆ ನಂತರ ಇಬ್ಬರು ಕೂಡ ಹೈದರಾಬಾದ್ ನಲ್ಲಿಯೇ ಸೆಟ್ಲ್ ಆಗಿದ್ದರು. ಇನ್ನು ಶೋಭಿತಾ ಅವರು ಮದುವೆಯಾದ ನಂತರ ಯಾವುದೇ ಧಾರಾವಾಹಿಯಪ್ಪಿ ನಟಿಸಿರಲಿಲ್ಲ.

ಇತ್ತೀಚೆಗಷ್ಟೇ ತಮಗೆ ನಟನೆಗೆ ಮತ್ತೆ ಬರಬೇಕು ಅನ್ನಿಸುತ್ತಿದೆ ಎಂದು ತಮ್ಮ ಫ್ರೆಂಡ್ಸ್ ಜೊತೆಗೆ ಹೇಳಿಕೊಂಡಿದ್ದರಂತೆ. ಬೇಸರ ಮಾಡಿಕೊಂಡಿದ್ದರಂತೆ. ಆದರೆ ಇದ್ದಕ್ಕಿದ್ದ ಹಾಗೆ ಏನಾಗಿದೆ ಎಂದು ಗೊತ್ತಿಲ್ಲ, ನವೆಂಬರ್ 30ರಂದು ತಮ್ಮ ಮನೆಯಲ್ಲಿ ಗಂಡ ಕೂಡ ಇದ್ದಾಗಲೇ ಈ ರೀತಿ ಮಾಡಿಕೊಂಡಿದ್ದಾರೆ. ಶೋಭೀತಾ ಅವರ ಗಂಡ ಸುಧೀರ್ ಅವರು ಕೆಲಸ್ ಮಾಡುತ್ತಾ ಹಾಲ್ ನಲ್ಲೇ ನಿದ್ದೆ ಮಾಡಿದ್ದಾರೆ, ಮರುದಿನ ಅಂದರೆ ನಿನ್ನೆ ಬೆಳಗ್ಗೆ 8 ಗಂಟೆಗೆ ಎಚ್ಚರ ಆಗಿ, ರೂಮ್ ಡೋರ್ ಓಪನ್ ಮಾಡೋಕೆ ಟ್ರೈ ಮಾಡಿ, ಓಪನ್ ಮಾಡೋಕೆ ಆಗದೇ ಇದ್ದಾಗ, ಶೋಭಿತಾ ಅವರ ಅಣ್ಣನಿಗೆ ಫೋನ್ ಮಾಡಿದ್ದಾರೆ, ಅವರ ಅಣ್ಣ ಬಂದ ನಂತರ ಇಬ್ಬರು ಸಹ ರೂಮ್ ಡೋರ್ ಒಡೆದಿದ್ದಾರೆ.
ಆಗ ಶೋಭಿತಾ ಅವರ ಮೃ##ತ ಸ್ಥಿತಿಯಲ್ಲಿ ಕಾಣಿಸಿದ್ದು, ಇಬ್ಬರು ಶಾಕ್ ಆಗಿದ್ದಾರೆ. ತಕ್ಷಣಗೆ ಶೋಭಿತಾ ಅವರ ಅಣ್ಣ ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣವೇ ಪೊಲೀಸರು ಬಂದು ಎಲ್ಲಾ ವಿಷಯವನ್ನು ಪರಿಶೀಲಿಸಿದ್ದಾರೆ. ಶೋಭಿತಾ ಅವರ ಎರಡು ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಶೋಭಿತಾ ಅವರ ಕುಟುಂಬಕ್ಕೆ ಈ ಸುದ್ದಿ ಬಹಳ ನೋವು ನೀಡಿದ್ದು, ಈಗಾಗಲೇ ಎಲ್ಲರೂ ಹೈದರಾಬಾದ್ ಗೆ ತಲುಪಿದ್ದಾರೆ. ಮೂಲತಃ ಹಾಸನದವರಾದ ಶೋಭಿತಾ ಅವರು, ನಟಿ ಆಗಬೇಕು ಎನ್ನುವ ಕನಸು ಹೊತ್ತು, ಬೆಂಗಳೂರಿಗೆ ಬಂದರು. ಮೊದಲು ಪಿಜಿ ಅಲ್ಲಿದ್ದರು, ಬಳಿಕ ಹಲವು ಧಾರಾವಾಹಿಗಳಲ್ಲಿ ನಟಿಸಿದರು, ನಂತರ ನಂದಿನಿ ಲೇಔಟ್ ನಲ್ಲಿ ಅಮ್ಮನ ಜೊತೆಗಿದ್ದರು..

2023ರಲ್ಲಿ ಮದುವೆಯಾದ ನಂತರ ಗಂಡನ ಜೊತೆಗೆ ಹೈದರಾಬಾದ್ ಗೆ ಶಿಫ್ಟ್ ಆಗಿದ್ದರು. ಗಂಡ ಹೆಂಡತಿ ಇಬ್ಬರು ಕೂಡ ಬೆಂಗಳೂರಿಗೆ ಬಂದು ಸೆಟ್ಲ್ ಆಗಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದರು. ಹಾಗೆಯೇ ಇಬ್ಬರ ನಡುವೆ ಯಾವುದೇ ಮನಸ್ತಾಪ ಇರಲಿಲ್ಲ ಎಂದು ಶೋಭಿತಾ ಅವರ ಗಂಡ ತಿಳಿಸಿದ್ದು, ಒಂದು ವಾರದ ಹಿಂದೆಯಷ್ಟೇ ಇಬ್ಬರು ಕೂಡ ಗೋವಾಗೆ ಟ್ರಿಪ್ ಗೆ ಹೋಗಿ ಬಂದಿದ್ದಾರೆ ಎಂದು ತಿಳಿಸಿದ್ದಾರೆ. ಪರಿಸ್ಥಿತಿ ಈ ರೀತಿ ಇದ್ದಾಗ, ಎಲ್ಲವೂ ಚೆನ್ನಾಗಿಯೇ ಇದ್ದಾಗ ಶೋಭಿತಾ ಶಿವಣ್ಣ ಅವರು ಇಂಥ ಕಠಿಣ ನಿರ್ಧಾರ ತೆಗೆದುಕೊಂಡಿದ್ದು ಯಾಕೆ ಎನ್ನುವ ವಿಷಯ ಮಾತ್ರ ಇನ್ನೂ ಕೂಡ ತಿಳಿದುಬಂದಿಲ್ಲ.



