ಡಿಬಾಸ್ ದರ್ಶನ್ ಅವರ ವಿಚಾರದಲ್ಲಿ ಕಳೆದ ವರ್ಷ ಏನೆಲ್ಲಾ ನಡೆದು ಹೋಯಿತು ಎಂದು ನಮಗೆಲ್ಲ ಗೊತ್ತೇ ಇದೆ. ದರ್ಶನ್ ಅವರು ರೇಣುಕಾಸ್ವಾಮಿ ಕೇಸ್ನಲ್ಲಿ ಸಿಕ್ಕಿಹಾಕಿಕೊಂಡು, ಯಾರು ಊಹಿಸದ ಒಂದು ತಪ್ಪು ಮಾಡಿದರು. 5 ತಿಂಗಳ ಕಾಲ ಜೈಲುಗೆ ಹೋಗಿ ಬರಬೇಕಾಯಿತು. ಈಗ ದರ್ಶನ್ ಅವರು ಹೊರಗಡೆ ಬಂದು, ಸುಧಾರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯದಲ್ಲಿ ಸಹ ಸಮಸ್ಯೆ ಇದೆ, ಟ್ರೀಟ್ಮೆಂಟ್ ಪಡೆಯುತ್ತಾ, ಆರೋಗ್ಯದ ಕಡೆಗೆ ಮತ್ತು ಕುಟುಂಬದ ಕಡೆಗೆ ಹೆಚ್ಚು ಗಮನ ಕೊಟ್ಟಿದ್ದಾರೆ ನಟ ದರ್ಶನ್. ಇನ್ನು ಇತ್ತೀಚೆಗೆ ಒಂದು ವಿಡಿಯೋ ಪೋಸ್ಟ್ ಮಾಡಿ, ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದರು, ತಮ್ಮ ಸಿನಿಮಾಗಳ ಬಗ್ಗೆ ಸಹ ಅಪ್ಡೇಟ್ ಕೊಟ್ಟಿದ್ದರು. ದರ್ಶನ್ ಅವರು ಈಗ ಫ್ಯಾಮಿಲಿ ಜೊತೆಗಿದ್ದಾರೆ, ಬೇರೆಯವರ ಸಹವಾಸ ಬಿಟ್ಟಿದ್ದಾರೆ. ಇನ್ಮುಂದೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದೇ ಎಲ್ಲರು ಭಾವಿಸಿದರು. ಆದರೆ ಯಾಕೋ ಯಾವುದು ಸರಿ ಹೋದ ಹಾಗೆ ಕಾಣುತ್ತಿಲ್ಲ, ಈಗ ಹೊಸದಾಗಿ ಶುರುವಾಗಿದೆ ವಿಜಯಲಕ್ಷ್ಮೀ ಮತ್ತು ಪವಿತ್ರಾ ನಡುವಿನ ಜಗಳ.
ದರ್ಶನ್ ಅವರು ರೇಣುಕಾಸ್ವಾಮಿ ಕೇಸ್ ಗೆ ತಗಲಾಕಿಕೊಂಡಿದ್ದು ಅವರ ಬಹುಕಾಲದ ಗೆಳತಿ ಪವಿತ್ರಾ ಗೌಡ ಅವರಿಂದ ಎಂದು ಗೊತ್ತೇ ಇದೆ. ಇವರಿಬ್ಬರ ರಿಲೇಶನ್ಷಿಪ್ 10 ವರ್ಷಗಳಿಂದ ನಡೆಯುತ್ತಿದೆ. ಆದರೆ ಬೆಳಕಿಗೆ ಬಂದಿದ್ದು ಇತ್ತೀಚೆಗೆ. ದರ್ಶನ್ ಅವರ ಜೊತೆಗೆ ಬಹಳ ಕ್ಲೋಸ್ ಆಗಿರುವ ಒಂದಷ್ಟು ಫೋಟೋಗಳನ್ನು ಪವಿತ್ರಾ ಗೌಡ ಶೇರ್ ಮಾಡಿಕೊಂಡಾಗ ದೊಡ್ಡ ವಿವಾದವೇ ಆಗಿತ್ತು. ಕೆಲ ದಿನಗಳ ಬಳಿಕ ತಾವಿಬ್ಬರು 10 ವರ್ಷಗಳ ಕಾಲ ಜೊತೆಗೆ ಇರುವುದಾಗಿ ಹಾಕಿದ ಇನ್ನೊಂದು ಪೋಸ್ಟ್, ಅದಕ್ಕಿಂತ ದೊಡ್ಡ ವಿವಾದ ಸೃಷ್ಟಿಸಿತ್ತು. ಇದಕ್ಕೆ ವಿಜಯಲಕ್ಷ್ಮಿ ದರ್ಶನ್ ಸಹ ಪ್ರತಿಕ್ರಿಯೆ ನೀಡಿದ್ದರು. ಪವಿತ್ರಾ ಗೌಡ ಮೊದಲ ಗಂಡನ ಜೊತೆಗಿರುವ ಒಂದಷ್ಟು ಫೋಟೋಗಳನ್ನು ಶೇರ್ ಮಾಡಿ, ಇನ್ನೊಬ್ಬರ ಸಂಸಾರವನ್ನು ಹಾಳು ಮಾಡಬಾರದು ಎನ್ನುವ ಅರ್ಥದಲ್ಲಿ ಪೋಸ್ಟ್ ಮಾಡಿದ್ದರು ವಿಜಯಲಕ್ಷ್ಮೀ ದರ್ಶನ್. ಇದೆಲ್ಲವೂ ನೆಟ್ಟಿಗರ ಕಣ್ಣು ಕೆಂಪು ಮಾಡಿತ್ತು.
ಇನ್ನು ನೆಟ್ಟಿಗರು ಹಾಗೂ ದರ್ಶನ್ ಅವರ ಅಭಿಮಾನಿಗಳು ವಿಜಯಲಕ್ಷ್ಮೀ ದರ್ಶನ್ ಅವರ ಪರವಾಗಿಯೇ ನಿಂತಿದ್ದಾರೆ. ನಾವು ಅತ್ತಿಗೆ ಜೊತೆಗಿರುತ್ತೇವೆ ಅಂತಾರೆ ಡಿಬಾಸ್ ಫ್ಯಾನ್ಸ್. ಇನ್ನು ಪವಿತ್ರಾ ಗೌಡ ಇನ್ನೊಬ್ಬರ ಸಂಸಾರ ಹಾಳು ಮಾಡಿದ್ದಾರೆ ಎಂದು ಟ್ರೋಲ್ ಆಗಿದ್ದಿದೆ. ಇವರಿಬ್ಬರ ನಡುವೆ ಸೈಲೆಂಟ್ ವಾರ್ ನಡೆಯುತ್ತಾ ಇದ್ದಿದ್ದಂತೂ ಸತ್ಯ. ಒಬ್ಬರು ಏನಾದರೂ ಪೋಸ್ಟ್ ಮಾಡಿದರೆ, ಅದಕ್ಕೆ ಕೌಂಟರ್ ಪೋಸ್ಟ್ ಬರುತ್ತಲಿತ್ತು. ಇದೆಲ್ಲವೂ ನಡೆಯುತ್ತಿದ್ದ ವೇಳೆಯಲ್ಲೇ ರೇಣುಕಾಸ್ವಾಮಿ ಘಟನೆ ಸಹ ನಡೆದು ಹೋಯಿತು. ಅದರಿಂದ ಆದ ಅನಾಹುತ ಒಂದೆರಡಲ್ಲ.. ಈ ಘಟನೆ ಇಂದ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರು ಸಹ ಜೈ*ಲು ಸೇರುವ ಹಾಗಾಯಿತು. ದರ್ಶನ್ ಅವರಿಗೆ ಒಳಗಡೆ ಸಹ ನೆಮ್ಮದಿ ಸಿಗಲಿಲ್ಲ, ಮೊದಲಿಗೆ ಎಲ್ಲವೂ ಸರಿಯಾಗಿತ್ತು, ಆದರೆ ದರ್ಶನ್ ಅವರಿಗೆ ವಿಐಪಿ ಟ್ರೇಟ್ಮೆಂಟ್ ಸಿಗುತ್ತಿರೋದು ಯಾಕೆ ಎಂದು ಪ್ರಶ್ನೆ ಬಂದ ಬಳಿಕ ಎಲ್ಲವೂ ಬದಲಾಯಿತು.

ದರ್ಶನ್ ಅವರ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ಅಲ್ಲಿ ಒಂದೆರಡು ತಿಂಗಳ ಕಾಲ ಕಷ್ಟಪಟ್ಟು ಬಳಿಕ, ದರ್ಶನ್ ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಇದೆ, ಬೆನ್ನುನೋವಿನ ಸಮಸ್ಯೆ ಇದೆ ಸರ್ಜರಿ ಮಾಡಿಸಲೇಬೇಕು ಎನ್ನುವ ಕಾರಣಕ್ಕೆ ಅವರಿಗೆ ಜಾಮೀನು ಸಿಕ್ಕಿ ಹೊರಗಡೆ ಕರೆದುಕೊಂಡು ಬದಲಾಯಿತು. ಈ ಕಷ್ಟದ ಸಮಯದಲ್ಲಿ ದರ್ಶನ್ ಅವರ ಜೊತೆಗಿದ್ದು ಅವರನ್ನು ಇದೆಲ್ಲದರಿಂದ ಪಾರು ಮಾಡಿ, ಕರೆದುಕೊಂಡು ಬಂದಿದ್ದು ಅವರ ಪತ್ನಿ ವಿಜಯಲಕ್ಷ್ಮೀ ಅವರು. ಏನೇ ಮಾಡಿದರೂ ಕೊನೆಗೆ ಜೊತೆಗಿದ್ದು ಕಾಪಾಡಿದ್ದು ಹೆಂಡಿತಿ. ದರ್ಶನ್ ಹಾಗೂ ಪವಿತ್ರ ಇಬ್ಬರು ಹೊರಗಡೆ ಬಂದ ನಂತರ ಎಲ್ಲವೂ ಬದಲಾಗಿದೆ. ಅವರಿಬ್ಬರು ಮತ್ತೆ ಭೇಟಿ ಮಾಡಿಲ್ಲ. ಡಿಬಾಸ್ ಫ್ಯಾಮಿಲಿಗೆ ಸಮಯ ಕೊಡುತ್ತಿದ್ದಾರೆ. ಮನೆಯವರ ಜೊತೆಗೆ ಹಬ್ಬದ ಆಚರಣೆ ಮಾಡಿದ್ದಾರೆ..
ಮೈಸೂರಿನಲ್ಲಿ ಹೆಚ್ಚಾಗಿ, ಆಗಾಗ ಬೆಂಗಳೂರಿನಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ನಟಿ ರಕ್ಷಿತಾ ಅವರ ತಮ್ಮನ ರಿಸೆಪ್ಶನ್ ನಲ್ಲಿ ಫ್ಯಾಮಿಲಿ ಜೊತೆ ಕಾಣಿಸಿಕೊಂಡಿದ್ದರು. ಇನ್ನು ದೇವಸ್ಥಾನಗಳಿಗೆ ಸಹ ಆಗಾಗ ಭೇಟಿ ನೀಡುತ್ತಾ ಇರುತ್ತಾರೆ. ಹೀಗೆ ದರ್ಶನ್ ಅವರು ಪವಿತ್ರ ಗೌಡ ಅವರನ್ನು ಬಿಟ್ಟು ತಮ್ಮ ಲೈಫ್ ಅನ್ನು ತಾವು ನೋಡಿಕೊಂಡು ಮುಂದೆ ಸಾಗುತ್ತಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಯಾಕೋ ಹೆಣ್ಣುಮಕ್ಕಳ ವಿಷಯದಲ್ಲಿ ಇದು ಕಾಣುತ್ತಿಲ್ಲ, ವಿಜಯಲಕ್ಷ್ಮೀ ಹಾಗೂ ಪವಿತ್ರಾ ನಡುವಿನ ಕೋಲ್ಡ್ ವಾರ್ ಮಾತ್ರ ನಿಲ್ಲದೇ ನಡೆಯುತ್ತಿರುವ ಹಾಗೆ ಕಾಣುತ್ತಿದೆ. ಅದಕ್ಕೆ ಸಂಬಂಧಿಸಿದ ಹಾಗೆ ಇಬ್ಬರು ಉಟ್ಟಿರುವ ಸೀರೆಗಳ ಫೋಟೋ ವೈರಲ್ ಆಗಿದ್ದು, ಇವರಿಬ್ಬರ ನಡುವೆ ಸೀರೆ ಸಮರ ಶುರುವಾದ ಹಾಗೆ ಕಾಣುತ್ತಿದೆ. ಹಾಗಿದ್ದಲ್ಲಿ ನಿಜಕ್ಕೂ ಆಗಿರೋದೇನು? ಫುಲ್ ಡೀಟೇಲ್ಸ್ ಇಲ್ಲಿದೆ ನೋಡಿ..
ಪವಿತ್ರಾ ಗೌಡ ಹಾಗೂ ವಿಜಯಲಕ್ಷ್ಮೀ ದರ್ಶನ್ ಇಬ್ಬರು ಒಂದೇ ಬಣ್ಣದ ಸೀರೆ ಧರಿಸಿದ್ದಾರೆ. ಇದರಿಂದ ಭಾರಿ ವಿವಾದ ವ್ಯಕ್ತವಾಗಿದೆ. ದರ್ಶನ್ ಅವರೇನೋ ಇದರಿಂದ ಹೊರಗಡೆ ಬಂದಿದ್ದು ಆಯ್ತು, ಆದರೆ ಸೀರೆ ಜಗಳ ಮುಗಿಯಲೇ ಇಲ್ಲವಲ್ಲ ಅಂತಿದ್ದಾರೆ ನೆಟ್ಟಿಗರು. ಈ ಸೀರೆ ಜಗಳ ಏನು ಎಂದರೆ, ಪವಿತ್ರಾ ಗೌಡ ಇತ್ತೀಚೆಗೆ ನೀಲಿ ಬಣ್ಣದ ಸೀರೆ ಉಟ್ಟುಕೊಂಡು, ಒಂದು ವಿಡಿಯೋ ಹಾಗೂ ಕೆಲವು ಫೋಟೋಸ್ ಗಳನ್ನು ಶೇರ್ ಮಾಡಿಕೊಂಡಿದ್ದರು. ತಮ್ಮ ಬ್ರಾಂಡ್ ಮೂಲಕ ಹೊಸ ಕಲೆಕ್ಷನ್ ಗಳು ಬರುವುದಾಗಿ ತಿಳಿಸಿದ್ದಾರೆ. ಈ ವಿಷಯ ಒಂದು ಕಡೆಯಾದರೆ, ವಿಜಯಲಕ್ಷ್ಮೀ ಅವರು ಸಹ ಇದೇ ಬಣ್ಣದ ಸೀರೆ ಧರಿಸಿದ್ದಾರೆ. ರಕ್ಷಿತಾ ಅವರ ತಮ್ಮ ರಾಣಾ ಅವರ ರಿಸೆಪ್ಶನ್ ನಲ್ಲಿ ವಿಜಯಲಕ್ಷ್ಮಿ ಅವರು ಅದೇ ಬಣ್ಣದ ಸೀರೆ ಧರಿಸಿದ್ದು, ಹೆಂಗಸರ ಸೀರೆ ವಾರ್ ಶುರುವಾಗಿದೆ ಅಂತಿದ್ದಾರೆ ಫ್ಯಾನ್ಸ್. ಇಬ್ಬರ ನಡುವೆ ಇರುವ ಕಾಂಪಿಟೇಶನ್ ಇಂದ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ..
ಈ ಕೇಸ್ ವಿಚಾರಣೆ ನಡೆಯುತ್ತಿದೆ, ದರ್ಶನ್ ಅವರು ಇದೆಲ್ಲದರಿಂದ ದೂರ ಉಳಿದಿರುವ ಹಾಗೆ ಕಾಣುತ್ತಿದೆ. ಆದರೆ ಹೆಂಗಸರ ನಡುವೆ ಆಗುತ್ತಿರುವುದು ನೆಟ್ಟಿಗರಿಗೆ ನಗು ತರಿಸಿದೆ. ಯಾಕೋ ದರ್ಶನ್ ಅವರು ಇದರಿಂದ ಹೊರಗಡೆ ಬಂದರು, ಹೆಂಗಸರು ಬಂದ ಹಾಗೆ ಕಾಣುತ್ತಿಲ್ಲ. ಈ ವಾರ ಯಾವಾಗ ನಿಲ್ಲುತ್ತದೆ ಎಂದು ಕಾದು ನೋಡಬೇಕಿದೆ. ಇನ್ನು ದರ್ಶನ್ ಅವರು ಮೊನ್ನೆಯಷ್ಟೇ ಒಂದು ವಿಡಿಯೋ ಪೋಸ್ಟ್ ಮಾಡಿ, ಈ ವರ್ಷ ತಮ್ಮ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳೋದಕ್ಕೆ ಸಾಧ್ಯವಿಲ್ಲ ಎಂದು ಹೇಳಿ, ಎಲ್ಲರ ಬಳಿ ಕ್ಷಮೆ ಕೇಳಿದ್ದಾರೆ. ಹೆಲ್ತ್ ಇಷ್ಯು ಇರುವ ಕಾರಣ ಈ ವರ್ಷ ಎಲ್ಲರ್ಸ್ ಜೊತೆಗೆ ಬರ್ತ್ ಡೇ ಸೆಲೆಬ್ರೇಟ್ ಮಾಡೋಕೆ ಸಾಧ್ಯವಿಲ್ಲ, ಆದಷ್ಟು ಬೇಗ ಎಲ್ಲರನ್ನು ಭೇಟಿ ಮಾಡ್ತೀನಿ, ಸ್ವಲ್ಪ ಸಮಯಾವಕಾಶ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ ಡಿಬಾಸ್ ದರ್ಶನ್.



