ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಾಗಿದೆ 3ವಾರಗಳು ಕಳೆದು, ಈಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಮೊದಲ 3 ವಾರಗಳು ಕೂಡ ಒಂದಲ್ಲಾ ಒಂದು ರೀತಿಗಳಲ್ಲಿ ಸುದ್ದಿಯಾಗುತ್ತಲೇ ಇದೆ ಬಿಗ್ ಬಾಸ್ ಮನೆ. ಕಳೆದ ವಾರ ನಡೆದ ಕೆಲವು ಘಟನೆಗಳಿಂದ ಲಾಯರ್ ಜಗದೀಶ್ ಹಾಗೂ ಕಿರುತೆರೆ ನಟ ರಂಜಿತ್ ಇಬ್ಬರು ಕೂಡ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದು, ಮನೆಯೊಳಗೆ ಇರುವವರಿಗೆ ಮಾತ್ರವಲ್ಲದೆ, ಹೊರಗಿರುವವರಿಗೆ ಕೂಡ ದೊಡ್ಡ ಶಾಕ್ ನೀಡಿದೆ ಎಂದರೆ ತಪ್ಪಲ್ಲ..
ಮನೆಯಿಂದ ಹೊರಗೆ ಲಾಯರ್ ಜಗದೀಶ್ ಅವರಿಗೆ ಒಳ್ಳೆಯ ಅಭಿಮಾನಿ ಬಳಗ ಮತ್ತು ಜನರ ಸಪೋರ್ಟ್ ಸೃಷ್ಟಿಯಾಗಿದೆ. ಅವರನ್ನು ಮತ್ತೊಮ್ಮೆ ಬಿಗ್ ಬಾಸ್ ಮನೆಯೊಳಗೆ ಕಳಿಸಬೇಕು ಎನ್ನುವ ಮಾತುಗಳು ಕೂಡ ಕೇಳಿಬರುತ್ತಿದೆ. ಆದರೆ ಭಾನುವಾರದ ಸಂಚಿಕೆಯಲ್ಲಿ ಸುದೀಪ್ ಅವರೇ ಹೇಳಿದ ಹಾಗೆ, ಹೋಗಿರುವವರ ಬಗ್ಗೆ ಮಾತನಾಡಿ ಯಾವುದೇ ಪ್ರಯೋಜನವಿಲ್ಲ. ಅವರು ಮತ್ತೆ ಮನೆಗೆ ವಾಪಸ್ ಬರೋದಿಲ್ಲ.. ಈ ವಿಚಾರವಂತು ಖಚಿತವಾಗಿದೆ. ಪ್ರಸ್ತುತ ಮನೆಯೊಳಗೆ ಇರುವ ಸ್ಪರ್ಧಿಗಳು ಜನರಿಗೆ ಇಷ್ಟ ಆಗುವ ತರವೇನು ಇಲ್ಲ.
ಇನ್ನು ನಿನ್ನೆಯ ಸಂಚಿಕೆಯಲ್ಲಿ ಜೀಕನ್ನಡ ವಾಹಿನಿಯ ಸರಿಗಮಪ ಶೋ ಮೂಲಕ ಬಹಳ ಫೇಮಸ್ ಆಗಿದ್ದ ಹನುಮಂತ ಬಿಗ್ ಬಾಸ್ ಮನೆಗೆ ಮೊದಲ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಒಳ ಬಂದಿದ್ದಾರೆ. ಹನುಮಂತ ಅಪ್ಪಟ ಹಳ್ಳಿ ಹುಡುಗ, ಸರಳವಾಗಿ ಜೀವನ ಸಾಗಿಸುತ್ತಿದ್ದ ಈ ಹುಡುಗನ ಬದುಕಿಗೆ ಬಹಳ ದೊಡ್ಡ ತಿರುವು ತಂದುಕೊಟ್ಟಿದ್ದು ಜೀಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮ, ಹಾಡಿನ ಮೂಲಕ ಕರ್ನಾಟಕದ ಮನೆಮಾತಾಗಿದ್ದ ಹನುಮಂತ ಇದೀಗ ಬಿಗ್ ಬಾಸ್ ಮನೆಗೆ ಬಂದಿರುವುದು ಎಲ್ಲರಿಗೂ ಆಶ್ಚರ್ಯವಾಗಿದೆ..
ಆದರೆ ಬಿಗ್ ಮನೆಗೆ ಬಂದ ಮೊದಲ ದಿನವೇ ಹನುಮಂತನಿಗೆ ಸಾಕು ಸಾಕಾಗಿ ಹೋಗಿದೆ. ಕಲರ್ಸ್ ಕನ್ನಡ ವಾಹಿನಿ ಶೇರ್ ಮಾಡಿರುವ ಪ್ರೊಮೋದಲ್ಲಿ ಹನುಮಂತ ಅವರಿಗೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದು, ಮನೆಯವರನ್ನು 1 ರಿಂದ 14ರ ವರೆಗು ಕ್ರಮಾಂಕದಲ್ಲಿ ನಿಲ್ಲಿಸಬೇಕು ಎಂದು ಹೇಳಲಾಗಿದೆ. ಭವ್ಯ ಅವರಿಗೆ ನಂಬರ್ 7 ಕೊಟ್ಟಿದ್ದಾರೆ ಹನುಮಂತ. ಇದರಿಂದ ಆಕೆ ಹನುಮಂತನನ್ನು ಪ್ರಶ್ನೆ ಮಾಡಿದ್ದಾಳೆ.. ಹಾಗೆಯೇ ಬೇರೆ ಸ್ಪರ್ಧಿಗಳು ಕೂಡ ತಮಗೆ ಆ ನಂಬರ್ ಕೊಟ್ಟಿದ್ದು ಯಾಕೆ ಎಂದು ಹನುಮಂತನ ಜೊತೆಗೆ ಜಗಳವಾಡೋಕೆ ಹೋಗಿದ್ದಾರೆ.
ಮನೆಯವರೆಲ್ಲರೂ ತನ್ನ ವಿರುದ್ಧ ತಿರುಗಿಬಿದ್ದಿದ್ದಾರೆ ಎಂದು ಹನುಮಂತನಿಗೆ ಅನ್ನಿಸಿದ್ದು, ಆತನಿಗೆ ಮೊದಲ ದಿನವೇ ಸಾಕಾಗಿ ಹೋಗಿದೆ. ನೀವೆಲ್ಲಾ ಮೊದಲ ದಿನವೆ ಈ ಥರ ಜಗಳ ಆಡ್ತೀರಾ ಅಂತ ಗೊತ್ತಿದ್ರೆ ನಾನು ಬರ್ತಾನೆ ಇರ್ಲಿಲ್ಲ ಎಂದು ಬೇಸರಗೊಂಡಿದ್ದಾನೆ ಹನುಮಂತ. ಮುಂದೆ ಬಿಗ್ ಬಾಸ್ ಮನೆಯೊಳಗೆ ಹನುಮಂತನ ಜರ್ನಿ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.



