ಇತ್ತೀಚೆಗೆ ಸುದೀಪ್ ಹೇಳಿಕೆ ಬೆನ್ನಲ್ಲೇ ದಾವಣಗೆರೆಯಲ್ಲಿ ವಿಜಯಲಕ್ಷ್ಮಿ ದರ್ಶನ್ ನೀಡಿದ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸುದೀಪ್ ರವರಿಗೆ ಟಾಂಗ್ ಕೊಟ್ಟಿದ್ದಾರೆ ಎಂಬ ಅರ್ಥದಲ್ಲಿ ಊಹಾಪೋಹಗಳು ಶುರುವಾಗಿತ್ತು. ಇದರಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ವಾದ ವಿವಾದ ಗಳು ಕೆಸರೆರಚಾಟ ಶುರುವಾಗಿತ್ತು. ಇಂತಹ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ವಿಜಯಲಕ್ಷ್ಮಿ ದರ್ಶನ್ ರವರಿಗೆ ಕೆಟ್ಟ ಪದಗಳನ್ನು ಬಳಸಿ ಬೈದಿದ್ದರು ಜೊತೆಗೆ ಅಶ್ಲೀಲ ಪದಗಳಿಂದ ಟ್ರೋಲ್ ಮಾಡಿದರು. ಹೀಗಾಗಿ ವಿಜಯಲಕ್ಷ್ಮಿ ದರ್ಶನ್ ತಮಗೆ ಕೆಟ್ಟ ಮೆಸೇಜ್ ಮಾಡಿದವರ ವಿರುದ್ಧ ದೂರು ನೀಡಿದರು. ತಮ್ಮ ಇನ್ಸ್ಟಾಗ್ರಾಮ್ ಫೇಸ್ಬುಕ್ ಮತ್ತು ಟ್ವಿಟ್ಟರ್ ಖಾತೆಗೆ ಕಳಿಸಿದ್ದ ಅಶ್ಲೀಲ ಮೆಸೇಜುಗಳ ಸ್ಕ್ರೀನ್ ಶಾಟ್ ಅನ್ನು ಪೊಲೀಸರಿಗೆ ನೀಡಿದ್ದರು.

ಡಿಸೆಂಬರ್ 24ರಂದು ಪೊಲೀಸ್ ಆಯುಕ್ತರಿಗೆ ವಿಜಯಲಕ್ಷ್ಮಿ ರವರು ದೂರು ನೀಡುತ್ತಿದ್ದಂತೆ ಎಚ್ಚೆತ್ತ ಕಿಡಿಗೆಡಿಗಳು ತಮ್ಮ ಖಾತೆಗಳಲ್ಲಿದಂತ ಅಶ್ಲೀಲ ಮೆಸೇಜ್ ಗಳನ್ನು ಡಿಲೀಟ್ ಮಾಡಿದ್ದರು. ಇದೀಗ ಪೊಲೀಸರು ಐಪಿ ಅಡ್ರೆಸ್ ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಚಿಕ್ಕಬಾಣವಾರದ ಆಟೋ ಡ್ರೈವರ್ ಚಂದ್ರು ಹಾಗೂ ದಾವಣಗೆರೆ ಮೂಲದ ಇಂಜಿನಿಯರ್ ನಿತಿನ್ ಎಂಬವರನ್ನು ಬಂಧಿಸಿದ್ದಾರೆ. ಪೊಲೀಸರು ಮತ್ತಷ್ಟು ಆರೋಪಿಗಳನ್ನು ಬಂಧಿಸಲು ವಿಚಾರಣೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ ನಟ ಸುದೀಪ್ ತಮ್ಮ ಮಾರ್ಕ್ ಚಿತ್ರದ ವಿರುದ್ಧ ಒಂದು ಪಡೆ ಷಡ್ಯಂತ್ರ ರೂಪಿಸುತ್ತಿದೆ ಎಂದಿದ್ದರು. ಅವರ ವಿರುದ್ಧ ಯುದ್ಧ ಮಾಡುತ್ತೇವೆ ಎಂಬುದಾಗಿ ಸವಾಲು ಹಾಕಿದ್ದರು. ಸುದೀಪ್ ಹೇಳಿಕೆ ಬೆನ್ನಲ್ಲೇ ವಿಜಯಲಕ್ಷ್ಮಿ ರವರಿಗೆ ಸಂದೇಶಗಳು ಬರಲು ಶುರುವಾಗಿತ್ತು.
ಕೆಟ್ಟದಾಗಿ ಪೋಸ್ಟ್ ಕಾಮೆಂಟ್ ಮಾಡಿದ್ದ 15 ಸೋಶಿಯಲ್ ಮೀಡಿಯಾ ಖಾತೆ, 150 ಪೋಸ್ಟ್ ಗಳ ವಿರುದ್ಧ ವಿಜಯಲಕ್ಷ್ಮಿ ದೂರು ನೀಡಿದ್ದರು. ಈ ಹಿಂದೆ ದರ್ಶನ್ ಅಭಿಮಾನಿಗಳು ಕೆಟ್ಟ ಮೆಸೇಜ್ ಗಳನ್ನು ರವಾನಿಸಿದ್ದಾರೆ ಎಂದು ನಟಿ ರಮ್ಯಾ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟ ಕೆಲವರನ್ನು ಬಂಧಿಸಿ ವಿಚಾರಣೆ ನಡೆಸಿ ಪೊಲೀಸರು ಬುದ್ದಿ ಕಲಿಸಿದ್ದರು. ಈ ವಿಚಾರವನ್ನು ಪ್ರಸ್ತಾಪಿಸಿ ವಿಜಯಲಕ್ಷ್ಮಿ ಪೊಲೀಸರು ನಾನು ದೂರು ನೀಡಿ ಒಂದು ವಾರವಾದರೂ ನನ್ನ ದೂರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಪೊಲೀಸರನ್ನ ಆರೋಪಿಸಿದ್ದಾರೆ ಅದರ ಬೆನ್ನಲ್ಲೆ ಪೊಲೀಸರು ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೆಲವು ಸೈಬರ್ ಅಥವಾ ತಾಂತ್ರಿಕ ಪ್ರಕರಣಗಳಿಗೆ ತಕ್ಷಣ ಸುಳಿವು ಸಿಗುವುದಿಲ್ಲ ಸಮಯಾವಕಾಶ ಬೇಕಾಗುತ್ತದೆ ಅಷ್ಟೇ ಹೊರತು ಬೇರೆ ಬೇರೆ ಯಾವುದೇ ರೀತಿಯ ಉದ್ದೇಶವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.



