ನವಗ್ರಹ ಸಿನಿಮಾ ಮೂಲಕ ಕಲಾವಿದರ ಪರಿಚಯ ಜನರಿಗೆ ಉಂಟಾಯಿತು. ನಟ ದರ್ಶನ್ ಅವರು ಮತ್ತು ಅವರ ತಮ್ಮ ತೂಗುದೀಪ ದಿನಕರ್ ಅವರು ಹೊಸ ರೀತಿಯ ಪ್ಲಾನ್ ಮಾಡಿ, ಒಂದು ಹೊಸ ಬಗೆಯ ಸಿನೆಮಾವನ್ನೇ ತಯಾರಿಸಿದರು. ಈ ಸಿನೆಮಾದಲ್ಲಿ ಕನ್ನಡ ಚಿತ್ರರಂಗದ ದಿಗ್ಗಜ ಖಳನಟರ ಮಕ್ಕಳನ್ನು ಹಾಕಿಕೊಂಡು ಸಿನಿಮಾ ಮಾಡಲಾಯಿತು. ಈ ಸಿನೆಮಾದಲ್ಲಿ ತೂಗುದೀಪ ಶ್ರೀನಿವಾಸ್ ಅವರ ಮಕ್ಕಳಾದ ದರ್ಶನ್ ಹಾಗೂ ದಿನಕರ್, ಸುಧೀರ್ ಅವರ ಮಗ ತರುಣ್ ಸುಧೀರ್, ಸುಂದರ್ ಕೃಷ್ಣ ಅರಸ್ ಅವರ ಮಗ ನಾಗೇಂದ್ರ ಅರಸ್, ದಿನೇಶ್ ಅವರ ಮಗ ಗಿರಿ ದಿನೇಶ್, ಟೈಗರ್ ಪ್ರಭಾಕರ್ ಅವರ ಮಗ ವಿನೋದ್ ಪ್ರಭಾಕರ್, ಗೆಂಡೆತಿಮ್ಮ ಲೋಕೇಶ್ ಅವರ ಮಗ ಸೃಜನ್ ಲೋಕೇಶ್, ಕೀರ್ತಿ ರಾಜ್ ಅವರ ಮಗ ಧರ್ಮ ಕೀರ್ತಿ ರಾಜ್ ಇವರೆಲ್ಲರ ಜೊತೆಗೆ ಶರ್ಮಿಳಾ ಮಾಂಡ್ರೆ ಹಾಗೂ ವರ್ಷ. ಗಿರಿ ದಿನೇಶ್ ವಿಧಿವಿಶ್ರಾಂತಿ ಹೊಂದಿದ್ದಾರೆ, ಈ ಚಿತ್ರದಲ್ಲಿ ಅವರು ತಮ್ಮ ಹಿರಿದಾರಿಗಳ ಬಲವಾಗಿ ಪರಿಣಮಿಸಿದರು.
ಈ ಎಲ್ಲಾ ಕಲಾವಿದರು ಜೊತೆಯಾಗಿ ನಟಿಸಿದ ನವಗ್ರಹ ಸಿನಿಮಾ ಸೂಪರ್ ಸಕ್ಸಸ್ ಕಂಡಿತು. ಇದೊಂದು ಹೊಸ ಬಗೆಯ ಪ್ರಯತ್ನ ಎನ್ನಿಸಿಕೊಂಡಿತು, ಈ ಎಲ್ಲಾ ಕಲಾವಿದರಿಗೂ ಒಳ್ಳೆಯ ಅವಕಾಶಗಳನ್ನು ತಂದುಕೊಟ್ಟಿತು. ಇದರಿಂದ ಕೆಲವರು ಬದುಕು ಕಟ್ಟಿಕೊಂಡಿದ್ದಾರೆ ಎಂದರು ತಪ್ಪಲ್ಲ. ಆದರೆ ನವಗ್ರಹ ಸಿನಿಮಾದಲ್ಲಿ ನಟಿಸಿದ್ದ ಖ್ಯಾತ ಹಿರಿಯನಟ ದಿನೇಶ್ ಅವರ ಮಗ ಗಿರಿ ದಿನೇಶ್ ಅವರು ಮೂರ್ನಾಲ್ಕು ದಿನಗಳ ಹಿಂದೆ ಫೆಬ್ರವರಿ 7ರಂದು ವಿಧಿವಶರಾದರು. ಇವರಿಗೆ ಈಗಷ್ಟೇ 45 ವರ್ಷ, ಇನ್ನು ಗಿರಿ ದಿನೇಶ್ ಅವರಿಗೆ ಮದುವೆ ಕೂಡ ಆಗಿಲಿಲ್ಲ. ಇಷ್ಟು ಚಿಕ್ಕ ವಯಸ್ಸಿಗೆ ಗಿರಿ ದಿನೇಶ್ ಅವರಿಗೆ ಈ ರೀತಿ ಆಗಿದ್ದೇಕೆ ಎನ್ನುವ ಪ್ರಶ್ನೆ ಶುರುವಾಗಿದೆ. ಈ ವಿಷಯದ ಬಗ್ಗೆ ನಾಗೇಂದ್ರ ಅರಸ್ ಅವರು ಒಂದು ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಅಂದು ಗಿರಿ ದಿನೇಶ್ ಅವರು ಮನೆಯಲ್ಲಿ ಇದ್ದರಂತೆ. ಇದ್ದಕ್ಕಿದ್ದಂತೆ ಗಿರಿ ದಿನೇಶ್ ಅವರು ಕುಸಿದು ಬಿದ್ದಿದ್ದು, ಅವರಿಗೆ ಏನಾಗಿದೆ ಎಂದು ತಿಳಿಯಲು, ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿಯ ಮಧ್ಯದಲ್ಲೇ ಗಿರಿ ದಿನೇಶ್ ಅವರು ವಿಧಿವಶವಾಗಿದ್ದಾರೆ. ಇವರಿಗೆ ಇನ್ನು ಮದುವೆ ಆಗಿರಲ್ಲ. ಗಿರಿ ದಿನೇಶ್ ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಆಗಿತ್ತು ಎನ್ನಲಾಗಿದ್ದು, ಆ ಕಾರಣಕ್ಕೆ ಅವರು ಇಷ್ಟು ಬೇಗ ವಿಧಿವಶರಾಗಿರಬಹುದು ಎನ್ನಲಾಗಿದೆ. ಇಷ್ಟು ದಿನ ಎಲ್ಲಿದ್ದರು, ಇವರಿಗೆ ಆಗಿದ್ದಾದರು ಏನು ಎಂದು ಪೂರ್ತಿ ವಿಷಯ ತಿಳಿಯುವುದಕ್ಕೆ ಅವರ ಸ್ನೇಹಿತರು ಮತ್ತು ನವಗ್ರಹ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದ ನಾಗೇಂದ್ರ ಆರಸ್ ಅವರು ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ನಾಗೇಂದ್ರ ಅರಸ್ ಅವರು ಹೇಳಿರುವುದು ಏನು ಎಂದರೆ, ಗಿರಿ ಅವರು ಚಿತ್ರರಂಗದಿಂದ ದೂರವೇ ಉಳಿದಿದ್ದರಂತೆ. ನವಗ್ರಹ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದ ಕಾರಣ ನಾಗೇಂದ್ರ ಅರಸ್ ಅವರು ಕೆಲವು ಸಿನಿಮಾಗಳಲ್ಲಿ ನಟಿಸುವುದಕ್ಕೆ ಹೇಳಿದ್ದರಂತೆ. ಇನ್ನು ದರ್ಶನ್ ಅವರು ಸಹ ಅದೇ ಮಾತನ್ನು ಹೇಳಿ, ಕೆಲವು ಸಿನಿಮಾಗಳ ಕೊಡಿಸಿದ್ದರಂತೆ. ಆದರೆ ಗಿರಿ ದಿನೇಶ್ ಅವರು ಯಾವುದಕ್ಕೂ ಹೋಗಿಲ್ಲ ಎನ್ನಲಾಗಿದೆ. ಆ ವ್ಯಕ್ತಿ ಸ್ವಲ್ಲ ಒಂಥರಾ ಎಂದು ಹೇಳುತ್ತಾರೆ ನಾಗೇಂದ್ರ ಅರಸ್. ಸಿನಿಮಾಗಳಲ್ಲಿ ನಟಿಸುವುದಕ್ಕೆ ಅವಕಾಶ ಕೊಡಿಸಿದರು ನಟಿಸಲಿಲ್ಲ. ಎಲ್ಲಿ ಹೋಗಿದ್ದರು ಗೊತ್ತಿಲ್ಲ, ಯಾರ ಜೊತೆಗೂ ಹೆಚ್ಚು ಮಾತನಾಡುತ್ತಿರಲಿಲ್ಲ ಎಂದಿದ್ದಾರೆ ನಾಗೇಂದ್ರ ಅರಸ್..ಕೆಲ ದಿನಗಳ ಹಿಂದೆ ರೋಡ್ ನಲ್ಲಿ ಸಿಕ್ಕಿದರಂತೆ.

ಆಗ ಮನೆಗೆ ಬಾ ಎಂದು ಕರೆದಾಗ, ನಾನು ಇನ್ಯಾರಿಗೋ ಕಾಯ್ತಿದ್ದೀನಿ ಬರ್ತೀನಿ ಎಂದು ಹೇಳಿದರಂತೆ. ಅದೇ ಕೊನೆ ಅದಾದ ನಂತರ ಸಿಕ್ಕಿಲ್ಲ ಎಂದಿದ್ದಾರೆ ನಾಗೇಂದ್ರ ಅರಸ್. ಇನ್ನು ನವಗ್ರಹ ಸಿನಿಮಾ ರೀರಿಲೀಸ್ ವೇಳೆ ದಿನಕರ್ ಅವರು ಪ್ರೊಮೋಷನ್ ಗೆ ಬರಬೇಕು ಎಂದು ಕೇಳಿಕೊಂಡಾಗ ಬರ್ತೀನಿ ಎಂದು ಹೇಳಿ, ನಂತರ ನಾಗೇಂದ್ರ ಅರಸ್ ಅವರಿಗೆ ಕಾಲ್ ಮಾಡಿ, ಟೈಫಾಯ್ಡ್ ಆಗಿದೆ, ಟ್ರೀಟ್ಮೆಂಟ್ ತಗೋತಿದ್ದೀನಿ ಬರೋದಕ್ಕೆ ಆಗೋದಿಲ್ಲ ಅಂದಿದ್ದರಂತೆ. ಮಾತನಾಡಿದ್ದು ಅದೇ ಕೊನೆ ಅಂದಿದ್ದಾರೆ ನಾಗೇಂದ್ರ ಅರಸ್. ಒಟ್ಟಿನಲ್ಲಿ ಬದುಕಿ ಬಾಳಬೇಕಿದ್ದ ವ್ಯಕ್ತಿಯೊಬ್ಬರು ವಿಧಿವಶರಾಗಿದ್ದು, ನಿಜಕ್ಕೂ ಬಹಳ ಬೇಸರದ ವಿಷಯ.



