ಬಿಗ್ ಬಾಸ್ ಸೀಸನ್ 12 ರ ಮೊದಲ ಫಿನಾಲೆಯ ನಂತರ ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ರಘು, ರಿಶಾ, ಮತ್ತು ಸೂರಜ್ ಎಂಬ ಮೂರು ಜನ ಸ್ಪರ್ಧಿಗಳು ಹೊಸ ಮನೆಗೆ ಎಂಟರ್ ಆಗಿದ್ದಾರೆ. ಬೆಳ್ಳಂ ಬೆಳಗೆ ಎಂಟ್ರಿ ಕೊಟ್ಟ ರಘು ಮಲಗಿರುವ ಸ್ಪರ್ಧಿಗಳನ್ನು ಎಬ್ಬಿಸಿ ತಣ್ಣೀರು ಸುರಿದು ಎಚ್ಚರಿಸಿದರೆ, ರಿಶಾ ಗೌಡ ತನ್ನದೇ ಆದ ಸ್ಟೈಲ್ ಲುಕ್ ನಲ್ಲಿ ಎಂಟ್ರಿಕೊಟ್ಟು ಸ್ಪರ್ಧಿಗಳ ಭಾವಚಿತ್ರಗಳನ್ನು ಕಾರಣಗಳನ್ನು ಹೇಳುವ ಮೂಲಕ ಹೊಡೆದು ಹಾಕಿದ್ದಾರೆ. ಹಾಗೆ ಮೂರನೇ ಸ್ಪರ್ದಿ ಸೂರತ್ ಸಿಂಗ್ ರೊಮ್ಯಾಂಟಿಕ್ ಆಗಿ ಸ್ವಿಮ್ಮಿಂಗ್ ಪೂಲ್ ನಿಂದ ಎಂಟ್ರಿಕೊಟ್ಟು ಬಿಗ್ ಬಾಸ್ ಮನೆಯ ಮಹಿಳಾ ಸ್ಪರ್ಧಿಗಳ ಹೃದಯಕ್ಕೆ ಹಾರ್ಟ್ ಬ್ರೇಕ್ ಆಗುವಂತೆ ಮಾಡಿದ್ದಾರೆ. ಎಷ್ಟು ದಿನ ತನ್ನದೇ ಆದ ರೂಲ್ಸ್ ಗಳನ್ನ ಹಾಕಿಕೊಂಡು ಮೆರೆಯುತ್ತಿದ್ದ ಕೆಲವು ಸ್ಪರ್ಧಿಗಳನ್ನು ವೈಲ್ಡ್ ಕಾರ್ಡ್ ಸ್ಪರ್ದಿ ರಘು ತರಾಟೆಗೆ ತೆಗೆದುಕೊಂಡು ನೀರಿಳಿಸಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಶೋ ನ ಪ್ರೊಮೋವನ್ನು ತೋರಿಸಲಾಗಿದೆ. ರಾಶಿಕಾ ಶೆಟ್ಟಿ ಹಾಗೂ ರಕ್ಷಿತಾ ಶೆಟ್ಟಿ ನಡುವೆ ಜಗಳ ಶುರುವಾಗಿದೆ. ಆ ಜಗಳದಲ್ಲಿ ರಕ್ಷಿತಾ ಶೆಟ್ಟಿಯನ್ನು ಹಿಯಾಳಿಸಿ ಮಾತನಾಡಿದ್ದಾರೆ. ರಕ್ಷಿತಾ, ಅಶ್ವಿನಿ ಗೌಡ ಹಾಗು ಜಾನ್ವಿ ಇಬ್ಬರ ಜೊತೆಯಲ್ಲಿದ್ದು ಇದ್ದು ಅವರಂತೆಯೇ ಬದಲಾಗುತ್ತಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಿಗ್ ಬಾಸ್ ನಲ್ಲಿ ಬೆಳ್ಳಂಬೆಳಗ್ಗೆ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ. ರಕ್ಷಿತಾ ಶೆಟ್ಟಿ, ರಾಶಿಕ ಶೆಟ್ಟಿಯನ್ನು ನಾಮಿನೇಷನ್ ಮಾಡಿ ಅದಕ್ಕೆ ಕಾರಣ ಕೊಟ್ಟಿದ್ದಾರೆ. ಕೊಟ್ಟ ಉತ್ತರದಿಂದ ಕೋಪಗೊಂಡಂತಹ ರಾಶಿಕ ರಕ್ಷಿತಾಳನ್ನು ಹಿಯಾಳಿಸಿ ಅವಳ ಜೊತೆ ಜಗಳವಾಡಿದ್ದಾರೆ.

ರಾಶಿಕ ಶೆಟ್ಟಿ ಸ್ಟ್ರಾಂಗ್ ಆಗಿಲ್ಲ ಅವರು ಏಕಾಂಗಿಯಾಗಿ ಆಟ ಆಡುವುದಕ್ಕೆ ಗೊತ್ತಿಲ್ಲ. ಅವರಿಗೆ ಬರಿ ಆರ್ಡರ್ ಮಾಡುವುದಷ್ಟೇ ಗೊತ್ತು ಎಂಬುದಾಗಿ ಕಾರಣಕೊಟ್ಟು ನಾಮಿನೇಟ್ ಮಾಡುತ್ತಾರೆ. ಈ ಕಾರಣಕ್ಕೆ ಕೋಪಗೊಂಡ ರಾಶಿಕ ಇಲ್ಲಿ ನಾನು ಯಾರ ಮೇಲೂ ಡಿಪೆಂಡ್ ಆಗಿಲ್ಲ, ನನ್ನ ಆಟವನ್ನು ನಾನು ಆಡುತ್ತಿದ್ದೇನೆ. ನಿನಗೆ ಏನು ಅರ್ಥ ಆಗಲ್ಲ ಬಿಗ್ ಬಾಸ್ ಮನೆಗೆ ಬಂದು ಚೈಲ್ಡ್ಲಿಸ್ಟ್ ರೀತಿಯಲ್ಲಿ ಬಿಹೇವ್ ಮಾಡ್ತಾ ಇದ್ದೀಯಾ, ರಕ್ಷಿತಾ ನಾನು ಇಲ್ಲಿ ಸರ್ವೆಂಟ್ ಅಲ್ಲ ಎಂದು ಹೇಳಿದಾಗ ರಾಶಿಕಾ ನೀವು ಇಲ್ಲಿ ಸರ್ವೆಂಟ್ ಎಂಬುದಾಗಿ ಹೇಳುತ್ತಾರೆ ಈ ಮೂಲಕ ನೆಟ್ಟಿಗರ ಆಕ್ರೋಶಕ್ಕೆ ರಾಶಿಕಾ ಶೆಟ್ಟಿ ಗುರಿಯಾಗಿದ್ದಾರೆ.
ಈ ಪ್ರೊಮೋ ಹೊರ ಬರುತ್ತಿದ್ದಂತೆಯೇ ರಾಶಿಕ ವಿರುದ್ಧ ಕಾಮೆಂಟ್ಗಳ ಸುರಿಮಳೆ ಸುರಿಯುತ್ತಿದೆ. ನೀನೊಬ್ಬ ಅಶ್ವಿನಿ ಗೌಡಳ ಎರಡನೇ ಚೀಲ. ಈ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ನಿನಗೆ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾಳಾಗಿ ಆಟವಾಡುತ್ತಿದ್ದಾಳೆ, ಯಾವುದೇ ವಿಷಯವನ್ನಾದರೂ ತುಂಬಾ ಪ್ರಬುದ್ಧವಾಗಿ ಮಾತನಾಡುತ್ತಾಳೆ, ರಕ್ಷಿತಾ ನೀನು ಬೆಂಕಿ ಈ ರೀತಿಯಾ ಕಾಮೆಂಟ್ಗಳನ್ನು ರಕ್ಷಿತಾ ಪರವಾಗಿ ಮಾಡುತ್ತಿದ್ದಾರೆ.



