ಸ್ಯಾಂಡಲ್ ವುಡ್ ಮಂದಿಗೆ ಅತೀ ದೊಡ್ಡ ಶಾಕಿಂಗ್ ಸಮಾಚಾರ ಲಭ್ಯವಾಗಿದೆ.. ಅಪ್ಪು ನಿಧನವನ್ನೇ ಇನ್ನೂ ಅರಗಿಸಿ ಕೊಳ್ಳುತ್ತಿರುವಾಗ ಈಗ ಮತ್ತೊಂದು ಕಹಿ ಸುದ್ದಿ ಎದುರಾಗಿದೆ. ಸ್ಯಾಂಡಲ್ ವುಡ್ ನಾ ಮೋಸ್ಟ್ ಬ್ಯೂಟಿಫುಲ್ ಕಪಲ್ ಆಗಿರುವ ವಿಜಯ್ ರಾಘವೇಂದ್ರ ಬದುಕಿಗೆ ದೊಡ್ಡ ಪೆಟ್ಟು ಬಿದ್ದಿದೆ. ವಿಜಯ್ ಮೋಸ್ಟ್ inspirational ವುಮೆನ್ ಸ್ಪಂದನಾ ಇನ್ನಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ನಿನ್ನೆ ಸಂಜೆ ಸ್ಪಂದನಾ ಅವ್ರಿಗೆ ಎದೆ ನೋವು ಕಾಣಿಸಿ ಕೊಂಡಿದೆ.. ಈ ಹಿನ್ನಲೆ ವಿಜಯ್ ರಾಘವೇಂದ್ರ ಬ್ಯಾಂಕಾಕ್ ಪ್ರಯಾಣ ಮಾಡಿದ್ದಾರೆ.

ವಿದೇಶ ಪ್ರವಾಸಕ್ಕೆ ತೆರಳಿದಾಗ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಹೃದಯಾಘಾತದಿಂದ ಕೊನೆಯುಸಿರು ಬಿಟ್ಟಿದ್ದಾರೆ. ಎರಡು ದಿನಗಳ ಹಿಂದೆ ಬ್ಯಾಂಕಾಕ್ ಪ್ರವಾಸ ಹೋಗಿದ್ದ ಸ್ಪಂದನ ಈಗ ಉಸಿರಾಟ ನಿಲ್ಲಿಸಿದ್ದಾರೆ.. ಸ್ನೇಹಿತರು ಹಾಗೇ ಕುಟುಂಬದವರ ಜೊತೆ ತೆರಳಿದ್ದ ಸ್ಪಂದನ ಅವ್ರಿಗೆ ಹಾರ್ಟ್ ಅಟ್ಟ್ಯಾಕ್ ಆಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದು ಕೊಂಡು ಹೋಗುವ ಪ್ರಯತ್ನ ಮಾಡಿದರು ಯಾವುದೇ ಪ್ರಯೋಜನ ಆಗಿಲ್ಲ.
ತಕ್ಷಣ ವಿಜಯ್ ರಾಘವೇಂದ್ರ ಬ್ಯಾಂಕಾಕ್ ನತ್ತ ಪ್ರಯಾಣ ಬೆಳೆಸಿದ್ದಾರೆ. ನಾಳೆ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗುತ್ತದೆ ಅನ್ನುವ ಮಾಹಿತಿ ಲಭ್ಯವಾಗಿದೆ. ಸ್ಪಂದನ ರವಿ ಚಂದ್ರನ್ ನಿರ್ದೇಶನದ ಅಪೂರ್ವ ಸಿನಿಮಾದಲ್ಲಿ ಅಭಿನಿಯಿಸಿದ್ರು.. ಆ ಸಿನಿಮಾದಲ್ಲಿ ಅವರ ಪತ್ನಿ ಪಾತ್ರದಲ್ಲಿ ಕಾಣಿಸಿ ಕೊಂಡಿದ್ರು.. ಇನ್ನೂ ವಿಜಯ್ ರಾಘವೇಂದ್ರ ಅಭಿನಯದ ಕೆಲ ಸಿನಿಮಾದಲ್ಲಿ ಕೂಡ ನಿರ್ಮಾಪಕಿ ಆಗಿ ಕಾರ್ಯನಿರ್ವಹಿಸಿದರು..
ಸ್ಪಂದನಾ ತಂದೆ ಡಿಕೆ ಶಿವರಾಮ್ ಅವರ ಮನೆಗೆ ಸ್ನೇಹಿತರು ಹಿತೈಷಿಗಳು ಲಗ್ಗೆ ಇಡ್ತಿದ್ದಾರೆ.. ಸ್ಯಾಂಡಲ್ ವುಡ್ ಗೆ ಅತೀ ದೊಡ್ಡ ಶಾಕ್ ಇದು. ಆರೋಗ್ಯವಾಗಿದ್ರು ಇದ್ದಕ್ಕಿದ್ದ ಹಾಗೇ ಹೃದಯಾಘಾತ ಆಗಿರೋದು ದೊಡ್ಡ ಶಾಕಿಂಗ್ ಸುದ್ದಿ.. ಬಿಗ್ ಬಾಸ್ ನಲ್ಲಿ ಕೂಡ ವಿಜಯ್ ರಾಘವೇಂದ್ರ ಸಾಕಷ್ಟು ಸಲ ಅವರ ಹೆಂಡತಿ ಬಗ್ಗೆ ಹೇಳಿಕೊಂಡು ಅತ್ತಿದ್ರು.. ಬಹಳ ಸುಖೀ ಕುಟುಂಬಕ್ಕೆ ಈ ರೀತಿಯ ಆಘಾತ ಆಗಿರುವುದು ನಿಜಕ್ಕೂ ಕೂಡ ದುಃಖದ ವಿಚಾರ.