ನಟಿ ಯಮುನಾ 90ರ ದಶಕದ ಕನ್ನಡದ ಸ್ಟಾರ್ ಹೀರೋಯಿನ್ ಗಳಲ್ಲಿ ಒಬ್ಬರು. ನೋಡಲು ಬಹಳ ಸುಂದರವಾಗಿದ್ದ ಯಮುನಾ ಅವರು ಮೂಲತಃ ಕರ್ನಾಟಕದವರೇ ಆದರೂ ಕೂಡ, ತೆಲುಗು ಮತ್ತು ತಮಿಳಿನಲ್ಲಿ ಸಹ ಹೆಸರು ಮಾಡಿದ್ದರು. ತೆಲುಗಿನಲ್ಲಿ ಇವರಿಗೆ ಭಾರಿ ಬೇಡಿಕೆ ಇತ್ತು, ಈಗಲೂ ಸಹ ತೆಲುಗು ಧಾರಾವಾಹಿಗಳಲ್ಲಿ ಹೆಚ್ಚಾಗಿ ನಟಿಸುತ್ತಾರೆ. ಕನ್ನಡದಲ್ಲಿ ಹೆಚ್ಚಾಗಿ ನಟಿಸದೇ ಹೋದರು ಸಹ ಕನ್ನಡಿಗರು ಇವರನ್ನು ಮರೆತಿಲ್ಲ. ನಟಿ ಯಮುನಾ ಅವರು ಇತ್ತೀಚೆಗೆ ಆರ್.ಜೆ ರಾಜೇಶ್ ಅವರ ಪಾಡ್ ಕಾಸ್ಟ್ ಶೋನಲ್ಲಿ ಮಾತನಾಡಿದ್ದಾರೆ. ತಮ್ಮ ಲೈಫ್ ಬಗ್ಗೆ ಅನೇಕ ವಿಚಾರಗಳನ್ನು ಸಹ ಶೇರ್ ಮಾಡಿಕೊಂಡಿದ್ದಾರೆ..
ಈ ಕಾರ್ಯಕ್ರಮದಲ್ಲಿ ಮಾತನಾಡುವಾಗ ಕ್ರೇಜಿಸ್ಟಾರ್ ರವಿಚಂದ್ರನ್ ಅವರೊಡನೆ ಕೆಲಸ ಮಾಡಿದ ವಿಷಯಗಳ ಕುರಿತು ಚರ್ಚೆ ಬಂದಾಗ, ಕೆಲವು ನೆನಪುಗಳನ್ನು ಹಂಚಿಕೊಂಡಿರುವ ಯಮುನಾ ಅವರು, ಚಿನ್ನ ಸಿನಿಮಾ ಶೂಟಿಂಗ್ ವೇಳೆ ಆದ ಘಟನೆಯ ಬಗ್ಗೆ ಹಲವು ವರ್ಷಗಳ ನಂತರ ರವಿಚಂದ್ರನ್ ಅವರ ಬಳಿ ಕ್ಷಮೆ ಕೇಳಿದ ವಿಷಯವನ್ನ ಸಹ ಮೆಲುಕು ಹಾಕಿದ್ದಾರೆ. ರವಿಚಂದ್ರನ್ ಅವರ ಸುಂದರವಾದ ಸಿನಿಮಾಗಳಲ್ಲಿ ಚಿನ್ನ ಕೂಡ ಒಂದು, ಈ ಸಿನಿಮಾ ಶೂಟಿಂಗ್ ವೇಳೆ ಆಗಿದ್ದೇನು? ಅದಕ್ಕಾಗಿ ಯಮುನಾ ಅವರು ರವಿಚಂದ್ರನ್ ಅವರ ಬಳಿ ಹಲವು ವರ್ಷಗಳ ನಂತರ ಕ್ಷಮೆ ಕೇಳಿದ್ದು ಯಾಕೆ? ಪೂರ್ತಿ ಸ್ಟೋರಿ ತಿಳಿಸುತ್ತೇವೆ ನೋಡಿ..

ಚಿನ್ನ ಸಿನಿಮಾದ ನಾಯಕಿ ಯಮುನಾ ಅವರು, ಇದೊಂದು ಸುಂದರವಾದ ಸಿನಿಮಾ ಆಗಿದೆ. ಚಿನ್ನ ಸಿನಿಮಾದ ನನ್ನವಳು ನನ್ನವಳು ಹಾಡು ಇಂದಿಗೂ ಎವರ್ ಗ್ರೀನ್, ಈ ಹಾಡನ್ನು ಕನ್ನಡ ಚಿತ್ರಪ್ರೇಮಿಗಳು ಇವತ್ತಿಗೂ ಸಹ ಬಹಳ ಇಷ್ಟಪಟ್ಟು ಕೇಳುತ್ತಾರೆ. ಈ ನನ್ನವಳು ನನ್ನವಳು ಹಾಡಿನ ಶೂಟಿಂಗ್ ಗಾಗಿ ರವಿಚಂದ್ರನ್ ಅವರಿಗೆ ಹೆಚ್ಚು ದಿನಗಳ ಕಾಲ ಡೇಟ್ಸ್ ಬೇಕಾಗಿತ್ತಂತೆ, ಆದರೆ ಯಮುನಾ ಅವರು ಆ ವೇಳೆ ತೆಲುಗು ಸಿನಿಮಾದಲ್ಲಿ ತುಂಬಾ ಬ್ಯುಸಿ ಇದ್ದ ಕಾರಣ ರವಿಚಂದ್ರನ್ ಅವರು ಕೇಳಿದಷ್ಟು ಡೇಟ್ಸ್ ಕೊಡಲು ಆಗಿರಲಿಲ್ಲವಂತೆ, ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗದ ಕಾರಣ ಕೊನೆಗೆ ರವಿಚಂದ್ರನ್ ಅವರು ಯಮುನಾ ಅವರ ಫೋಟೋಸ್ ಗಳನ್ನು ಬಳಸಿ ಹಾಡಿನ ಚಿತ್ರೀಕರಣ ಪೂರ್ತಿ ಗೊಳಿಸಿದರು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಇದನ್ನು ನಾವು ನನ್ನವಳು ನನ್ನವಳು ಹಾಡಿನಲ್ಲಿ ಕೂಡ ನೋಡಬಹುದು ಯಮುನಾ ಅವರ ಫೋಟೋಗಳನ್ನು ಹೆಚ್ಚಾಗಿ ಬಳಸಲಾಗಿದೆ. ಅದರ ಹಿಂದಿನ ಕಾರಣ ಇದು. ಈ ವಿಚಾರಕ್ಕೆ ಯಮುನಾ ಅವರಿಗೆ ಬೇಸರ ಇತ್ತಂತೆ, ರವಿಚಂದ್ರನ್ ಅವರು ಕೇಳಿದಷ್ಟು ಡೇಟ್ಸ್ ಕೊಡಲು ಆಗಲಿಲ್ಲ ಎಂದು ಆ ಒಂದು ಗಿಲ್ಟ್ ಅವರನ್ನು ಕಾಡುತ್ತಿತ್ತಂತೆ, ಸಿನಿಮಾ ಮುಗಿದು ಹಲವು ವರ್ಷಗಳ ನಂತರ ಯಮುನಾ ಅವರಿಗೆ ಹೈದರಾಬಾದ್ ನ ಒಂದು ಫ್ಲೈಟ್ ನಲ್ಲಿ ರವಿಚಂದ್ರನ್ ಅವರನ್ನು ಭೇಟಿ ಆಗುವ ಅವಕಾಶ ಸಿಕ್ಕಿತು. ಆ ವೇಳೆ ರವಿಚಂದ್ರನ್ ಅವರನ್ನು ಮಾತನಾಡಿಸಿ, ಅಂದಿನ ಘಟನೆಯ ಬಗ್ಗೆ ಹೇಳಿ ಕ್ಷಮೆಯನ್ನು ಕೇಳಿದರಂತೆ ನಟಿ ಯಮುನಾ.

ಆಗ ರವಿಚಂದ್ರನ್ ಅವರು ಆ ಹಳೆಯ ವಿಷಯವನ್ನ ನೀನಿನ್ನು ಮರೆತಿಲ್ಲವಾ ಎಂದು ಹೇಳಿ, ನಕ್ಕು ಸಮಾಧಾನ ಮಾಡಿದರಂತೆ. ಏನೇ ಹೇಳಿ, ಈ ಥರ ನಡವಳಿಕೆ ಸಂಸ್ಕಾರ ಇರೋ ನಾಯಕಿಯರು ಈಗಿನ ಕಾಲದಲ್ಲಿ ಸಿಗೋದಿಲ್ಲ. ತಾವಾಯ್ತು, ತಮ್ಮ ಕೆಲಸ ಆಯ್ತು ಅಂತ ಇರೋ ಕಾಲ ಇದು. ಒಬ್ಬರಿಗೊಬ್ಬರು ಕೂಡ ಅಗೋದಿಲ್ಲ, ಅಷ್ಟಾಗಿ ಗೌರವ ಮರಿಯಾದೆಗಳನ್ನು ಕೂಡ ಇಟ್ಟುಕೊಳ್ಳೋದಿಲ್ಲ. ಆದರೆ ಯಮುನಾ ಅವರು ಎಷ್ಟೋ ವರ್ಷಗಳ ಹಿಂದೆ ನಡೆದ ಘಟನೆಯನ್ನು ನೆನಪಿಟ್ಟುಕೊಂಡು, ರವಿಚಂದ್ರನ್ ಅವರು ಸಿಕ್ಕಾಗ ಅವರ ಬಳಿ ಹೋಗಿ ಕ್ಷಮೆ ಕೇಳಿರುವುದು ನಿಜಕ್ಕೂ ಮೆಚ್ಚಬೇಕಾದ ವಿಚಾರ. ನಾಯಕಿಯರಲ್ಲಿ ಈ ಗುಣ ಇರಬೇಕು.



