ಕನ್ನಡದ ‘ಕಾಂತಾರ’ ಸಿನಿಮಾಗೆ ದೇಶಾದ್ಯಂತ ಮೆಚ್ಚುಗೆ ಸಿಕ್ಕಿದೆ. ಈ ಚಿತ್ರ ನೋಡಿದ ಬಹುತೇಕ ಎಲ್ಲರೂ ಹೊಗಳಿದ್ದಾರೆ. ಪ್ರಭಾಸ್, ಅನುಷ್ಕಾ ಶೆಟ್ಟಿ, ಕಂಗನಾ ರಣಾವತ್, ರಜನಿಕಾಂತ್, ವಿವೇಕ್ ಅಗ್ನಿಹೋತ್ರಿ ಮುಂತಾದ ಸೆಲೆಬ್ರಿಟಿಗಳು ಈ ಚಿತ್ರಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಈ ಸಿನಿಮಾದ ಕ್ಲೈಮ್ಯಾಕ್ಸ್ ಅಂತೂ ಭಾರೀ ಹಿಟ್ ಆಗಿದ್ದು ಕಡೆಯ 20 ನಿಮಿಷಗಳ ಬಗ್ಗೆ ಸಿನಿಮಾ ನೋಡಿದ ಬಹುತೇಕ ಎಲ್ಲರೂ ಮಾತನಾಡಿದ್ದಾರೆ. ಇದೀಗ ರಿಷಬ್ ಅವರು ಕಾಂತಾರ ಕ್ಲೈಮ್ಯಾಕ್ಸ್ ಸೀನ್ ಬಗ್ಗೆ ಸತ್ಯ ರಿವಿಲ್ ಮಾಡಿದ್ದಾರೆ.

ಕಾಂತಾರ ಚಿತ್ರದಲ್ಲಿ ಕೊನೆಯ 20 ನಿಮಿಷ ಎಲ್ಲರನ್ನು ರೋಮಾಂಚನಗೊಳಿಸಿತ್ತು. ರಿಷಬ್ ಶೆಟ್ಟಿ ಅವರು ಕೊನೆಯ ಕ್ಷಣಗಳಲ್ಲಿ ಪರಕಾಯ ಪ್ರವೇಶ ಮಾಡಿ ಎಲ್ಲರೂ ಆಶ್ಚರ್ಯ ಆಗುವ ರೀತಿಯಲ್ಲಿ ನಟಿಸಿದ್ದಾರೆ. ವ್ಯಾಪಕ ಮೆಚ್ಚುಗೆ ಪಡೆದ ಕ್ಲೈಮ್ಯಾಕ್ಸ್ ಸೀನ್ ಗೂಸ್ಬಂಪ್ಸ್ ತರುತ್ತದೆ ಎನ್ನುವುದು ಸಿನಿಮಾ ನೋಡಿದ ಎಲ್ಲ ಪ್ರೇಕ್ಷಕರ ಮಾತು. ಇದೀಗ ರಿಷಬ್ ಶೆಟ್ಟಿ ಕಾಂತಾರ ಚಿತ್ರ ತೆರೆಯ ಮೇಲೆ ಬಂದು ಮೂರು ತಿಂಗಳ ಬಳಿಕ ಕ್ಲೈಮ್ಯಾಕ್ಸ್ ನ ರಹಸ್ಯವನ್ನು ಹೇಳಿದ್ದಾರೆ.
ರಿಷಬ್ ಶೆಟ್ಟಿ ಅವರು ಕೊನೆಯ ಸೀನ್ನಲ್ಲಿ ಉರಿಯೋ ಕಟ್ಟಿಗೆಯಿಂದ ವಿಲನ್ಗಳಿಂದ ಹೊಡೆಸಿಕೊಂಡ ದೃಶ್ಯದ ಬಗ್ಗೆ ನೆಟ್ಫ್ಲಿಕ್ಸ್ನಲ್ಲಿ ಮಾತನಾಡಿದ್ದಾರೆ. ವಿಲನ್ಗಳೆಲ್ಲರೂ ಸೇರಿ ರಿಷಬ್ ಅವರಿಗೆ ಉರಿಯುತ್ತಿರೋ ಕಟ್ಟಿಗೆಯಿಂದ ಜೋರಾಗಿ ಹೊಡೆಯುತ್ತಿರುತ್ತಾರೆ. ಆ ಸಂದರ್ಭ ಆ ಸೀನ್ ಕೂಡಾ ಸರಿಯಾಗಿ ಬರುತ್ತಿರಲಿಲ್ಲ. ಆ ಸೀನ್ ಬೇಗನೆ ಮುಗಿಸುವ ಒತ್ತಡವೂ ಇತ್ತು. ದೃಶ್ಯ ನೈಜ್ಯವಾಗಿರಲಿ ಎಂದು ನಟ ಡ್ಯೂಪ್ ಕೂಡಾ ಬಳಸಿರಲಿಲ್ಲ. ಬದಲಾಗಿ ರಿಷಬ್ ಅವರೇ ಸ್ವತಃ ಈ ಸೀನ್ ಮಾಡಿದ್ದರು.
ಉರಿಯೋ ದೊಣ್ಣೆಗಳಿಂದ ತುಂಬಾ ಏಟು ತಿಂದಿದ್ದರಂತೆ. ವಿಲನ್ ಗಳು ಕೊಟ್ಟ ಬೆಂಕಿ ದೊಣ್ಣೆಯ ಏಟಿಗೆ ರಿಷಬ್ ಬೆನ್ನೆಲ್ಲ ಬೆಂದು ಹೋಗಿತ್ತು. ಬೆನ್ನಿನ ಮೇಲೆ ಬೊಬ್ಬೆಗಳು ಬಂದು ಕಿತ್ತುಕೊಂಡಿದ್ದವು. ಬೆನ್ನು ಊರಿಗೆ ಹತಾಶರಾಗಿದ್ದ ರಿಷಬ್ ಎದುರುಗಡೆ ಯಾರಾದರೂ ಬಂದರೆ ಸಾಯಿಸಬೇಕೆನ್ನುವಷ್ಟು ಕೋಪ ಬರುತ್ತಿತ್ತಂತೆ. ಆ ಕೋಪ ಮತ್ತು ತಾಪ ತೆರೆ ಮೇಲೆ ನೈಜ್ಯವಾಗಿ ಮೂಡಿ ಬಂದಿದೆ ಎಂದು ರಿಷಬ್ ಹೇಳಿದ್ದಾರೆ.



