ನಟಿ ಶೃತಿ ಪಾಟೀಲ್ ತಮ್ಮ ಹೆಸರನ್ನು ಬದಲಾಯಿಸಿದ್ದಾರೆ. ಅಕಾಯಿ, ಜಾನಿ ಸನ್ ಆಫ್ ಜಯರಾಜ, ಕ್ಯಾಲೆಂಡರ್, ಕಲ್ಲು ಸಕ್ಕರೆ, ಮುಂತಾದ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿರುವ ನಟಿ ಶ್ರುತಿ ಪಾಟೀಲ್ ಅವರು ತಮ್ಮ ಹೆಸರನ್ನು ಬದಲಾಯಿಸಿದ್ದಾರಂತೆ.

ಹೌದು, ಶ್ರುತಿ ಪಾಟೀಲ್ ನಿಂದ ಇದೀಗ ಅವರ ಹೆಸರು ನಿವಿಷ್ಕಾ ಪಾಟೀಲ್. ಅಂದಹಾಗೆ ಸಂಖ್ಯಾಶಾಸ್ತ್ರವನ್ನು ನೋಡುವವರು ಒಬ್ಬರು ಹೆಸರನ್ನು ಬದಲಾಯಿಸಿದರೆ ಒಳ್ಳೊಳ್ಳೆ ಅವಕಾಶಗಳು ಬರುತ್ತದೆ ಎಂದು ಹೇಳಿದ್ದರಿಂದಲೇ ನಟಿ ಶ್ರುತಿ ಪಾಟೀಲ್ ಅವರು ತಮ್ಮ ಹೆಸರನ್ನು ನಿವಿಷ್ಕಾ ಪಾಟೀಲ್ ಎಂದು ಬದಲಾಯಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಈ ಮೂಲಕ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚೆಚ್ಚು ಅವಕಾಶಗಳ ನಿರೀಕ್ಷೆಯಲ್ಲಿದ್ದಾರಂತೆ ನಟಿ ನಿವಿಷ್ಕಾ ಪಾಟೀಲ್! ಅಂದಹಾಗೆ ಸಿನಿಮಾ ಇಂಡಸ್ಟ್ರಿಯಲ್ಲಿ ನಟ ನಟಿಯರು ಹೆಸರನ್ನು ಬದಲಾಯಿಸುತ್ತಿರುವುದು ಇದೇನು ಹೊಸತಲ್ಲ. ನಟಿ ಸುಧಾರಾಣಿಯಿಂದ ಹಿಡಿದು ಅನಿಕಾ ಸಿಂಧ್ಯಾ, ನೇಹಾ ಗೌಡ, ಸಂಗೀತ ಶೃಂಗೇರಿಯವರೆಗೂ ಬಹಳಷ್ಟು ಸೆಲೆಬ್ರಿಟಿಗಳು ತಮ್ಮ ಮೂಲ ಹೆಸರನ್ನು ಬದಲಾಯಿಸಿರುವ ಉದಾಹರಣೆಗಳಿವೆ. ಅದೀಗ ನಟಿ ಶ್ರುತಿ ಪಾಟೀಲ್ ಕೂಡ ಈ ಸಾಲಿಗೆ ಸೇರುತ್ತಾರೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಅಂದಹಾಗೆ ಸದ್ಯದಲ್ಲೇ ತೆಲುಗು ಸಿನಿಮಾ ಇಂಡಸ್ಟ್ರಿಗೆ ಕಾಲಿಡುತ್ತಿರುವ ನಟಿ ನಿವಿಷ್ಕಾ ಪಾಟೀಲ್ ಅವರು, ತಮ್ಮ ಕೆರಿಯರ್ ಬಗ್ಗೆ ಬಹಳಷ್ಟು ನಿರೀಕ್ಷೆಯಲ್ಲಿದ್ದಾರಂತೆ.
ಈ ಬಗ್ಗೆ ಒಂದಷ್ಟು ಮಾಹಿತಿಯನ್ನು ಮುಕ್ತವಾಗಿ ಹಂಚಿಕೊಂಡಿರುವ ಈಕೆ ” ನಟನೆಗೆ ಬರಬೇಕೆಂಬ ಯೋಚನೆ ಇರಲಿಲ್ಲ. ಮೊದಲಿಗೆ ಟಿವಿಯಲ್ಲಿ ಕಾಣಿಸಿಕೊಳ್ಳಬೇಕೆಂಬ ಒಂದೇ ಒಂದು ಆಸೆಗೆ ಧಾರಾವಾಹಿಗಳಲ್ಲಿ ನಟಿಸುತ್ತಾ ಹೋದೆ. ಈಗ ಸಿನಿಮಾಗಳು ನನ್ನನ್ನು ಕೈಬೀಸಿ ಕರೆಯುತ್ತಿರುವುದರ ಬಗ್ಗೆ ಬಹಳ ಖುಷಿ ಇದೆ. ಈ ಹಂತದಲ್ಲಿ ಹಿಂತುರುಗಿ ನೋಡಿದಾಗ ನಾನು ಬಹಳಷ್ಟು ಜನರಿಗೆ ನನ್ನ ಕೃತಜ್ಞತೆಯನ್ನು ತಿಳಿಸುತ್ತೇನೆ” ಎಂದಿದ್ದಾರೆ ನಟಿ ನಿವಿಷ್ಕಾ ಪಾಟೀಲ್.

‘
ಇನ್ನು ತೆಲುಗು ಸಿನಿಮಾ ಇಂಡಸ್ಟ್ರಿಗೆ ಕಾಲಿಡುತ್ತಿರುವುದರ ಬಗ್ಗೆ ಮಾತನಾಡಿದ ಈಕೆ
” ಪರ ಭಾಷೆಯ ಸಿನಿಮಾ ಒಂದರಲ್ಲಿ ಅವಕಾಶ ಸಿಕ್ಕಿರುವುದರಿಂದ ಬಗ್ಗೆ ಖುಷಿಯಿದೆ. ಕನ್ನಡದ ಜನರಂತೆ ತೆಲುಗು ಪ್ರೇಕ್ಷಕರು ಕೂಡ ನನ್ನ ಪ್ರತಿಭೆಯನ್ನು ಗುರುತಿಸುತ್ತಾರೆ ಎಂಬ ಆಸೆ ಹಾಗೂ ನಿರೀಕ್ಷೆಯಲ್ಲಿದ್ದೇನೆ. ಅಷ್ಟು ಚೆನ್ನಾಗಿ ಭಾಷೆ ಬರದಿದ್ದರೂ ಅಲ್ಲಿ ನನ್ನ ಸಹನಟರು ನನಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಹೆಚ್ಚಿನ ಮುತುವರ್ಜಿ ವಹಿಸಿ ಭಾಷೆಯನ್ನು ಹೇಳಿಕೊಡುವ ರೀತಿಯ ಬಗ್ಗೆ ನನಗೆ ಬಹಳ ಸಮಾಧಾನವಿದೆ. ಸಿನಿಮಾಗೆ ಯಾವುದೇ ಭಾಷೆಯ ಮಿತಿ ಇಲ್ಲ. ಕನ್ನಡಕ್ಕೆ ಮೊದಲ ಆದ್ಯತೆಯನ್ನು ಕೊಡುವ ಕನ್ನಡದ ನಟರು ಒಳ್ಳೊಳ್ಳೆ ಅವಕಾಶಗಳು ಸಿಕ್ಕಾಗ ಬೇರೆ ಭಾಷೆಗಳಿಗೆ ಹೋಗುವುದರಲ್ಲಿ ತಪ್ಪೇನೂ ಇಲ್ಲ” ಎಂದು ಪರಭಾಷೆಯಲ್ಲಿ ಅವಕಾಶಗಳು ಸಿಗುತ್ತಿರುವುದರ ಬಗ್ಗೆಯೂ ಮಾತನಾಡಿದ್ದಾರೆ ನಟಿ ನಿವಿಷ್ಕಾ ಪಾಟೀಲ್.



