ಕನ್ನಡ ಚಿತ್ರರಂಗದ ದಂತಕಥೆಗಳಲ್ಲಿ ಒಬ್ಬರು ಶಂಕರ್ ನಾಗ್. ಇವರು ಇಂದು ನಮ್ಮೊಡನೆ ಇಲ್ಲ, ಶಂಕರ್ ನಾಗ್ ಅವರು ಇಹಲೋಕ ತ್ಯಜಿಸಿ 30 ವರ್ಷಕ್ಕಿಂತ ಹೆಚ್ಚಿನ ಸಮಯ ಆಗಿದೆ, ಆದರೆ ಅಭಿಮಾನಿಗಳ ಹೃದಯದಲ್ಲಿ ಸದಾ ಅವರು ಕರಾಟೆ ಕಿಂಗ್, ಆಟೋ ರಾಜ ಶಂಕ್ರಣ್ಣ ಆಗಿಯೇ ಜೀವಿಸಿರುತ್ತಾರೆ. ಇಂಥ ಶಂಕರ್ ನಾಗ್ ಅವರು ನಟನೆಯಲ್ಲಿ ಎಷ್ಟು ಹೆಸರು ಮಾಡಿದ್ದರೋ, ಅದೇ ರೀತಿ ಅವರ ವ್ಯಕ್ತಿತ್ವದ ವಿಷಯದಲ್ಲಿ ಸಹ ಜನಮನ್ನಣೆ ಗಳಿಸಿದವರು. ಇವತ್ತಿಗೂ ಜನರು ಶಂಕರ್ ನಾಗ್ ಅವರನ್ನು ನೆನಪು ಮಾಡಿಕೊಳ್ಳುತ್ತಾರೆ. ಈ ಅಪರೂಪದ ಪ್ರತಿಭೆಯ ಮಗಳು ಇಂದು ಏನು ಮಾಡುತ್ತಿದ್ದಾರೆ ಗೊತ್ತಾ?

ನಟ ಶಂಕರ್ ನಾಗ್ ಅವರು ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದು ನಮ್ಮ ಪುಣ್ಯ ಎಂದರೆ ತಪ್ಪಲ್ಲ. 1954ರ ನವೆಂಬರ್ 9ರಂದು ಶಂಕರ್ ನಾಗ್ ಅವರು ಹೊನ್ನಾವರದಲ್ಲಿ ಜನಿಸಿದರು. ಮುಂಬೈನಲ್ಲಿ ಆಕ್ಟಿಂಗ್ ತರಬೇತಿ ಪಡೆದು, ಚಿತ್ರರಂಗಕ್ಕೆ ಕಾಲಿಟ್ಟರು. ಇದ್ದ ಕೆಲವೇ ವರ್ಷಗಳಲ್ಲಿ 80ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಹಲವು ಸಿನಿಮಾಗಳನ್ನು ನಿರ್ದೇಶಿಸಿ, ಧಾರಾವಾಹಿಯನ್ನು ಸಹ ನಿರ್ದೇಶನ ಮಾಡಿದರು. ಶಂಕರ್ ನಾಗ್ ಅವರ ಸಿನಿಮಾಗಳು ಇಂದಿಗು ಫೇಮಸ್. ಆಟೋ ರಾಜ ಆಗಿರಬಹುದು, ಗೀತಾ, ಸೀತಾ ರಾಮು, ಆಕ್ಸಿಡೆಂಟ್ ಹೀಗೆ ಸಾಕಷ್ಟು ಸಿನಿಮಾಗಳು ಇಂದಿಗೂ ಎವರ್ ಗ್ರೀನ್, ಜನರು ತುಂಬಾ ಇಷ್ಟಪಟ್ಟು ನೋಡುತ್ತಾರೆ.

ಇನ್ನು ನಿರ್ದೇಶನದಲ್ಲಿ ಸಹ ಶಂಕರ್ ಅವರು ಮುಂದಿದ್ದರು, ಡಾ. ರಾಜ್ ಕುಮಾರ್ ಅವರ ಒಂದು ಮುತ್ತಿನ ಕಥೆ ಸಿನಿಮಾವನ್ನು ನಿರ್ದೇಶನ ಮಾಡಿ, ಹೊಸ ದಾಖಲೆ ಬರೆದಿದ್ದರು ಶಂಕರ್ ನಾಗ್. ಇಂಥ ಪ್ರತಿಭೆ ಮದುವೆಯಾಗಿದ್ದು ಅರುಂಧತಿ ನಾಗ್ ಅವರನ್ನು. ಅವರು ಸಹ ನಟಿ ಹಾಗೂ ರಂಗಭೂಮಿ ಕಲಾವಿದೆ. ಇವರಿಬ್ಬರ ಮುದ್ದಿನ ಮಗಳು ಕಾವ್ಯ. ಈ ಜೋಡಿ ತಮ್ಮದೆ ಆದ ಶೈಲಿಯಲ್ಲಿ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದರು. ಶಂಕರ್ ನಾಗ್ ಅವರು ನಿರ್ದೇಶನ ಮಾಡಿದ ಮಾಲ್ಗುಡಿ ಡೇಸ್ ಧಾರಾವಾಹಿ ಎಷ್ಟರ ಮಟ್ಟಿಗೆ ಹೆಸರು ಮಾಡಿತು ಎನ್ನುವ ವಿಷಯ ಸಹ ನಮಗೆ ಗೊತ್ತೇ ಇದೆ. ಇಂಥ ಶ್ರೇಷ್ಠ ವ್ಯಕೃ ಅಷ್ಟು ಬೇಗ ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದು, ನಮ್ಮ ದುರದೃಷ್ಟ.

1990ರಲ್ಲಿ ದಾವಣಗೆರೆ ಹತ್ತಿರ ಕಾರ್ ಮತ್ತು ಲಾರಿ ಆಕ್ಸಿಡೆಂಟ್ ನಲ್ಲಿ ಶಂಕರ್ ನಾಗ್ ಅವರು ಸ್ಪಾಟ್ ಔಟ್ ಆಗಿದ್ದರು, ಅಂದು ಅವರ ಜೊತೆಗೆ ಪತ್ನಿ ಅರುಂಧತಿ ಹಾಗೂ ಮಗಳು ಕಾವ್ಯ ಕೂಡ ಇದ್ದರು. ಆದರೆ ಅವರಿಬ್ಬರು ಸಣ್ಣ ಪುಟ್ಟ ಗಾಯಗಳಿಂದ ಉಳಿದುಕೊಂಡರು. ಇವರಿಗೆ ಇರುವ ಒಬ್ಬಳೇ ಮಗಳು ಕಾವ್ಯ. ಈ ಮಗಳು ಈಗ ಏನು ಮಾಡುತ್ತಿದ್ದಾರೆ ಎನ್ನುವ ಕುತೂಹಲ ಹಲವರಲ್ಲಿ ಇದೆ. ಕಾವ್ಯ ಅವರು ಅಪ್ಪ ಅಮ್ಮನ ಹಾಗೆ ಬಣ್ಣದ ಲೋಕಕ್ಕೆ ಬರಲಿಲ್ಲ, ಅವರೊಬ್ಬರು ಬ್ಯುಸಿನೆಸ್ ವುಮೆನ್ ಆಗಿದ್ದಾರೆ. ಕಾವ್ಯ ಅವರು ತಮ್ಮದೇ ಆದ ಸ್ವಂತ ಕಂಪನಿ ಶುರು ಮಾಡಿದ್ದಾರೆ.
ಇವರ ಕಂಪನಿಯ ಹೆಸರು ಕೋಕೊನೆಸ್, ಯಾವುದೇ ರಾಸಾಯನಿಕ ಬಳಸದೇ, ಇವರ ಕಂಪೆನಿಯಿಂದ ನ್ಯಾಚುರಲ್ ಸೋಪ್ ಹಾಗೂ ಎಣ್ಣೆಯ ಉತ್ಪಾದನೆ ಮಾಡಲಾಗುತ್ತದೆ. ತೆಂಗಿನ ಕಾಯಿಯಿಂದ ಇದೆಲ್ಲವನ್ನು ಮಾಡಲಾಗುತ್ತದೆ. ಹೀಗೆ ಕಾವ್ಯ ಅವರು ತಮ್ಮದೇ ಆದ ಬ್ರಾಂಡ್ ಶುರು ಮಾಡಿದ್ದು, ಈ ಮೂಲಕ ಪರಿಸರಕ್ಕೆ ಉತ್ತಮವಾರ ಕೆಲಸವನ್ನೇ ಮಾಡುತ್ತಿದ್ದಾರೆ. ತಂದೆಗೆ ತಕ್ಕ ಮಗಳು ಇವರು. ಇನ್ನು ಅರುಂಧತಿ ನಾಗ್ ಅವರು ರಂಗಶಂಕರದ ಮೂಲಕ ಬಣ್ಣದ ಲೋಕದ ಜೊತೆಗೆ ನಂಟನ್ನು ಉಳಿಸಿಕೊಂಡಿದ್ದಾರೆ. ಈಗಲೂ ರಂಗಭೂಮಿಯಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ ಅರುಂಧತಿ ನಾಗ್.



