ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿರುವವರು ನಟಿ ವೈಷ್ಣವಿ ಗೌಡ. ಇವರ ಅಗ್ನಿಸಾಕ್ಷಿ ಧಾರಾವಾಹಿ ಯಾವ ಮಟ್ಟಕ್ಕೆ ಕ್ರೇಜ್ ಹೊಂದಿತ್ತು ಎಂದು ನಮಗೆಲ್ಲ ಗೊತ್ತೇ ಇದೆ. ಆ ಸಮಯದಲ್ಲಿ ಅಗ್ನಿಸಾಕ್ಷಿಯ ಸನ್ನಿಧಿ ಎಲ್ಲರ ಮನೆ ಮಗಳು, ಎಲ್ಲಾ ಹುಡುಗರ ಕ್ರಶ್ ಎಂದು ಹೇಳಿದರು ತಪ್ಪಲ್ಲ. ಅಷ್ಟರ ಮಟ್ಟಿಗೆ ಜನಪ್ರಿಯತೆ ಹೊಂದಿತ್ತು ಈ ಪಾತ್ರ. ಈಗ ವೈಷ್ಣವಿ ಅವರು ಸೀತಾರಾಮ ಧಾರಾವಾಹಿಯ ಸೀತಾ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಪಾತ್ರ ಸಹ ಜನರಿಗೆ ಅಷ್ಟೇ ಇಷ್ಟವಾಗಿದೆ. ಸೀತಾರಾಮನ ಪ್ರೀತಿ, ಸೀತಾ ಸಿಹಿ ಬಾಂಡಿಂಗ್ ಇದೆಲ್ಲವೂ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ.. ಇಷ್ಟು ಒಳ್ಳೆಯ ಪಾತ್ರದ ಮೂಲಕ ಗುರುತಿಸಿಕೊಂಡಿರುವ ವೈಷ್ಣವಿ ಅವರು ಇದೀಗ ಯೂಟ್ಯೂಬ್ ಚಾನೆಲ್ ಸಹ ಹೊಂದಿದ್ದಾರೆ. ಇದೆಲ್ಲದರ ಜೊತೆಗೆ ಈಗ ಬದುಕಿನಲ್ಲಿ ಹೊಸ ಹೆಜ್ಜೆ ಇಡುವುದಕ್ಕೆ ಸಜ್ಜಾಗಿದ್ದಾರೆ.
ನಟಿ ವೈಷ್ಣವಿ ಅವರ ಜರ್ನಿ ಕೆಲವು ವರ್ಷಗಳದ್ದಷ್ಟೇ ಅಲ್ಲ. ಇವರು. ಬಹಳ ಚಿಕ್ಕವರಿರುವಾಗಲೇ, ಡ್ಯಾನ್ಸ್ ರಿಯಾಲಿಟಿ ಶೋ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದು, ಅದ್ಭುತವಾದ ಡ್ಯಾನ್ಸರ್ ಸಹ ಹೌದು. ಕ್ಲಾಸಿಕಲ್ ಡ್ಯಾನ್ಸ್ ಅನ್ನು ಕಲಿತಿರುವ ಇವರು ಬಹಳ ಟ್ಯಾಲೆಂಟೆಡ್ ಹುಡುಗಿ. ಡ್ಯಾನ್ಸ್ ಶೋ ಬಳಿಕ ವೈಷ್ಣವಿ ಅವರು ಜೀಕನ್ನಡ ವಾಹಿನಿಯಲ್ಲೇ ದೇವಿ ಎನ್ನುವ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಈ ಧಾರಾವಾಹಿ ಸಹ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ನಂತರ ಸ್ವಲ್ಪ ಗ್ಯಾಪ್ ಪಡೆದು ನಟಿಸಿದ ಧಾರಾವಾಹಿಯೇ ಅಗ್ನಿಸಾಕ್ಷಿ. ಈ ಧಾರಾವಾಹಿಯ ಕ್ರೇಜ್ ಇವತ್ತಿಗೂ ಕಡಿಮೆ ಆಗಿಲ್ಲ. ಜನರು ಅಗ್ನಿಸಾಕ್ಷಿ ಸಿದ್ಧಾರ್ಥ್ ಸನ್ನಿಧಿಯನ್ನ ಇಂದಿಗು ಮರೆತಿಲ್ಲ. ಈಗಲೂ ಈ ಧಾರಾವಾಹಿಯನ್ನು ಮತ್ತೆ ಟೆಲಿಕಾಸ್ಟ್ ಮಾಡಿದರೆ, ಮೊದಲು ಇದ್ದಷ್ಟೇ ಕ್ರೇಜ್ ಇರುತ್ತದೆ..
ಅಷ್ಟು ಕ್ರೇಜ್ ಹೊಂದಿದೆ ಅಗ್ನಿಸಾಕ್ಷಿ ಧಾರವಾಹಿ. ಅಗ್ನಿಸಾಕ್ಷಿ ನಂತರ ಇನ್ಯಾವುದೇ ಧಾರಾವಾಹಿಯನ್ನು ಒಪ್ಪಿಕೊಳ್ಳದೇ ದೊಡ್ಡ ಗ್ಯಾಪ್ ಪಡೆದ ಬಳಿಕ ವೈಷ್ಣವಿ ಅವರು ಕಾಣಿಸಿಕೊಳ್ಳುತ್ತಿರುವುದು ಸೀತಾರಾಮ ಧಾರಾವಾಹಿಯಲ್ಲಿ. ಈ ಧಾರಾವಾಹಿ ಸಹ ಅಗ್ನಿಸಾಕ್ಷಿ ತರಹವೆ ಕ್ರೇಜ್ ಹೊಂದಿದೆ. ಇದರಲ್ಲಿ ಜನರಿಗೆ ಸಿಹಿ ಮತ್ತು ಸೀತಾಳ ತಾಯಿ ಮಗಳ ಬಾಂಧವ್ಯ ಸಹ ತುಂಬಾ ಇಷ್ಟವಾಯಿತು. ಉತ್ತಮವಾಗಿ ಮುನ್ನುಗ್ಗುತ್ತಿದೆ ಸೀತಾರಾಮ ಧಾರಾವಾಹಿ. ಧಾರಾವಾಹಿಯ ಜೊತೆಗೆ ವೈಷ್ಣವಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸಹ ತುಂಬಾ ಆಕ್ಟಿವ್. ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇವರದ್ದೇ ಆದ ಯೂಟ್ಯೂಬ್ ಚಾನೆಲ್ ಸಹ ಇದೆ, ಈಗಾಗಲೇ ವೈಷ್ಣವಿ ಅವರಿಗೆ ಯೂಟ್ಯೂಬ್ ನಲ್ಲಿ 5 ಲಕ್ಷಕ್ಕಿಂತ ಹೆಚ್ಚು ಚಂದಾದಾರರು ಇದ್ದಾರೆ. ಯೂಟ್ಯೂಬ್ ನಲ್ಲಿ ಯಶಸ್ವಿ ಮಹಿಳೆ ಆಗಿದ್ದಾರೆ.
ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಸಹ ತೊಡಗಿಸಿಕೊಂಡಿರುವ ವೈಷ್ಣವಿ ಅವರು, ಇದೀಗ ವೈಯಕ್ತಿಕ ಜೀವನದಲ್ಲಿ ಮುಂದಿನ ಹಂತಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಇತ್ತೀಚೆಗೆ ವೈಷ್ಣವಿ ಅವರ ಎಂಗೇಜ್ಮೆಂಟ್ ನಡೆದಿದೆ. ಫೋಟೋಗಳು ಸಹ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ವೈಷ್ಣವಿ ಅವರು ತಮ್ಮ ಕುಟುಂಬದವರು, ಸ್ನೇಹಿತರು ಹಾಗೂ ಎಲ್ಲರ ಸಮ್ಮುಖದಲ್ಲಿ ಅನುಕೂಲ್ ಮಿಶ್ರ ಅವರೊಡನೆ ಎಂಗೇಜ್ ಆಗಿದ್ದು, ಹೆಣ್ಣುಮಕ್ಕಳ ಡ್ರೀಮ್ ಅಂತೆ ಇತ್ತು ಇವರ ಎಂಗೇಜ್ಮೆಂಟ್. ವೈಷ್ಣವಿ ಮದುವೆ ಆಗುತ್ತಿರುಗ ಹುಡುಗ ಅನುಕೂಲ್ ಅವರು ಬೆಂಗಳೂರಿನಲ್ಲೇ ಇರುವುದರಿಂದ ಮದುವೆ ನಂತರ ಕೂಡ ಬೆಂಗಳೂರಿನಲ್ಲೇ ಇದ್ದು, ನಟನೆಯಲ್ಲಿ ಮುಂದುವರೆಯುತ್ತಾರೆ ವೈಷ್ಣವಿ. ಇನ್ನು ಇವರಿಬ್ಬರದ್ದು ಲವ್ ಮ್ಯಾರೇಜ್ ಅಲ್ಲ ಅರೇಂಜ್ಡ್ ಮ್ಯಾರೇಜ್ ಆಗಿದೆ.
ಮ್ಯಾಟ್ರಿಮೋನಿ ಸೈಟ್ ನಲ್ಲಿ ಹುಡುಕಿ ಹುಡುಗ ಸಿಕ್ಕಿರುವುದು, ಜಾತಕ ಎಕ್ಸ್ಛೇಂಜ್ ಆದ ನಂತರ, ಎರಡು ಕುಟುಂಬಕ್ಕೆ ಒಪ್ಪಿಗೆ ಆಯಿತು ಎಂದು ಸಂದರ್ಶನದಲ್ಲಿ ವೈಷ್ಣವಿ ತಿಳಿಸಿದರು. ಒಂದು ವರ್ಷದ ಹಿಂದೆ ಇವರಿಬ್ಬರಿಗೂ ಪರಿಚಯ ಆಗಿದ್ದು, ಒಂದು ವರ್ಷಗಳ ಕಾಲ ಸಮಯ ತೆಗೆದುಕೊಂಡು ಬದುಕಿನ ಬಗ್ಗೆ ನಿರ್ಧಾರ ಮಾಡಿದ್ದಾರೆ, ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ.
ಇನ್ನು ವೈಷ್ಣವಿ ಅವರ ಎಂಗೇಜ್ಮೆಂಟ್ ಸುದ್ದಿ ವೈರಲ್ ಆಗುತ್ತಿದ್ದ ಹಾಗೆಯೇ, ಕೆಲವರು ಟ್ರೋಲ್ ಮಾಡಿದ್ದರು, ಕನ್ನಡ ಗೊತ್ತಿಲ್ಲದ ಹೊರರಾಜ್ಯದ ಹುಡುಗನ ಜೊತೆಗೆ ಮದುವೆ ಆಗಬೇಕಿತ್ತಾ ಎಂದು ಟ್ರೋಲ್ ಮಾಡಿದರು. ಆದರೆ ವೈಷ್ಣವಿ ಅವರು ತಮ್ಮ ಹುಡುಗ ತುಂಬಾ ಒಳ್ಳೆಯವರು ಎಂದು ಹೇಳಿದ್ದರು. ಎಂಗೇಜ್ ಆಗಿ ಕೆಲ ದಿನಗಳಲ್ಲೇ ಅಭಿಮಾನಿಗಳಿಗೆ ವೈಷ್ಣವಿ ಅವರು ಒಂದು ಸ್ಯಾಡ್ ನ್ಯೂಸ್ ನೀಡಿದರು. ಅದು ಧಾರಾವಾಹಿ ಮುಕ್ತಾಯ ಆದ ವಿಚಾರ ಆಗಿತ್ತು. ಬಹಳ ಬೇಗ ಸೀತಾರಾಮ ಧಾರಾವಾಹಿಯನ್ನು ಮುಗಿಸಲಾಯಿತು.
ಹೌದು, ಅಗ್ನಿಸಾಕ್ಷಿ ನಂತರ ವೈಷ್ಣವಿ ಅವರು ಫುಲ್ ಟೈಮ್ ನಟಿಯಾಗಿ ಕಾಣಿಸಿಕೊಂಡಿದ್ದು ಸೀತಾರಾಮ ಧಾರಾವಾಹಿಯಲ್ಲಿ. ಸೀತಾ ರಾಮ, ಸಿಹಿ ಈ ಪಾತ್ರಗಳನ್ನೆಲ್ಲ ಜನರು ಎಷ್ಟು ಇಷ್ಟಪಟ್ಟಿದ್ದರು ಎಂದು ನಮಗೆಲ್ಲ ಗೊತ್ತೇ ಇದೆ. ಆದರೆ ಕಳೆದ ವಾರವಷ್ಟೇ ಈ ಧಾರಾವಾಹಿ ಮುಕ್ತಾಯ ಆಯಿತು. ಸೀತಾರಾಮ ಧಾರಾವಾಹಿಯ ಮೂಲಕ ಪ್ರತಿದಿನ ವೈಷ್ಣವಿ ಅವರನ್ನು ನೋಡಬಹುದು ಎನ್ನುವ ಆಸೆ ಜನರಲ್ಲಿ ಇತ್ತು. ಆದರೆ ಇದೀಗ ಧಾರಾವಾಹಿ ಮುಕ್ತಾಯ ಆಗಿದೆ. ವೈಷ್ಣವಿ ಅವರ ಮದುವೆ ಇರುವ ಕಾರಣಕ್ಕೆ ಧಾರಾವಾಹಿಯನ್ನು ಮುಗಿಸಿರಬಹುದು ಎಂದು ಹೇಳಲಾಗಿತ್ತು, ಆ ಸುದ್ದಿ ಕೂಡ ನಿಜವಾಗಿದೆ. ವೈಷ್ಣವಿ ಅವರ ಮನೆಯಲ್ಲಿ ಈಗಾಗಲೇ ಅರಿಶಿನ ಶಾಸ್ತ್ರದ ಸಂಭ್ರಮ ಶುರುವಾಗಿದೆ. ಮೊನ್ನೆಯಷ್ಟೇ ವೈಷ್ಣವಿ ಅವರ ಅರಿಶಿನ ಶಾಸ್ತ್ರ ನಡೆದು, ಮನೆಯಲ್ಲಿ ಚಪ್ಪರದ ಪೂಜೆ ಸಹ ಆಗಿತ್ತು, ಅದಕ್ಕೆ ಸಂಬಂಧಿಸಿದ ಕೆಲವು ಫೋಟೋಸ್ ಗಳನ್ನು ವೈಷ್ಣವಿ ಅವರು ಶೇರ್ ಮಾಡಿಕೊಂಡಿದ್ದರು.
ನಿನ್ನೆಯಷ್ಟೇ ವೈಷ್ಣವಿ ಅವರ ಸಂಗೀತ್ ಕಾರ್ಯಕ್ರಮ ನಡೆದಿದೆ. ನಿನ್ನೆ ಐಪಿಎಲ್ಫೈನಲ್ಸ್ ಇತ್ತು, ವೈಷ್ಣವಿ ಅವರು ತಮ್ಮ ಸಂಗೀತ್ ಕಾರ್ಯಕ್ರಮದಲ್ಲಿ ಐಪಿಎಲ್ ಮ್ಯಾಚ್ ನೋಡಿ ಎಂಜಾಯ್ ಮಾಡಿದ್ದಾರೆ. ಆರ್ಸಿಬಿ ತಂಡಕ್ಕೆ ಚಿಯರ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ನಟಿ ಅಮೂಲ್ಯ ಅವರೊಡನೆ ತಂಡಕ್ಕೆ ಚಿಯರ್ ಮಾಡುತ್ತಿರುವ ವಿಡಿಯೋವನ್ನು ಸಹ ವೈಷ್ಣವಿ ಅವರು ಶೇರ್ ಮಾಡಿದ್ದಾರೆ, ಇವರೊಡನೆ ಅಮೂಲ್ಯ ಅವರು ಮತ್ತು ಇನ್ನಷ್ಟು ಸ್ನೇಹಿತರು ಸಹ ವೈಷ್ಣವಿ ಅವರ ಸಂಗೀತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಇನ್ನೇನು ವೈಷ್ಣವಿ ಅವರ ಮದುವೆ ಸಹ ನಡೆಯಲಿದೆ. ವೈಷ್ಣವಿ ಅವರು ಹೊಸ ಹೆಜ್ಜೆ ಇಡುವುದನ್ನು ನೋಡಲು ಫ್ಯಾನ್ಸ್ ಕೂಡ ಕಾಯುತ್ತಿದ್ದಾರೆ.



