ನಟಿ ಸಪ್ನಾ ದೀಕ್ಷಿತ್ ಅವರು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಮತ್ತು ಕಿರುತೆರೆಯಲ್ಲಿ ನಟಿಸುತ್ತಿರುವ ಕಲಾವಿದೆ. ಹಲವು ಧಾರಾವಾಹಿಗಳಲ್ಲಿ ಇವರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಪ್ರಸ್ತುತ ಸಪ್ನಾ ದೀಕ್ಷಿತ್ ಅವರು ಜೀಕನ್ನಡ ವಾಹಿನಿಯ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ವಿಲ್ಲನ್ ಪಾತ್ರ ಶಾರ್ವರಿ ಪಾತ್ರದಲ್ಲಿ ಸಪ್ನಾ ದೀಕ್ಷಿತ್ ನಟಿಸುತ್ತಿದ್ದು, ಇದು ಮನೆಯನ್ನು ಮುರಿಯುತ್ತಿರುವ ಪಾತ್ರ, ಮನೆಯಲ್ಲೇ ಇದ್ದುಕೊಂಡು ಮನೆಯವರ ವಿರುದ್ಧ ಕತ್ತಿ ಮಸೆಯುವ ಪಾತ್ರ, ನೆಗಟಿವ್ ಆಗಿ ಸಿಕ್ಕಾಪಟ್ಟೆ ಜನರಿಗೆ ಇಷ್ಟವಾಗಿದೆ. ಸಪ್ನಾ ಅವರ ಪಾತ್ರ ಎಷ್ಟರ ಮಟ್ಟಿಗೆ ಜನರ ತಲೆ ಕೆಡಿಸಿದೆ ಎಂದರೆ, ಬಹಳಷ್ಟು ಜನರ ಸಪ್ನಾ ಅವರಿಗೆ ವೈಯಕ್ತಿಕವಾಗಿ ಕೆಟ್ಟದಾಗಿ ಕಾಮೆಂಟ್ ಬರೆಯುತ್ತಿದ್ದಾರಂತೆ. ಅಂಥವರಿಗೆ ಸಪ್ನಾ ಅವರೇ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಸಪ್ನಾ ಅವರು ಹೇಳಿದ್ದೇನು ಎಂದು ಫುಲ್ ಡೀಟೇಲ್ಸ್ ಇಲ್ಲಿದೆ..
ಈ ಮೊದಲು ಸಪ್ನಾ ಅವರು ಕಮಲಿ ಧಾರಾವಾಹಿಯಲ್ಲಿ ಹಾಗೂ ಇನ್ನಿತರ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಶ್ರೀರಸ್ತು ಶುಭಮಸ್ತು ಧಾರಾವಾಹಿಗೆ ಇವರು ಬಂದಿದ್ದು ರೀಪ್ಲೇಸ್ಮೆಂಟ್ ಆರ್ಟಿಸ್ಟ್ ಆಗಿ. ಶಾರ್ವರಿ ಪಾತ್ರವನ್ನು ಮೊದಲಿಗೆ ನಟಿ ನೇತ್ರಾ ಜಾಧವ್ ಅವರು ನಟಿಸುತ್ತಿದ್ದರು. ಅವರಿಗೆ ತೆಲುಗಿನಲ್ಲಿ ಒಳ್ಳೆಯ ಅವಕಾಶ ಸಿಕ್ಕ ಕಾರಣ ಶ್ರೀರಸ್ತು ಶುಭಮಸ್ತು ಧಾರಾವಾಹಿ ಇಂದ ಹೊರಬಂದರು. ಅವರ ಪಾತ್ರಕ್ಕೆ ನಂತರ ಆಯ್ಕೆಯಾಗಿ ಬಂದಿದ್ದು ಸಪ್ನಾ ದೀಕ್ಷಿತ್ ಅವರು. ಇವರನ್ನು ಶಾರ್ವರಿ ಪಾತ್ರದಲ್ಲಿ ಆಕ್ಸೆಪ್ಟ್ ಮಾಡುವುದಕ್ಕೆ ಕೆಲವು ದಿನಗಳ ಸಮಯ ಹಿಡಿಯಿತು. ಆದರೆ ಜನರಿಗೆ ಈಗ ಸಪ್ನಾ ದೀಕ್ಷಿತ್ ಅವರ ಅಭಿನಯ ಮತ್ತು ಶಾರ್ವರಿ ಪಾತ್ರ ಜನರಿಗೆ ಬಹಳ ಇಷ್ಟವಾಗಿದೆ. ಆದರೆ ಈ ಧಾರಾವಾಹಿ ಶೀಘ್ರದಲ್ಲೇ ಮುಗಿಯಲಿದೆ ಎಂದು ಮಾಹಿತಿ ಸಿಕ್ಕಿದೆ..

ಜೀಕನ್ನಡ ವಾಹಿನಿಯಲ್ಲಿ 2 ಹೊಸ ಧಾರಾವಾಹಿಗಳು ಶುರುವಾಗುವುದಕ್ಕೆ ಸಜ್ಜಾಗಿದೆ, ಕರ್ಣ ಮತ್ತು ರಾಘವೇಂದ್ರ ಸ್ವಾಮಿಗಳ ಧಾರಾವಾಹಿ. ಕರ್ಣ ಧಾರಾವಾಹಿ ಖ್ಯಾತ ನಟ ಕಿರಣ್ ರಾಜ್ ನಾಯಕನಾಗಿ ನಟಿಸುತ್ತಿರುವ ಧಾರಾವಾಹಿ ಆಗಿದೆ. ಈ ಧಾರಾವಾಹಿಯ ಪ್ರೊಮೋ ಈಗಾಗಲೇ ಬಿಡುಗಡೆ ಆಗಿದ್ದು, ಇನ್ನೊಂದು ತಿಂಗಳಲ್ಲಿ ಬಹುಶಃ ಐಪಿಎಲ್ ಮುಗಿದ ನಂತರ ಕರ್ಣ ಧಾರಾವಾಹಿ ಶುರುವಾಗುತ್ತದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಶ್ರೀರಸ್ತು ಶುಭಮಸ್ತು ಧಾರಾವಾಹಿ ಮುಕ್ತಾಯ ಆಗುತ್ತದೆ ಎಂದು ಹೇಳಲಾಗುತ್ತಿದೆ. ಈ ಚರ್ಚೆಗಳು ಒಂದು ಕಡೆಯಾದರೆ, ಮತ್ತೊಂದು ಕಡೆ ಸಪ್ನಾ ದೀಕ್ಷಿತ್ ಅವರ ಪಾತ್ರಕ್ಕೆ ಸಿಗುತ್ತಿರುವ ರೀಚ್. ಶಾರ್ವರಿ ವಿಲ್ಲನ್ ಪಾತ್ರ, ಜೊತೆಗೆ ಕೆಟ್ಟ ಕೆಲಸಗಳನ್ನು ಮಾಡುವ ಪಾತ್ರ ಆಗಿರುವ ಕಾರಣ, ನೆಗಟಿವ್ ಕಾಮೆಂಟ್ಸ್ ಗಳು ಬರುವುದು ಬಹಳ ಕಾಮನ್.
ಜನರು ಪಾತ್ರದ ಬಗ್ಗೆ ಮಾತಾಡಿ, ಪಾತ್ರಕ್ಕೆ ಏನೇ ಬೈದರು ಸಹ ಕಲಾವಿದರಿಗೆ ಬೇಸರ ಆಗುವುದಿಲ್ಲ, ಹಲವಾರು ಜನರಿಗೆ ಇವರಿಗೆ ನಮ್ಮ ತುಳಸಿಗೆ ಯಾಕಷ್ಟು ಹಿಂಸೆ ಕೊಡ್ತೀರಾ, ತೊಂದರೆ ಕೊಡ್ತೀರಾ ಅವರನ್ನ ಬಿಟ್ಟುಬಿಡಿ ಎಂದೆಲ್ಲಾ ಹೇಳುತ್ತಾರಂತೆ.. ಆದರೆ ಕೆಲವು ಜನರು, ವಯ್ಯಕ್ತಿಕವಾಗಿ ಸಪ್ನಾ ದೀಕ್ಷಿತ್ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ, ಸಪ್ನಾ ದೀಕ್ಷಿತ್ ಸತ್ತು ಹೋಗಲಿ, ಅವಳಿಗೆ ಏನಾದರೂ ಆಗಲಿ ಎಂದು ಸಪ್ನಾ ದೀಕ್ಷಿತ್ ಅವರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದಾಗ ಆಕೆಗೆ ಪರ್ಸನಲ್ ಆಗಿ ಮೆಸೇಜ್ ಮಾಡಿದ್ದರಂತೆ ಸಪ್ನಾ ಅವರು. ಪಾತ್ರದ ಬಗ್ಗೆ ನೀವು ಎಷ್ಟು ಬೇಕಾದರೂ ಬೈಕೊಳ್ಳಿ ಪರವಾಗಿಲ್ಲ, ಅದರಿಂದ ನನಗೆ ಏನೂ ಬೇಸರ ಇಲ್ಲ. ಆದರೆ ಸಪ್ನಾ ದೀಕ್ಷಿತ್ ಗೆ ವೈಯಕ್ತಿಕವಾಗಿ ಹೇಳಬೇಡಿ, ಅದು ನನಗೆ ಇಷ್ಟ ಆಗೋದಿಲ್ಲ. ಶಾರ್ವರಿ ಅನ್ನೋದು ಒಂದು ಪಾತ್ರ, ಸಪ್ನಾ ದೀಕ್ಷಿತ್ ಅಲ್ಲ. ಇದು ನಾನು ನಿಮಗೆ ಕೊಡುತ್ತಿರುವ ಮೊದಲ ವಾರ್ನಿಂಗ್, ಇದೇ ಮುಂದುವರೆದರೆ ನಿಮ್ಮ ವಿರುದ್ಧ ಕಂಪ್ಲೇಂಟ್ ಕೊಡಬೇಕಾಗುತ್ತದೆ ಎಂದು ಹೇಳಿದರಂತೆ.

ಆಗ ಆಕೆ, ಕ್ಷಮಿಸಿ ಮೇಡಂ, ಆ ಕಾಮೆಂಟ್ ಅನ್ನು ಡಿಲೀಟ್ ಮಾಡುತ್ತೇನೆ ಎಂದು ಹೇಳಿದರಂತೆ. ಸಪ್ನಾ ದೀಕ್ಷಿತ್ ಅವರು ಈ ಬಗ್ಗೆ ಮಾತನಾಡಿ, ಯಾರು ಕೂಡ ವೈಯಕ್ತಿಕವಾಗಿ ಈ ರೀತಿ ಮಾತನಾಡಬೇಡಿ ಎಂದು ಎಲ್ಲರಲ್ಲೂ ಮನವಿ ಮಾಡಿಕೊಂಡಿದ್ದಾರೆ. ಹಾಗೆಯೇ ಧಾರಾವಾಹಿಯಲ್ಲಿ ಆ ರೀತಿ ನೋಡಿ ಜನರು ನಾವು ಹಾಗೆ ಇರುತ್ತೀವಿ ಅಂದುಕೊಂಡಿರುತ್ತಾರೆ. ಆದರೆ ನಾವೆಲ್ಲರೂ ಬಹಳ ಚೆನ್ನಾಗಿದ್ದೀವಿ, ಒಂದೇ ಕುಟುಂಬದ ಹಾಗಿದ್ದೀವಿ ಎಂದು ಹೇಳಿದ್ದಾರೆ. ಇನ್ನು ಸಪ್ನಾ ದೀಕ್ಷಿತ್ ಅವರು ವೈಯಕ್ತಿಕ ಜೀವನದಲ್ಲಿ ಅದರಲ್ಲೂ ಅವರ ಗಂಡನ ವಿಚಾರದಲ್ಲಿ ಬಹಳ ಕಷ್ಟಪಟ್ಟಿದ್ದಾರೆ. ಗಂಡನಿಗೆ ಬಹಳ ಸಪೋರ್ಟಿವ್ ಆಗಿದ್ದಾರೆ. ಸಪ್ನಾ ದೀಕ್ಷಿತ್ ಅವರ ಪತಿಯ ಹೆಸರು ಅಶ್ವಿನ್. ಇವರಿಬ್ಬರು ಇಸ್ಮಾರ್ಟ್ ಜೋಡಿ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದರು. ಆ ಕಾರ್ಯಕ್ರಮದ ವೇಳೆ ಗಂಡನ ಬಗ್ಗೆ ಅನೇಕ ವಿಚಾರಗಳನ್ನು ಶೇರ್ ಮಾಡಿದ್ದರು.
ಸಪ್ನಾ ದೀಕ್ಷಿತ್ ಅವರ ಗಂಡ ಅಶ್ವಿನ್ ಅವರು ಕೆಲಸದ ವಿಚಾರದಲ್ಲಿ ಕಂಸಿಸ್ಟೆಂಟ್ ಆಗಿ ಇರಲಿಲ್ಲ. ಒಂದು ವರ್ಷ ಕೆಲಸಕ್ಕೆ ಹೋಗುವುದು, ಮತ್ತೆ ಬ್ರೇಕ್ ತೆಗೆದುಕೊಳ್ಳುವುದು ಈ ರೀತಿ ಮಾಡುತ್ತಿದ್ದರಂತೆ. ಅವರು ಚೆನ್ನಾಗಿ ಕೆಲಸಕ್ಕೆ ಹೋಗುವಾಗ, ಎಲ್ಲರೂ ಅವರ ಜೊತೆಗೆ ಇದ್ದರು, ಹುಡುಗರು ಅವರ ಬಳಿ ಇದ್ದ ದುಡ್ಡಿಗಾಗಿ ಅವರ ಜೊತೆಗೆ ಇರುತ್ತಿದ್ದರು. ದುಡ್ಡು ಖಾಲಿ ಆದಾಗ ಎಲ್ಲರೂ ಅವರನ್ನು ಬಿಟ್ಟು ಹೊರಟು ಹೋದರು ಎಂದು ಹೇಳಿದ್ದರು ಸಪ್ನಾ ಅವರು. 16 ವರ್ಷಗಳ ಕಾಲ ಅವರ ಗಂಡ ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲವಂತೆ. ಬಳಿಕ ಅವರಿಗೆ ಗೊತ್ತಿರುವ ಒಬ್ಬರ ಬಳಿ ನನ್ನ ಗಂಡನಿಗೆ ಕೆಲಸ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಕ್ಕೆ ಅವರು ನಮ್ಮ ಕಂಪೆನಿಯಲ್ಲೇ ಕೆಲಸ ಇದೆ ಎಂದು ಹೇಳಿ, ಸಪ್ನಾ ದೀಕ್ಷಿತ್ ಅವರ ಗಂಡನಿಗೆ ಕೆಲಸ ಕೊಡಿಸಿದರಂತೆ. ಈಗ ಅವರು ಕೆಲಸಕ್ಕೆ ಹೋಗುತ್ತಿದ್ದಾರೆ.

ಎಲ್ಲವೂ ಚೆನ್ನಾಗಿದೆ, ದೊಡ್ಡ ಖರ್ಚುಗಳನ್ನು ಸಪ್ನಾ ಅವರು ನೋಡಿಕೊಂಡರೆ, ಸಣ್ಣ ಖರ್ಚುಗಳನ್ನು ಸಪ್ನಾ ಅವರ ಗಂಡ ನೋಡಿಕೊಳ್ಳುತ್ತಾರಂತೆ. ಅವರ ಸಂಸಾರ ಈಗ ಚೆನ್ನಾಗಿ ನಡೆಯುತ್ತಿದೆ, ಸಣ್ಣ ಪುಟ್ಟ ಜಗಳ ಅದೆಲ್ಲವೂ ಸಹ ಇದ್ದೇ ಇರುತ್ತದೆ. ಆದರೆ ಅದೆಲ್ಲವನ್ನು ಮೀರಿ ನಾವು ಚೆನ್ನಾಗಿರೋದಾಗಿ ಸಪ್ನಾ ಅವರು ಹೇಳಿಕೊಂಡಿದ್ದರು. ಕೆಲವರು ಗಂಡನನ್ನು ಬಿಟ್ಟು ರೀಲ್ಸ್ ಮಾಡುತ್ತಿದ್ದೀಯಾ ಎಂದು ಹೇಳಿದರಂತೆ. ಆದರೆ ಗಂಡನನ್ನು ಬಿಡುವುದಕ್ಕೆ ಎಲ್ಲಾ ರೀತಿಯಲ್ಲಿ ಕಾರಣಗಳು ಇದ್ದರೂ ಸಹ ಸಪ್ನಾ ಅವರು ಗಂಡನನ್ನು ಬಿಡಲಿಲ್ಲ. ವ್ಯಕ್ತಿ ಒಳ್ಳೆಯವನು ಎನ್ನುವ ಕಾರಣಕ್ಕೆ ಗಂಡನ ಜೊತೆಗೆ ಇದ್ದಾರೆ, ಸಂತೋಷವಾಗಿ ಇದ್ದಾರೆ. ಶ್ರೀರಸ್ತು ಶುಭಮಸ್ತು ನಂತರ ಸಪ್ನಾ ಅವರು ಯಾವ ಧಾರಾವಾಹಿಯಲ್ಲಿ ನಟಿಸುತ್ತಾರೆ ಎಂದು ಕಾದು ನೋಡಬೇಕಿದೆ.



