ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಶೋಗಳಲ್ಲಿ ಮಜಾ ಟಾಕೀಸ್ ಕೂಡ ಒಂದು. ಈ ಶೋ ಇಂದ ಜನರಿಗೆ ಸಂಪೂರ್ಣ ಮನರಂಜನೆ ಸಿಗುತ್ತಿತ್ತು, ಕಳೆದ ಒಂದೆರಡು ವರ್ಷಗಳಿಂದ ಮಜಾ ಟಾಕೀಸ್ ಶೋ ನಡೆದಿರಲಿಲ್ಲ. ಆದರೆ ಈಗ ಮತ್ತೆ ಮಜಾ ಟಾಕೀಸ್ ಶೋ ಮತ್ತೆ ಶುರುವಾಗುತ್ತದೆ ಎಂದಾಗ ವೀಕ್ಷಕರಲ್ಲಿ ಸಂತೋಷಕ್ಕಿಂತ ಬೇಜಾರಾಗಿದ್ದೇ ಜಾಸ್ತಿ. ಅದಕ್ಕೆ ಕಾರಣ ಅಪರ್ಣ ಅವರು ಇಲ್ಲ ಎನ್ನುವುದು. ಮಜಾ ಟಾಕೀಸ್ ಶೋ ಎಂದ ತಕ್ಷಣ ಎಲ್ಲರಿಗೂ ನೆನಪಾಗುತ್ತಾ ಇದ್ದಿದ್ದೇ ಅಪರ್ಣ ಅವರು. ಆದರೆ ಈ ವರ್ಷ ಅಪರ್ಣಾ ಅವರೇ ಇಲ್ಲದೇ ಶೋ ಶುರುವಾಯಿತು. ಅಷ್ಟೇ ಬೇಗ ಮುಗಿದು ಹೋಯಿತು. ಈ ಸೀಸನ್ ನಲ್ಲಿ ಸಾಕಷ್ಟು ಹಳೆಯ ಕಲಾವಿದರು ಇರಲಿಲ್ಲ. ಈ ಬಗ್ಗೆ ಮಂಡ್ಯ ರಮೇಶ್ ಅವರನ್ನು ಕೇಳಿದ್ದಕ್ಕೆ ಅವರು ತಮ್ಮ ಪ್ರಕಾರವಾಗಿ ಉತ್ತರ ನೀಡಿದ್ದಾರೆ. ಅವರು ಹೇಳಿರುವುದು ಏನು ಎಂದರೆ..

ಮಜಾ ಟಾಕೀಸ್ ಶೋ 10 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಶೋ. ಶುರು ಆದಾಗಿನಿಂದ ಕೂಡ ಈ ಶೋ ಬಹಳ ಜನಪ್ರಿಯತೆ ಪಡೆದುಕೊಂಡಿತು. ಅದಕ್ಕೆ ಕಾರಣ ಈ ಶೋನಲ್ಲಿ ಇದ್ದ ಕಲಾವಿದರು ಮತ್ತು ಒಳ್ಳೆಯ ಕಾಮಿಡಿ. ಶ್ವೇತಾ ಚೆಂಗಪ್ಪ, ಅಪರ್ಣಾ, ಕುರಿ ಪ್ರತಾಪ್, ಮಂಡ್ಯ ರಮೇಶ್, ತರಂಗ ವಿಶ್ವ ಇವರೆಲ್ಲರೂ ಶೋನಲ್ಲಿ ಒಳ್ಳೆಯ ಮನರಂಜನೆ ಕೊಡುತ್ತಿದ್ದರು. ಅದರಲ್ಲೂ ಅಪರ್ಣ ಅವರ ಒನ್ ಅಂಡ್ ಓನ್ಲಿ ವರಲಕ್ಷ್ಮಿ ಪಾತ್ರವನ್ನ ಯಾರು ಮರೆಯುವುದಕ್ಕೆ ಸಾಧ್ಯವಿಲ್ಲ. ಇನ್ನು ಸೃಜನ್ ಲೋಕೇಶ್ ಅವರ ನಿರೂಪಣೆ ಕೂಡ ಅಷ್ಟೇ ಅದ್ಭುತವಾಗಿ ಇರುತ್ತಿತ್ತು, ನೋಡುಗರಿಗೆ ಸೂಪರ್ ಮನರಂಜನೆ ಸಿಗುತ್ತಿತ್ತು. ಈ ಶೋ ಹೆಚ್ಚು ಜನರನ್ನು ತಲುಪಿದ್ದೇ ಈ ಕಾರಣಕ್ಕೆ. ಆದರೆ ಒಂದು ಬ್ರೇಕ್ ನಂತರ ಮತ್ತೆ ಈ ವರ್ಷ ಮಜಾ ಟಾಕೀಸ್ ಶೋ ಶುರುವಾಯಿತು.
ಈ ಬಾರಿ ಹಿಂದಿನ ಕಲಾವಿದರು ಇರಲಿಲ್ಲ, ಇಂದ್ರಜಿತ್ ಲಂಕೇಶ್ ಅವರು ಕೂಡ ಇರಲಿಲ್ಲ. ಶ್ವೇತಾ ಚೆಂಗಪ್ಪ, ಅಪರ್ಣ ಅವರು ಇವರ್ಯಾರು ಇಲ್ಲದೆಯೇ ಶೋ ಶುರುವಾಯ್ತು. ಅದೇ ರೀತಿ ಬಹಳ ಬೇಗ ಮಜಾ ಟಾಕೀಸ್ ಶೋ ಮುಗಿದು ಹೋಯ್ತು. ಇಷ್ಟು ಬೇಗ ಮಜಾ ಟಾಕೀಸ್ ಶೋ ಮುಗಿದಿದ್ದು ಇದೇ ಮೊದಲು ಎಂದು ಹೇಳಿದರೂ ತಪ್ಪಲ್ಲ. ಸೃಜನ್ ಲೋಕೇಶ್ ಅವರು ಕೆಲವೇ ಸಂಚಿಕೆಗಳಿಗೆ ಮಜಾ ಟಾಕೀಸ್ ಶೋ ಅನ್ನು ಮುಗಿಸಿಬಿಟ್ಟರು. ಇಷ್ಟು ಬೇಗ ಮಜಾ ಟಾಕೀಸ್ ಮುಗಿದು ಹೋಗುತ್ತದೆ ಎಂದು ಯಾರು ನಿರೀಕ್ಷೆ ಮಾಡಿರಲಿಲ್ಲ. ಜೊತೆಗೆ ಹಿಂದಿನ ಸೀಸನ್ ಗಳ ಹಾಗೆ ಜನಪ್ರಿಯತೆ ಸಹ ಸಿಗಲಿಲ್ಲ ಎನ್ನುವುದು ಮತ್ತೊಂದು ವಿಚಾರ ಆಗಿದೆ. ಇದೆಲ್ಲದರ ನಡುವೆ ಹಿಂದಿನ ಸಾಕಷ್ಟು ಕಲಾವಿದರು ಇರಲಿಲ್ಲ ಎನ್ನುವ ಪ್ರಶ್ನೆ ಸಹ ಶುರುವಾಯಿತು. ಅದರ ಬಗ್ಗೆ ಇಂದು ಇನ್ನಷ್ಟು ಡೀಟೇಲ್ಸ್ ಇದೆ.

ನಮಗೆಲ್ಲ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದಲ್ಲಿ ಮತ್ತು ರಂಗಭೂಮಿಯಲ್ಲಿ ಗುರುತಿಸಿಕೊಂಡಿರುವ ಮಂಡ್ಯ ರಮೇಶ್ ಅವರು ಮಜಾ ಟಾಕೀಸ್ ನಲ್ಲಿ ಮುದ್ದೇಶ ಪಾತ್ರದಲ್ಲಿ ನಟಿಸುತ್ತಿದ್ದರು ಎನ್ನುವ ವಿಷಯ ನಮಗೆಲ್ಲ ಗೊತ್ತೇ ಇದೆ. ವರಲಕ್ಷ್ಮೀ ತಮ್ಮ, ರಾಣಿಯ ಅಣ್ಣ ಮುದ್ದೇಶನ ಪಾತ್ರದಲ್ಲಿ ಮಂಡ್ಯ ರಮೇಶ್ ಅವರು ನಟಿಸುತ್ತಿದ್ದರು. ಈ ಪಾತ್ರ ಸಿಕ್ಕಾಪಟ್ಟೆ ಪಾಪ್ಯುಲರ್ ಸಹ ಆಗಿತ್ತು. ಮಂಡ್ಯ ರಮೇಶ್ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ಹಾಗೆಯೇ ಜನರು ಕೂಡ ಮುದ್ದೇಶ ಪಾತ್ರವನ್ನು ಇಷ್ಟಪಡುತ್ತಿದ್ದರು. ಆದರೆ ಈ ಸೀಸನ್ ನಲ್ಲಿ ಮಂಡ್ಯ ರಮೇಶ್ ಅವರು ಕೂಡ ಇರಲಿಲ್ಲ. ಅವರು ಯಾಕೆ ಮಜಾ ಟಾಕೀಸ್ ನಲ್ಲಿ ಕಾಣಿಸಿಕೊಳ್ಳಲಿಲ್ಲ ಅನ್ನೋದನ್ನ ಖುದ್ದು ಮಂಡ್ಯ ರಮೇಶ್ ಅವರೇ ತಿಳಿಸಿದ್ದಾರೆ.
ಮಂಡ್ಯ ರಮೇಶ್ ಈಗ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯ ಆಸೆ ಧಾರಾವಾಹಿಯಲ್ಲಿ ಮಂಡ್ಯ ರಮೇಶ್ ಅವರು ನಟಿಸುತ್ತಿದ್ದು, ಈ ಧಾರಾವಾಹಿ ಒಳ್ಳೆಯ ಹೆಸರನ್ನು ಪಡೆದುಕೊಂಡಿದೆ, ಇತ್ತೀಚೆಗೆ ಧಾರಾವಾಹಿ ಕುರಿತ ಹಾಗೆ ಮಾಧ್ಯಮದವರಿಗೆ ಸಿಕ್ಕ ಮಂಡ್ಯ ರಮೇಶ್ ಅವರು, ಮಜಾ ಟಾಕೀಸ್ ಬಗ್ಗೆ ಕೂಡ ಮಾತನಾಡಿದ್ದಾರೆ. “ಈ ಸಾರಿ ನಾನು ಇರಲಿಲ್ಲ, ಅಪರ್ಣ ಇರಲಿಲ್ಲ, ಶ್ವೇತಾ ಇರಲಿಲ್ಲ, ದಯಾನಂದ ಇರಲಿಲ್ಲ, ಮನೋಹರ್ ಅಣ್ಣ ಇರಲಿಲ್ಲ, ಸಾಕಷ್ಟು ಜನ ಇರಲಿಲ್ಲ. ಯಾಕೆ ಇಷ್ಟು ಬೇಗ ಮುಗಿಸಿದ್ದು ಅಂತ ಕೂಡ ಗೊತ್ತಿಲ್ಲ. ಮಜಾ ಟಾಕೀಸ್ ಕಾರ್ಯಕ್ರಮ ಐದು ವರ್ಷಗಳ ಕಾಲ ಯಶಸ್ವಿಯಾಗಿ ನಡೆದು, ನಮಗೆಲ್ಲ ಒಳ್ಳೆಯ ಹೆಸರನ್ನು ತಂದುಕೊಟ್ಟಿತು..” ಎಂದು ಮಂಡ್ಯ ರಮೇಶ್ ಅವರು ಹೇಳಿದ್ದಾರೆ. ಇನ್ನು ತಮ್ಮ ಕೆರಿಯರ್ ಬಗ್ಗೆ ಕೂಡ ಮಾತನಾಡಿದ್ದಾರೆ..

“ಎಲ್ಲಾ ಕಲಾವಿದರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಸಿಗೋದಿಲ್ಲ. ಸಿನಿಮಾದಲ್ಲಿ ಯಶಸ್ಸು ಸಿಕ್ಕರೆ ಧಾರಾವಾಹಿಯಲ್ಲಿ ಸಿಗಲ್ಲ, ಧಾರಾವಾಹಿಯಲ್ಲಿ ಸಿಕ್ಕರೆ, ಸಿನಿಮಾದಲ್ಲಿ ಸಿಗೋದಿಲ್ಲ. ಕೆಲವರಿಗೆ ಧಾರಾವಾಹಿಯಲ್ಲಿ ಯಶಸ್ಸು ಸಿಕ್ಕರೆ ರಿಯಾಲಿಟಿ ಶೋನಲ್ಲಿ ಸಿಗೋದಿಲ್ಲ, ರಿಯಾಲಿಟಿ ಶೋನಲ್ಲಿ ಯಶಸ್ಸು ಸಿಕ್ಕರೆ ಇನ್ಯಾವುದರಲ್ಲಿ ಕೂಡ ಸಿಗೋದಿಲ್ಲ. ಆದರೆ ನನಗೆ ಸಿನಿಮಾ ರಂಗಭೂಮಿ ಧಾರಾವಾಹಿ ರಿಯಾಲಿಟಿ ಶೋ ಎಲ್ಲದರಲ್ಲೂ ಯಶಸ್ಸು ಸಿಕ್ಕಿತು. ರಂಗಭೂಮಿಯಲ್ಲಿ ಆಕ್ಟ್ ಮಾಡಿದಾಗ ಜನ ಗುಡ್ ಅಂದ್ರು, ನಾಟಕವನ್ನ ನಿರ್ದೇಶನ ಮಾಡಿದಾಗ ಬೆಸ್ಟ್ ಡೈರೆಕ್ಟರ್ ಅಂದ್ರು. ನಾಟಕಶಾಲೆ ಕಟ್ಟಿದಾಗ ಬೆನ್ನು ತಟ್ಟಿ ಪ್ರೋತ್ಸಾಹ ಕೊಟ್ರು. ಸಿನಿಮಾದಲ್ಲಿ ಅಭಿನಯಿಸಿದಾಗ, ನಾಗಮಂಡಲ ಸಿನಿಮಾಗೆ ಅವಾರ್ಡ್ ಕೊಟ್ರು..
ಕನಸುಗಾರ ಸಿನಿಮಾ ಮಾಡಿದಾಗ ತುಂಬಾ ಪ್ರೀತಿ ಕೊಟ್ರು. ಧಾರಾವಾಹಿ ಮಾಡಿದಾಗ ಗುಡ್ ಅಂದ್ರು, ರಿಯಾಲಿಟಿ ಶೋ ಮಾಡಿದಾಗಲೂ ಗುಡ್ ಅಂದ್ರು. ಎಲ್ಲಾ ಕ್ಷೇತ್ರಗಳಲ್ಲಿ ನನಗೆ ಜನರು ಪ್ರೀತಿ ಕೊಟ್ಟಿದ್ದಾರೆ. ಇದರಲ್ಲಿ ನನ್ನದೇನು ಇಲ್ಲ. ಎಲ್ಲಾ ಜನರು ಕೊಟ್ಟ ಪ್ರೀತಿ. ಮುದ್ದೇಶ ಪಾತ್ರವನ್ನು ಜನರು ತುಂಬಾ ಇಷ್ಟಪಟ್ಟರು. ಎಲ್ಲೇ ಹೋದರು ಮುದ್ದೇಶಸ್ ಅಂತ ಕರೀತಿದ್ರು. ಅಷ್ಟು ಪ್ರೀತಿ ಕೊಟ್ಟರು ಮುದ್ದೇಶ ಪಾತ್ರಕ್ಕೆ..” ಎಂದು ತಮ್ಮ ಕೆರಿಯರ್ ಬಗ್ಗೆ ಹೇಳಿದ್ದಾರೆ ಮಂಡ್ಯ ರಮೇಶ್ ಅವರು.



