ಚಂದನವನದ ದೇವರು, ಚಂದನವನದ ದಂತಕಥೆ ಎಂದೇ ಹೆಸರುವಾಸಿ ಆಗಿರುವವರು ಡಾ. ರಾಜ್ ಕುಮಾರ್. ಇವರ ಬಗ್ಗೆ ಹೇಳುತ್ತಾ ಹೋದರೆ, ಪುಟಗಳೇ ಸಾಕಾಗೋದಿಲ್ಲ. ಡಾ. ರಾಜ್ ಕುಮಾರ್ ಅವರು ತಮ್ಮ ನಟನೆಯ ಮೂಲಕ ಮಾತ್ರ ಅಭಿಮಾನಿಗಳನ್ನು ಹೊಂದಿರಲಿಲ್ಲ, ಅವರಲ್ಲಿರುವ ಒಳ್ಳೇತನ, ಸರಳತೆ, ಅಭಿಮಾನಿಗಳನ್ನು ದೇವರು ಎಂದು ಭಾವಿಸಿದ ಅವರ ವ್ಯಕ್ತಿತ್ವ ಇದೆಲ್ಲವೂ ಸಹ ಅವರನ್ನು ಅಷ್ಟು ಎತ್ತರಕ್ಕೆ ಕೊಂಡೊಯ್ಯಿತು. ಆದರೆ ರಾಜ್ ಕುಮಾರ್ ಅವರು ಮಾತ್ರ ಸರಳತೆ ಇಂದಲೇ ಇದ್ದವರು. ಡಾ. ರಾಜ್ ಕುಮಾರ್ ಅವರಿಗೆ ಇರುವ ಅಭಿಮಾನಿ ಬಳಗ ಹೇಗಿತ್ತು ಎಂದು ಗೊತ್ತೇ ಇದೆ. ಆ ದಿವಸ ಅಣ್ಣಾವ್ರು ತಮ್ಮ ಸಿನಿಮಾದಲ್ಲಿ ಒಂದೇ ಒಂದು ಸಣ್ಣ ಪಾತ್ರದಲ್ಲಿ ನಟಿಸಬೇಕು ಎಂದು ಅಮಿತಾಬ್ ಬಚ್ಚನ್ ಅವರು ಕೇಳಿಕೊಂಡಾಗ ಅಣ್ಣಾವ್ರು ಹೇಳಿದ್ದೇನು ಗೊತ್ತಾ? ಕನ್ನಡಾಭಿಮಾನ ಅಂದ್ರೆ ಇದು..
ಇಂದಿಗೂ ಕೋಟ್ಯಾಂತರ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವವರು ಡಾ. ರಾಜ್ ಕುಮಾರ್. ಡಾ. ರಾಜ್ ಕುಮಾರ್ ಅವರ ಸಿನಿಮಾಗಳು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತಿತ್ತು, ಜನರಿಗೆ ಬದುಕಿನ ಪಾಠ ಕಲಿಸುತ್ತಿತ್ತು, ಈ ಕಾರಣಕ್ಕೆ ಅವರ ಸಿನಿಮಾಗಳು ಜನರ ಮೇಲೆ ಅಷ್ಟು ಪರಿಣಾಮ ಬೀರುತ್ತಿತ್ತು ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಡಾ. ರಾಜ್ ಕುಮಾರ್ ಅಂದರೆ ಅಭಿಮಾನಿಗಳಿಗೆ ಹುಚ್ಚು ಅಭಿಮಾನ, ರಾಜ್ ಅವರಿಗೂ ಅಷ್ಟೇ ಅಭಿಮಾನಿಗಳು ಅಂದ್ರೆ ಅಷ್ಟೇ ಪ್ರೀತಿ ಮತ್ತು ವಿಶ್ವಾಸ. ಅಭಿಮಾನಿಗಳಲ್ಲಿ ದೇವರನ್ನು ಕಂಡ ಮೊದಲ ಕಲಾವಿದ ಡಾ. ರಾಜ್ ಕುಮಾರ್ ಅವರು ಎಂದು ಹೇಳಿದರೂ ತಪ್ಪಲ್ಲ. ಅಭಿಮಾನಿಗಳನ್ನು ದೇವರು ಎಂದೇ ಕರೆಯುತ್ತಿದ್ದರು. ಎಲ್ಲರನ್ನು ಒಂದೇ ರೀತಿ ಕಾಣುತ್ತಿದ್ದರು.

ಡಾ. ರಾಜ್ ಕುಮಾರ್ ಅವರು ಕನ್ನಡ ಕಂಡ ಅಪ್ರತಿಮ ಕಲಾವಿದ. ಅವರ ಬಗ್ಗೆ ಹಲವು ವಿಶೇಷತೆಗಳು, ವೈಶಿಷ್ಟ್ಯತೆಗಳನ್ನು ಕೇಳುತ್ತಲೇ ಬಂದಿದ್ದೇವೆ. ಅಣ್ಣಾವ್ರು ಎಂಥಾ ಅದ್ಭುತವಾದ ನಟ ಎಂದು ನಮಗೆಲ್ಲ ಗೊತ್ತೇ ಇದೆ. ಡಾ. ರಾಜ್ ಕುಮಾರ್ ಅವರು ಎಲ್ಲಾ ಥರದ ಪಾತ್ರಗಳಲ್ಲಿ ನಟಿಸಿ ಹೆಸರು ಮಾಡಿದವರು. ಸಾಮಾಜಿಕ ಪಾತ್ರಗಳು, ಐತಿಹಾಸಿಕ ಪಾತ್ರಗಳು, ಪೌರಾಣಿಕ ಪಾತ್ರಗಳು ಎಲ್ಲದರಲ್ಲೂ ನಟಿಸಿ, ಸೈ ಎನ್ನಿಸಿಕೊಂಡಿರುವವರು. ಆಡು ಮುಟ್ಟದ ಸೊಪ್ಪಿಲ್ಲ ರಾಜಣ್ಣ ಮಾಡದ ಪಾತ್ರವೇ ಇಲ್ಲ ಎಂದು ಹಲವರು ಹೇಳಿದ್ದಾರೆ. ಡಾ. ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿ ಇದ್ದಷ್ಟು ಸಮಯ, ಇಲ್ಲಿನ ಸಿನಿಮಾಗಳು ಬಹಳ ಚೆನ್ನಾಗಿದ್ದವು. ಈಗ ಕನ್ನಡ ಚಿತ್ರರಂಗ ಯಜಮಾನ ಇಲ್ಲದ ಮನೆಯಾಗಿದೆ ಎಂದು ಹೇಳಿದರೆ ತಪ್ಪಲ್ಲ. ಇದೆಲ್ಲವೂ ಒಂದು ಕಡೆಯಾದರೆ, ಅಣ್ಣಾವ್ರ ಸಿನಿಮಾ ಬಗ್ಗೆ ಮಾತನಾಡುವುದಾದರೆ..
ಡಾ. ರಾಜ್ ಕುಮಾರ್ ಅವರ ಒಂದೊಂದು ಸಿನಿಮಾಗಳು ಕೂಡ ವಿಭಿನ್ನವಾಗಿ ಇರುತ್ತಿದ್ದವು. ಹಲವು ಸಿನಿಮಾಗಳು ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವಂಥ ಸಿನಿಮಾ ಆಗಿರುತ್ತಿತ್ತು. ಅಣ್ಣಾವ್ರ ಸಿನಿಮಾಗಳು ಬಹಳಷ್ಟು ಭಾಷೆಗಳಿಗೆ ಡಬ್ ಆಗಿವೆ. ಅಲ್ಲಿನ ಕಲಾವಿದರು ನಾವು ಡಾ. ರಾಜ್ ಕುಮಾರ್ ಅವರ ಹಾಗೆ ಅಭಿನಯಿಸೋದಕ್ಕೆ ಆಗೋದಿಲ್ಲ ಎಂದು ಹೇಳಿದ್ದಿದೆ. ಅಂಥ ಶ್ರೇಷ್ಠ ಅಭಿನಯ ಇವರದ್ದು. ಡಾ. ರಾಜ್ ಕುಮಾರ್ ಅವರನ್ನು ಸೀನಿಯರ್ ಎನ್.ಟಿ.ಆರ್, ಎ.ಎನ್.ಆರ್, ಶಿವಾಜಿ ಗಣೇಶನ್, ಎಂ.ಜಿ.ಆರ್ ಎಲ್ಲರೂ ಹೊಗಳುತ್ತಿದ್ದರು. ಆದರೆ ಇತ್ತೀಚೆಗೆ ತೆಲುಗು ಮತ್ತು ಹಿಂದಿ ಭಾಷೆಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅಣ್ಣಾವ್ರ ಬಗ್ಗೆ ಸುಳ್ಳು ಹೇಳಿಕೆ ನೀಡಿದ್ದರು. ಅಮಿತಾಬ್ ಬಚ್ಚ ಅವರ ಸಿನಿಮಾವನ್ನು ರಿಮೇಕ್ ಮಾಡುತ್ತಿದ್ದರು ಎಂದು ನೀಡಿದ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿ. ಕನ್ನಡಿಗರ ಕೆಂಗಣ್ಣಿಗೆ ಗುರಿಯಾದರು ಆರ್ಜಿವಿ.

ಇದರ ನಡುವೆ ಈಗ ಅಣ್ಣಾವ್ರು ಮತ್ತು ಅಮಿತಾಬ್ ಬಚ್ಚನ್ ಅವರಿಗೆ ಸಂಬಂಧಿಸಿದ ಒಂದು ಘಟನೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೌದು, ಆಗಿನ ಕಾಲದಲ್ಲಿ ಎಲ್ಲಾ ಭಾಷೆಯ ಕಲಾವಿದರಿಗೆ ಮತ್ತೊಂದು ಭಾಷೆಯ ಕಲಾವಿದರ ಬಗ್ಗೆ ಬಹಳ ಗೌರವ ಮತ್ತು ಅಭಿಮಾನ ಇತ್ತು. ಈಗಲೂ ಹಾಗೆ ಇದ್ದಾರೆ ಕಲಾವಿದರು. ಅದೇ ರೀತಿ ಅಮಿತಾಬ್ ಬಚ್ಚನ್ ಅವರಿಗೆ ಅಣ್ಣಾವ್ರನ್ನು ಕಂಡರೆ ಅಷ್ಟೇ ಪ್ರೀತಿ, ಗೌರವ. ಅಣ್ಣಾವ್ರ ಜೊತೆಗೆ ಶಬರಿಮಲೆ ಯಾತ್ರೆಗೆ ಹೋಗಿದ್ದರು ಅಮಿತಾಬ್ ಬಚ್ಚನ್ ಅವರು..ಅಷ್ಟು ಅನ್ಯೋನ್ಯತೆ ಇತ್ತು ಅವರಿಬ್ಬರ ನಡುವೆ. ಇನ್ನು ಅಣ್ಣಾವ್ರಿಗೆ ಕೂಡ ಅದೇ ರೀತಿ ಅಮಿತಾಬ್ ಬಚ್ಚನ್ ಅವರನ್ನು ಕಂಡರೆ ಗೌರವ ಇತ್ತು. ಎಲ್ಲರನ್ನು ಅದೇ ರೀತಿ ಕಾಣುತ್ತಿದ್ದರು ಡಾ. ರಾಜ್ ಕುಮಾರ್. ಅಣ್ಣಾವ್ರು ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ನಟಿಸಿಲಿಲ್ಲ ಎನ್ನುವುದು ನಮಗೆಲ್ಲ ಗೊತ್ತಿರುವ ವಿಷಯ..
ಅಮಿತಾಬ್ ಬಚ್ಚನ್ ಅವರ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು ಕೂಲಿ. ಈ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತ್ತು ಎಂದು ನಮಗೆಲ್ಲ ಗೊತ್ತೇ ಇದೆ. ಈಗಲೂ ಬಾಲಿವುಡ್ ನ ಎವರ್ ಗ್ರೀನ್ ಸಿನಿಮಾಗಳ ಸಾಲಿಗೆ ಸೇರಿರುವ ಸಿನಿಮಾ ಕೂಲಿ. ಈ ಸಿನಿಮಾದ ಒಂದು ವಿಶೇಷ ಪಾತ್ರದಲ್ಲಿ ಅಣ್ಣಾವ್ರು ನಟಿಸಬೇಕು ಎನ್ನುವುದು ಅಮಿತಾಬ್ ಬಚ್ಚನ್ ಅವರ ಆಸೆ ಆಗಿತ್ತು. ತಾವೇ ಖುದ್ದಾಗಿ ಬೆಂಗಳೂರಿಗೆ ಬಂದು, ಅಣ್ಣಾವ್ರನ್ನ ಭೇಟಿ ಮಾಡಿ, ತಮ್ಮ ಸಿನಿಮಾದ ಒಂದು ಪಾತ್ರದಲ್ಲಿ ನಟಿಸಬೇಕು ಎಂದು ಕೇಳಿಕೊಂಡರು, ರಿಕ್ವೆಸ್ಟ್ ಮಾಡಿಕೊಂಡರು. ಆದರೆ ಅಣ್ಣಾವ್ರು ಹೇಳಿದ್ದು ಒಂದೇ ಮಾತು.. “ನಿಮ್ಮ ಬಗ್ಗೆ ನನಗೆ ತುಂಬಾ ಗೌರವ ಇದೆ. ಆದರೆ ನಾನು ಕನ್ನಡ ಬಿಟ್ಟು ಬೇರೆ ಯಾವುದೇ ಭಾಷೆಯ ಸಿನಿಮಾದಲ್ಲಿ ನಟಿಸುವುದಿಲ್ಲ..” ಎಂದು ಹೇಳಿದರು. ಇಷ್ಟೆಲ್ಲಾ ಆದ ನಂತರ ಬಚ್ಚನ್ ಅವರು ಮತ್ತೆ ಏನು ಹೇಳೋಕೆ ಆಗಲಿಲ್ಲ..
ಈ ಒಂದು ಘಟನೆ ಸಾಕು ಅಣ್ಣಾವ್ರಿಗೆ ಭಾಷೆಯ ಬಗ್ಗೆ ಇದ್ದ ಪ್ರೀತಿ, ಗೌರವ, ಅಭಿಮಾನ ಹೇಗಿತ್ತು ಅನ್ನೋದನ್ನ ಹೇಳುತ್ತದೆ. ಕನ್ನಡದ ಪರವಾಗಿ ಸದಾ ನಿಂತವರು ಅಣ್ಣಾವ್ರು. ಇವರ ಬಗ್ಗೆ ಏನೇನೋ ಹೇಳಿಕೆ ಕೊಡೋರು ಮೊದಲು ಈ ವಿಷಯಗಳನ್ನ ತಿಳಿದುಕೊಳ್ಳಬೇಕು. ಅಣ್ಣಾವ್ರು ಎಂಥಾ ಶ್ರೇಷ್ಠ ವ್ಯಕ್ತಿತ್ವ ಹೊಂದಿರುವವರು ಎಂದು ಹೇಳೋದಕ್ಕೆ ಇಂಥ ನೂರಾರು ಘಟನೆಗಳು ಇದೆ..



