ಅಶ್ವಿನಿ ಗೌಡ ರಕ್ಷಿತಾಳ ವಿಚಾರಕ್ಕೆ ಸುದೀಪ್ ರವರು ತರಾ ತೆಗೆದುಕೊಂಡ ನಂತರ ಸ್ವಲ್ಪ ದಿನ ಸುಮ್ಮನಾಗಿದ್ದಳು. ನಾಯಿಯಬಾರಕ್ಕೆ ಇಷ್ಟೇ ದಬ್ಬೆ ಕಟ್ಟಿದರು ಕೂಡ ಅದು ಹೇಗೆ ನೆಟ್ಟಗಾಗುವುದಿಲ್ಲವೊ ಅದೇ ರೀತಿ ಅಶ್ವಿನಿ ಗೌಡ ಇದೀಗ ಮತ್ತೆ ಅದೇ ಚಾಳಿಯನ್ನು ಮುಂದುವರಿಸಿದ್ದಾಳೆ. ವಾದ ವಿವಾದದ ಟಾಸ್ಕ್ ನಲ್ಲಿ ಗೆಲ್ಲುವ ಭರದಲ್ಲಿ ಅಶ್ವಿನಿ ಮತ್ತು ಜಾನ್ವಿ ಇಬ್ಬರು ಮಾತನಾಡುವುದನ್ನು ನಿಲ್ಲಿಸಿ ದೂರವಾಗಿದ್ದರು. ನಂತರ ಇಬ್ಬರು ಬೇರೆ ಬೇರೆಯಾಗಿ ಕೆಲಸಗಳನ್ನ ಮಾಡಿಕೊಳ್ಳುತ್ತಾ ಇದ್ದಾರೆ.
ಕಳೆದ ಪಂಚಾಯಿತಿಯಲ್ಲಿ ಸೂರಜ್ ಮತ್ತು ಅಶ್ವಿನಿ ಗೌಡರಿಗೆ ಸುದೀಪ್ ತರಾಟೆ ತೆಗೆದುಕೊಂಡ ನಂತರ ಸೂರಜ್ ರಾಶಿಕಾಳನ್ನು ದೂರವಿಟ್ಟಿದ್ದಾನೆ. ಮನೆಯಲ್ಲಿ ಕ್ಯಾಪ್ಟನ್ ಆದ ಮೇಲೆ ರಘು ರವರು ಎಲ್ಲಾ ಸ್ಪರ್ಧಿಗಳಿಗೂ ಕೆಲಸಗಳನ್ನು ಹಂಚಿದ್ದಾರೆ. ಅದರಲ್ಲೂ ಅಡಿಗೆ ಮನೆಯ ಕೆಲಸಕ್ಕೆ ರಾಶಿಕ ಮತ್ತು ರಕ್ಷಿತಾ ಶೆಟ್ಟಿ ಯನ್ನು ಆಯ್ಕೆ ಮಾಡಲಾಗಿತ್ತು. ಆದರೆ ಮೂರು ನಾಲ್ಕು ದಿನಗಳಿಂದ ರಕ್ಷಿತಾ ಒಬ್ಬಳೇ ಎಲ್ಲಾ ಕೆಲಸವನ್ನು ಮಾಡುತ್ತಿದ್ದಾಳೆ ರಾಶಿ ಯಾವುದೇ ಕೆಲಸವನ್ನು ಮಾಡದೆ ಅಶ್ವಿನಿಯ ಜೊತೆ ಮಾತನಾಡುತ್ತಾ ಕುಳಿತಿರುವುದನ್ನ ಗಮನಿಸಿ ರಘು ಅವರು ಗಿಲ್ಲಿಯ ಬಳಿ ಹೋಗಿ ರಕ್ಷಿತಾ ಎಲ್ಲಾ ಕೆಲಸವನ್ನು ಮಾಡುತ್ತಿದ್ದಾಳೆ , ಅವಳನ್ನ ಈ ಮನೆಯಲ್ಲಿ ಎಲ್ಲರೂ ಕೆಲಸದವಳು ಎಂದುಕೊಂಡು ಬಿಟ್ಟಿದ್ದಾರೆ ಎಂದು ಹೇಳುತ್ತಾರೆ.

ರಕ್ಷಿತಾ ಕೆಲಸ ಜಾಸ್ತಿ ಇರುವುದರಿಂದ ರಾಶಿಕಾಳ ಬಳಿ ಬಂದು ಅಡುಗೆ ಮಾಡಲು ಕರೆಯುತ್ತಾಳೆ, ಆಗ ರಾಶಿಕ ನನಗೆ ಕೈ ನೋವುತ್ತಿದೆ ಸೌಟ್ ತಿರುಗಿಸಲು ಆಗುವುದಿಲ್ಲ ಎಂದು ಹೇಳುತ್ತಾಳೆ. ಅದೇ ಸಂದರ್ಭದಲ್ಲಿ ಪಕ್ಕದಲ್ಲಿ ಕುಳಿತಿದ್ದ ಅಶ್ವಿನಿ ಗೌಡ ಇವಳು ಎಲ್ಲದಕ್ಕೂ ಮೂಗು ತೂರಿಸುತ್ತಾಳೆ, ಮಾತನಾಡುತ್ತಾಳೆ, ಎಂದು ಹೇಳುತ್ತಾಳೆ. ಈ ವಿಚಾರವನ್ನು ಕ್ಯಾಪ್ಟನ್ ಆದ ರಘುವಿಗೆ ರಕ್ಷಿತಾ ಹೋಗಿ ತಿಳಿಸುತ್ತಾಳೆ. ಆಗ ಅಶ್ವಿನಿ ಮಧ್ಯದಲ್ಲಿ ಮೂಗು ತೋರಿಸಿ ಎಲ್ಲದಕ್ಕೂ ತಲೆ ಹಾಕುತ್ತೀಯಾ ಹೀಗೆ ಮಾತನಾಡಿದರೆ ಸರಿ ಇರಲ್ಲ ಎಂಬುದಾಗಿ ಹೇಳಿ ಕೈ ತೋರಿಸುತ್ತಾಳೆ. ಆಗ ರಘು ಅವರವರು ಬಂದು ಯಾಕೆ ಅವಳ ಮೇಲೆ ಎಲ್ಲರೂ ಒಂದೇ ಸಮನೆ ಮುಗಿದಿದ್ದೀರ ಅವಳೊಬ್ಬಳೇ ಮನೆಯಲ್ಲಿ ಎಲ್ಲಾ ಕೆಲಸವನ್ನು ಮಾಡುತ್ತಿದ್ದಾಳೆ. ಮಾಡುವ ಕೆಲಸವನ್ನು ಬಿಟ್ಟು ನೀವಿಬ್ಬರೂ ಕೂತು ಲ್ಲಲ್ಲೇ ಹೊಡೆಯುತ್ತಿದ್ದೀರಾ. ನೀವಿಬ್ಬರು ಮಾಡುವ ಕೆಲಸವನ್ನು ಬಿಟ್ಟು ಆ ಹುಡುಗಿಯ ಮೇಲೆ ಜಗಳವನ್ನು ಮಾಡುತ್ತಿದ್ದೀರಾ ಎಂದು ಸ್ಟ್ಯಾಂಡ್ ತೆಗೆದುಕೊಳ್ಳುತ್ತಾರೆ.
ಅಶ್ವಿನಿ ಗೌಡ ಮತ್ತೆ ಅವಳ ಕೆಟ್ಟ ಬುದ್ಧಿಯನ್ನು ತೋರಿಸುತ್ತಿದ್ದಾಳೆ. ಅಶ್ವಿನಿ ಗೌಡ ಜೊತೆ ತಂಡಕ್ಕೆ ಸೇರ್ಪಡೆಯಾಗಿರುವ ರಾಶಿಕ ಕೂಡ ಈಗ ನೆಗೆಟಿವ್ ಕ್ಯಾರೆಕ್ಟರ್ ಪ್ಲೇ ಮಾಡುತ್ತಿದ್ದಾಳೆ. ವಿಚಾರವಿರುವುದು ಅಡಿಗೆ ಮನೆಯ ಕೆಲಸ ಮಾಡುವುದರ ಬಗ್ಗೆ ಆದರೆ ಅಶ್ವಿನಿ ಇಲ್ಲೂ ಕೂಡ ತನ್ನ ಚಾಳಿಯನ್ನು ಬಳಸಿ ಕೆಟ್ಟದಾಗಿ ಬಿಂಬಿತವಾಗುತ್ತಿದ್ದಾಳೆ. ಅಶ್ವಿನಿ ಗೌಡ ನಿಂದ ದೂರವಾದ ಜಾನವಿ ಈಗ ಜನರ ಕಣ್ಣಿಗೆ ಒಳ್ಳೆಯವರಾಗಿ ಕಾಣಿಸುತ್ತಿದ್ದಾರೆ. ಆದರೆ ಆಸ್ಥಾನಕ್ಕೆ ಬಂದ ವಾರ್ಷಿಕ ಅಶ್ವಿನಿಯ ಬಾಲವಾಗಿ ಕೆಟ್ಟದಾಗಿ ಕಾಣಿಸುತ್ತಿದ್ದಾಳೆ. ಇವರಿಬ್ಬರು ರಕ್ಷಿತಾಳ ನ ಟಾರ್ಗೆಟ್ ಮಾಡುತ್ತಿದ್ದಾರೆ. ರಕ್ಷಿತಾಳನ್ನ ಮನೆ ಕೆಲಸದವಳು ಎಂದುಕೊಂಡು ಎಲ್ಲಾ ಕೆಲಸವನ್ನು ಮಾಡಿಸುತ್ತಿದ್ದಾರೆ. ಮಹಾರಾಣಿಯರು ಮಾಡಿದ್ದನ್ನು ತಿಂದು ಲಲ್ಲೆ ಹೊಡೆದುಕೊಂಡು ಓಡಾಡುವುದೇ ಇವರ ಕೆಲಸ ಎಂದುಕೊಂಡಿದ್ದಾರೋ ಏನೋ …….
ಮನೆಯಲ್ಲಿ ವಹಿಸಿರುವ ಕೆಲಸವನ್ನು ಎಲ್ಲರೂ ಮಾಡಬೇಕು. ರಘು ಅವರು ತೆಗೆದುಕೊಂಡ ನಿರ್ಧಾರಗಳು ತುಂಬಾ ಚೆನ್ನಾಗಿತ್ತು, ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ ಯಾವುದು ಸರಿ ಯಾವುದು ತಪ್ಪು ಎಂದು ತಕ್ಷಣ ಕಂಡುಹಿಡಿದು ಹೇಳುತ್ತಾರೆ. ಕ್ಯಾಪ್ಟನ್ ರಘು ರಕ್ಷಿತಾಳ ಪರವಾಗಿ ನಿಂತು ಅಶ್ವಿನಿ ಮತ್ತು ರಾಶಿಗಳಿಗೆ ಬುದ್ಧಿ ಹೇಳುತ್ತಾರೆ. ರಕ್ಷಿತಾ ಮತ್ತು ರಾಶಿಕ ನಾಯಿಬಾಲ ಡೊಂಕು ಎಂಬಂತೆ ತಮ್ಮ ಕೆಟ್ಟ ಬುದ್ಧಿಯನ್ನು ತೋರಿಸುತ್ತಿದ್ದಾರೆ. ಇದನ್ನ ರಘು ರವರು ಹೇಗೆ ಸಂಬಾಳಿಸುತ್ತಾರೆ ಎಂದು ಮುಂದಿನ ದಿನಗಳಲ್ಲಿ ನೋಡಬೇಕು. ಜೊತೆಗೆ ರಕ್ಷಿತಾ ನಾನು ಕೂಡ ಅಡಿಗೆಯನ್ನು ಮಾಡುವುದಿಲ್ಲ ಬೇಕಾದರೆ ಅವರು ಮಾಡಿಕೊಂಡು ತಿನ್ನಲಿ ಎಂದು ತನ್ನ ಸ್ಟ್ಯಾಂಡ್ ತೆಗೆದುಕೊಂಡಿದ್ದಾಳೆ.
ರಕ್ಷಿತಾ ಬಿಗ್ ಬಾಸ್ ಮನೆಯಲ್ಲಿ ಇರಲು ಅರ್ಹತೆ ಹೊಂದಿರುವ ಕ್ಯಾಂಡಿಡೇಟ್, ಈ ಮನೆಯಲ್ಲಿ ಯಾರು ಸರಿಯಾಗಿ ನಡೆದುಕೊಳ್ಳುತ್ತಿದ್ದಾರೆ ಕೆಟ್ಟ ವರ್ತನೆಯನ್ನು ತೋರಿಸುತ್ತಿದ್ದಾರೆ ಎಂದು ನಿಮಗೆ ಅನಿಸುತ್ತದೆಯೋ ಅದನ್ನ ಕಮೆಂಟ್ ಮಾಡಿ ತಿಳಿಸಿ.



