“ಪುಟ್ಟ ಗೌರಿ ಮದುವೆ “ಅನ್ನುವ ಸೀರಿಯಲ್ ಅನ್ನು ಹೆಚ್ಚಾಗಿ ಎಲ್ಲರೂ ನೋಡಿರುತ್ತಾರೆ. ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸಿದ ಪುಟ್ಟ ಗೌರಿ ಅಂದ್ರೆ ಸಾನಿಯಾ ಅಯ್ಯರ್ ಎಲ್ಲರಿಗೂ ತುಂಬಾನೇ ಇಷ್ಟವಾಗಿದ್ದರು. ಸಾನಿಯಾ ಅಯ್ಯರ್ ಅವರ ಆಕ್ಟಿಂಗ್ ನೋಡಲೆಂದೇ ಅದೆಷ್ಟೋ ಜನ ಪುಟ್ಟ ಗೌರಿ ಮದುವೆ ಸೀರಿಯಲ್ ನೋಡುತ್ತಿದ್ದುದೂ ಉಂಟು. ಅವರ ಆ ಮಾತುಗಾರಿಗೆ, ಸುಂದರ ನೋಟ, ಧಾರವಾಹಿಯ ನಾಯಕನಾದ ಮಹಿ ಜೊತೆ ಆಡುತಿದ್ದ ಜಗಳ ಇವಕ್ಕೆಲ್ಲ ಫ್ಯಾನ್ಸ್ ಹೆಚ್ಚಾಗೇ ಇದ್ದರು. ಪುಟ್ಟ ವಯಸ್ಸಿನಲ್ಲೂ ಅಂದವಾದ ಅಭಿನಯವನ್ನೇ ಮಾಡುತ್ತಿದ್ದರು. ಸೀರಿಯಲ್ ನ ನಂತರ ತಮ್ಮ ಶಿಕ್ಷಣದೆಡೆಗೆ ಹೆಚ್ಚು ಗಮನ ಹರಿಸುತ್ತಾರೆ. ಪತ್ರಿಕೋದ್ಯಮದಲ್ಲಿ ಗ್ರ್ಯಾಜುಯೆಟ್ ಕೂಡಾ ಆಗುತ್ತಾರೆ ಸಾನಿಯಾ.

ಪುಟ್ಟಗೌರಿ ಎಲ್ಲಿ ಎಂದು ಎಲ್ಲರೂ ಕೇಳುವ ಸಂದರ್ಭದಲ್ಲಿ ಸಾನಿಯಾ ರಿಯಾಲಿಟಿ ಶೋ ಮೂಲಕ ಮಸ್ತ್ ಎಂಟ್ರಿ ನೀಡುತ್ತಾರೆ. ಹೌದು ಬಿಗ್ ಬಾಸ್ ನ ಕಂಟೆಸ್ಟೆಂಟ್ ಆಗಿ ಸಾನಿಯಾ ಮನೆಗೆ ಎಂಟ್ರಿ ನೀಡುತ್ತಾರೆ. ಅಲ್ಲಿಯೂ ತಮ್ಮಷ್ಟಕ್ಕೆ ತಾವೇ ಇದ್ದು ಒಳ್ಳೆಯ ಹೆಸರು ಸಂಪಾದಿಸುತ್ತಾರೆ. ಹೀಗೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ಸಾನಿಯಾ ಅವರಿಗೆ ವಿವಿಧ ಶೋ ಗಳಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ. ನಂತರ ಅವರು ಮಾಡೆಲಿಂಗ್ ನಲ್ಲಿ ಬ್ಯುಸಿ ಆಗುತ್ತಾರೆ. ಕಿರುತೆರೆ ನಟಿ ಸಾನಿಯಾ ಅಯ್ಯರ್ ಇದೀಗ ಕಾಶ್ಮೀರದಲ್ಲಿ ಟ್ರೆಕಿಂಗ್ ಮೂಡ್ ನಲ್ಲಿದ್ದಾರೆ.
ಶೂಟಿಂಗ್, ಶೋ ಎಂದು ಬ್ಯುಸಿಯಾಗಿದ್ದ ಸಾನಿಯಾ ಇದೀಗ ಬಿಡುವು ಮಾಡಿ ಟ್ರೆಕಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ ಹಾಗೂ ಸಕ್ಕತ್ ಎಂಜಾಯ್ ಕೂಡಾ ಮಾಡ್ತಿದ್ದಾರೆ. ಹಾಗೇ ಟ್ರೆಕಿಂಗ್ ಫೋಟೋಸ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇವರ ಈ ಫೋಟೋಗೆ ಸಾವಿರಗಟ್ಟಲೆ ಲೈಕ್ಸ್ ಗಳೂ ದೊರೆತಿದೆ. ನಟಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್ ಹಾಕುವಾಗ ಮೋಸ್ಟ್ ಬ್ಯುಟಿಫುಲ್ ಡೇ ಎವರ್ ಎಂದು ಬರೆದಿದ್ದಾರೆ. ಸಾನಿಯಾ ಅಯ್ಯರ್ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಆಗಾಗ ಮಾಡರ್ನ್ ಆಗಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ.
ನಂತರದಿಂದ ಅವರಿಗೆ ಫ್ಯಾನ್ಸ್ ಕೂಡಾ ಹೆಚ್ಜಾಗಿದ್ದಾರೆ. ಇದರ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಇವರದೇ ಸುದ್ದಿಯಾಗುತ್ತಿತ್ತು. ಇದೀಗ ಕಾಶ್ಮೀರ ದ ಟ್ರೆಕಿಂಗ್ ಫೋಟೋಸ್ ಹಾಕಿದ ಮೇಲೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಕೆಲವರು ಹ್ಯಾಪಿ ಟ್ರೆಕಿಂಗ್ ಎಂದು ವಿಶ್ ಮಾಡಿದ್ರೆ ಇನ್ನೂ ಕೆಲವರು ಬ್ಯೂಟಿಫುಲ್ ಸಾನಿಯಾ, ಪ್ರಿಟ್ಟಿ, ಕ್ಯೂಟಿ ಎಂದು ಕಾಮೆಂಟ್ ಮಾಡಿದ್ದಾರೆ. 206k ಇದ್ದ ಫಾಲ್ಲೋರ್ಸ್ ಇದೀಗ 208k ಗೆ ಹೆಚ್ಚಾಗಿದೆ. ಇವರ ಟ್ರೆಕಿಂಗ್ ಪೋಸ್ಟ್ ನ ಬಳಿಕ ಇವರ ಫಾಲ್ಲೋರ್ಸ್ ಇನ್ನಷ್ಟು ಹೆಚ್ಚಾಗಿದ್ದಾರೆ ಎನ್ನಬಹುದು.
ಬಿಗ್ ಬಾಸ್ ಸೀಸನ್ 9 ಹಾಗೂ ಒಟಿಟಿ ಯಲ್ಲಿ ಸಾನಿಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಗೆ ಪ್ರೀತಿ ಶುರುವಾಗಿತ್ತು ಎಂಬ ಗಾಳಿ ಮಾತೂ ಎದ್ದಿತ್ತು. ಆದರೆ ಇದು ಎಷ್ಟರ ಮಟ್ಟಿಗೆ ನಿಜ ಎಂದು ಯಾರಿಗೂ ತಿಳಿದಿಲ್ಲ. ಕಾರಣ ಇವರಿಬ್ಬರು ಎಲ್ಲೂ ಇದನ್ನು ಹೇಳಿಕೊಂಡಿಲ್ಲ. ಜತೆಗೆ ಫೋಟೋಸ್ ಗಳನ್ನು ತೆಗೆದು ಹಾಕುತ್ತಿದ್ದರೇ ಹೊರತು ಪ್ರೀತಿ ಎಂದು ಹೇಳಿರಲಿಲ್ಲ. ಈ ಕೆಲ ದಿನಗಳನ್ನು ಗಮನಿಸಿದರೆ ಇವರಿಬ್ಬರೂ ಟಚ್ ನಲ್ಲಿ ಇಲ್ಲವೆಂದು ಕಂಡು ಬರುತ್ತಿದೆ. ಸಾನಿಯಾ ಅಯ್ಯರ್ ಮಾಡೆಲಿಂಗ್ ಜೊತೆ ಕವನಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದ ವಿದ್ಯಾರ್ಥಿ ಯಾದ್ದರಿಂದ ಈ ಹವ್ಯಾಸಗಳು ಅವರಲ್ಲಿದೆ ಎನ್ನಬಹುದು. ಇದರ ಜೊತೆ ನಟನೆಯನ್ನೂ ಮಾಡುತ್ತಾರೆ. ಸಿನಿಮಾದಲ್ಲಿ ಒಳ್ಳೆಯ ಚಾನ್ಸ್ ಗಾಗಿಯೇ ಕಾಯುತ್ತಿದ್ದಾರೆ ಸಾನಿಯಾ ಅಯ್ಯರ್.



