ಪಾರಿವಾಳ ಶಾಂತಿಯ ಸಂಕೇತ ಅನ್ನೋ ನಂಬಿಕೆ ಹಲವರಲ್ಲಿದೆ. ಅದ್ರೇ ಅಂಥಾ ಪಾರಿವಾಳವೇ ಜನರ ಮನಃಶಾಂತಿ ಕೆಡಿಸಿದ್ರೇ ,ಹೌದು, ನಗರದ ಬಸವನಗುಡಿಯ ಸಜ್ಜನ್ ರಾವ್ ಸರ್ಕಲ್ ಬಳಿಯ ನಿವಾಸಿಗಳಿಗೆ ಪಾರಿವಾಳ ಎಂದರೆ ಕೈಕಾಲು ನಡುಗುತ್ತವೆ. ಪಾರಿವಾಳ ಗುಟುರ್ ಸದ್ದು ಜೀವವನ್ನೇ ಹಿಂಡಿದಂತೆ ಭಾಸವಾಗುತ್ತದೆ. ಇದೇನಿದು ಪಾರಿವಾಳ ಅಂದ್ರೆ ಕೈಕಾಲು ನಡುಗುವ ಮಟ್ಟಕ್ಕೆ ಏನಾಯ್ತು ಅಂತೀರಾ..? ಈ ಸ್ಟೋರಿ ನೋಡಿ.

ಬಸವನಗುಡಿಯ ಸಜ್ಜನ್ ರಾವ್ ಸರ್ಕಲ್ ಸುತ್ತಮುತ್ತ ಬೆಳಂಬೆಳಗ್ಗೆ ಸಾವಿರಾರು ಪಾರಿವಾಳಗಳು ಆಹಾರಕ್ಕಾಗಿ ಬಂದು ಸೇರುತ್ತವೆ. ಜನರು ಕೂಡ ಮಾನವೀಯ ನೆಲೆಗಟ್ಟಿನಲ್ಲಿ ಪಾರಿವಾಳಗಳಿಗೆ ಅನ್ನ, ಕಾಳುಗಳನ್ನು ಸುರಿದು ಹೋಗುತ್ತಾರೆ. ಇದು ಇಲ್ಲಿ ಕಳೆದ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಇದೇ ಕಾರಣಕ್ಕೆ ಇಲ್ಲಿ ಹತ್ತಲ್ಲ, ನೂರಲ್ಲ, ಅಂದಾಜು ಹತ್ತು ಸಾವಿರಕ್ಕೂ ಪಾರಿವಾಳಗಳು ಇಲ್ಲಿ ನೆಲೆ ಕಂಡುಕೊಂಡಿದೆ. ಇದು ಈಗ ಇಲ್ಲಿನ ಸುತ್ತಮುತ್ತಲಿನ ಜನರ ನಿದ್ದೆ ಗೆಡಿಸಿದೆ. ಜೊತೆಗೆ ಜನ ಇಲ್ಲ ಸಲ್ಲದ ಆರೋಗ್ಯ ಸಮಸ್ಯೆ ಎದುರಿಸಲು ಕೂಡ ಕಾರಣ ಆಗ್ತಿದೆ.
ಹೌದು, ಈ ಪಾರಿವಾಳಗಳು ಗುಂಪಾಗಿ ಹಾರಾಡುವ ಕಾರಣಕ್ಕೆ ಇದರಿಂದ ದೂಳು ಉತ್ಪತಿಯಾಗುತ್ತಿದ್ದು, ಇದರಿಂದ ಅಕ್ಕಪಕ್ಕದ ಪ್ಲ್ಯಾಟ್, ಮನೆಯಲ್ಲಿರುವ ನಿವಾಸಿಗಳಿಗೆ ಉಸಿರಾಟದ ಸಮಸ್ಯೆ ಎದುರಾಗುತ್ತಿದೆ. ಜೊತೆಗೆ ಪಾರಿವಾಳಗಳು ಮನೆ, ಅಪಾರ್ಟ್ಮೆಂಟ್ ನಲ್ಲಿ ಗೂಡು ಕಟ್ಟಿ ಸಂತಾನೋತ್ಪತ್ತಿಯನ್ನು ಮಾಡುತ್ತಿದ್ದು ಕಮ್ಯೂನಿಟಿಯ ಜಾಗಗಳು ಗಲೀಜಾಗುತ್ತಿದೆಯಂತೆ. ಎಲ್ಲಕ್ಕಿಂತ ಮುಖ್ಯವಾಗಿ ಹಿರಿಯ ನಾಯಕರಿಗೆ ಇದರಿಂದ ಆರೋಗ್ಯದ ಸಮಸ್ಯೆ ಕಾಡುತ್ತಿದೆ ಅಂತ ಸ್ಥಳೀಯ ನಿವಾಸಿಗಳು ಆರೋಪಿಸುತ್ತಿದ್ದಾರೆ..
ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಬೇರೆ ಭಾಗದ ಜನರು ಕಾಳು, ಅನ್ನ ತಂದು ಹಾಕುತ್ತಿರುವ ಕಾರಣ ಪಾರಿವಾಳಗಳು ಈ ಜಾಗ ಬಿಟ್ಟು ಕದಲುತ್ತಿಲ್ಲ. ಆಹಾರ ಕೊಡುವುದು ನಿಲ್ಲಿಸಿದರೆ ಪಾರಿವಾಳ ಕಾಟದಿಂದ ಪಾರಾಗಬಹುದು ಅಂತ ಸ್ಥಳೀಯರು ಅಹವಾಲು ತೋಡಿಕೊಂಡಿದ್ದಾರೆ… ಬೆಂಗಳೂರಿನ ಅದಮ್ಯ ಜಾಗದ ನಿವಾಸಿಗಳಿಗೆ ಪಾರಿವಾಳದಿಂದ ಕಾಟ ಎಂದರೆ ನಂಬಲು ಸ್ವಲ್ಪ ಕಷ್ಟವೇ. ಆದರೆ ಅದು ವಾಸ್ತವ. ಶಾಂತಿಯ ಸಂಕೇತವಾದ ಪಾರಿವಾಗಳು ಇಲ್ಲಿನ ಜನರ ಬದುಕಿನ ಶಾಂತಿಯನ್ನೇ ಕದಡಿಬಿಟ್ಟಿದೆ. ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೊಂದು ಪರಿಹಾರ ಕೊಡಿಸಬೇಕು ಎನ್ನುವುದು ಇಲ್ಲಿನ ಜನರ ಬೇಡಿಕೆ…