ಚಿತ್ರರಂಗ ಅನ್ನೋದೇ ಹಾಗೆ, 10 ವರ್ಷಕ್ಕೊಮ್ಮೆ ಇಲ್ಲಿ ಟ್ರೆಂಡ್ ಚೇಂಜ್ ಆಗುತ್ತಲೇ ಇರುತ್ತದೆ. ಎಂದೆಂದಿಗೂ ಎಲ್ಲರೂ ಟ್ರೆಂಡ್ ನಲ್ಲಿ ಇರೋದಿಲ್ಲ. ಅದರಲ್ಲೂ ನಾಯಕಿಯರ ವಿಚಾರಕ್ಕೆ ಬರೋದಾದರೆ, ಚಿತ್ರರಂಗದಲ್ಲಿ ಕೆಲವು ವರ್ಷಗಳಿಗೊಮ್ಮೆ ನಟಿಯರ ಯುಗ ಬದಲಾಗುತ್ತಾ ಇರುತ್ತದೆ. ಇಂದು ಕರ್ನಾಟಕ ಕ್ರಶ್, ಬಹುಬೇಡಿಕೆ ಹೊಂದಿರುವ ನಟಿಯರು ಒಂದೆರಡು ವರ್ಷಗಳಲ್ಲೇ ಮೂಲೆಗುಂಪಾಗಬಹುದು. ಇದು ಇಲ್ಲಿ ಸರ್ವೇ ಸಾಮಾನ್ಯ, ಇದೆಲ್ಲಾ ಏನೇ ನಡೆದರು ಕೆಲವು ನಟಿಯರು ಚಿತ್ರರಂಗದಲ್ಲಿ ನೆಲೆಯೂರುತ್ತಾರೆ. ಆದರೆ ಇನ್ನೂ ಕೆಲವರು ಚಿತ್ರರಂಗದಿಂದ ದೂರ ಉಳಿದು ಬಿಡುತ್ತಾರೆ. ಮದುವೆ, ಆರೋಗ್ಯ ಅಥವಾ ಇನ್ನಿತರ ಕಾರಣಕ್ಕೆ ಬಣ್ಣದ ಲೋಕದಿಂದ ದೂರ ಉಳಿದು ಬಿಡುತ್ತಾರೆ. ಹಾಗೆ ಇದ್ದಕ್ಕಿದ್ದಂತೆ ಚಂದನವನದಿಂದ ದೂರವಾದ ನಟಿಯರ ಬಗ್ಗೆ ಇಂದು ತಿಳಿಸಿಕೊಡುತ್ತೇವೆ..

ಅರ್ಚನಾ: 90ರ ದಶಕ ಮುಗಿಯುವ ವೇಳೆಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅರ್ಚನಾ ಅವರು ಆಗಿನ ಸೂಪರ್ ಹಿಟ್ ನಟಿಯರಲ್ಲಿ ಒಬ್ಬರು. ಯಜಮಾನ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರ ಜೊತೆಗಿನ ಓ ಮೈನಾ, ಓ ಮೈನಾ ಹಾಡು ಇವತ್ತಿಗೂ ಎಲ್ಲರ ಫೇವರೆಟ್. ಅರ್ಚನಾ ಅವರು ಈ ಜೀವ ನಿನಗಾಗಿ, ನೀಲಾಂಬರಿ ಅಂಥ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದು ಕಾಲದಲ್ಲಿ ಇವರಿಗೆ ಬಹಳ ಬೇಡಿಕೆ ಇತ್ತು. ಆದರೆ 2004ರ ವೇಳೆಯಲ್ಲಿ ಇವರ ಮದುವೆ ನಡೆದಿದ್ದು, ನಂತರ ಸಂಪೂರ್ಣವಾಗಿ ಚಿತ್ರರಂಗದಿಂದ ದೂರವೇ ಉಳಿದು ಬಿಟ್ಟಿದ್ದಾರೆ. ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇವರು ಹೇಗಿದ್ದಾರೆ ಎಂದು ಕೂಡ ತಿಳಿದಿಲ್ಲ. ಅಭಿಮಾನಿಗಳು ಮಾತ್ರ ಮತ್ತೆ ಇವರನ್ನು ತೆರೆಯ ಮೇಲೆ ನೋಡೋದಕ್ಕೆ ಕಾಯುತ್ತಿದ್ದಾರೆ..

ರೇಖಾ ವೇದವ್ಯಾಸ: ಇವರು ಸಹ 2 ದಶಕದ ಹಿಂದೆ ಸಾಕಷ್ಟು ಜನಪ್ರಿಯತೆ ಹೊಂದಿದ್ದ ನಟಿ. ತುಂಟಾಟ ಸಿನಿಮಾದ ಗ್ಲಾಮರಸ್ ರೇಖಾ ಅವರನ್ನು ಯಾರು ಮರೆತಿಲ್ಲ. ಗೋಲ್ಡನ್ ಸ್ಟಾರ್ ಗಣೇಶ್ ಅವರ ಮೊದಲ ಸಿನಿಮಾಗೆ ಬೇರೆ ಯಾವ ನಟಿ ಕೂಡ ಹೀರೋಯಿನ್ ಆಗೋದಿಲ್ಲ ಎಂದು ರಿಜೆಕ್ಟ್ ಮಾಡಿದಾಗ, ಗಣೇಶ್ ಅವರಿಗೆ ನಾಯಕಿಯಾಗಿ ನಟಿಸಿದ್ದು ರೇಖಾ ಅವರು. ಅಷ್ಟು ಒಳ್ಳೆಯ ಗುಣ ಇವರದ್ದು. ಗಣೇಶ್ ಅವರ ಜೊತೆಗೆ ಮತ್ತೆ ಹುಡುಗಾಟ ಸಿನಿಮಾದಲ್ಲಿ ನಟಿಸಿದರು. ಪರಿಚಯ ಸೇರಿದಂತೆ ಒಂದಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ ರೇಖಾ ಅವರು 2014ರ ನಂತರ ಯಾವುದೇ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ. ಕಳೆದ ವರ್ಷ ಒಂದು ತೆಲುಗು ಕಾರ್ಯಕ್ರಮಕ್ಕೆ ಬಂದಿದ್ದರು, ಆರೋಗ್ಯದಲ್ಲಿ ಸಮಸ್ಯೆ ಇರುವ ಕಾರಣ, ಸಿನಿಮಾ ಇಂದ ದೂರ ಆಗಿರುವುದಾಗಿ ತಿಳಿಸಿದರು. ಇನ್ನು ಇವರು ಮದುವೆಯಾಗಿಲ್ಲ.

ದೀಪಾ ಸನ್ನಿಧಿ : ಇವರು ಒಟ್ಟೊಟ್ಟಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಡನೆ ನಟಿಸಿ, ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳ ಮೂಲಕ ಸೂಪರ್ ಹಿಟ್ ನಟಿ ಎನ್ನಿಸಿಕೊಂಡ ಬೆಡಗಿ. ದೀಪಾ ಸನ್ನಿಧಿ ಅವರು ಮುಂದೆ ಯಶ್ ಅವರ ಜೊತೆಗೆ ಜಾನು ಸಿನಿಮಾದಲ್ಲಿ ನಟಿಸಿದರು, ದರ್ಶನ್ ಅವರ ಜೊತೆಗೆ ಚಕ್ರವರ್ತಿ ಸಿನಿಮಾದಲ್ಲಿ ನಟಿಸಿದರು. ಹಾಗೆಯೇ ಚೌಕ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಅವರ ಜೋಡಿಯಾಗಿ ನಟಿಸಿದರು. ಬಳಿಕ ಇವರು ಇನ್ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ. ದಿನಗಳು ಕಳೆಯುತ್ತಾ, ಇವರಿಗೆ ಅವಕಾಶಗಳು ಬರುವುದಕ್ಕೆ ಕಡಿಮೆ ಆಯಿತು. ಹಾಗಾಗಿ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಇವರು ಒಳ್ಳೆಯ ಸಿನಿಮಾಗಳ ಮೂಲಕ ಕಂಬ್ಯಾಕ್ ಮಾಡಬೇಕು ಅನ್ನೋದು ಅಭಿಮಾನಿಗಳ ಆಸೆ.

ದಾಮಿನಿ : ರಿಯಲ್ ಸ್ಟಾರ್ ಉಪೇಂದ್ರ ಅವರ, ಉಪೇಂದ್ರ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ದಾಮಿನಿ. ನೋಡಲು ಬಹಳ ಕ್ಯೂಟ್ ಆಗಿರುವ ದಾಮಿನಿ ಅವರು ನಟಿಸಿದ್ದು ಕೆಲವೇ ಕೆಲವು ಸಿನಿಮಾಗಳಲ್ಲಿ. ಇವರಿಗೆ ಒಳ್ಳೆಯ ಟ್ಯಾಲೆಂಟ್ ಇದ್ದರು ಸಹ, ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಗಲೇ ಇಲ್ಲ. ಕನ್ನಡದ ಸ್ಟಾರ್ ಹೀರೋಗಳ ಜೊತೆಗೆ ಇವರಿಗೆ ನಟಿಸುವ ಅವಕಾಶ ಸಿಗಲಿಲ್ಲ. ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಉಪಯೋಗಿಸಿಕೊಂಡರು, ಆದರೆ ದಿನ ಕಳೆಯುತ್ತಾ ಅವಕಾಶಗಳು ಕಡಿಮೆಯಾಗಿ, ಸಂಪೂರ್ಣವಾಗಿ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಈಗ ಇವರು ಎಲ್ಲಿದ್ದಾರೆ, ಮದುವೆ ಆಗಿದ್ದಾರಾ ಎನ್ನುವ ಬಗ್ಗೆ ಯಾರಿಗೂ ಯಾವುದೇ ಮಾಹಿತಿ ಇಲ್ಲ. ಇವರು ಕೂಡ ಕಂಬ್ಯಾಕ್ ಮಾಡಿದರೆ ಚೆನ್ನಾಗಿರುತ್ತದೆ.

ಡೈಸಿ ಬೋಪಣ್ಣ : ಅಪ್ಪಟ ಮಡಿಕೇರಿಯ ಹುಡುಗಿ ಡೈಸಿ ಬೋಪಣ್ಣ. ಇವರು ರಾಮ ಶಾಮ ಭಾಮ ಸಿನಿಮಾದಲ್ಲಿ ಅದ್ಭುತವಾಗಿ ಅಭಿನಯಿಸಿದ್ದಾರೆ. ಗಾಳಿಪಟ ಸಿನಿಮಾದ ಸೌಮ್ಯ ಪಾತ್ರ ಎಲ್ಲರ ಫೇವರೆಟ್. ಇನ್ನು ಹಲವು ಸಿನಿಮಾಗಳಲ್ಲಿ, ಹಲವು ಪಾತ್ರಗಳಲ್ಲಿ ಡೈಸಿ ಬೋಪಣ್ಣ ಅವರು ನಟಿಸಿ, ಹೆಸರು ಮಾಡಿದ್ದರು. ಆದರೆ ಮದುವೆಯಾದ ನಂತರ ಇವರು ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಈಗ ಇವರು ಕರ್ನಾಟಕದಲ್ಲಿ ಇಲ್ಲ, ಪ್ರಸ್ತುತ ಇವರು ಮುಂಬೈನಲ್ಲಿ ಇದ್ದಾರೆ. ನಟನೆಯ ವೃತ್ತಿ ಬಿಟ್ಟು, ಫೋಟೋಗ್ರಾಫರ್ ಆಗಿದ್ದಾರೆ. ಸೆಲೆಬ್ರಿಟಿಗಳ ಫೋಟೋಶೂಟ್ ಮಾಡುತ್ತಾರೆ. ಹಾಗೆಯೇ ತಾವು ಕೂಡ ವಿಶೇಷವಾದ ಫೋಟೋಶೂಟ್ ಗಳ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ.

ಚಾರುಲತಾ : 90ರ ದಶಕದ ಸ್ಟಾರ್ ಹೀರೋಯಿನ್ ಗಳಲ್ಲಿ ಇವರು ಕೂಡ ಒಬ್ಬರು. ಶಿವಣ್ಣ ಅವರೊಡನೆ, ರಮೇಶ್ ಅವರೊಡನೆ, ಕುಮಾರ್ ಗೋವಿಂದ್ ಅವರೊಡನೆ ಹಾಗೂ ಸ್ಯಾಂಡಲ್ ವುಡ್ ನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಹಲವು ಹಾಡುಗಳು ಇವತ್ತಿಗೂ ಸಖತ್ ಫೇಮಸ್. ಇವರು ಸಹ ಕರ್ನಾಟಕದವರಲ್ಲ, ಹೊರ ರಾಜ್ಯದವರು, ಆದರೆ ಹೆಚ್ಚು ಫೇಮಸ್ ಆಗಿದ್ದು ಕರ್ನಾಟಕದಲ್ಲಿ, ಕನ್ನಡ ಸಿನಿಮಾಗಳ ಮೂಲಕ. ಇವರು ಕೂಡ ಮದುವೆಯಾದ ನಂತರ ಸಿನಿಮಾ ಇಂಡಸ್ಟ್ರಿ ಇಂದ ದೂರ ಉಳಿದರು. ಈಗ ಇವರು ಕಂಬ್ಯಾಕ್ ಮಾಡಬೇಕು ಎಂದು ಅವರ ಫ್ಯಾನ್ಸ್ ಕಾಯುತ್ತಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಇವರು ಆಕ್ಟಿವ್ ಆಗಿದ್ದು, ಕನ್ನಡ ಡೈಲಾಗ್ ಗಳಿಗೆ ಕೂಡ ರೀಲ್ಸ್ ಮಾಡೋ ಮೂಲಕ ಅಭಿಮಾನಿಗಳಿಗೆ ಬಹಳ ಇಷ್ಟವಾಗಿದ್ದರು.



