ಕಳೆದ ವರ್ಷ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಗೆ ಒಳಗಾದ ಹೆಸರು ಪವಿತ್ರಾ ಗೌಡ. ಇವರು ಮಾಡಿದ ತಪ್ಪು ಕೆಲವರ ಜೇವನವನ್ನೇ ಬದಲಾಯಿಸಿ ಬಿಟ್ಟಿತು. ರೇಣುಕಾಸ್ವಾಮಿ ಅವರ ಕೇಸ್ ನಲ್ಲಿ ಜೈ*ಲಿಗೆ ಹೋಗಿಬಂದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಛೆನು ಅಪ್ಡೇಟ್ ನೀಡಿರಲಿಲ್ಲ ಪವಿತ್ರಾ ಗೌಡ. ಅವರ ಹುಟ್ಟುಹಬ್ಬದ ದಿವಸ ಮಗಳು ಪೋಸ್ಟ್ ಮಾಡಿದ್ದ ವಿಶ್ ಅನ್ನು ಮಾತ್ರ ಸ್ಟೋರಿಯಲ್ಲಿ ಶೇರ್ ಮಾಡಿದ್ದರು. ಅದಾದ ಬಳಿಕ ಏನು ಅಪ್ಡೇಟ್ ನೀಡದ ಪವಿತ್ರಾ ಅವರು ಇದೀಗ ಒಂದು ಹೊಸ ಅಪ್ಡೇಟ್ ನೀಡಿದ್ದಾರೆ. ಅಷ್ಟಕ್ಕೂ ಈ ಅಪ್ಡೇಟ್ ಯಾವ ವಿಷಯದ ಬಗ್ಗೆ ಎಂದು ತಿಳಿಸುತ್ತೇವೆ ನೋಡಿ..
ಪವಿತ್ರಾ ಗೌಡ ಸ್ಯಾಂಡಲ್ ವುಡ್ ನಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿರುವವರು. ಇವರು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿಲ್ಲ, ಒಂದೆರಡು ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಆದರೆ ಪವಿತ್ರಾ ಗೌಡ ಅವರು ಹೆಚ್ಚು ಸುದ್ದಿಯಾಗಿದ್ದು, ದರ್ಶನ್ ಅವರ ಜೊತೆಗಿನ ರಿಲೇಶನ್ಷಿಪ್ ಇಂದ. ದರ್ಶನ್ ಅವರ ಜೊತೆಗೆ ಕಳೆದ 10 ವರ್ಷಗಳಿಂದ ಪವಿತ್ರಾ ಗೌಡ ಅವರು ರಿಲೇಶನ್ಷಿಪ್ ನಲ್ಲಿ ಇರುವುದಾಗಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ, ಇಬ್ಬರು ಜೊತೆಯಾಗಿರುವ ಹಲವು ಫೋಟೋಸ್ ಗಳನ್ನು ಶೇರ್ ಮಾಡಿಕೊಂಡಿದ್ದರು. ಇದಕ್ಕೆ ಸಿಕ್ಕಾಪಟ್ಟೆ ನೆಗಟಿವ್ ಕಾಮೆಂಟ್ಸ್ ಗಳು ಸಹ ಬಂದಿದ್ದವು.

ದರ್ಶನ್ ಅವರ ಸಂಸಾರ ಹಾಳು ಮಾಡಬೇಡಿ ಎಂದು ಡಿಬಾಸ್ ಫ್ಯಾನ್ಸ್ ಪವಿತ್ರಾ ಗೌಡ ವಿರುದ್ಧವಾಗಿ ನಿಂತಿದ್ದರು. ಇನ್ನು ವಿಜಯಲಕ್ಷ್ಮೀ ದರ್ಶನ್ ಅವರು ಸಹ ಅಸಮಾಧಾನದಿಂದ ಪೋಸ್ಟ್ ಮಾಡಿ, ಪವಿತ್ರಾ ಗೌಡ ಮೊದಲ ಗಂಡನ ಫೋಟೋಸ್ ಗಳನ್ನು ಶೇರ್ ಮಾಡಿ, ಇದೆಲ್ಲಾ ಹೀಗೆ ಮುಂದುವರೆದರೆ ಕಾನೂನಿನ ಮೂಲಕ ಉತ್ತರ ಕೊಡುವುದಾಗಿ ಹೇಳಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರ ಸಮರ ನಡೆದಿದ್ದು ನಮಗೆಲ್ಲಾ ಗೊತ್ತೇ ಇದೆ. ಈ ವಿಷಯವೆಲ್ಲಾ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದಾದ ಕೆಲವೇ ದಿನಕ್ಕೆ ರೇಣುಕಾಸ್ವಾಮಿ ಅವರ ಘಟನೆ ನಡೆದು, ದರ್ಶನ್ ಅವರು ಮತ್ತು ಪವಿತ್ರಾ ಗೌಡ ಇಬ್ಬರೂ ಜೈ*ಲಿಗೆ ಹೋದರು.
ಇವರಿಬ್ಬರು 6 ತಿಂಗಳ ಕಾಲ ಒಳಗಡೆ ಇರಬೇಕಾಯಿತು. ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರೆ, ದರ್ಶನ್ ಅವರು ಒಂದಷ್ಟು ದಿನಗಳ ಕಾಲ ಬಳ್ಳಾರಿ ಜೈಲಿನಲ್ಲಿ ಇರುವ ಹಾಗಾಯಿತು. ಈ ಎಲ್ಲಾ ಘಟನೆಗಳ ನಡುವೆ ದರ್ಶನ್ ಅವರ ಆರೋಗ್ಯ ಕೂಡ ಹದಗೆಟ್ಟಿತು. ಮೊದಲಿಗೆ ದರ್ಶನ್ ಅವರ ಆರೋಗ್ಯ ಸಮಸ್ಯೆಯ ಕಾರಣ ಅವರಿಗೆ ಮೊದಲು ಜಾಮೀನು ಸಿಕ್ಕಿತು. ಡಿಸೆಂಬರ್ ತಿಂಗಳು ಮುಗಿಯುವ ವೇಳೆಗೆ ಬೇರೆ ಎಲ್ಲರಿಗೂ ಸಹ ಜಾಮೀನು ಸಿಕ್ಕಿ ಹೊರಗಡೆ ಬಂದಿದ್ದಾರೆ. ಹೊರಗಡೆ ಬಂದ ಬಳಿಕ ಇಲ್ಲಿಯವರೆಗೂ ಏನು ಅಪ್ಡೇಟ್ ಕೊಡದ ಪವಿತ್ರಾ ಗೌಡ ಇದೀಗ ಹೊಸ ಅಪ್ಡೇಟ್ ನೀಡಿದ್ದಾರೆ. ಪವಿತ್ರಾ ಗೌಡ ಈ ಬಾರಿ ಅಪ್ಡೇಟ್ ಕೊಟ್ಟಿರುವುದು ಅವರ ಬ್ಯುಸಿನೆಸ್ ಬಗ್ಗೆ.

ಪವಿತ್ರಾ ಗೌಡ ರೆಡ್ ಕಾರ್ಪೆಟ್ ಸ್ಟುಡಿಯೋ ಹೆಸರಿನಲ್ಲಿ ಬ್ಯುಸಿನೆಸ್ ಹೊಂದಿದ್ದಾರೆ. ಕೆಲವು ತಿಂಗಳುಗಳಿಂದ ಈ ಬ್ಯುಸಿನೆಸ್ ಸ್ಟಾಪ್ ಆಗಿ ಹೋಗಿದೆ. ಇದೀಗ ಇವರು ಹೊರಗಡೆ ಬಂದಿದ್ದು, ಶೀಘ್ರದಲ್ಲೇ ಹೊಸ ಅಪ್ಡೇಟ್ ಜೊತೆಗೆ ಮರಳಿ ಬರಲಿದ್ದೇವೆ ಎಂದು ಸ್ಟೋರಿ ಮೂಲಕ ಹೊಸ ಸಿಗ್ನಲ್ ಕೊಟ್ಟಿದ್ದಾರೆ ಪವಿತ್ರಾ ಗೌಡ. ಇವರ ಇನ್ಸ್ಟಾಗ್ರಾಮ್ ಸ್ಟೋರಿ ಇಂದ ಶೀಘ್ರದಲ್ಲೇ ಹೊಸ ರೀತಿಯಲ್ಲಿ ಪವಿತ್ರಾ ಗೌಡ ವಾಪಸ್ ಬರುತ್ತಾರೆ ಎನ್ನುವ ವಿಷಯ ತಿಳಿದುಬಂದಿದ್ದು, ತಮ್ಮ ಬ್ಯುಸಿನೆಸ್ ಅನ್ನು ಹೊಸ ರೀತಿ ಹೇಗೆ ಲಾಂಚ್ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ. ಇತ್ತೀಚೆಗೆ ಇವರು ಮಗಳ ಜೊತೆಗೆ ಮಾಡಿಸಿದ್ದ ಫೋಟೋಶೂಟ್ ಸಹ ಬಹಳ ವೈರಲ್ ಆಗಿತ್ತು.