ನಟಿ ಮೇಘನಾ ರಾಜ್ ಅವರು ಈಗ ಬಹುತೇಕ ಸಮಯವನ್ನು ತಮ್ಮ ಮಗ ರಾಯನ್ ರಾಜ್ ರನ್ನು ನೋಡಿಕೊಳ್ಳೋಕೆ ಮೀಸಲಾಗೋ ಇಟ್ಟಿದ್ದಾರೆ. ಅದರ ಜೊತೆಗೆ ಸಿನಿಮಾಗಳಲ್ಲಿ ಸಹ ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ಶ್ರೀನಗರ ಕಿಟ್ಟಿ ಅವರ ಜೊತೆಗೆ ಒಂದು ಸಿನಿಮಾ ಸೆಟ್ಟೇರಿದೆ, ಮಾಲಿವುಡ್ ಗೆ ಸಹ ಬಹಳ ವರ್ಷಗಳ ನಂತರ ರೀಎಂಟ್ರಿ ಕೊಟ್ಟಿದ್ದಾರೆ. ಇದೆಲ್ಲದರ ಜೊತೆಗೆ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಕೂಡ ಶುರು ಮಾಡಿದ್ದಾರೆ. ಅದರಲ್ಲಿ ಕೂಡ ಒಳ್ಳೆಯ ಕಾಂಟೆಂಟ್ ಗಳನ್ನು ಹಾಕುತ್ತಾರೆ. ಮೇಘನಾ ರಾಜ್ ಅವರ ಬಗ್ಗೆ ಆಗಾಗ ಅನೇಕ ವಿಚಾರಗಳು ಕೇಳಿ ಬರುತ್ತವೆ. ಇತ್ತೀಚೆಗೆ ಬೇರೆ ವಿಚಾರಗಳಿಗೆ ಹೆಚ್ಚಾಗಿ ಗುರುತಿಸಿಕೊಂಡಿರುವ ಮೇಘನಾ ರಾಜ್ ಅವರು, ಇದೀಗ ತಮ್ಮ ಹುಟ್ಟುಹಬ್ಬವನ್ನು ಮಗನ ಜೊತೆಗೆ ಆಚರಿಸಿದ್ದಾರೆ. ಆ ಹುಟ್ಟುಹಬ್ಬ ಎಷ್ಟು ಸ್ಪೆಷಲ್ ಆಗಿತ್ತು ಗೊತ್ತಾ?

ಮೇಘನಾ ರಾಜ್ ಅವರು ಕನ್ನಡದ ಖ್ಯಾತ ನಟ ಹಾಗೂ ನಟಿ ಆಗಿರುವ ಸುಂದರ್ ರಾಜ್ ಅವರು ಮತ್ತು ಪ್ರಮೀಳಾ ಜೋಷಾಯ್ ದಂಪತಿಯ ಮಗಳು. ಇವರಿಬ್ಬರ ಮಗಳು ಚಿಕ್ಕಂದಿನಿಂದಲೇ ತಾನು ಚಿತ್ರರಂಗಕ್ಕೆ ಬರಬೇಕು, ಹೀರೋಯಿನ್ ಆಗಬೇಕು ಎಂದು ಕನಸು ಕಟ್ಟಿಕೊಂಡವರು. ಮೇಘನಾ ರಾಜ್ ಅವರು ಕನಸಿನಂತೆಯೇ ಹೀರೋಯಿನ್ ಆದರು. ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ನಟಿಸಿದರು. ಎಲ್ಲಾ ಕಡೆ ಇವರಿಗೆ ಒಳ್ಳೆಯ ಹೆಸರಿದೆ. ಕನ್ನಡ ಕೆಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ನಟಿಯಾಗಿ ಒಳ್ಳೆಯ ಸ್ಥಾನ ತಲುಪಿದ್ದಾರೆ. ಇವರ ರಾಜಾಹುಲಿ ಸಿನಿಮಾವನ್ನು ಯಾರು ತಾನೇ ಮರೆಯೋಕೆ ಸಾಧ್ಯ. ಅದೊಂದೆ ಅಲ್ಲದೆ ಇನ್ನು ಹಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ..
ಮೇಘನಾ ರಾಜ್ ಅವರು ಕನ್ನಡ ಸಿನಿಮಾಗಳಲ್ಲಿ ಮಾತ್ರವಲ್ಲ ಮಲಯಾಳಂ ನಲ್ಲಿ ಅದ್ಭುತವಾದ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಅಲ್ಲಿ ಕೂಡ ಇವರಿಗೆ ಒಳ್ಳೆಯ ಹೆಸರು ಮತ್ತು ಜನಪ್ರಿಯತೆ ಇದೆ. ಕನ್ನಡದ ಸ್ಟಾರ್, ಹಿರಿಯನಟ ಅರ್ಜುನ್ ಸರ್ಜಾ ಅವರ ಅಕ್ಕನ ಮಗ ನಟ ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ, 2018ರಲ್ಲಿ ಮದುವೆಯಾದರು. ಇವರಿಬ್ಬರದ್ದು ಐದಾರು ವರ್ಷಗಳ ಪ್ರೀತಿ. ಚಿರು ಹಾಗೂ ಮೇಘನಾ ರಾಜ್ ಮೇಡ್ ಫಾರ್ ಈಚ್ ಅದರ್ ಅನ್ನೋ ರೀತಿಯಲ್ಲೇ ಇದ್ದವರು. ತಮ್ಮ ಪ್ರೀತಿಯನ್ನು ಎರಡು ಕುಟುಂಬಗಳಿಗೆ ಸೇರಿಸಿ, ಹಿಂದೂ ಮತ್ತು ಕ್ರಿಶ್ಚಿಯನ್ ಎರಡು ಸಂಪ್ರದಾಯದ ಅನುಸಾರ ಅದ್ಧೂರಿಯಾಗಿ ಮದುವೆಯಾದರು. ಎರಡು ಕುಟುಂಬಗಳು ಸಂತೋಷದಿಂದ ಮದುವೆಯನ್ನು ಮಾಡಿಕೊಟ್ಟರು. ಈ ಜೋಡಿ ಬಹಳ ಪ್ರೀತಿಯಿಂದ, ಅನ್ಯೋನ್ಯವಾಗಿ ಸಂತೋಷದಿಂದ ಇದ್ದರು.
ಇನ್ನೇನು ಇಬ್ಬರು ಗುಡ್ ನ್ಯೂಸ್ ಕೊಡಬೇಕು ಅನ್ನೋ ವೇಳೆಯಲ್ಲೇ, ಚಿರಂಜೀವಿ ಸರ್ಜಾ ಅವರು ವಿಧಿವಶರಾದರು. ಕೋವಿಡ್ ಸಮಯದಲ್ಲಿ, 2020ರ ಜೂನ್ ತಿಂಗಳಿನಲ್ಲಿ ಚಿರು ವಿಧಿವಶವಾಗಿದ್ದು ದೊಡ್ಡ ಶಾಕ್ ಆಗಿತ್ತು. ಆ ವೇಳೆ ಮೇಘನಾ ರಾಜ್ ಗರ್ಭಿಣಿ ಆಗಿದ್ದರು. ಚಿರು ಅಗಲಿಕೆ ಇವರ ಜೀವನಕ್ಕೆ ದೊಡ್ಡ ಆಘಾತ ತಂದಿದ್ದಂತೂ ನಿಜ. ಅಷ್ಟು ಪ್ರೀತಿಯಿಂದ ಇದ್ದ ಜೋಡಿಯನ್ನು ವಿಧಿ ಬೇರೆ ಮಾಡಿತು ಅನ್ನೋದನ್ನ ಯಾರಿಂದಲು ಸಹಿಸೋದಕ್ಕೆ ಸಾಧ್ಯ ಆಗಲಿಲ್ಲ. ಆದರೆ ಮೇಘನಾ ರಾಜ್ ಅವರು ಇದೆಲ್ಲವನ್ನು ಕೂಡ ಬಹಳ ಸ್ಟ್ರಾಂಗ್ ಆಗಿ ನಿಂತಿದ್ದಾರೆ. ಮಗನನ್ನು ಬಹಳ ಪ್ರೀತಿಯಿಂದ, ಚಿರು ಅವರ ರೀತಿಯಲ್ಲೇ ನೋಡಿಕೊಳ್ಳುತ್ತಿದ್ದಾರೆ. ಮಗು ರಾಯನ್ ಕೂಡ ಅಪ್ಪನನ್ನು ಯಾವಾಗಲೂ ನೆನಪು ಮಾಡಿಕೊಳ್ಳುತ್ತಾನೆ. ಈಗ ರಾಯನ್ ಗೆ 4 ವರ್ಷ ತುಂಬಿದೆ.
ರಾಯನ್ ಶಾಲೆಗೆ ಕೂಡ ಹೋಗುತ್ತಿದ್ದಾನೆ. ರಾಯನ್ ಹಲವು ಬಾರಿ ಅಪ್ಪನ ಗುಣಗಾನ ಮಾಡುವ ವಿಡಿಯೋಗಳು, ಅಪ್ಪನ ಹಾಡುಗಳನ್ನು ನೋಡುವ ವಿಡಿಯೋಗಳು ವೈರಲ್ ಆಗಿದೆ. ಮೇಘನಾ ಅವರು ತಾವು ಬದುಕುತ್ತಿರುವುದೇ ರಾಯನ್ ಗಾಗಿ ಎಂದು ಹೇಳಿದ್ದರು. ಹೀಗೆ ಮಗನ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿರುವ ಮೇಘನಾ ರಾಜ್ ಅವರು ಯೂಟ್ಯೂಬ್ ಚಾನೆಲ್ ನಲ್ಲಿ ಕೂಡ ಒಳ್ಳೆಯ ಕಾಂಟೆಂಟ್ ಗಳನ್ನು ಕೊಡುವ ಮೂಲಕ ಅಲ್ಲಿ ಸಹ ಫೇಮಸ್ ಆಗುತ್ತಿದ್ದಾರೆ. ಮೇಘನಾ ರಾಜ್ ಅವರು ಹಾಕುವ ಕಾಂಟೆಂಟ್ ಗಳು, ವಿಡಿಯೋಗಳು ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆಯುತ್ತದೆ. ಇನ್ನು ಮೇಘನಾ ರಾಜ್ ಅವರು ಇತ್ತೀಚೆಗೆ ಬರ್ತ್ ಡೇ ಆಚರಿಸಿಕೊಂಡಿದ್ದಾರೆ.

ಮೇಘನಾ ರಾಜ್ ಅವರ ಹುಟ್ಟುಹಬ್ಬದ ದಿವಸ ಚಿತ್ರರಂಗದ ಹಲವರು ಮೇಘನಾ ರಾಜ್ ಅವರಿಗೆ ಸೋಷಿಯಲ್ ಮೀಡಿಯಾ ಮೂಲಕ ವಿಶ್ ಮಾಡಿದರು. ಆದರೆ ಈ ವರ್ಷ ಮೇಘನಾ ರಾಜ್ ಅವರು ಬಹಳ ವಿಶೇಷವಾಗಿ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ. ಈ ಬಾರಿ ರಾಯನ್ ಜೊತೆಗೆ ಗೋವಾಗೆ ಹೋಗಿ ಹುಟ್ಟುಹಬ್ಬ ಆಚರಿಸಿದ್ದಾರೆ ಮೇಘನಾ. ಮಗು ಮತ್ತು ತಾಯಿ ಎಲ್ಲರ ಜೊತೆಗೆ ಗೋವಾದಲ್ಲಿ ಜಾಲಿಯಾಗಿ ಮೇಘನಾ ಅವರು ಬರ್ತ್ ಡೇ ಸೆಲೆಬ್ರೇಟ್ ಮಾಡಿರುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಮೇಘನಾ ರಾಜ್ ಅವರು ಯಾವಾಗಲೂ ಹೀಗೆ ಸಂತೋಷವಾಗಿರಲಿ ಎನ್ನುವುದು ಅವರ ಅಭಿಮಾನಿಗಳು ಮತ್ತು ಚಿರು ಅವರ ಅಭಿಮಾನಿಗಳ ಆಸೆ ಆಗಿದೆ.



