ಚಂದನವನದ ದೇವರು, ಚಂದನವನದ ದಂತಕಥೆ ಎಂದೇ ಹೆಸರುವಾಸಿ ಆಗಿರುವವರು ಡಾ. ರಾಜ್ ಕುಮಾರ್. ಇವರ ಬಗ್ಗೆ ಹೇಳುತ್ತಾ ಹೋದರೆ, ಪುಟಗಳೇ ಸಾಕಾಗೋದಿಲ್ಲ. ಡಾ. ರಾಜ್ ಕುಮಾರ್ ಅವರು ತಮ್ಮ ನಟನೆಯ ಮೂಲಕ ಮಾತ್ರ ಅಭಿಮಾನಿಗಳನ್ನು ಹೊಂದಿರಲಿಲ್ಲ, ಅವರಲ್ಲಿರುವ ಒಳ್ಳೇತನ, ಸರಳತೆ, ಅಭಿಮಾನಿಗಳನ್ನು ದೇವರು ಎಂದು ಭಾವಿಸಿದ ಅವರ ವ್ಯಕ್ತಿತ್ವ ಇದೆಲ್ಲವೂ ಸಹ ಅವರನ್ನು ಅಷ್ಟು ಎತ್ತರಕ್ಕೆ ಕೊಂಡೊಯ್ಯಿತು. ಆದರೆ ರಾಜ್ ಕುಮಾರ್ ಅವರು ಮಾತ್ರ ಸರಳತೆ ಇಂದಲೇ ಇದ್ದವರು. ಡಾ. ರಾಜ್ ಕುಮಾರ್ ಅವರಿಗೆ ಇರುವ ಅಭಿಮಾನಿ ಬಳಗ ಹೇಗಿತ್ತು ಎಂದು ಗೊತ್ತೇ ಇದೆ. ಇಂಥ ನಮ್ಮ ಅಣ್ಣಾವ್ರನ್ನು ಭೇಟಿ ಮಾಡಿದಾಗ ಇಂದಿರಾ ಗಾಂಧಿ ಅವರು ಕ್ಷಮೆ ಕೇಳಿದ್ದರಂತೆ. ಅದು ಯಾಕೆ? ಅಂದು ಆಗಿದ್ದೇನು ಗೊತ್ತಾ?

ಇಂದಿಗೂ ಕೋಟ್ಯಾಂತರ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವವರು ಡಾ. ರಾಜ್ ಕುಮಾರ್. ಡಾ. ರಾಜ್ ಕುಮಾರ್ ಅವರ ಸಿನಿಮಾಗಳು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತಿತ್ತು, ಜನರಿಗೆ ಬದುಕಿನ ಪಾಠ ಕಲಿಸುತ್ತಿತ್ತು, ಈ ಕಾರಣಕ್ಕೆ ಅವರ ಸಿನಿಮಾಗಳು ಜನರ ಮೇಲೆ ಅಷ್ಟು ಪರಿಣಾಮ ಬೀರುತ್ತಿತ್ತು ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಡಾ. ರಾಜ್ ಕುಮಾರ್ ಅಂದರೆ ಅಭಿಮಾನಿಗಳಿಗೆ ಹುಚ್ಚು ಅಭಿಮಾನ, ರಾಜ್ ಅವರಿಗೂ ಅಷ್ಟೇ ಅಭಿಮಾನಿಗಳು ಅಂದ್ರೆ ಅಷ್ಟೇ ಪ್ರೀತಿ ಮತ್ತು ವಿಶ್ವಾಸ. ಅಭಿಮಾನಿಗಳಲ್ಲಿ ದೇವರನ್ನು ಕಂಡ ಮೊದಲ ಕಲಾವಿದ ಡಾ. ರಾಜ್ ಕುಮಾರ್ ಅವರು ಎಂದು ಹೇಳಿದರೂ ತಪ್ಪಲ್ಲ. ಅಭಿಮಾನಿಗಳನ್ನು ದೇವರು ಎಂದೇ ಕರೆಯುತ್ತಿದ್ದರು. ಎಲ್ಲರನ್ನು ಒಂದೇ ರೀತಿ ಕಾಣುತ್ತಿದ್ದರು.
ಡಾ. ರಾಜ್ ಕುಮಾರ್ ಅವರು ಕನ್ನಡ ಕಂಡ ಅಪ್ರತಿಮ ಕಲಾವಿದ. ಅವರ ಬಗ್ಗೆ ಹಲವು ವಿಶೇಷತೆಗಳು, ವೈಶಿಷ್ಟ್ಯತೆಗಳನ್ನು ಕೇಳುತ್ತಲೇ ಬಂದಿದ್ದೇವೆ. ಅಣ್ಣಾವ್ರು ಎಂಥಾ ಅದ್ಭುತವಾದ ನಟ ಎಂದು ನಮಗೆಲ್ಲ ಗೊತ್ತೇ ಇದೆ. ಡಾ. ರಾಜ್ ಕುಮಾರ್ ಅವರು ಎಲ್ಲಾ ಥರದ ಪಾತ್ರಗಳಲ್ಲಿ ನಟಿಸಿ ಹೆಸರು ಮಾಡಿದವರು. ಸಾಮಾಜಿಕ ಪಾತ್ರಗಳು, ಐತಿಹಾಸಿಕ ಪಾತ್ರಗಳು, ಪೌರಾಣಿಕ ಪಾತ್ರಗಳು ಎಲ್ಲದರಲ್ಲೂ ನಟಿಸಿ, ಸೈ ಎನ್ನಿಸಿಕೊಂಡಿರುವವರು. ಆಡು ಮುಟ್ಟದ ಸೊಪ್ಪಿಲ್ಲ ರಾಜಣ್ಣ ಮಾಡದ ಪಾತ್ರವೇ ಇಲ್ಲ ಎಂದು ಹಲವರು ಹೇಳಿದ್ದಾರೆ. ಡಾ. ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿ ಇದ್ದಷ್ಟು ಸಮಯ, ಇಲ್ಲಿನ ಸಿನಿಮಾಗಳು ಬಹಳ ಚೆನ್ನಾಗಿದ್ದವು. ಈಗ ಕನ್ನಡ ಚಿತ್ರರಂಗ ಯಜಮಾನ ಇಲ್ಲದ ಮನೆಯಾಗಿದೆ ಎಂದು ಹೇಳಿದರೆ ತಪ್ಪಲ್ಲ. ಇದೆಲ್ಲವೂ ಒಂದು ಕಡೆಯಾದರೆ, ಅಣ್ಣಾವ್ರ ಸಿನಿಮಾ ಬಗ್ಗೆ ಮಾತನಾಡುವುದಾದರೆ..

ಡಾ. ರಾಜ್ ಕುಮಾರ್ ಅವರ ಒಂದೊಂದು ಸಿನಿಮಾಗಳು ಕೂಡ ವಿಭಿನ್ನವಾಗಿ ಇರುತ್ತಿದ್ದವು. ಹಲವು ಸಿನಿಮಾಗಳು ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವಂಥ ಸಿನಿಮಾ ಆಗಿರುತ್ತಿತ್ತು. ಅಣ್ಣಾವ್ರ ಸಿನಿಮಾಗಳು ಬಹಳಷ್ಟು ಭಾಷೆಗಳಿಗೆ ಡಬ್ ಆಗಿವೆ. ಅಲ್ಲಿನ ಕಲಾವಿದರು ನಾವು ಡಾ. ರಾಜ್ ಕುಮಾರ್ ಅವರ ಹಾಗೆ ಅಭಿನಯಿಸೋದಕ್ಕೆ ಆಗೋದಿಲ್ಲ ಎಂದು ಹೇಳಿದ್ದಿದೆ. ಇಂಥ ನಮ್ಮ ಅಣ್ಣಾವ್ರು ಅಂದ್ರೆ ಇಡೀ ರಾಜ್ಯದ ಜನರಿಗೆ ಪ್ರಾಣ. ಡಾ. ರಾಜ್ ಕುಮಾರ್ ಅವರಿಗೆ ಇದ್ದ ಪ್ರೀತಿ, ಗೌರವ ಅಂಥದ್ದು. ಒಮ್ಮೆ ನಮ್ಮ ದೇಶದ ಪ್ರಧಾನಿ ಆಗಿದ್ದ ಇಂದಿರಾ ಗಾಂಧಿ ಅವರು ಅಣ್ಣಾವ್ರಿಗೆ ಕ್ಷಮೆ ಕೇಳಿದ್ದರು. ಈ ವಿಷಯ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಅಷ್ಟಕ್ಕೂ ಕ್ಷಮೆ ಕೇಳಿದ್ದು ಯಾಕೆ ಎಂದರೆ.. 1978ರಲ್ಲಿ ಲೋಕಸಭಾ ಉಪಚುನಾವಣೆ ನಡೆಯಬೇಕಿತ್ತು, ಆ ವೇಳೆ ಚಿಕ್ಕಮಗಳೂರಿನಿಂದ ಇಂದಿರಾ ಗಾಂಧಿ ಅವರು ಎಲೆಕ್ಷನ್ ಗೆ ನಿಂತರು..

ಅವರ ವಿರುದ್ಧ ಜನತಾ ಪಾರ್ಟಿ ಇಂದ ಅಣ್ಣಾವ್ರನ್ನು ಕಣಕ್ಕೆ ಇಳಿಸಬೇಕು ಎಂದು ಜಾರ್ಜ್ ಫರ್ನಾಂಡಿಸ್ ಅವರು ಬಹಳ ಪ್ರಯತ್ನ ಪಟ್ಟರು, ಆದರೆ ಅಣ್ಣಾವ್ರು ಒಪ್ಪಲಿಲ್ಲ. 8 ದಿವಸಗಳ ಕಾಲ ಬೆಂಗಳೂರಿನಿಂದ ದೂರ, ಅಜ್ಞಾತವಾಸದಲ್ಲಿ ಇದ್ದರು. ಬೇರೆ ವ್ಯಕ್ತಿ ನಾಮ ಪತ್ರಿಕೆ ಸಲ್ಲಿಸಿದ ಬಳಿಕ ಬೆಂಗಳೂರಿಗೆ ಬಂದರು. ಅಣ್ಣಾವ್ರು ಎಲೆಕ್ಷನ್ ಗೆ ನಿಂತಿದ್ದರೆ ಖಂಡಿತವಾಗಿಯೂ ಇಂದಿರಾ ಗಾಂಧಿ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ ಆಗಿತ್ತು. ಆದರೆ ಅಣ್ಣಾವ್ರು ರಾಜಕೀಯಕ್ಕೆ ಬರದ ಕಾರಣ ಇಂದಿರಾ ಗಾಂಧಿ ಅವರೇ ಗೆದ್ದರು, ಮುಂದೆ ಪ್ರಧಾನಮಂತ್ರಿಯೂ ಆದರು. ಕೆಲ ವರ್ಷಗಳ ಬಳಿಕ ಅಣ್ಣಾವ್ರಿಗೆ ಪದ್ಮ ಭೂಷಣ ಪ್ರಶಸ್ತಿ ಬಂತು. ಆಗ ಅವರನ್ನು ಇಂದಿರಾ ಗಾಂಧಿ ಅವರು ಆಹ್ವಾನಿಸಿದ್ದರು. ಅಣ್ಣಾವ್ರು, ಪಾರ್ವತಮ್ಮ ಅವರು, ಭಗವಾನ್ ಅವರು ಮತ್ತು ಪಾರ್ವತಮ್ಮ ಅವರ ತಮ್ಮ ಚಿನ್ನೇಗೌಡ್ರು ಜೊತೆಯಾಗಿ ಹೋಗಿದ್ದರು…

ಅಂದು ಇಂದಿರಾ ಗಾಂಧಿ ಅವರನ್ನು ಭೇಟಿ ಮಾಡಿ, ಮತ್ತೊಂದು ಕಾರ್ಯಕ್ರಮಕ್ಕೆ ಹೋಗಬೇಕಿತ್ತು, ಆದರೆ ಇಂದಿರಾ ಗಾಂಧಿ ಅವರು ಬರುವುದು10 ನಿಮಿಷಗಳ ಕಾಲ ತಡವಾಯಿತು. ಆದರೂ ಅವರಿಗಾಗಿ ಕಾದು, ಅಣ್ಣಾವ್ರು ಭೇಟಿ ಮಾಡಿದರು. ಇಂದಿರಾಗಾಂಧಿ ಅವರು ಬಂದ ತಕ್ಷಣವೇ, ಅಣ್ಣಾವ್ರ ಕೈ ಹಿಡಿದು, ರಾಜ್ ಕುಮಾರ್ ಜಿ ಆಪ್ ಮುಜೆ ಕ್ಷಮಾ ಕಿಜಿಯೇ ಎಂದು ಕ್ಷಮೆ ಕೇಳಿದರಂತೆ. ಬಳಿಕ ಅವರೊಡನೆ ಕೂತು ಮಾತನಾಡಿ, ನಿಮಗೆ ಏನು ಬೇಕು ಹೇಳಿ, ರಾಜಕೀಯಕ್ಕೆ ಬರುತ್ತೀರಾ ಎಂದು ಕೇಳಿದರಂತೆ ಅದಕ್ಕೆ ಅಣ್ಣಾವ್ರು ಇಲ್ಲ, ನನಗೇನು ಬೇಡ ನಾನು ಕಲಾವಿದನಾಗಿಯೇ ಇರುತ್ತೇನೆ ಎಂದು ಹೇಳಿದರಂತೆ. ಹೀಗಿತ್ತು ಅಣ್ಣಾವ್ರು ಮತ್ತು ಇಂದಿರಾ ಗಾಂಧಿ ಅವರ ನಡುವಿನ ಸಂಭಾಷಣೆ. ನಮ್ಮ ಅಣ್ಣಾವ್ರ ಗತ್ತು ಕಡಿಮೆ ಅಂತೂ ಆಗೋದಿಲ್ಲ..



