ಭಾರತದಲ್ಲಿರು ಅತ್ಯಂತ ಪುರಾತನ ಮತ್ತು ಜಗತ್ಪ್ರಸಿದ್ಧ ದೇಗುಲಗಳಲ್ಲಿ ಕೇದಾರನಾಥ ದೇಗುಲ ಪ್ರಮುಖವಾದುದು. ಜಗತ್ತಿನ ಮೂಲೆ ಮೂಲೆಯಿಂದ ಈ ದೇಗುಲದ ದರ್ಶನಕ್ಕೆ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಪ್ರತಿ ವರ್ಷ ಆಗಮಿಸುತ್ತಾರೆ. ಪ್ರತಿ ವರ್ಷವೂ ಈ ದೇಗುಲ ಜನಸಾಗರದಿಂದ ತುಂಬಿ ತುಳುಕುತ್ತಿರುತ್ತದೆ. ಆದರೆ ಇಂತಹ ಪವಿತ್ರ ಕ್ಷೇತ್ರದಲ್ಲಿ ಇಬ್ಬರು ನವ ಜೋಡಿಗಳು ಪ್ರೇಮನಿವೇದನೆ ಮಾಡಿಕೊಂಡಿರುವ ವಿಡಿಯೋ ಇದೀಗ ಸಕ್ಕತ್ ವೈರಲ್ ಆಗುತ್ತಿದ್ದು, ಯುವ ಜೋಡಿಗೆ ನೆಟ್ಟಿಗರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಹೌದು, ವಿಶ್ವಪ್ರಸಿದ್ಧ ತೀರ್ಥಕ್ಷೇತ್ರ ಎನಿಸಿಕೊಂಡಿರುವ ಕೇದಾರನಾಥ ದೇಗುಲದ ಎದುರು ಮಹಿಳೆಯೊಬ್ಬಳು ತನ್ನ ಹುಡುಗನಿಗೆ ಪ್ರಪೋಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವತಿ ಹಳದಿ ಬಣ್ಣದ ಸಾರಿ ಹಾಗೂ ಯುವಕ ಹಳದಿ ಕುರ್ತಾ ಧರಿಸಿದ್ದಾರೆ. ದೇಗುಲದ ಸುತ್ತಲೂ ನೂರಾರು ಜನರಿರುವಾಗಲೇ ಈ ಜೋಡಿ ಪ್ರೇಮನಿವೇದನೆ ಮಾಡಿಕೊಂಡು ಪರಸ್ಪರ ಅಪ್ಪಿಕೊಂಡಿದ್ದಾರೆ.
ಯುವತಿಯೂ ತನ್ನ ಪಕ್ಕದಲ್ಲಿ ನಿಂತು ಕಣ್ಣು ಮುಚ್ಚಿ ದೇವರಿಗೆ ಕೈ ಮುಗಿಯುತ್ತಿದ್ದ ಯುವಕನಿಗೆ ತಿಳಿಯದಂತೆ ಆತನ ಎದುರು ಮಂಡಿಯೂರಿ ಚಿನ್ನದ ಉಂಗುರ ಹಿಡಿದು ಪ್ರಪೋಸ್ ಮಾಡುತ್ತಾಳೆ. ಕಣ್ಣು ತೆರೆದು ಇದುನ್ನು ನೋಡಿದ ಯುವ ಖುಷಿಯಿಂದ ಆಕೆಯನ್ನು ಅಪ್ಪಿಕೊಳ್ಳುತ್ತಾನೆ. ಅನಂತರ ಇಬ್ಬರೂ ಪರಸ್ಪರ ಅಪ್ಪಿಕೊಂಡು ಪ್ರಪೋಸ್ ಮಾಡಿಕೊಳ್ಳುತ್ತಾರೆ. ಇಷ್ಟಕ್ಕೇ ಸುಮ್ಮನಾಗದ ಈ ಜೋಡಿ ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದೆ.
ಟ್ವಿಟ್ಟರ್ ನಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ತೀವ್ರ ಆಕ್ರೋಶ ಗೊಂಡ ನೆಟ್ಟಿಗರು ‘ಪುಣ್ಯಕ್ಷೇತ್ರಗಳಲ್ಲಿ ಇಂತಹ ವರ್ತನೆ ತೋರುವುದು ಒಳ್ಳೆಯ ಲಕ್ಷಣವಲ್ಲ. ಎಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ. ದೇಗುಲ, ಪುಣ್ಯಕ್ಷೇತ್ರಗಳಿಗೆ ಹೋದಾಗ ಭಕ್ತಿಯೇ ಮುಖ್ಯವಾಗಿರಬೇಕು’ ಎಂದು ಕಮೆಂಟ್ ಹಾಕಿದ್ದಾರೆ.



