ಕಳೆದ ಒಂದು ವಾರದಿಂದ ಕರ್ನಾಟಕದಲ್ಲಿ ಅತಿಹೆಚ್ಚಾಗಿ ಚರ್ಚೆ ಆಗುತ್ತಿರುವ ವಿಷಯ ಎಂದರೆ ಅದು ತಮನ್ನಾ ಭಾಟಿಯ ಅವರನ್ನು ಮೈಸೂರ್ ಸ್ಯಾಂಡಲ್ ಸೋಪ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿರುವುದು. ಹೌದು, ಕಾಂಟ್ರ್ಯಾಕ್ಟ್ ಎಲ್ಲವೂ ಸೈನ್ ಆಗಿದೆ. ವಿಷಯ ಅಧಿಕೃತವಾಗಿ ಹೊರಬಂದಿದೆ, ಯಾರು ತಾನೇ ಏನು ಮಾಡಲು ಸಾಧ್ಯ? ಇದು ಸರ್ಕಾರದ ನಿರ್ಧಾರ, ಮಂತ್ರಿಗಳ ನಿರ್ಧಾರ. ಆದರೆ ಜನರು ಹಾಗೂ ನೆಟ್ಟಿಗರು ಹಲವು ಸಂಘ ಸಂಘಟನೆಗಳು ಮಾತ್ರ ಹೊರಭಾಷೆಯ ತಮನ್ನಾ ಅವರನ್ನು ಆಯ್ಕೆ ಮಾಡಿದ್ದು ಎಷ್ಟು ಸರಿ? ಕನ್ನಡ ನಟಿಯರು ಇರಲಿಲ್ಲವಾ? ಅವರಿಗೆ ಅವಕಾಶ ಕೊಡಬೇಕಿತ್ತು ಎಂದು ವಾದ ಪ್ರತಿವಾದ ಮಂಡಿಸುತ್ತಿದ್ದಾರೆ. ಈ ನಡುವೆ ಮತ್ತೊಂದು ವಿಚಾರ ಚರ್ಚೆಗೆ ಕಾರಣವಾಗಿದೆ, ಅದೇನು ಎಂದರೆ, ತಮನ್ನಾ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಮಾಡುವುದರಿಂದ ಸರ್ಕಾರಕ್ಕೆ ಸಿಗುವ ಲಾಭವೇನು? ಇಲ್ಲಿದೆ ಫುಲ್ ಡೀಟೇಲ್ಸ್..

ಮೈಸೂರ್ ಸ್ಯಾಂಡಲ್ ಸೋಪ್ ಹೊಸ ಬ್ರ್ಯಾಂಡ್ ಅಲ್ಲ. ಹಲವು ವರ್ಷಗಳಿಂದ ಮಾರ್ಕೆಟ್ ನಲ್ಲಿ ಅತ್ಯಂತ ಬೇಡಿಕೆ ಹೊಂದಿರುವ ಸೋಪ್ ಗಳಲ್ಲಿ ಒಂದು. ಇದು ಸರ್ಕಾರ ನಡೆಸುತ್ತಿರುವ ಬ್ರ್ಯಾಂಡ್ ಆಗಿದೆ. ಮೈಸೂರ್ ಸ್ಯಾಂಡಲ್ ಸೋಪ್ ನಮ್ಮ ಊರಿನಲ್ಲಿ ಮಾತ್ರವಲ್ಲ, ಹೊರದೇಶದಲ್ಲಿ ಮತ್ತು ಹೊರ ರಾಜ್ಯದಲ್ಲಿ ಸಹ ಗ್ರಾಹಕರನ್ನು ಹೊಂದಿದೆ. ಈ ಸೋಪ್ ಗೆ ಹೊಸದಾಗಿ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಆಗಿರುವುದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿರುವ ಜನಪ್ರಿಯ ನಟಿ ತಮನ್ನಾ ಭಾಟಿಯಾ. ಇವರ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ದಕ್ಷಿಣ ಭಾರತ ಸಿನಿಮಾಗಳಲ್ಲಿ ಅಭಿನಯಿಸಿ, ಫೇಮಸ್ ಆಗಿದ್ದ ತಮನ್ನಾ ಅವರು ಇಂದು ಬಾಲಿವುಡ್ ನಲ್ಲಿ ಸಹ ಬೇಡಿಕೆ ಹೊಂದಿರುವ ನಟಿ ಆಗಿದ್ದಾರೆ. ತಮನ್ನಾ ಅವರು ಕನ್ನಡದಲ್ಲಿ ಕೆಜಿಎಫ್ ಸಿನಿಮಾದ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದರು.
ಇವರಿಗೆ ಇನ್ಸ್ಟಾಗ್ರಾಮ್ ನಲ್ಲಿ 2.8 ಕೋಟಿ ಫಾಲೋವರ್ಸ್ ಇದ್ದಾರೆ, ಈ ಕಾರಣಕ್ಕೆ ಸರ್ಕಾರ ಇವರನ್ನು ಆಯ್ಕೆ ಮಾಡಿದೆ ಎಂದು ಮಂತ್ರಿಗಳು ತಿಳಿಸಿದ್ದರು. ಇದಕ್ಕೆ ತೀವ್ರವಾದ ವಿರೋಧ ವ್ಯಕ್ತವಾಗಿದೆ. ತಮನ್ನಾ ಅವರ ಬದಲಾಗಿ ಕನ್ನಡದ ಬೇರೆ ನಟಿಯರಿಗೆ ಅವಕಾಶ ಕೊಡಬಹುದಿತ್ತು ಎಂದು ಹಲವರು ಅಭಿಪ್ರಾಯ ತಿಳಿಸಿದ್ದಾರೆ. ಅದಕ್ಕೆ ಸರ್ಕಾರ ಹೇಳಿರುವುದು, ನಾವು ಬೇರೆ ನಟಿಯರನ್ನು ಸಂಪರ್ಕಿಸುವ ಪ್ರಯತ್ನ ಮಾಡಿರುವುದಾಗಿ ಹೇಳಿದ್ದಾರೆ. ರಶ್ಮಿಕಾ ಅವರು ಈಗಾಗಲೇ ಒಂದು ಬ್ರ್ಯಾಂಡ್ ಸೈನ್ ಮಾಡಿರುವ ಕಾರಣ ಆಗುವುದಿಲ್ಲ ಎಂದು ಹೇಳಿದರಂತೆ. ಇನ್ನು ಶ್ರೀಲೀಲಾ ಅವರು ಸಹ ಅದೇ ರೀತಿ ಬೇರೆ ಬ್ರ್ಯಾಂಡ್ ಗೆ ಸೈನ್ ಮಾಡಿದ್ದಾರಂತೆ. ಇನ್ನು ಕಿಯಾರಾ ಅಡ್ವಾಣಿ ಅವರನ್ನು ಸಹ ಸಂಪರ್ಕ ಮಾಡಲಾಗಿತ್ತಂತೆ. ಅವರು ಬೇರೆ ಬ್ರ್ಯಾಂಡ್ ನಲ್ಲಿ ಬ್ಯುಸಿ ಆಗಿದ್ದಾರಂತೆ.

ಇವರೆಲ್ಲರೂ ಆಗೋದಿಲ್ಲ ಎಂದಿದ್ದಾರೆ, ಇನ್ನು ದೀಪಿಕಾ ಪಡುಕೋಣೆ ಅವರನ್ನು ಕರೆತರುವಷ್ಟು ಬಜೆಟ್ ನಮ್ಮಲ್ಲಿ ಇಲ್ಲದ ಕಾರಣ, ತಮನ್ನಾ ಭಾಟಿಯಾ ಅವರನ್ನು ಸಂಪರ್ಕ ಮಾಡಿದ್ದು ಎಂದು ಮಂತ್ರಿಗಳು ತಿಳಿಸಿದ್ದಾರೆ. ಆದರೆ ತಮನ್ನಾ ಅವರನ್ನು ಯಾಕೆ ಆಯ್ಕೆ ಮಾಡಿದ್ದು ಎನ್ನುವುದಕ್ಕೆ ಕಾರಣ ಸಹ ತಿಳಿಸಿದ್ದಾರೆ. ತಮನ್ನಾ ಅವರು ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿದ್ದಾರೆ, ಮೈಸೂರ್ ಸ್ಯಾಂಡಲ್ ಸೋಪ್ ಅನ್ನು ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಾರ್ಕೆಟ್ ಮಾಡಿ, ಬೇರೆ ದೊಡ್ಡ ಬ್ರ್ಯಾಂಡ್ ಗಳಿಗೆ ಕಾಂಪಿಟೇಶನ್ ಕೊಡಬೇಕು ಎನ್ನುವ ಕಾರಣಕ್ಕೆ ತಮನ್ನಾ ಅವರನ್ನು ಆಯ್ಕೆ ಮಾಡಿದ್ದಾರಂತೆ. ಎರಡು ವರ್ಷಕ್ಕಾಗಿ ತಮನ್ನಾ ಅವರಿಗೆ 6 ಕೋಟಿ ರೂಪಾಯಿ ಸಂಭಾವನೆ ಕೊಡಲಾಗುತ್ತಿದೆ. ಇನ್ನು ಮೊದಲಿಗಿಂತ ಹೆಚ್ಚು ಹಣವನ್ನು ಸಂಪಾದನೆ ಮಾಡಬೇಕು ಎಂದು ಟಾರ್ಗೆಟ್ ಹಾಕಿಕೊಳ್ಳಲಾಗಿದೆ.
ಹೌದು, ಸರ್ಕಾರ ಈಗ ಮೈಸೂರ್ ಸ್ಯಾಂಡಲ್ ಸೋಪ್ ಇಂದ 2 ವರ್ಷಗಳಲ್ಲಿ 5000 ಕೋಟಿ ಹಣ ಸಂಪಾದನೆ ಮಾಡಬೇಕು ಎಂದು ಸರ್ಕಾರ ಟಾರ್ಗೆಟ್ ಹಾಕಿಕೊಂಡಿದೆ, ಈ ಕಾರಣಕ್ಕೆ ತಮನ್ನಾ ಅವರನ್ನು ಆಯ್ಕೆ ಮಾಡಿಕೊಳ್ಳುಲಾಗಿದೆಯಂತೆ. ತಮನ್ನಾ ಅವರಿಗೆ ಇರುವ ಜನಪ್ರಿಯತೆ ಮತ್ತು ಬೇಡಿಕೆ ಇಂದ ಈ ಟಾರ್ಗೆಟ್ ಅನ್ನು ರೀಚ್ ಮಾಡಲು ಸಾಧ್ಯ ಆಗುತ್ತದೆ ಎನ್ನುವುದು ಸರ್ಕಾರದ ಉದ್ದೇಶ ಆಗಿದೆ, ಈ ರೀತಿ ಆದರೆ ದೊಡ್ಡ ಲಾಭ ಆದ ಹಾಗೆ ಆಗುತ್ತದೆ. ಇನ್ನು ಎರಡು ವರ್ಷಗಳ ಕಾಲ ಸಮಯ ಇದ್ದು, ಸರ್ಕಾರ ತಮ್ಮ ಟಾರ್ಗೆಟ್ ಅನ್ನು ರೀಚ್ ಮಾಡುತ್ತಾ ಎಂದು ಕಾದು ನೋಡಬೇಕಿದೆ.
ಇನ್ನು ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಅವರು ಈ ಬಗ್ಗೆ ಮಾತನಾಡಿ, ಕನ್ನಡದಲ್ಲಿ ಸಾಕಷ್ಟು ನಟಿಯರು ಇದ್ದರು, ಅವರನ್ನೇ ಹಾಕಿಕೊಳ್ಳಬಹುದಿತ್ತು, ಈಗ ತಮನ್ನಾ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ..

ಬೇರೆ ರಾಜ್ಯದ ಹೆಣ್ಣುಮಗಳು ನಮ್ಮ ಪ್ರಾಜೆಕ್ಟ್ ಅನ್ನ, ಪ್ರಾಡಕ್ಟ್ ಅನ್ನು ಪ್ರೊಮೋಟ್ ಮಾಡ್ತಾರೆ, ಅದರಿಂದ ನಮಗೆ ಲಾಭ ಆಗುತ್ತದೆ ಎಂದು ಹೇಳಿದರೆ ಬೇಡ ಅನ್ನೋದು ಯಾಕೆ.. ಒಳ್ಳೆಯದಾಗಲಿ ಎಂದು ಕುಮಾರ್ ಬಂಗಾರಪ್ಪ ಅವರು ತಿಳಿಸಿದ್ದಾರೆ. ಇನ್ನು ಎಜುಕೇಶನ್ ಮಿನಿಸ್ಟರ್ ಆಗಿರುವ ಮಧು ಬಂಗಾರಪ್ಪ ಅವರು ಸಹ ಈ ಬಗ್ಗೆ ಮಾತನಾಡಿ, ತಮನ್ನಾ ಅವರು ರಾಯಭಾರಿ ಆಗಿರೋದು ಇಷ್ಟ ಇಲ್ಲ ಅಂದ್ರೆ ಅವರ ಸಿನಿಮಾಗಳನ್ನ ನೋಡೋದು ಕೂಡ ಬಿಟ್ಟುಬಿಡಿ, ಶಿವಣ್ಣ ಜೈಲರ್ ಸಿನಿಮಾದಲ್ಲಿ ನಟಿಸಿದ್ದಾರೆ, ಅದರಲ್ಲಿ ತಮಿಳಿನಲ್ಲಿ ಮಾತನಾಡಿದ್ದಾರೆ, ಅದಕ್ಕೆ ಏನು ಹೇಳ್ತೀರಾ ಎಂದು ಕೂಡ ಕೇಳಿದ್ದಾರೆ. ಒಟ್ಟಿನಲ್ಲಿ ತಮನ್ನಾ ಅವರ ವಿಷಯ ಎಲ್ಲಾ ರೀತಿಯಲ್ಲಿ ಭಾರಿ ಚರ್ಚೆ ಆಗುತ್ತಿದೆ. ಸಿನಿಮಾ ಕಲಾವಿದರು ಕೂಡ ಈ ಬಗ್ಗೆ ಪ್ರತಿಕ್ರಿಯೆ ಕೊಡುತ್ತಿದ್ದಾರೆ. ರಮ್ಯಾ ಅವರು ಸಹ ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದರು.
ನಟಿ ರಮ್ಯಾ ಅವರು ತಮನ್ನಾ ಅವರನ್ನು ಮೈಸೂರ್ ಸ್ಯಾಂಡಲ್ ಸೋಪ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿರುವ ಬಗ್ಗೆ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ರಿಯಾಕ್ಟ್ ಮಾಡಿದ್ದು, ಡವ್ ಸೋಪ್ ಹಾಗೂ ಇನ್ನಿತರ ಬ್ರ್ಯಾಂಡ್ ಗಳು ಎಷ್ಟು ಚೆನ್ನಾಗಿ ಕ್ಯಾಂಪೇನ್ ಮಾಡಿರೋದನ್ನ ನೋಡಿದ್ದೇನೆ, ಅದೇ ರೀತಿ ಮಾಡಬಹುದಿತ್ತು ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ತಮನ್ನಾ ಅವರು ಆಯ್ಕೆ ಆಗಿರುವುದು ವಿವಿಧ ಪ್ರತಿಕ್ರಿಯೆಗಳನ್ನು ತರುತ್ತಿದೆ. ಮುಂದೆ ಇದೆಲ್ಲವೂ ಏನಾಗುತ್ತದೆ, ಸರ್ಕಾರಕ್ಕೆ ಲಾಭ್ ಸಿಗುತ್ತಾ ಎಂದು ಕಾದು ನೋಡಬೇಕಿದೆ.



