ಅಮಿತಾ ಬಚ್ಚನ್ ಸಾರಥ್ಯದಲ್ಲಿ ಪ್ರಸಾರವಾಗುತ್ತಿರುವ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗುಜರಾತಿನ ಗಾಂಧಿನಗರದ ನಿವಾಸಿ ಆಗಿರುವಂತಹ ಇಷಿತ ಭಟ್, ಈತ ಐದನೇ ತರಗತಿ ಓದುತ್ತಿರುವ ವಿದ್ಯಾರ್ಥಿ. ಈತ ಅಮಿತಾ ಬಚ್ಚನ್ ರವರನ್ನು ಏಕವಚನದಲ್ಲಿ ಮಾತನಾಡಿಸುವುದನ್ನು ಕೇಳಿ ಈ ಹುಡುಗನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮಿತಾ ಬಚ್ಚನ್ ನಡಿಸಿ ಕೊಡುವ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಐದು ವರ್ಷದ ಬಾಲಕ ಅಮಿತಾ ಬಚ್ಚನ್ ಕಾರ್ಯಕ್ರಮದಲ್ಲಿ ರೂಲ್ಸ್ ಹೇಳಲು ಮುಂದಾದಾಗ ರೂಲ್ಸ್ ಎಲ್ಲವೂ ನನಗೆ ಗೊತ್ತಿದೆ ಸಮಯ ವ್ಯರ್ಥ ಮಾಡದೆ ಪ್ರಶ್ನೆಗಳನ್ನು ಕೇಳಿ ಎಂದು ಉದ್ದಟತನದಿಂದ ಉತ್ತರಿಸಿದ್ದಾನೆ.

ಇಷಿತ ಭಟ್ ಈ ವಿದ್ಯಾರ್ಥಿಯ ಅತಿಯಾದ ಆತ್ಮವಿಶ್ವಾಸ ಮತ್ತು ವರ್ತನೆ ಸ್ವತಃ ಅಮಿತಾ ಬಚ್ಚನ್ ರವರನ್ನೇ ಅಚ್ಚರಿಗೊಳಿಸಿದೆ. ಅಕ್ಟೋಬರ್ ಒಂಬತ್ತರಂದು ನಡೆದ ಸಂಚಿಕೆಯಲ್ಲಿ ರೂಲ್ಸ್ ಹೇಳುವ ಮೊದಲೇ ನನಗೆ ಎಲ್ಲವೂ ಗೊತ್ತಿದೆ ಎಂದು ಉತ್ತರಿಸುವ ಮೂಲಕ ಎಲ್ಲರೂ ಗಮನವನ್ನು ಸೆಳೆದಿದ್ದಾನೆ.
ಆಟ ಮುಂದುವರಿಯುತ್ತಿದ್ದಂತೆ ಬಾಲಕ ತುಂಬಾ ಅಗ್ರೆಸ್ಸಿವ್ ಆಗಿ ನಡೆದುಕೊಳ್ಳಲು ಪ್ರಾರಂಭಿಸುತ್ತಾನೆ. ಅಮಿತಾ ಬಚ್ಚನ್ ಪ್ರಶ್ನೆಗಳನ್ನು ಪೂರ್ಣಗೊಳಿಸುವ ಮೊದಲೇ ಅದಕ್ಕೆ ಉತ್ತರವನ್ನು ನೀಡುವ ಮೂಲಕ ಆಪ್ಷನ್ ಅನ್ನು ಕೇಳದೆ ಉತ್ತರವನ್ನು ಲಾಕ್ ಮಾಡಲು ಹೇಳುತ್ತಾನೆ. ಜೊತೆಗೆ ಇದು ಕೇಳುವ ಪ್ರಶ್ನೆಯ ಎಂಬುದಾಗಿ ಬಿಗ್ ಬಿ ಅವರನ್ನು ಪ್ರಶ್ನಿಸುತ್ತಾನೆ. ಅಲ್ಲದೆ ಬೇಗ ಬೇಗ ಲಾಕ್ ಮಾಡಿ ಕಾರ್ಯಕ್ರಮವನ್ನು ಬೇಗ ಮುಂದುವರಿಸಿ ಎಂಬುದಾಗಿ ಹೇಳುತ್ತಾನೆ.ಆದರೆ ಅತಿಯಾದ ಅಮೃತವೂ ವಿಷ ಎಂಬಂತೆ ಅವನ ಅತಿಯಾದ Hyper ಆಕ್ಟಿವ್ ನಿಂದಾಗಿ ವಾಲ್ಮೀಕಿ ರಾಮಾಯಣದ ಮೊದಲನೇ ಕಾಂಡದ ಅಥವಾ ಪುಸ್ತಕದ ಹೆಸರೇನು ಎಂದು ಪ್ರಶ್ನೆಯನ್ನು ಕೇಳಿದಾಗ Hyper ಆಕ್ಟಿವ್ ಆಗಿದ್ದ ಹುಡುಗ ಇಷಿತ ಸೈಲೆಂಟ್ ಆದ.
A: ಬಾಲ ಕಾಂಡ, B: ಅಯೋಧ್ಯ ಕಾಂಡ, C: ಕಿಸ್ಕಿಂದ ಕಾಂಡ, D: ಯುದ್ಧಕಾಂಡ ಎಂಬ ನಾಲಕ್ಕು ಆಪ್ಷನ್ಗಳನ್ನು ನೀಡಲಾಗಿತ್ತು. ಆದರೆ ಆ ಹುಡುಗ ಅಯೋಧ್ಯ ಕಾಂಡ ಆರಿಸಿಕೊಂಡನು. ಇದು ತಪ್ಪಾಗಿದ್ದು ಸರಿಯಾದ ಉತ್ತರ ಬಾಲ ಕಾಂಡ ಹಾಗಾಗಿ 25000 ಮೊತ್ತದಲ್ಲಿ ಆಡುತ್ತಿದ್ದ ಆ ಹುಡುಗ ಎಲ್ಲಾ ಹಣವನ್ನು ಕಳೆದುಕೊಂಡು ಬರಿ ಕೈಯಲ್ಲಿ ಮನೆಗೆ ತೆರುಳುವಂತಾಯಿತು.
ಈ ಕಾರ್ಯಕ್ರಮ ಪ್ರಸಾರವಾದ ನಂತರ ಸೋಶಿಯಲ್ ಮೀಡಿಯಾದಲ್ಲಿ ಇದರ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು ಅಮಿತಾ ಬಚ್ಚನ್ ಗೆ ಅಗೌರವ ತೋರಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಹು ಡುಗನ ಉತ್ಸಾಹ ಮತ್ತು ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ.
ಮತ್ತೊಬ್ಬರು ಮಗುವನ್ನು ದೂಷಿಸಬೇಡಿ ಅವರ ಪೋಷಕರನ್ನ ದೂಷಿಸಿ ನಯಾ ವಿನಯ ನಮ್ರತೆ ತಾಳ್ಮೆಯ ನಡವಳಿಕೆಯನ್ನು ಹೇಳಿಕೊಡದೆ ಬೆಳೆಸಿದರೆ ಒಬ್ಬ ಸರ್ವಾಧಿಕಾರಿ ಪಡೆಯಬೇಕಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.



