ಬಿಗ್ ಬಿ ಎಂದೆ ಹೆಸರುವಾಸಿಯಾಗಿರುವ ಬಾಲಿವುಡ್ ನ ಸೂಪರ್ ಸ್ಟಾರ್ ಅಮಿತಾ ಬಚ್ಚನ್ ಸಾರಥ್ಯದಲ್ಲಿ ನಡೆಯುತ್ತಿರುವ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮಕ್ಕೆ 25 ವರ್ಷಗಳು ತುಂಬಿದ್ದು ಯಶಸ್ವಿಯಾಗಿ ಮುಂದುವರೆದಿದೆ. ಈ ಕಾರ್ಯಕ್ರಮದಲ್ಲಿ ಡಿವೈನ್ ಸ್ಟಾರ್ ಇಂದ ಹೆಸರುವಾಸಿಯಾಗಿರುವ ನಮ್ಮ ಕನ್ನಡದ ಸ್ಟಾರ್ ರಿಷಬ್ ಶೆಟ್ಟಿಯವರು ಅಮಿತಾ ಬಚ್ಚನ್ ಜೊತೆ ಇರುವ ಫೋಟೋ ಫೋಟೋ ಒಂದನ್ನು ಹೊಂಬಾಳೆ ಫಿಲಂಸ್ ಹಂಚಿಕೊಂಡಿದೆ.

ಹೊಂಬಾಳೆ ಫಿಲಂಸ್ ನ ಕಾಂತರಾ ಚಾಪ್ಟರ್ 1 ತಂಡದವರು ಅಮಿತಾ ಬಚ್ಚನ್ ರವರ ಹುಟ್ಟುಹಬ್ಬದ ಪ್ರಯುಕ್ತ ಅವರಿಗೆ ಶುಭಾಶಯ ಕೋರುತ್ತಾ ಕವನಗ ಕರೋಡ್ಪತಿ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಜೊತೆಗಿರುವ ಫೋಟೋ ಒಂದನ್ನು ಹಂಚಿಕೊಂಡಿದೆ.

ನಂತರ ರಿಷಬ್ ಶೆಟ್ಟಿ ಅವರು ನಿಮ್ಮೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನನಗೆ ಸಂತಸ ತಂದಿದೆ ಮುಂದಿನ ಸಂಚಿಕೆಗಾಗಿ ತುಂಬಾ ಉತ್ಸುಕ ನಾಗಿದ್ದೇನೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಇದರಿಂದ ಮುಂದಿನ ಸಂಚಿಕೆಗಳಲ್ಲಿ ಬಿಗ್ ಬಿ ಜೊತೆ ರಿಷಬ್ ಶೆಟ್ಟಿ ಕೌನ್ ಬನೇಗಾ ಕರೋಡ್ಪತಿಯಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಈ ವಿಷಯ ತಿಳಿದು ಮತ್ತು ಅಮಿತಾ ಬಚ್ಚನ್ ಅಭಿಮಾನಿಗಳು ತುಂಬಾ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಜೊತೆಗೆ ಲೈಕ್ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಕಾಂತಾರ ಚಾಪ್ಟರ್ 1 ಅದ್ಬುತವಾಗಿ ಪ್ರದರ್ಶನ ಕಂಡಿದ್ದು ಬಾಕ್ಸ್ ಆಫೀಸನ್ನ ಉಡಾಯಿಸಿದೆ. ಆದರೆ ಇದೀಗ ಅಭಿಮಾನಿಗಳು ರೆಸೆಪ್ಶೆಟ್ಟಿ ಅವರು ಎಷ್ಟು ಪ್ರಶ್ನೆಗಳಿಗೆ ಉತ್ತರಿಸಿ . ಎಷ್ಟು ಹಣವನ್ನು ಗೆಲ್ಲಬಹುದು ಎಂದು ಸಂಚಿಕೆಯನ್ನ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಆ ಸಂಚಿಕೆಯ ದಿನಾಂಕ ಇನ್ನೂ ಬಹಿರಂಗವಾಗಿಲ್ಲ. ನಮ್ಮ ಕನ್ನಡದ ನಟ ಕೌನ್ ಬನೆಗ ಕರೋಡ್ಪತಿಯಲ್ಲಿ ಗೆದ್ದು ಬರಲಿ ಎಂದು ಹಾರೈಸೋಣ.



