ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಶೋನಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಕೆಲವು ಟರ್ಮ್ಸ್ ಅಂಡ್ ಕಂಡೀಷನ್ ಗಳು ಇರುತ್ತದೆ. ಅದರ ಪ್ರಕಾರ ಎಲ್ಲರೂ ನಡೆದುಕೊಳ್ಳಬೇಕು. ಇಲ್ಲದೇ ಹೋದರೆ ಸಮಸ್ಯೆ ಆಗುತ್ತದೆ. ಇಷ್ಟು ದಿನದ ವರೆಗು ಈ ವಿಷಯಕ್ಕೆ ಯಾರಿಗೂ ಸಮಸ್ಯೆ ಆಗಿರಲಿಲ್ಲ. ಆದರೆ ಈಗ ಭವ್ಯ ಗೌಡ ವಿಷಯದಲ್ಲಿ ಸಮಸ್ಯೆ ಆಗಿದ್ದು, ಕರ್ಣ ಧಾರಾವಾಹಿಯ ಪ್ರಸಾರವೇ ಪೋಸ್ಟ್ ಪೋನ್ ಆಗಿದೆ ಎಂದು ನಮಗೆಲ್ಲಾ ಗೊತ್ತೇ. ಕರ್ಣ ಧಾರವಾಹಿ ಪೋಸ್ಟ್ ಆಗುವುದಕ್ಕೆ ಭವ್ಯ ಗೌಡ ಅವರ ಅಗ್ರಿಮೆಂಟ್ ಕಾರಣ. ಇನ್ನುಳಿದ ನಟಿಯರಿಗೆ ಆಗದ ಸಮಸ್ಯೆ ಭವ್ಯ ಅವರಿಗೆ ಮಾತ್ರ ಆಗಿದ್ದು ಯಾಕೆ ಎನ್ನುವ ಪ್ರಶ್ನೆಯೊಂದು ಶುರುವಾಗಿದ್ದು, ಈ ಬಗ್ಗೆ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಹಾಗೆಯೇ ಈ ಅಗ್ರಿಮೆಂಟ್ ಸಮಸ್ಯೆ ಬರುವುದು ಯಾಕೆ ಎನ್ನುವ ಪ್ರಶ್ನೆಗೆ ಪೂರ್ತಿ ಮಾಹಿತಿ ಇಲ್ಲಿದೆ ನೋಡಿ..

ಬಿಗ್ ಬಾಸ್ ಶೋಗೆ ಬರುವ ಸ್ಪರ್ಧಿಗಳಿಗೆ ಕೆಲವು ಕಂಡೀಷನ್ ಗಳು ಇರುತ್ತದೆ. ಅಗ್ರಿಮೆಂಟ್ ಗಳಿಗೆ ಸೈನ್ ಕೂಡ ಮಾಡಿರುತ್ತಾರೆ. ಆ ಅಗ್ರಿಮೆಂಟ್ ನ ಅನುಸಾರ ಬಿಗ್ ಬಾಸ್ ಶೋಗೆ ಬರುವ ಸ್ಪರ್ಧಿಗಳು ಶೋ ಮುಗಿದ 6 ತಿಂಗಳ ವರೆಗು ಬೇರೆ ವಾಹಿನಿಯ ಶೋಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ನಟಿಸುವ ಹಾಗಿಲ್ಲ. 6 ತಿಂಗಳ ಅವಧಿಯಲ್ಲಿ ಕಲರ್ಸ್ ಕನ್ನಡದ ಶೋ ಅಥವಾ ಧಾರಾವಾಹಿಗಳಲ್ಲಿ ಮಾತ್ರ ನಟಿಸಬೇಕು ಎನ್ನುವ ಕರಾರು ಇರುತ್ತದೆ. ಸ್ಪರ್ಧಿಗಳು ಇದರಂತೆಯೇ ನಡೆದುಕೊಳ್ಳಬೇಕು, ಈ ಕಂಡೀಷನ್ ಗಳನ್ನು ಪಾಲಿಸಬೇಕು ಎಂದು ನಿಯಮ ಇರುತ್ತದೆ. ಆದರೆ ಈ ವಿಚಾರದಲ್ಲಿ ಭವ್ಯ ಗೌಡ ಅವರಿಗೆ ಮಾತ್ರ ತೊಂದರೆ ಆಯಿತು, ಬೇರೆ ನಟಿಯರಾದ ಗೌತಮಿ, ಐಶ್ವರ್ಯ ಸಿಂಧೋಗಿ ಮತ್ತು ಮೋಕ್ಷಿತಾ ಅವರಿಗೆ ಸಮಸ್ಯೆ ಆಗಿಲ್ಲ ಎಂದು ಚರ್ಚೆ ನಡೆಯುತ್ತಿದೆ.
ಈಗ ನಟಿ ಗೌತಮಿ ಅವರು ಉದಯ ಟಿವಿಯ ಧಾರವಾಹಿ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಹೌದು, ಈ ಬಗ್ಗೆ ಗೌತಮಿ ಅವರು ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದರೆ ಧಾರಾವಾಹಿ ತಯಾರಿಯಲ್ಲಿದೆ ಎಂದು ಮಾಹಿತಿ ಸಿಕ್ಕಿದೆ. ಆದರೆ ಗೌತಮಿ ಅವರಿಗೆ ಅಗ್ರಿಮೆಂಟ್ ಸಮಸ್ಯೆ ಆಗಿಲ್ಲ, ಅದು ಯಾಕೆ ಎಂದರೆ, ಗೌತಮಿ ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ, ಜೊತೆಗೆ ಭಾರ್ಗವಿ ಎಲ್.ಎಲ್.ಬಿ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಕಲರ್ಸ್ ಕನ್ನಡ ವಾಹಿನಿಗೆ ಮಾಡಬೇಕಿರುವ ಎಲ್ಲಾ ಕೆಲಸವನ್ನು ಮಾಡಿದ್ದಾರೆ. ಜೊತೆಗೆ ಅವರು ಉದಯ ಟಿವಿಗೆ ನಟಿಸುತ್ತಿರುವ ಹೊಸ ಧಾರಾವಾಹಿ ಪ್ರಸಾರ ಆಗುವ ವೇಳೆಗೆ ಅಗ್ರಿಮೆಂಟ್ ಕೂಡ ಮುಗಿದಿರುತ್ತದೆ, ಹಾಗಾಗಿ ಇವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳಲಾಗುತ್ತಿದೆ.

ಇನ್ನು ಮೋಕ್ಷಿತಾ ಪೈ ಅವರಿಗೆ ಕೂಡ ಯಾವುದೇ ಸಮಸ್ಯೆ ಆಗಿಲ್ಲ. ಯಾಕೆಂದರೆ ಮೋಕ್ಷಿತಾ ಅವರು ಇದುವರೆಗೂ ಬೇರೆ ವಾಹಿನಿಯ ಯಾವುದೇ ಶೋನಲ್ಲಿ ಅಥವಾ ಧಾರಾವಾಹಿಯಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಜೀ5 ಗೆ ವೆಬ್ ಸೀರೀಸ್ ಒಂದರಲ್ಲಿ ಮೋಕ್ಷಿತಾ ನಟಿಸುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಆದರೆ ಇವರಿಗೆ ಕೂಡ ಸಮಸ್ಯೆ ಆಗುವುದಿಲ್ಲ, ಅದು ಯಾವ ಕಾರಣಕ್ಕೆ ಎಂದರೆ, ಮೋಕ್ಷಿತಾ ಅವರು ಧಾರಾವಾಹಿಯಲ್ಲಿ ಅಥವಾ ಶೋನಲ್ಲಿ ಕಾಣಿಸಿಕೊಳ್ಳುತ್ತಿಲ್ಲ, ವೆಬ್ ಸೀರೀಸ್ ನಲ್ಲಿ ನಟಿಸುತ್ತಿದ್ದಾರೆ, ಹಾಗಾಗಿ ಇವರಿಗೆ ಅಗ್ರಿಮೆಂಟ್ ಸಮಸ್ಯೆ ಆಗುವುದಿಲ್ಲ ಎಂದು ಮಾಹಿತಿ ಸಿಕ್ಕಿದೆ. ಇನ್ನು ಐಶ್ವರ್ಯ ಸಿಂಧೋಗಿ ಅವರು ಕೂಡ ಸೇಫ್ ಆಗಿದ್ದಾರೆ. ಈಗಾಗಲೇ ಇವರು ಸ್ಟಾರ್ ಸುವರ್ಣ ವಾಹಿನಿಗೆ ಒಂದು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ, ಇದು ಅತಿಥಿ ಪಾತ್ರ ಆಗಿದೆ.

ಆದರೆ ಇವರಿಗೆ ಯಾವುದೇ ಸಮಸ್ಯೆ ಆಗದೇ ಇರುವುದಕ್ಕೆ ಕಾರಣ, ಸ್ಟಾರ್ ಸುವರ್ಣ ಮತ್ತು ಕಲರ್ಸ್ ಕನ್ನಡ ಎರಡು ವಾಹಿನಿಗಳು ಕೂಡ ಈಗ ಒಂದೇ ಆಗಿದ್ದು, ಟೈ ಅಪ್ ಆಗಿರುವ ಕಾರಣ, ಐಶ್ವರ್ಯ ಸಿಂಧೋಗಿ ಅವರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಆದರೆ ಭವ್ಯ ಗೌಡ ಅವರಿಗೆ ಬಹಳ ಸಮಸ್ಯೆ ಆಯಿತು. ಭವ್ಯ ಗೌಡ ಬಿಗ್ ಬಾಸ್ ಮುಗಿದ ಬಳಿಕ ಕಲರ್ಸ್ ಕನ್ನಡದ ಬೇರೆ ಶೋಗಳಲ್ಲಿ ಕಾಣಿಸಿಕೊಂಡಿಲ್ಲ. ಧಾರಾವಾಹಿಯಲ್ಲಿ ಕೂಡ ಕಾಣಿಸಿಕೊಂಡಿಲ್ಲ. ಆದರೆ ಜೀಕನ್ನಡ ಕಾಂಪಿಟೇಟರ್ ಚಾನೆಲ್ ಆಗಿರುವ ಕಾರಣ, ಆ ವಾಹಿನಿಯ ಧಾರಾವಾಹಿಯಲ್ಲಿ ಇವರು ನಟಿಸುತ್ತಿರುವುದಕ್ಕೆ ಕಲರ್ಸ್ ಕನ್ನಡ ವಾಹಿನಿಯವರು ಸ್ಟೇ ತಂದಿದ್ದಾರೆ. ಈಗ ಕರ್ಣ ಧಾರಾವಾಹಿ ಪ್ರಸಾರ ಆಗುವುದು ಮುಂದಕ್ಕೆ ಹೋಗಿದೆ. ಮುಖ್ಯ ಕಾರಣ ಭವ್ಯ ಅವರೇ ಎನ್ನುವ ಹಾಗೆ ಆಗಿದೆ.
ಇನ್ನು ಕರ್ಣ ಧಾರಾವಾಹಿ ಪ್ರಸಾರ ಆಗುವುದು ಯಾವಾಗ ಎನ್ನುವ ಪ್ರಶ್ನೆ ಕೂಡ ಶುರುವಾಗಿದ್ದು, ಅದಕ್ಕೆ ಉತ್ತರ ಕೂಡ ಸಿಕ್ಕಿದೆ. ಅದೇನು ಎಂದರೆ, ಭವ್ಯ ಗೌಡ ಅವರ ಅಗ್ರಿಮೆಂಟ್ ಜುಲೈ ತಿಂಗಳ ಮೂರನೇ ವಾರದಲ್ಲಿ ಮುಗಿಯುತ್ತದೆ ಎನ್ನಲಾಗಿದ್ದು, ಈ ಅಗ್ರಿಮೆಂಟ್ ಮುಗಿದ ಬಳಿಕ ಕರ್ಣ ಧಾರಾವಾಹಿ ಪ್ರಸಾರ ಆಗಲಿದೆ ಎಂದು ಮಾಹಿತಿ ಸಿಕ್ಕಿದೆ. ಒಟ್ಟಿನಲ್ಲಿ ಗೌತಮಿ, ಮೋಕ್ಷಿತಾ, ಐಶ್ವರ್ಯ ಸಿಂಧೋಗಿ ಇವರಿಗೆಲ್ಲಾ ಆಗದ ಸಮಸ್ಯೆ ಭವ್ಯ ಗೌಡ ಅವರಿಗೆ ಮಾತ್ರ, ಶೀಘ್ರದಲ್ಲೇ ಎಲ್ಲವೂ ಸರಿ ಹೋಗಲಿ ಎಂದು ವಿಶ್ ಮಾಡೋಣ..



